ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ದೇಶ ಕಂಡ ಧೀಮಂತ ನಾಯಕ, ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ದೇಶ ಕಂಡ ಅಪರೂಪ ನಾಯಕ ಎಂದು ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನಕಾರ್ಯದರ್ಶಿ ಪ್ರಕಾಶ ಗುಡಿಮನಿ ಹೇಳಿದರು.
ಪಟ್ಟಣದ ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಜರುಗಿದ ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿಪ್ರಧಾನಿ ಡಾ.ಮನಮೋಹನ್ ಸಿಂಗ್ ಇವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ಅಭಿವೃದ್ಧಿಶೀಲ ಭಾರತಕ್ಕಾಗಿ ಶ್ರಮಿಸಿದ ಮಹಾನ್ ಚೇತನ್ ಮನಮೋಹನ್ ಸಿಂಗ್ ಇವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ ಎಂದರು.
ನಂತರ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪಟ್ಟಣ ಪಂಚಾಯಿತಿ ಸದಸ್ಯ ಕಾಸುಗೌಡ ಬಿರಾದಾರ(ಜಲಕತ್ತಿ), ವಸಂತ ನಾಡಗೌಡ, ಸಂಗಮೇಶ ನಂದ್ಯಾಳ, ಎಸ್.ಎಸ್.ಮೋರಟಗಿ, ಚಂದ್ರಶೇಖರ ಹೊಸಮನಿ, ಶಬ್ಬೀರ್ ಮುಲ್ಲಾ, ಮುದುಕಪ್ಪ ದಾನಗೊಂಡ, ರಾವುತ ಅಗಸರ, ಸುಭಾಸ ಜಾಧವ, ರಾವುತ ತಳಕೇರಿ, ರಾಘವೇಂದ್ರ ಗುಡಿಮನಿ, ಪ್ರಕಾಶ ಮಲ್ಲಾರಿ, ಮಹಾಂತೇಶ ವಂದಾಲ, ರಮೇಶ ಮ್ಯಾಕೇರಿ, ಬಸವರಾಜ ಇಂಗಳಗಿ, ಜಾನು ಗುಡಿಮನಿ, ಬಸವರಾಜ ತಳಕೇರಿ, ಮಡಿವಾಳಪ್ಪ ಬ್ಯಾಲ್ಯಾಳ, ರಮೇಶ ಈಳಗೇರ, ಪಿಂಟೂ ಬಾಸುತ್ಕರ್, ಶ್ರೀಕಾಂತ ಕಾಖಂಡಕಿ, ಮಾಂತೇಶ ಚಲವಾದಿ, ಮಹೇಶ ಗುಡಿಮನಿ, ವಿಜಯಕುಮಾರ ರಾಠೋಡ ಇದ್ದರು.

