Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪರವಾನಗಿ ಭೂಮಾಪಕರರ ಮೇಲೆ ಪದೇ ಪದೇ ಪದೇ ಹಲ್ಲೆಯಾಗುತ್ತಿರುವುದನ್ನು ಖಂಡಿಸಿ, ಶಾಶ್ವತ ಪರಿಹಾರಕ್ಕಾಗಿ ರಾಜ್ಯ ಪರವಾನಗಿ ಭೂಮಾಪಕರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳ ಭೂಮಾಪನ ತಾಂತ್ರಿಕ ಸಹಾಯಕರು ಹಾಗು ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.ಬಸವನಬಾಗೇವಾಡಿ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋಲ್ಹಾರ ತಾಲೂಕು ಕಾರ್ಯಕ್ಷೇತ್ರವನ್ನು ಹೊಂದಿರುವ ಭೂಮಾಪಕ ಸದಾನಂದ ಹೆಗಡ್ಯಾಳರವರ ಮೇಲೆ ಹಲ್ಲೆಯಾಗಿದ್ದನ್ನು ಖಂಡಿಸಿ ಸಾಂಕೇತಿಕವಾಗಿ ಪ್ರತಿಭಟನೆ ಕೈಗೊಂಡು ಮನವಿ ಪತ್ರ ನೀಡಲಾಯಿತು.ಈ ವೇಳೆ ರಾಜ್ಯ ಸಂಘದ ಉಪಾಧ್ಯಕ್ಷ ಎಸ್ ಕೆ. ಗಂಗಾಧರ ಮಾತನಾಡಿ, ಅತೀ ಸೂಕ್ಷ್ಮಪ್ರಕರಣಗಳಾದಂತ ಹದ್ದುಬಸ್ತು, ಕೋರ್ಟಕೇಸ್, ಪೋಡಿ ಮತ್ತು ತಕರಾರು ಪ್ರಕರಣಗಳನ್ನು ಯಾವುದೇ ಸೇವಾಭದ್ರತೆ, ಜೀವಭದ್ರತೆ, ಸಹಾಯಕರು (ಬಾಂದಜವಾನರು) ಹಾಗೂ ಕನಿಷ್ಟವೇತನ ಇಲ್ಲದೇ ಪ್ರಕರಣಗಳನ್ನು ಹಂಚಿಕೆ ಮಾಡುತ್ತಿರುವುದು ಖಂಡನೀಯ. ಈ ಘಟನೆಗೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.ಜಿಲ್ಲಾ ಅಧ್ಯಕ್ಷ ಲಾಲಸಾಬ ಹುಸೇನಸಾಬ ಮುಲ್ಲಾ ಮಾತನಾಡಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ವ್ಯಕ್ತಿಗಳ ಮೇಲೆ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.ನಿರ್ದೇಶಕರಾದ ಷಣ್ಮುಕ ಪಿ…

