Author: editor.udayarashmi@gmail.com

ಚಡಚಣ ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೇತ್ರ ಚಿಕಿತ್ಸೆ ಉದಯರಶ್ಮಿ ದಿನಪತ್ರಿಕೆ ಚಡಚಣ: ಕಣ್ಣುಗಳು ಮನುಷ್ಯನ ಪ್ರಮುಖ ಅಂಗ. ಅವು ಮನುಷ್ಯನ ಮುಖಕ್ಕೆ ಸೌಂದರ್ಯವನ್ನು ನೀಡುತ್ತವೆ. ಕಣ್ಣುಗಳು ಬಹಳಷ್ಟು ಸೂಕ್ಷ್ಮವಾಗಿರುತ್ತವೆ. ಅವುಗಳನ್ನು ವೈದ್ಯರಿಂದ ಪರೀಕ್ಷಿಸಿ ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಹುನ್ನೂರ ಹೇಳಿದರು.ಅವರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-೨ ಮರಡಿ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಾಲಾ ವಿದ್ಯಾರ್ಥಿಗಳ ಉಚಿತ ನೇತ್ರ ಚಿಕಿತ್ಸಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಾಜೇಶ್ವರಿ ಕಾಮಗೊಂಡ ಮಾತನಾಡಿ, ಕಣ್ಣಿನ ಸಮಸ್ಯೆ ಇರುವ ವಿದ್ಯಾರ್ಥಿಗಳು ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರು ಅವರು ಉಚಿತ ಶಸ್ತ್ರಚಿಕಿತ್ಸೆ ಕೂಡ ನೀಡುತ್ತಾರೆ ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.ಕಾರ್ಯಕ್ರಮದಲ್ಲಿ ಶಂಕರ ನೇತ್ರ ತಜ್ಞರ ತಂಡ,ಶಾಲಾ ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ, ಸೋಮನಿಂಗ ಬೋರಗಿ, ಅಮೋಘಸಿದ್ದ ಮೆಟಗಾರ, ಎಸ್…

Read More

ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೇತ್ರ ಚಿಕಿತ್ಸೆ ಉದಯರಶ್ಮಿ ದಿನಪತ್ರಿಕೆ ಚಡಚಣ: ಕಣ್ಣುಗಳು ಮನುಷ್ಯನ ಪ್ರಮುಖ ಅಂಗ. ಅವು ಮನುಷ್ಯನ ಮುಖಕ್ಕೆ ಸೌಂದರ್ಯವನ್ನು ನೀಡುತ್ತವೆ. ಕಣ್ಣುಗಳು ಬಹಳಷ್ಟು ಸೂಕ್ಷ್ಮವಾಗಿರುತ್ತವೆ. ಅವುಗಳನ್ನು ವೈದ್ಯರಿಂದ ಪರೀಕ್ಷಿಸಿ ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಹುನ್ನೂರ ಹೇಳಿದರು.ಅವರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-೨ ಮರಡಿ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಾಲಾ ವಿದ್ಯಾರ್ಥಿಗಳ ಉಚಿತ ನೇತ್ರ ಚಿಕಿತ್ಸಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಾಜೇಶ್ವರಿ ಕಾಮಗೊಂಡ ಮಾತನಾಡಿ, ಕಣ್ಣಿನ ಸಮಸ್ಯೆ ಇರುವ ವಿದ್ಯಾರ್ಥಿಗಳು ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರು ಅವರು ಉಚಿತ ಶಸ್ತ್ರಚಿಕಿತ್ಸೆ ಕೂಡ ನೀಡುತ್ತಾರೆ ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.ಕಾರ್ಯಕ್ರಮದಲ್ಲಿ ಶಂಕರ ನೇತ್ರ ತಜ್ಞರ ತಂಡ,ಶಾಲಾ ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ, ಸೋಮನಿಂಗ ಬೋರಗಿ, ಅಮೋಘಸಿದ್ದ ಮೆಟಗಾರ, ಎಸ್ ಎಸ್…

