ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೇತ್ರ ಚಿಕಿತ್ಸೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಕಣ್ಣುಗಳು ಮನುಷ್ಯನ ಪ್ರಮುಖ ಅಂಗ. ಅವು ಮನುಷ್ಯನ ಮುಖಕ್ಕೆ ಸೌಂದರ್ಯವನ್ನು ನೀಡುತ್ತವೆ. ಕಣ್ಣುಗಳು ಬಹಳಷ್ಟು ಸೂಕ್ಷ್ಮವಾಗಿರುತ್ತವೆ. ಅವುಗಳನ್ನು ವೈದ್ಯರಿಂದ ಪರೀಕ್ಷಿಸಿ ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಹುನ್ನೂರ ಹೇಳಿದರು.
ಅವರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-೨ ಮರಡಿ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಾಲಾ ವಿದ್ಯಾರ್ಥಿಗಳ ಉಚಿತ ನೇತ್ರ ಚಿಕಿತ್ಸಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಾಜೇಶ್ವರಿ ಕಾಮಗೊಂಡ ಮಾತನಾಡಿ, ಕಣ್ಣಿನ ಸಮಸ್ಯೆ ಇರುವ ವಿದ್ಯಾರ್ಥಿಗಳು ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರು ಅವರು ಉಚಿತ ಶಸ್ತ್ರಚಿಕಿತ್ಸೆ ಕೂಡ ನೀಡುತ್ತಾರೆ ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಂಕರ ನೇತ್ರ ತಜ್ಞರ ತಂಡ,ಶಾಲಾ ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ, ಸೋಮನಿಂಗ ಬೋರಗಿ, ಅಮೋಘಸಿದ್ದ ಮೆಟಗಾರ, ಎಸ್ ಎಸ್ ಮುಚ್ಚಂಡಿ, ಶಿಕ್ಷಕರಾದ ಬಸವರಾಜ ಕರಜಗಿ, ಡಿ ಎಸ್ ಬಗಲಿ, ಜಗದೀಶ ಚಲವಾದಿ, ಮಾದೇವ ಆದಿಗೊಂಡೆ, ಎಚ್ ಜೆ ಲೋಣಿ, ಎಂ ಎಸ್ ನಿಂಬಾಳಕರ, ವ್ಹಿ ಎಸ್ ಪತ್ತಾರ, ಜಯಶ್ರೀ ಗೋಟ್ಯಾಳ, ಸುರೇಖಾ ಝುಲ್ಪಿ, ಅಪೇಕ್ಷಾ ಕರಜಗಿ, ಗೀತಾ ಮಾಳಿ, ಪ್ರೇಮಾ ಧೋತ್ರೆ ಹಾಗೂ ಮಕ್ಕಳು ಉಪಸ್ಥಿತರಿದ್ದರು.
ನಂತರ ವಿದ್ಯಾರ್ಥಿಗಳಿಗೆ ನೇತ್ರ ತಪಾಸಣೆ ನಡೆಸಿ ಸೂಕ್ತ ಸಲಹೆ-ಸೂಚನೆಗಳನ್ನು ನೀಡಲಾಯಿತು.