ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಗ್ರಾಮದ ಜೈ ಹನುಮಾನ್ ಯುವ ಮಿತ್ರ ಮಂಡಳಿ ಆಶ್ರಯದಲ್ಲಿ ಶ್ರೀ ಮಾರುತಿ ದೇವರ ಕಾತಿ೯ಕೋತ್ಸವದ ಪ್ರಯುಕ್ತ ಇದೇ ದಿ,30 ರಂದು ಸೋಮವಾರ ಧರ್ಮ ಮತ್ತು ಸಂಸ್ಕೃತಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ.
ಅಂದು ರಾತ್ರಿ 7 ಗಂಟೆ ಸುಮಾರಿಗೆ ಚಿಕ್ಕಪಡಸಲಗಿ ಗ್ರಾಮದಲ್ಲಿರುವ ಐತಿಹಾಸಿಕ ಹನುಮಾನ ಮಂದಿರದ ಆವರಣದಲ್ಲಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು ವಾಗ್ಮಿ ಕು,ಹಾರಿಕಾ ಮಂಜುನಾಥ “ಧರ್ಮ ಮತ್ತು ಸಂಸ್ಕೃತಿ” ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಕಾರಣ ಸುತ್ತ ಮುತ್ತಲಿನ ಗ್ರಾಮಗಳ ಸದ್ಭಕ್ತರು, ಅಭಿಮಾನಿಗಳು ಹಾಗೂ ಚಿಕ್ಕಪಡಸಲಗಿ ಗ್ರಾಮದ ಸಮಸ್ತ ದೈವಬಳಗ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹಾರಿಕಾ ರವರ ನುಡಿಮುತ್ತು ಆಲಿಸುವುದರೊಂದಿಗೆ ಹನುಮನ ಕೃಪೆಗೆ ಪಾತ್ರರಾಗಬೇಕೆಂದು ಜೈ ಹನುಮಾನ ಯುವಮಿತ್ರ ಮಂಡಳಿ ಪ್ರಕಟಣೆಯಲ್ಲಿ ಕೋರಿದೆ.