Read More

ಮಕ್ಕಳ ಬಳಗದ ’ಚಿಣ್ಣರ ನುಡಿಸಿರಿ’ ಸಮಾರಂಭದಲ್ಲಿ ಕು.ಸೃಷ್ಠಿ ಬಂಡಗಾರ ಕಳವಳ ಉದಯರಶ್ಮಿ ದಿನಪತ್ರಿಕೆ ಆಲಮೇಲ: ಸಿಂದಗಿಯ ಪ್ರೇರಣಾ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳ ಬಳಗ ಸಿಂದಗಿ ಹಮ್ಮಿಕೊಂಡಿರುವ ೪೮ನೇ ಚಿಣ್ಣರ ನುಡಿಸಿರಿ ಸಮಾರಂಭದಲ್ಲಿ ಶ್ರೀ ವಿಶ್ವೇಶ್ವರ ಬಾಲ ಭಾರತಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಆಲಮೇಲ ಶಾಲೆಯ ಈರ್ವರು ವಿದ್ಯಾರ್ಥಿನಿಯರು ಉಪನ್ಯಾಸಕರಾಗಿ ಭಾಗಿಯಾಗಿ ತಮ್ಮ ಪ್ರಬುದ್ಧ ಮಾತುಗಳಿಂದ ಎಲ್ಲರ ಗಮನ ಸೆಳೆದರು.ಗೋಷ್ಠಿ-೧ ರಲ್ಲಿ ಭಾಗವಹಿಸಿದ ಶಾಲೆಯ ವಿದ್ಯಾರ್ಥಿನಿ ಕು.ಸೃಷ್ಠಿ ಬಂಡಗಾರ ಇವಳು ’ನನ್ನ ಶಾಲೆ’ ವಿಷಯ ಕುರಿತು ಮಾತನಾಡಿ, ಹಿಂದಿನಿಂದಲೂ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ನೀಡಲಾಗುತ್ತಿತ್ತು, ಅದರಿಂದ ಮಕ್ಕಳಲ್ಲಿ ಸಂಸ್ಕಾರ ಸಿಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಕೇವಲ ಅಂಕಗಳ ಬೆನ್ನು ಹತ್ತಿ ಗೌರವ, ಸಂಸ್ಕಾರ ಕಡಿಮೆ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ಹಾಗೆಯೇ ಗೋಷ್ಠಿ-೩ ರಲ್ಲಿ ಭಾಗವಹಿಸಿದ ಶಾಲೆಯ ವಿದ್ಯಾರ್ಥಿನಿ ಕು.ಭಾಗ್ಯಶ್ರೀ ಮಳ್ಳಿ ’ಪರಿಸರ ಉಳಿಸೋಣ’ ವಿಷಯ ಕುರಿತು ಮಾತನಾಡಿ, ಇವತ್ತು ಇಡೀ ವಿಶ್ವವೇ ವಿನಾಶದ ಅಂಚಿಗೆ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ೧೯ ವರ್ಷದ ಮಹಿಳೆಯೊಬ್ಬಳಿಗೆ ಜೀವದ ಭಯ ಹುಟ್ಟಿಸಿ ನಿರಂತರ ಅತ್ಯಾಚಾರವೆಸಗಿ, ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ ಆರೋಪದ ಮೇಲೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತಾಲೂಕಿನ ಗುಡದಿನ್ನಿ ಗ್ರಾಮದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದ್ದು ಆರೋಪಿ ಸ್ಥಾನದಲ್ಲಿರುವ ಪ್ರವೀಣ ಮುತ್ತತ್ತಿ ಈ ಹೇಯ ಕೃತ್ಯ ಎಸಗಿರುವುದಾಗಿ ಮತ್ತು ಈ ಕೃತ್ಯಕ್ಕೆ ಪ್ರವೀಣನ ತಂದೆ ಗುರುಸಂಗಪ್ಪ ಮುತ್ತತ್ತಿ ಕುಮ್ಮಕ್ಕು ನೀಡಿರುವದಾಗಿ ನೊಂದವಳ ತಾಯಿ ದೂರು ನೀಡಿದ್ದಾಳೆ.ಆರೋಪಿಯು ಸಂತ್ರಸ್ಥೆಯ ಮನೆಗೆ ನುಗ್ಗಿ ಜೀವದ ಬೆದರಿಕೆ ಹಾಕಿ ನಿರಂತರವಾಗಿ ಅತ್ಯಾಚಾರವೆಸಗಿ ಮಹಿಳೆಯು ಗರ್ಭಧರಿಸಿದಾಗ ಆಕೆಗೆ ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದು ಸಧ್ಯ ಸಂತ್ರಸ್ಥೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವದಾಗಿ ದೂರಿನಲ್ಲಿ ತಿಳಿಸಲಾಗಿದೆ.