Read More

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ವಿವಿಧ ಬಡಾವಣೆ, ಕಾಲೊನಿಗಳಲ್ಲಿರುವ ಉದ್ಯಾನವನಗಳನ್ನು ಅಭಿವೃದ್ಧಿಪಡಿಸುವ ಜೊತೆಗೆ ವಾಕಿಂಗ್ ಟ್ರ್ಯಾಕ್, ಓಪನ್ ಜಿಮ್ ಮಾಡಿದ್ದರಿಂದ ಸಾರ್ವಜನಿಕರ ಆರೋಗ್ಯ ವೃದ್ಧಿಗೆ ಸಹಕಾರಿ ಆಗಿದೆ ಎಂದು ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ನಗರಾಭಿವೃದ್ದಿ ಪ್ರಾಧಿಕಾರದಿಂದ ಸನ್ 2023ನೇ ಸಾಲಿನಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳಿಗೆ ಹಿಂದೇಯೇ ಮಂಜೂರಿಸಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ನಗರದ ವಿವಿಧೆಡೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮಹಿಳೆಯರು, ವೃದ್ಧರ ವಾಯು ವಿಹಾರಕ್ಕೆ ತುಂಬಾ ಅನುಕೂಲವಾಗಿದೆ ಎಂದರು.ಈ ಹಿಂದೆ ಗಾರ್ಡನ್ ಗಳಲ್ಲಿ ಬೇರೆ ಏನನ್ನು ನಿರ್ಮಾಣ ಮಾಡಲು ಬರುತ್ತಿರಲಿಲ್ಲ. ಅದಕ್ಕೆ ತಿದ್ದುಪಡಿ ಮಾಡಿಸಿ ಉದ್ಯಾನದ ಶೇ 10 ರಷ್ಟು ಜಾಗ ಬಳಸಿಕೊಂಡು, ಯೋಗಾ ಪ್ಲಾಟ್ ಫಾರ್ಮ್, ಸಾಂಸ್ಕೃತಿಕ ಭವನ ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ. ಶಾಸಕರ ನಿಧಿಯಲ್ಲಿ ಅನುದಾನ ಮಂಜೂರಿಸಿ ಹಂತ ಹಂತವಾಗಿ ನಗರದ ಎಲ್ಲ ಉದ್ಯಾನಗಳಲ್ಲಿಯೂ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.ದೇಸಾಯಿ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಭವಿಷ್ಯದ ಭಾರತದ ಭದ್ರಬುನಾದಿಗೆ ಭ್ರಷ್ಟಾಚಾರವು ಒಂದು ಮಾರಕ ಪಿಡುಗಾಗಿದ್ದು ಅದನ್ನು ಎಲ್ಲರೂ ಸೇರಿ ಬೇರುಮಟ್ಟದಿಂದ ನಿರ್ಮೂಲನೆ ಮಾಡಬೇಕೆಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ .ಆರ್ .ಎಚ್. ರಮೇಶ ಕರೆ ನೀಡಿದರು.ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಮಂಗಳವಾರ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ಹಮ್ಮಿಕೊಂಡಿದ್ದ “ಭ್ರಷ್ಟಾಚಾರ ನಿರ್ಮೂಲನಾ ಸಪ್ತಾಹʼ ಕಾರ್ಯಕ್ರಮ ಉದ್ಘಾಟಿಸಿಪ್ರತಿಜ್ಞಾವಿಧಿ ಬೋಧನೆ ಮಾಡಿ ಮಾತನಾಡಿದರು.ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ .ಆರ್ .ಎಚ್. ರಮೇಶ ಮಾತನಾಡಿ ʼ ಭವಿಷ್ಯದ ಭಾರತದ ಭದ್ರಬುನಾದಿಗೆ ಭ್ರಷ್ಟಾಚಾರವು ಒಂದು ಮಾರಕ ಪಿಡುಗಾಗಿದ್ದು ಅದನ್ನು ಎಲ್ಲರೂ ಸೇರಿ ಬೇರುಮಟ್ಟದಿಂದ ನಿರ್ಮೂಲನೆ ಮಾಡಬೇಕೆಂದು ಕರೆ ನೀಡಿದರು.ಎನ್. ಎಸ್.‌ ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ಪಿ.ಎಸ್.ದೇವರ ಪ್ರಾಸ್ತಾವಿಕ ಮಾತುಗಳನ್ನಾಡಿದರು,ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರಾದ ಪ್ರೂ.ಕಿರಣ ರೇವಣಕರ , ಪ್ರೊ.ಜಗದೀಶ ಮಡಿಕ್ಯಾಳ, ಡಾ.ಸುರೇಖಾ ವಾರದ, ಪ್ರೊ.ಸುನಂದಾ ಪೂಜಾರಿ, ಡಾ.ರಮೇಶ ಕತ್ತಿ, ಪ್ರೊ. ಸಿದ್ದಪ್ಪ ಓಲೇಕಾರ, ಪ್ರೊ.ಭಾರತಿ ಕನ್ನೋಳ್ಳಿ, ಸತೀಶಕುಮಾರ ಚುಂಚೂರ ಮತ್ತು ಕಾಲೇಜಿನ ಎಲ್ಲಾ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿನ ೧೫,೦೦೦ ಎಕರೆ, ಕರ್ನಾಟಕ ರಾಜ್ಯದ ೧,೧೨,೦೦೦ ಎಕರೆ ಹಾಗೂ ಭಾರತ ದೇಶದಲ್ಲಿನ ೯,೪೬,೦೦೦ ಎಕರೆ ಜಮೀನನ್ನು ಯಾವ ಮುಸಲ್ಮಾನರು,“ವಕ್ಫ” ಬೋರ್ಡ್ಗೆ ದಾನ ನೀಡಿದರು ಯಾವಾಗ ನೀಡಿದರು? ಎಂಬುದನ್ನು ಬಹಿರಂಗಪಡಿಸಬೇಕೆಂದು ಸ್ವಾಮಿ ವಿವೇಕಾನಂದ ಸೇನೆ ಬಹಿರಂಗ ಸವಾಲು ಹಾಕಿದೆ.ಈ ಕುರಿತು ಮಂಗಳವಾರ ಪ್ರಕಟಣೆಯಲ್ಲಿ ಸವಾಲು ಹಾಕಿದ ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘವ ಅಣ್ಣಿಗೇರಿ ಅವರು, ಕಾಂಗ್ರೆಸ್ ನಾಯಕರಿಗೆ ಹಲವುಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.೨೦೦೯ರಲ್ಲಿ ೪,೦೦,೦೦೦ ಎಕರೆ ಇದ್ದಂತಹ ವಕ್ಫ್ ಆಸ್ತಿ ಇಂದು ೯,೪೬,೦೦೦ ಎಕರೆ ಹೇಗಾಯಿತು ? ೨೦೧೩ ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ದೆಹಲಿಯಲ್ಲಿ, ಭಾರತ ಸರ್ಕಾರದ ೧೨೩ ಪ್ರಮುಖ ಆಸ್ತಿಗಳನ್ನು ವಕ್ಫ್ ಬೋರ್ಡಿಗೆ ಏಕೆ ನೀಡಿತು ? ಎಂಬುದನ್ನು ದೇಶದ ಜನತೆಯ ಮುಂದೆ ಬಹಿರಂಗಪಡಿಸಿ… ಬಹಿರಂಗಪಡಿಸಿದರೆ, ವಕ್ಫ್ ಬೋರ್ಡ್ಗೆ ದಾನ ನೀಡಿದ ಮಹಾ ದಾನಿಗಳನ್ನು, ಸ್ವಾಮಿ ವಿವೇಕಾನಂದ ಸೇನೆಯಿಂದ ಸನ್ಮಾನಿಸಲಾಗುವುದು ಎಂದಿದ್ದಾರೆ.೧೯೭೪, ೧೯೭೭ ಹಾಗೂ ೨೦೧೬ ರಲ್ಲಿ ಯಾವ ಆಧಾರದ ಮೇಲೆ ಕಾಂಗ್ರೆಸ್…

