ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ದಲಿತ ಸಂಘರ್ಷ ಸಮಿತಿ ಸಹಿತ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಅಂಬೇಡ್ಕರ್ ಅವರ ಕುರಿತು ಅಮೀತ್ ಶಾ ಹೇಳಿಕೆ ಖಂಡಿಸಿ ಪಂಜಿನ ಮೆರವಣಿಗೆ ಜರುಗಿತು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ) ಹಾಗೂ ವಿದ್ಯಾರ್ಥಿ ಒಕ್ಕೂಟ ತಾಲ್ಲೂಕು ಶಾಖೆಯಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತಾಡಿದನ್ನು ಖಂಡಿಸಿ ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಿಂದ ಮೋಹರೆ ಹನುಮಂತರಾಯ ವೃತ್ತ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಪಂಜಿನ ಮೆರವಣಿಗೆ ಕೈಗೊಂಡು ನಂತರ ಸಭೆಯಲ್ಲಿ ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸಭೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ರಮೇಶ್ ಆಸಂಗಿ ಮಾತನಾಡಿ, ದೇಶದಲ್ಲಿ ಶಾಂತಿ ಸುವ್ಯವಸ್ಥೆ ಇರಬಾರದು ಎಲ್ಲರು ಸಮಾನರಾಗಿ ಇರಬಾರದು ಎಂಬ ಮನು ಧೋರಣೆಯಿಂದ ಅಂಬೇಡ್ಕರ್ ಅವರ ಬಗ್ಗೆ ಅಮಿತ್ ಶಾ ಮಾತನಾಡಿದ್ದಾರೆ ಇದೊಂದು ಬಾಲಿಶ ಹೇಳಿಕೆಯಾಗಿದ್ದು, ಇಡೀ ದೇಶ ಇದನ್ನು ಖಂಡಿಸುತ್ತದೆ ಎಂದರು.
ವಿಭಾಗೀಯ ಸಂಚಾಲಕ ವಿನಾಯಕ್ ಗುಣಸಾಗರ, ಜಿಲ್ಲಾ ಸಂಚಾಲಕ ಶರಣು ಶಿಂಧೆ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಶಂಕರಗೌಡ ಹಿರೇಗೌಡರ್. ಪ್ರಕಾಶ ಗುಡಿಮನಿ, ರಾಜಕುಮಾರ್ ಸಿಂದಗೇರಿ, ಲಕ್ಕಪ್ಪ ಬಡಿಗೇರ್, ಸೈಯ್ಯದ್ ರೂಗಿ, ಅಜೀಜ್ ಯಲಗಾರ, ಸಂಪತ್ ಜಮಾದಾರ, ಬಿ.ಎಸ್.ತಳವಾರ, ರಾವುತ್ ತಳಕೇರಿ, ರಮೇಶ್ ಮ್ಯಾಗೇರಿ, ನಾಗರಾಜ್ ಸಂಗಣ್ಣವರ್, ಬಸವರಾಜ್ ಇಂಗಳಗಿ, ಪರಶುರಾಮ್ ಬಡಿಗೇರ, ಅಶೋಕ್ ಗುಡಿಸಲಮನಿ, ಪ್ರಕಾಶ ಶಾಂತಿಗಿರಿ, ರಾಘವೇಂದ್ರ ಪಡೇಕನೂರ, ರಮೇಶ ಬನಸೋಡೆ, ಸಚಿನ್ ಕೊಟ್ಟಿಗೆ, ಯಮನಪ್ಪ ಭೂತಾಳಿ, ಮಹೇಶ್ ಗುಡಿಮನಿ, ಸೈಬಣ್ಣ ದಳಪತಿ, ಸುನೀಲ ಕನಮಡಿ, ಸುನಂದಾ ಸೊನ್ನಳ್ಳಿ, ಶಾಕೀರಾ ಹೆಬ್ಬಾಳ, ಮಾಂತೇಶ ಚಲವಾದಿ, ಸಂಗಮೇಶ ಖಾದ್ರಿ, ರಾಜು ದೊಡ್ಡಮನಿ ಇದ್ದರು.