Read More

ಶತಮಾನೋತ್ಸವ ನಡೆಸಿ ಹಣ ಪೋಲು ಮಾಡುತ್ತಿರುವ ಕಾಂಗ್ರೆಸ್ | ಕೇಂದ್ರಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ ಹುಬ್ಬಳ್ಳಿ: ಕಾಂಗ್ರೆಸ್ ಸಮಾವೇಶ ನಡೆಸಿ ಹಣ ಪೋಲು ಮಾಡುತ್ತಿದೆ. ಮಹಾತ್ಮ ಗಾಂಧೀಜಿಗೂ ಇಂದಿನ ಕಾಂಗ್ರೆಸ್‌ಗೂ ಏನು ಸಂಬಂಧ? ಈಗಿರುವ ಕಾಂಗ್ರೆಸ್ ನಲ್ಲಿ ಮೂಲಕ ಕಾಂಗ್ರೆಸ್ ಕಾಣುತ್ತಿಲ್ಲ. ಇದು ಇಂದಿರಾ ಗಾಂದಿ ಕಾಂಗ್ರೆಸ್ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಸೋಮವಾರ ಹೇಳಿದ್ದಾರೆ.ಬೆಳಗಾವಿಯಲ್ಲಿ ಅಧಿವೇಶನದ ಶತಮಾನೋತ್ಸವ ಆಚರಣೆಗೆ ಕಾಂಗ್ರೆಸ್ ಸಿದ್ಧತೆ ನಡೆಸುತ್ತಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಗೂ ಇಂದಿನ ಕಾಂಗ್ರೆಸ್‌ಗೂ ಏನು ಸಂಬಂಧ? ಮಹಾತ್ಮಾ ಗಾಂಧಿ ಕಾಂಗ್ರೆಸ್ ಮತ್ತು ಇಂದಿನ ಕಾಂಗ್ರೆಸ್ ನಡುವೆ ವ್ಯತ್ಯಾಸವಿದೆ. ಈಗಿನ ಕಾಂಗ್ರೆಸ್ ಮೂಲ ಕಾಂಗ್ರೆಸ್ ಅಲ್ಲ. ಈ ಕಾಂಗ್ರೆಸ್ ಪಕ್ಷಕ್ಕೆ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಸಾಮರಸ್ಯದಲ್ಲಿ ನಂಬಿಕೆಯಿಲ್ಲ. ಬಿ.ಆರ್.ಅಂಬೇಡ್ಕರ್ ಅವರಿಗೆ ಅಗೌರವ ಸೂಚಿಸಿದೆ ಎಂದು ಹೇಳಿದರು.ಸಿ.ಟಿ. ರವಿ ಅವರ ಆಕ್ಷೇಪಾರ್ಹ ಹೇಳಿಕೆ ಮುಚ್ಚಿಕೊಳ್ಳಲು ಬಿಜೆಪಿ ಮುಖಂಡರು ಪೊಲೀಸರ ಮೇಲೆ ಆರೋಪ ಮಾಡುತ್ತಿದ್ದಾರೆ’ ಎನ್ನುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿಕೆಗೆ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಓಸಿ ಮಟಗಾ ಜೂಜಾಟವಾಡುತ್ತಿದ್ದ ಇಬ್ಬರ ಮೇಲೆ ಇಲ್ಲಿನ ಪಿಎಸ್‌ಐ ಸಂಜಯ ತಿಪರೆಡ್ಡಿ ೨ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.