Read More

ರೈತರ ಜಮೀನು ವಕ್ಫ್ ಮಂಡಳಿ ಹೆಸರಿಗೆ ಅಕ್ರಮ ವರ್ಗಾವಣೆ ಪ್ರಕರಣ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರೈತರ ಕೃಷಿ ಭೂಮಿಯನ್ನು ರಾಜಕೀಯ ದುರುದ್ದೇಶದಿಂದ ಅಕ್ರಮವಾಗಿ ಕರ್ನಾಟಕ ವಕ್ಫ್ ಮಂಡಳಿಗೆ ವರ್ಗಾವಣೆ ಮಾಡಿರುವ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಕ್ರಮಕ್ಕೆ ಮುಂದಾಗಿದೆ. ಇದನ್ನು ಖಂಡಿಸಿ ಬಾಧಿತರ ಪರ ಧ್ವನಿಯಾಗಲು ರೈತ ಭಾರತ ಪಕ್ಷ ದಿಂದ ನವೆಂಬರ್ ಎರಡನೇ ವಾರ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಿಂದ ಜಿಲ್ಲಾಧಿಕಾರಿ ಕಛೇರಿ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ರಾಜಕೀಯ ದುರುದ್ದೇಶದಿಂದ ಜಾತಿ, ಮತ, ಪಂಥಗಳ ಹೆಸರಿನಲ್ಲಿ ಸಮಾಜವನ್ನು ಒಡೆದಾಳುವ ಕೆಲಸ ಮಾಡಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತ ಬಂದಿವೆ. ಇದೀಗ ಕಾಂಗ್ರೆಸ್ ಸರ್ಕಾರ ರೈತರ ಹೆಸರಿನಲ್ಲಿ ಸಮುದಾಯಗಳ ಮಧ್ಯೆ ಸಂಘರ್ಷ ಸೃಷ್ಟಿಸಲು ಮುಂದಾಗಿ. ಇದನ್ನು ಬಳಸಿಕೊಂಡು ರಾಜ್ಯದಲ್ಲಿ ಬಿಜೆಪಿ ರಾಜಕೀಯ ಲಾಭಕ್ಕೆ ಮುಂದಾಗಿದೆ ಎಂದು ಟೀಕಿಸಿದ್ದಾರೆ.ವಿಜಯಪುರ ಜಿಲ್ಲೆಗೆ ಆಗಮಿಸಿದ್ದ ವಕ್ಫ ಸಚಿವ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲೂಕಿನ ರೇವತಗಾಂವ ಗ್ರಾಮದಲ್ಲಿ ವಿದ್ಯುತ್ ತಂತಿ ಕಡಿದು ಬಿದ್ದುದ್ದರಿಂದಾಗಿ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು, ಕಟಾವಿಗೆ ಬಂದಿದ್ದ ಎರಡು ಎಕರೆ ಕಬ್ಬು ಸುಟ್ಟು ಭಸ್ಮವಾಗಿರುವ ಘಟನೆ ಸೋಮವಾರದಂದು ನಡೆದಿದೆ.ನಿವರಗಿ ಕೆಇಬಿಯಿಂದ ರೇವತಗಾಂವ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮೇನ್‌ಲೈನ್ ತಂತಿ ಹರಿದು ಅಪ್ಪಾಸಾಬ ಚನ್ನಗೊಂಡ ಹಾವಿನಾಳರವರು ಬೆಳೆದಿರುವ ಕಬ್ಬಿನ ಗದ್ದೆಗೆ ಬಿದ್ದುದ್ದರಿಂದಾಗಿ ಎರಡು ಎಕರೆ ಕಬ್ಬು ಸುಟ್ಟು ಹೋಗಿದೆ. ಸುಮಾರು ೩ ಲಕ್ಷದಷ್ಟು ಬೆಳೆ ಹಾನಿಯಾಗಿದೆ.ಕೆಇಬಿ ಅಧಿಕಾರಿ ಭೇಟಿ: ನನ್ನ ಬೆಳೆಗೆ ಸೂಕ್ತ ಪರಿಹಾರ ನೀಡುವವರೆಗೆ ಹರಿದು ಬಿದ್ದಿರುವ ತಂತಿ ದುರಸ್ಥಿಗೊಳಿಸಲು ಅವಕಾಶ ಕಲ್ಪಿಸುವುದಿಲ್ಲ ಎಂದು ರೈತ ಹಟ ಹಿಡಿದಿರುವುದರಿಂದ ಸ್ಥಳಕ್ಕೆ ಚಡಚಣ ಪ್ರಭಾರಿ ಶಾಖಾಧಿಕಾರಿಗಳಾದ ಎಸ್.ಎಲ್.ಝಂಡೆ ಹಾಗೂ ಲೈನ್‌ಮನ್ ಅಂಬಿರವರುಗಳು ಭೇಟಿ ನೀಡಿ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದ್ದರು.ಅಲ್ಲದೇ ಘಟನಾ ಸ್ಥಳಕ್ಕೆ ಗ್ರಾಮ ಸೇವಕ ಅಮಸಿದ್ದ ಬನ್ನೆ ಹಾಗೂ ಗ್ರಾಪಂ ಸದಸ್ಯ ಮಹಾದೇವ ಅಂಕಲಗಿ, ಚಡಚಣ ಪೊಲೀಸ್ ಠಾಣೆಯ ಸಿಬ್ಬಂದಿ ಕೆ.ಬಿ.ಪಾಟೀಲ ಹಾಗೂ…

