ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ೧೯ ವರ್ಷದ ಮಹಿಳೆಯೊಬ್ಬಳಿಗೆ ಜೀವದ ಭಯ ಹುಟ್ಟಿಸಿ ನಿರಂತರ ಅತ್ಯಾಚಾರವೆಸಗಿ, ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ ಆರೋಪದ ಮೇಲೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಗುಡದಿನ್ನಿ ಗ್ರಾಮದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದ್ದು ಆರೋಪಿ ಸ್ಥಾನದಲ್ಲಿರುವ ಪ್ರವೀಣ ಮುತ್ತತ್ತಿ ಈ ಹೇಯ ಕೃತ್ಯ ಎಸಗಿರುವುದಾಗಿ ಮತ್ತು ಈ ಕೃತ್ಯಕ್ಕೆ ಪ್ರವೀಣನ ತಂದೆ ಗುರುಸಂಗಪ್ಪ ಮುತ್ತತ್ತಿ ಕುಮ್ಮಕ್ಕು ನೀಡಿರುವದಾಗಿ ನೊಂದವಳ ತಾಯಿ ದೂರು ನೀಡಿದ್ದಾಳೆ.
ಆರೋಪಿಯು ಸಂತ್ರಸ್ಥೆಯ ಮನೆಗೆ ನುಗ್ಗಿ ಜೀವದ ಬೆದರಿಕೆ ಹಾಕಿ ನಿರಂತರವಾಗಿ ಅತ್ಯಾಚಾರವೆಸಗಿ ಮಹಿಳೆಯು ಗರ್ಭಧರಿಸಿದಾಗ ಆಕೆಗೆ ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದು ಸಧ್ಯ ಸಂತ್ರಸ್ಥೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವದಾಗಿ ದೂರಿನಲ್ಲಿ ತಿಳಿಸಲಾಗಿದೆ.