ಪಟ್ಟಣದ ವಿರೇಶ್ವರ ನಗರದ ಷಣ್ಮುಖಪ್ಪ ಕೋಳೂರ ಈತನು ಪಟ್ಟಣದ ಬಸ್ ನಿಲ್ದಾಣದ ಎದುರು ಮತ್ತು ತಾಲೂಕಿನ ನಾಲತವಾಡ ಪಟ್ಟಣದ ನಾಡಗೌಡರ ಓಣಿಯ ಗದ್ದೆಪ್ಪ ಭಜಂತ್ರಿ ನಾಲತವಾಡದ ವಿರೇಶ್ವರ ವೃತ್ತದ ಬಳಿ ನಿಂತು ೧ರೂ ಗೆ ೮೦ ರೂ ನೀಡುವ ಕರಾರಿನ ಮೇರೆಗೆ ಕಲ್ಯಾಣ ಮಟಗಾ ಎನ್ನುವ ಓಸಿ ಮಟಗಾ ಜೂಜಾಟವಾಡುತ್ತಿದ್ದ ವೇಳೆ ಸಿಕ್ಕಿದ್ದು ಇವರಿಬ್ಬರ ಮೇಲೆ ಪ್ರಕರಣ ದಾಖಲಿಸಿ, ಇವರಿಂದ ಪೆನ್ನು, ಓಸಿ ಚೀಟಿ ಮತ್ತು ಕೆಲ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಉಣ್ಣುವ ಹಕ್ಕು ಎಲ್ಲರಿಗೂ ಇದೆ ಮನುಷ್ಯ ಜನ್ಮ ಬಂದ ಬಳಿಕ ಜನ್ಮ ಸಾರ್ಥಕ ಮಾಡಿಕೊಳ್ಳುವ ಕರ್ತವ್ಯ ಮನುಷ್ಯನದಾಗಿದೆ ಪ್ರಪಂಚ ಮತ್ತು ಪಾರಮಾರ್ಥ ಎರಡನ್ನೂ ಮಾಡುತ್ತಾ ತಿಳಿದು ಬದುಕಿದವರು ಎಂದರು.ತಿಕೋಟಾ ತಾಲ್ಲೂಕಿನ ಕನಮಡಿ ಗ್ರಾಮದಲ್ಲಿ ಸ್ವಾತಂತ್ರ ಯೋಧ ಅಧ್ಯಾತ್ಮಿಕ ಜೀವಿಯಾದ ಕೆಂಚಪ್ಪ ಪೂಜಾರಿಯವರ 36ನೇಯ ಸಪ್ತಾಹ ಜರುಗಿತು.ಇಂಚಗೇರಿ ಸಂಪ್ರದಾಯ ಸರಳ ಮತ್ತು ಸುಲಭವಾಗಿದೆ ಆಡಂಬರವಿಲ್ಲದ ಪೂಜೆ ಮತ್ತು ಭಕ್ತಿಗೆ ಹೆಸರುವಾಸಿಯಾಗಿದೆ. ಸಮರ್ಥ ಗುರುಗಳ ಆಜ್ಞೆಯಂತೆ ನಡೆದು ಶಾಂತಿಯನ್ನು ಪಡಿಯುತ್ತಾರೆ. ಇನ್ನೊಂದು ಮಹತ್ವದ ವಿಷಯವೇನೆಂದರೆ ಜಾತಿ ಮತ ಪಂತಗಳ ಭೇಧವಿಲ್ಲದೆ ಇರುವ ಸಂಪ್ರದಾಯವಾಗಿದೆ.27000 ಅಂತರಜಾತಿ ವಿವಾಹ ಮಾಡಿದ ಕೀರ್ತಿ ಈ ಸಂಪ್ರದಾಯಕ್ಕೆ ಸೇರುತ್ತದೆ ಎಂದು ಇಂಚಗೇರಿ ಪೀಠಾಧಿಪತಿ ಸ.ಸ. ರೇವಣ್ಣಸಿದ್ದೇಶ್ವರ ಮಹಾರಾಜರು ಹೇಳಿದರು.ದುಡಿದು ಉಣ್ಣುವ ಹಕ್ಕು ಎಲ್ಲರಿಗೂ ಇದೆ. ಮನುಷ್ಯ ಜನ್ಮ ಬಂದ ಬಳಿಕ ಜನ್ಮ ಸಾರ್ಥಕ ಮಾಡಿಕೊಳ್ಳುವ ಕರ್ತವ್ಯ ಮನುಷ್ಯನದಾಗಿದೆ ಎಂದರುಇದೇ ಸಂದರ್ಭದಲ್ಲಿ ಬಾಬುರಾವ ಮಹಾರಾಜರು ಮಾತನಾಡಿ, ಇಂದಿನ ಒತ್ತಡದ ಬದುಕಿನಲ್ಲಿ ಟಿವಿ ಮತ್ತು ಮೊಬೈಲ್ ದಲ್ಲಿ ಸಿಲುಕಿಕೊಂಡ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳಾಗದೇ ಆಡಳಿತ ಯಂತ್ರ ಕುಸಿದಿದ್ದು, ಕೂಡಲೇ ಜಿ.ಪಂ, ತಾ.