Read More

ವಿಜಯಪುರದಲ್ಲಿ ಇಂದು ೬ ನೇ ದಿನಕ್ಕೆ ಕಾಲಿರಿಸಿದ ಜಯ ಕರ್ನಾಟಕ ಸಂಘಟನೆ ಧರಣಿ ಸತ್ಯಾಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ವಿಮಾನ ನಿಲ್ದಾಣಕ್ಕೆ ಶ್ರೀ ಬಸವೇಶ್ವರ ಹೆಸರು ಗಾಂಧಿ ವೃತ್ತದ ನವೀಕರಣ, ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಹೆಸರನ್ನು ಮರುನಾಮಕರಣ ಹಾಗೂ ವಿಜಯಪುರ ನಗರದ ಕಿತ್ತೂರ ರಾಣಿ ಚನ್ನಮ್ಮ ರಂಗ ಮಂದಿರ ನವೀಕರಗೊಳಿಸಿ ನಾಟಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಯ ಕರ್ನಾಟಕ ಸಂಘಟನೆ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಸೋಮವಾರ ೫ನೇ ದಿನಕ್ಕೆ ಮುನ್ನಡೆದಿದೆ.ಧರಣಿ ಸ್ಥಳಕ್ಕೆ ಭೇಟಿ ನೀಡಿದ ಶರಣು ಹೂಗಾರ, ರವಿ ಶಿಂಧೆ, ರಂಗಭೂಮಿ ಕಲಾವಿದರಾದ ಸಿದ್ದು ನಾಲತವಾಡ ಮಾತನಾಡಿ, ಕಿತ್ತೂರ ರಾಣಿ ಚೆನ್ನಮ್ಮ ನಾಟಕ ಮಂದಿರ ಸ್ಥಗಿತಗೊಂಡು ಸುಮಾರು ದಶಕಗಳೆ ಕಳೆದಿವೆ. ನಾಟಕ ಮಂದಿರ ಪ್ರಾರಂಭ ಇದ್ದ ಸಂದರ್ಭದಲ್ಲಿ ರಂಗಭೂಮಿ ಕಲಾವಿದರು ತಮ್ಮ ದಿನನಿತ್ಯದ ಜೀವನ ನಡೆಸಿಕೊಂಡು ಬಂದಿದ್ದರೂ ಇದು ಸದ್ಯಕ್ಕೆ ಬಂದ ಇದ್ದ ಕಾರಣ ರಂಗಭೂಮಿ ಕಲಾವಿದರು ನಾಟಕವನ್ನು ನಂಬಿ ಜೀವನ ನಡೆಸುವವರು ಕಷ್ಟದಲ್ಲಿದ್ದಾರೆ. ಪುನಃ…

