ಪುಸ್ತಕ ಸಂಸ್ಕೃತಿ & ಪ್ರಶಸ್ತಿ ಪ್ರದಾನ ಸಮಾರಂಭ | ಮಕ್ಕಳ ಸಾಹಿತಿ ಹ.ಮ.ಪೂಜಾರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಮೋರಟಗಿ: ವಿದ್ಯಾರ್ಥಿಗಳು ಕೃತಿಗಳು ಓದುವ ಹವ್ಯಾಸ ರೂಡಿಸಿಕೊಂಡು ಸಂಸ್ಕಾರವಂತರಗಬೇಕು, ಕೃತಿ ಓದುವಿಕೆಯಿಂದ ಜ್ಞಾನ ಪ್ರಾಪ್ತಿವಾಗುತ್ತದೆ ಎಂದು ಸಾಹಿತಿ ಹ ಮ ಪೂಜಾರ ಹೇಳಿದರು.
ಶನಿವಾರ ಗ್ರಾಮದ ಕಲ್ಪವೃಕ್ಷ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯ ಕಾಲೇಜಿನಲ್ಲಿ ವಿದ್ಯಾಚೇತನ ಪ್ರಕಾಶನ ಸಿಂದಗಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಪುಸ್ತಕ ಸಂಸ್ಕೃತಿ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ಇತ್ತೀಚಿನ ದಿನದಲ್ಲಿ ಮೊಬೈಲ್ ಗೀಳಿನ ಹಿಂದೆ ಬಿದ್ದು ಸುಂದರವಾದ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಮೊಬೈಲ್ ಬಳಕೆ ಬೇಡಾ ಎಂದು ಹೇಳಲಾರೆ ಮಿತವಾಗಿ ಮತ್ತು ಅವಶ್ಯಕತೆ ಮಾತ್ರ ಬಳಸಿ ನಿಮ್ಮ ಪಾಲಕರು ಅತಿಯಾದ ನಂಬಿಕೆ ಇಟ್ಟು ಗ್ರಾಮೀಣ ಭಾಗದಲ್ಲಿ ಕೂಲಿನಾಲಿ ಮಾಡುತ್ತ ನಿಮ್ಮನ್ನು ಸಾಕಿ ಶಿಕ್ಷಣ ಕೊಡಿಸುತಿದ್ದಾರೆ. ಅವರ ಕನಸು ನನಸಾಗಿಸುವ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಉನ್ನತ ಹುದ್ದೆಯ ಅಧಿಕಾರಿಗಳಾಗಿ ಹೊರಹುಮ್ಮಬೇಕು ಎಂದು ಸಲಹೆ ನೀಡಿದರು.
ಹವ್ಯಾಸಿ ಓದುಗ ಪ್ರಶಸ್ತಿಗೆ ಭಾಜನರಾದ ಕು. ದತ್ತಾತ್ರೇಯ ಶರಣಪ್ಪ ಬಂದ್ರಾಡ ವಿದ್ಯಾರ್ಥಿಗೆ ಗಣ್ಯರಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಲ್ಪವೃಕ್ಷ ಸಂಸ್ಥೆಯ ಅಧ್ಯಕ್ಷ ಶಿವಶರಣಗೌಡ ಬಿರಾದಾರ, ಆಡಳಿತ ಅಧಿಕಾರಿ ಎಸ್, ಎಚ್, ದುಳಬಾ, ಎಸ್, ಎಸ್, ಸಾತಿಹಾಳ, ಸಾಹಿತಿಗಳು ಕೆರೂಟಗಿ, ಪ್ರಾಚಾರ್ಯ ಎ, ಬಿ, ಸಿಂದಗಿ, ಪ್ರಾಚಾರ್ಯ ಎಸ್, ಬಿ, ಬಿರಾದಾರ, ಸೇರಿದಂತೆ ಕಲ್ಪವೃಕ್ಷ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಮಾಜಿ ಪ್ರಧಾನಿಗೆ ಗೌರವ ಸಮರ್ಪಣೆ
ಕಾರ್ಯಕ್ರಮ ಪೂರ್ವದಲ್ಲಿ ಮಾಜಿ ಪ್ರಧಾನಿ ದಿ, ಮನಮೋಹನಸಿಂಗ್ ನಿಧನದ ಹಿನ್ನೆಲೆ ವೇದಿಕೆ ಮೇಲಿರುವ ಗಣ್ಯರು ಹಾಗೂ ವಿದ್ಯಾರ್ಥಿಗಳು ಮೌನವಾಚಾರಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
“ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಇರುವ ಗ್ರಂಥಾಲಯದಲ್ಲಿ ವೈಯಕ್ತಿಕವಾಗಿ ಉಚಿತ ಪುಸ್ತಕಗಳನ್ನು ನೀಡುತ್ತೇವೆ. ವಿದ್ಯಾರ್ಥಿಗಳು ಸಮಯ ಮಿಸಲಿಟ್ಟು ಕೃತಿಗಳನ್ನು ಓದಬೇಕು. ಸಾಹಿತಿಗಳ ಕೃತಿಗಳು ಓದುವುದರಿಂದ ವಿದ್ಯಾರ್ಥಿಗಳಲ್ಲಿ ಜ್ಞಾನ ಪ್ರಾಪ್ತಿ ಆಗುತ್ತದೆ.”
– ಹ.ಮ.ಪೂಜಾರ
ಮಕ್ಕಳ ಸಾಹಿತಿ, ಸಿಂದಗಿ

