ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಉಣ್ಣುವ ಹಕ್ಕು ಎಲ್ಲರಿಗೂ ಇದೆ ಮನುಷ್ಯ ಜನ್ಮ ಬಂದ ಬಳಿಕ ಜನ್ಮ ಸಾರ್ಥಕ ಮಾಡಿಕೊಳ್ಳುವ ಕರ್ತವ್ಯ ಮನುಷ್ಯನದಾಗಿದೆ ಪ್ರಪಂಚ ಮತ್ತು ಪಾರಮಾರ್ಥ ಎರಡನ್ನೂ ಮಾಡುತ್ತಾ ತಿಳಿದು ಬದುಕಿದವರು ಎಂದರು.
ತಿಕೋಟಾ ತಾಲ್ಲೂಕಿನ ಕನಮಡಿ ಗ್ರಾಮದಲ್ಲಿ ಸ್ವಾತಂತ್ರ ಯೋಧ ಅಧ್ಯಾತ್ಮಿಕ ಜೀವಿಯಾದ ಕೆಂಚಪ್ಪ ಪೂಜಾರಿಯವರ 36ನೇಯ ಸಪ್ತಾಹ ಜರುಗಿತು.
ಇಂಚಗೇರಿ ಸಂಪ್ರದಾಯ ಸರಳ ಮತ್ತು ಸುಲಭವಾಗಿದೆ ಆಡಂಬರವಿಲ್ಲದ ಪೂಜೆ ಮತ್ತು ಭಕ್ತಿಗೆ ಹೆಸರುವಾಸಿಯಾಗಿದೆ. ಸಮರ್ಥ ಗುರುಗಳ ಆಜ್ಞೆಯಂತೆ ನಡೆದು ಶಾಂತಿಯನ್ನು ಪಡಿಯುತ್ತಾರೆ. ಇನ್ನೊಂದು ಮಹತ್ವದ ವಿಷಯವೇನೆಂದರೆ ಜಾತಿ ಮತ ಪಂತಗಳ ಭೇಧವಿಲ್ಲದೆ ಇರುವ ಸಂಪ್ರದಾಯವಾಗಿದೆ.
27000 ಅಂತರಜಾತಿ ವಿವಾಹ ಮಾಡಿದ ಕೀರ್ತಿ ಈ ಸಂಪ್ರದಾಯಕ್ಕೆ ಸೇರುತ್ತದೆ ಎಂದು ಇಂಚಗೇರಿ ಪೀಠಾಧಿಪತಿ ಸ.ಸ. ರೇವಣ್ಣಸಿದ್ದೇಶ್ವರ ಮಹಾರಾಜರು ಹೇಳಿದರು.
ದುಡಿದು ಉಣ್ಣುವ ಹಕ್ಕು ಎಲ್ಲರಿಗೂ ಇದೆ. ಮನುಷ್ಯ ಜನ್ಮ ಬಂದ ಬಳಿಕ ಜನ್ಮ ಸಾರ್ಥಕ ಮಾಡಿಕೊಳ್ಳುವ ಕರ್ತವ್ಯ ಮನುಷ್ಯನದಾಗಿದೆ ಎಂದರು
ಇದೇ ಸಂದರ್ಭದಲ್ಲಿ ಬಾಬುರಾವ ಮಹಾರಾಜರು ಮಾತನಾಡಿ, ಇಂದಿನ ಒತ್ತಡದ ಬದುಕಿನಲ್ಲಿ ಟಿವಿ ಮತ್ತು ಮೊಬೈಲ್ ದಲ್ಲಿ ಸಿಲುಕಿಕೊಂಡ ಮಾನವನ ಮನಸ್ಸನ್ನು ಹೊರತೆಗೆಯುವದು ಕಠಿಣವಾಗಿದೆ ಎಂದು ತಾನೇ ಕಂಬಕ್ಕೆ ತೆಕ್ಕೆಥೊಡೆದು ಚಿಂತಿತಾನಾಗಿದ್ದಾನೆ. ಈ ಚಿಂತೆಯಿಂದ ದೂರ ಮಾಡುವ ಚಿನ್ಮಯ ಸ್ವರೂಪಿ ರೇವಣ್ಣಸಿದ್ದೇಶ್ವರ ಮಹಾರಾಜರು ಇದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಶಂಕ್ರಪ್ಪ ಕರಜನಾಗಿ ಅವರು ದಾಸಬೋದದ ವಿವರಣೆ ಕೊಟ್ಟರು. ಕಾರ್ಯಕ್ರಮದಲ್ಲಿ ಮಹೇಶ್ ಅರಳಿ, ರದ್ದೇರಟ್ಟಿ ಮಹಾರಾಜರು, ತಾಜಾಪುರದ ಮಹಾರಾಜರು ಮತ್ತು ನ್ಯಾಯವಾದಿ ಕೆಂಚಪ್ಪ ಪೂಜಾರಿಯವರು ಮುಂತಾದವರು ಇದ್ದರು.

