ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಓಸಿ ಮಟಗಾ ಜೂಜಾಟವಾಡುತ್ತಿದ್ದ ಇಬ್ಬರ ಮೇಲೆ ಇಲ್ಲಿನ ಪಿಎಸ್‌ಐ ಸಂಜಯ ತಿಪರೆಡ್ಡಿ ೨ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಪಟ್ಟಣದ ವಿರೇಶ್ವರ ನಗರದ ಷಣ್ಮುಖಪ್ಪ ಕೋಳೂರ ಈತನು ಪಟ್ಟಣದ ಬಸ್ ನಿಲ್ದಾಣದ ಎದುರು ಮತ್ತು ತಾಲೂಕಿನ ನಾಲತವಾಡ ಪಟ್ಟಣದ ನಾಡಗೌಡರ ಓಣಿಯ ಗದ್ದೆಪ್ಪ ಭಜಂತ್ರಿ ನಾಲತವಾಡದ ವಿರೇಶ್ವರ ವೃತ್ತದ ಬಳಿ ನಿಂತು ೧ರೂ ಗೆ ೮೦ ರೂ ನೀಡುವ ಕರಾರಿನ ಮೇರೆಗೆ ಕಲ್ಯಾಣ ಮಟಗಾ ಎನ್ನುವ ಓಸಿ ಮಟಗಾ ಜೂಜಾಟವಾಡುತ್ತಿದ್ದ ವೇಳೆ ಸಿಕ್ಕಿದ್ದು ಇವರಿಬ್ಬರ ಮೇಲೆ ಪ್ರಕರಣ ದಾಖಲಿಸಿ, ಇವರಿಂದ ಪೆನ್ನು, ಓಸಿ ಚೀಟಿ ಮತ್ತು ಕೆಲ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