Read More

ಕ್ರಮ ವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೌಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಕಾಲಮಿತಿಯಲ್ಲಿ ಪ್ರಕರಣಗಳ ಇತ್ಯಥ್ಯಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದರು.ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತಿ ಪ್ರಕರಣಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಬೇಕು. ತ್ವರಿತ ಇತ್ಯರ್ಥಕ್ಕೆ ಆದ್ಯತೆ ನೀಡಬೇಕು. ದೌರ್ಜನ್ಯ ಪ್ರಕರಣಗಳ ಪರಿಹಾರ ಧನವನ್ನು ಆದ್ಯತೆ ಮೇಲೆ ಸಂತ್ರಸ್ಥರಿಗೆ ಬಿಡುಗಡೆ ಮಾಡಬೇಕು ಎಂದು ಸೂಚಿಸಿದರು.ದೌರ್ಜನ್ಯ ಪ್ರತಿಬಂಧ ಅಧಿನಿಯಮ, ಅಸ್ಪೃಶ್ಯತೆ ನಿವಾರಣೆ ಕುರಿತು ಅರಿವು ಮೂಡಿಸುವ ವಿಚಾರಗೋಷ್ಠಿ ಹಾಗೂ ಕಾರ್ಯಾಗಾರಗಳನ್ನು ಜಿಲ್ಲಾ ಮಟ್ಟದಲ್ಲಿ ಸೇರಿದಂತೆ ತಾಲೂಕಾ ಹಾಗೂ ಗ್ರಾಮ ಮಟ್ಟದಲ್ಲಿ ಆಯೋಜಿಸುವ ಮೂಲಕ ಜಾಗೃತಿ ಮೂಡಿಸಬೇಕು. ಇಂತಹ ಕಾರ್ಯಕ್ರಮಗಳಿಗೆ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರನ್ನು ಆಹ್ವಾನಿಸಬೇಕು. ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಂವಿಧಾನ ಪೀಠಿಕೆ ಮಾಹಿತಿಯನ್ನೊಳಗೊಂಡ ಫಲಕವನ್ನು…

Read More

ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಆಯೋಗ ರಚನೆ | ಸಚಿವ ಎಚ್‌ಕೆ ಪಾಟೀಲ್ ಮಾಹಿತಿ ಬೆಂಗಳೂರು: ಪರಿಶಿಷ್ಟ ಜಾತಿ(ಎಸ್‌ಸಿ)ಗಳಿಗೆ ಒಳಮೀಸಲಾತಿ ಜಾರಿಗೊಳಿಸಲು ಮತ್ತು ಈ ಸಂಬಂಧ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಆಯೋಗ ರಚಿಸಲು ಸೋಮವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಅವರು, ಒಳ ಮೀಸಲಾತಿ ಜಾರಿ ಸಂಬಂಧ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗ ರಚಿಸಲಾಗುವುದು ಎಂದರು.ಎಸ್‌ಸಿಗಳಿಗೆ ಒಳ ಮೀಸಲಾತಿ ಜಾರಿ ಮಾಡುವ ನಿಟ್ಟಿನಲ್ಲಿ ನಂಬಲರ್ಹ ದಾಖಲೆಗಳು ಹಾಗೂ ದತ್ತಾಂಶ ಸಂಗ್ರಹಿಸಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಆಯೋಗ ರಚನೆ ಮಾಡಲು ನಿರ್ಧಾರ ಮಾಡಲಾಗಿದೆ. ಮೂರು ತಿಂಗಳಲ್ಲಿ ಆಯೋಗ ವರದಿ ನೀಡಲಿದೆ ಎಂದರು.ಒಳಮೀಸಲಾತಿ ನೀಡುವಂತೆ ರಾಜ್ಯದಲ್ಲಿ ಬೇಡಿಕೆ ಹೆಚ್ಚುತ್ತಿದೆ. ಈ ಬಗ್ಗೆ ಚರ್ಚೆಗಳು ಮತ್ತು ಚಿಂತನೆಗಳು ನಡೆದಿವೆ. ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡಲು…

Read More