ಪಂ ಚುನಾವಣೆ ನಡೆಸಲು ಕೋರಿ ರಾಜ್ಯ ಸರ್ಕಾರಕ್ಕೆ, ಚುನಾವಣಾ ಆಯೋಗ ಪತ್ರ ಬರೆಯಬೇಕೆಂದು ವಿಜಯಪುರ ಜಿಲ್ಲಾ ಅನ್ನದಾತ ಯುವ ರೈತ ಸಂಘ ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಸುರೇಶ ಗರಸಂಗಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಜಿಲ್ಲಾ‌ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ‌ ಚುನಾವಣೆಗಳಾಗಿಲ್ಲ. ಇದರಿಂದ ಸರಿಯಾಗಿ ಜನಸ್ಪಂದನೆ, ಕೆಡಿಪಿ ಸಭೆಗಳಾಗದೇ ಜನಸಾಮಾನ್ಯರ ಕೆಲಸಗಳಾಗುತ್ತಿಲ್ಲ. ಸ್ಥಳೀಯ ಜನಪ್ರತಿನಿಧಿಗಳಿಲ್ಲದ ಪರಿಣಾಮ ಕೆಲವು ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಹಾಗಾಗಿ ಕೂಡಲೇ ಜಿ.ಪಂ, ತಾ.ಪಂ ಚುನಾವಣೆಗಳನ್ನು‌ ನಡೆಸುವುದು ಅತಿ ಅವಶ್ಯವಾಗಿದೆ. ಅಲ್ಲದೇ ವಿವಿಧ ಇಲಾಖೆಗಳಲ್ಲಿ ಬಹುವರ್ಷಗಳಿಂದ ಒಂದೇ ಜಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ವರ್ಗಾವಣೆಗೊಳಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ರೈತ ಮುಖಂಡರಾದಕುಮಾರ್ ಕಿಳೆಗಾವಿ, ಪಾಂಡು ದಳವಾಯಿ ಹಾಗೂಭರತೇಶ್ ಹಿಪ್ಪರಗಿ ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಇಂದು ಪರಿಸರ ತುಂಬಾ ಮಾಲಿನ್ಯಗೊಳ್ಳುತ್ತಿದೆ. ಹೀಗೆ ಮನುಷ್ಯರು ಪರಿಸರವನ್ನು ನಿರ್ಲಕ್ಷ್ಯ ಮಾಡಿದರೆ ಮನುಕುಲಕ್ಕೆ ಅಗತ್ಯವಿರುವಷ್ಟು ಆಮ್ಲಜನಕ ಸಿಗದೇ ಉಸಿರಾಟಕ್ಕೆ ತೊಂದರೆಯಾಗಿ ಭಯಾನಕ ಕಾಯಿಲೆ, ಅಕಾಲಿಕ ಮರಣ ಬರುವ ಕಾಲ ದೂರವಿಲ್ಲ. ಇದರಿಂದಾಗಿ ಪ್ರತಿಯೊಬ್ಬರೂ ಪರಿಸರ ಜಾಗೃತಿ ಮೂಡಿಸುವ ಜೊತೆಗೆ ಪ್ರತಿಯೊಂದು ಮನೆಯ ಮುಂದೆ ಸಸಿ ನೆಟ್ಟು ಪೋಷಿಸುವದು ತುಂಬಾ ಅಗತ್ಯವಿದೆ ಎಂದು ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶೀಕೇಂದ್ರ ಭಗವತ್ಪಾದರರು ಹೇಳಿದರು.ಪಟ್ಟಣದ ನಂದಿ ಬಡಾವಣೆಯಲ್ಲಿ ತಾಲೂಕಿನ ನಾಗೂರ ಗ್ರಾಮದ ಶರಣಯ್ಯ ಶೀಕಳವಾಡಿಮಠ ಅವರು ನಿರ್ಮಿಸಿದ ಗೃಹ ಪ್ರವೇಶದಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಅವರು, ಶರಣಯ್ಯ ಶೀಕಳವಾಡಿಮಠ ಅವರು ತಮ್ಮ ಗೃಹ ಪ್ರವೇಶದಂಗವಾಗಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವದು ಶ್ಲಾಘನೀಯ. ಇವರು ಸಸಿಗಳನ್ನು ಉಡುಗೊರೆಯಾಗಿ ನೀಡುತ್ತಿರುವುದು ಸಂತಸದಾಯಕ ಸಂಗತಿ ಎಂದರು.ಸರ್ಕಾರ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ರೈತರ ಕಲ್ಯಾಣದತ್ತ ಹೆಜ್ಜೆ ಹಾಕಬೇಕಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮುಳಗಡೆ ಸಂತ್ರಸ್ಥರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ಹಿಂದೇಟು…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಂಗನಗೌಡ ಚಿಕ್ಕೊಂಡ, ಉಪಾಧ್ಯಕ್ಷರಾಗಿ ಮಲ್ಲೇಶಿ ಕಡಕೋಳ ಅವರು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಎಸ್.ಎಂ.ಹಂಗರಗಿ ಘೋಷಿಸಿದರು.ಪಟ್ಟಣದ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಈಚೆಗೆ ಜರುಗಿದ ಚುನಾವಣೆಯಲ್ಲಿ ಸಂಗನಗೌಡ ಚಿಕ್ಕೊಂಡ ಅವರ ಗುಂಪಿಗೆ(-ನಲ್) ಮತದಾರರು ಭರ್ಜರಿ ಗೆಲುವು ತಂದು ಕೊಟ್ಟಿದ್ದರು. ಇಂದು ಜರುಗಿದ ಅಧ್ಯಕ್ಷ ಸ್ಥಾನಕ್ಕೆ ಸಂಗನಗೌಡ ಚಿಕ್ಕೊಂಡ, ಉಪಾಧ್ಯಕ್ಷ ಸ್ಥಾನಕ್ಕೆ ಮಲ್ಲೇಶಿ ಕಡಕೋಳ ನಾಮಪತ್ರ ಸಲ್ಲಿಸಿದ್ದರು. ಎರಡು ಸ್ಥಾನಗಳಿಗೆ ಒಬ್ಬಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದಾಗಿ ಎರಡು ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಜರುಗಿತು. ಸಂಗನಗೌಡ ಚಿಕ್ಕೊಂಡ ಅವರು ಕಳೆದ ಐದು ಅವಧಿಯಿಂದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇಂದು ಆರನೇ ಅವಧಿಗೆ ಮತ್ತೆ ಅಧ್ಯಕ್ಷರಾಗಿ ಪುನರಾಯ್ಕೆಯಾಗಿರುವದು ಸಂಘದ ಇತಿಹಾಸದಲ್ಲಿ ಮೈಲಿಗಲ್ಲಾಗಿದೆ.ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ನಂತರ ಜರುಗಿದ ಸಮಾರಂಭದಲ್ಲಿ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಅವರು ಹಿರಿಯ ರೈತ ಬಾಂಧವರಿಗೆ ಪಾದಪೂಜೆ ಮಾಡುವ ಮೂಲಕ ತಮ್ಮ ಅಧಿಕಾರವನ್ನು ಸ್ವೀಕರಿಸಿದ್ದು ವಿಶೇಷ…

Read More