Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಹುಲಜಂತಿಯ ಮಾಳಿಂಗರಾಯನ ಮೇಲೆ ಶಿವ-ಪಾರ್ವತಿಯರಿಂದ ಮುಂಡಾಸ್ | ಭಂಡಾರದಲ್ಲಿ ಮಿಂದೆದ್ದ ಭಕ್ತ ಸಮೂಹ ಹಳದಿಮಯ ಉದಯರಶ್ಮಿ ದಿನಪತ್ರಿಕೆ ವರದಿ: ಸಿದ್ರಾಮ ಮಾಳಿಚಡಚಣ: ಹಾಲುಮತ ಸಮಾಜದ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಸಮೀಪದ ಹುಲಜಂತಿ ಗ್ರಾಮದ ಶ್ರೀ ಮಾಳಿಂಗರಾಯ ಜಾತ್ರೆಯ ಮುಂಡಾಸ್ ಹಾಗೂ ದೇವರುಗಳ ಪಲ್ಲಕ್ಕಿಗಳ ಭೇಟಿಯನ್ನು ನೋಡಲು ಭಕ್ತರ ಮಹಾಪೂರವೇ ಹರಿದು ಬಂದಿದೆ.ರಾಜ್ಯದ ಗಡಿಯಲ್ಲಿರುವ ಮಂಗಳವೇಡಾ ತಾಲೂಕಿನ ಹುಲಜಂತಿ ಗ್ರಾಮದಲ್ಲಿ ಮಾಳಿಂಗರಾಯನು ೧೪ನೇ ಶತಮಾನದಲ್ಲಿ ಬಾಳಿ ಬದುಕಿ, ಹಲವು ಪವಾಡಗಳನ್ನು ಮಾಡಿದ ಪವಾಡ ಪುರುಷ ಮಾಳಿಂಗರಾಯ. ಮಾಳಿಂಗರಾಯನ ಭಕ್ತಿಗೆ ಮೆಚ್ಚಿದ ಪರಶಿವನು ದೀಪಾವಳಿಯ ಅಮವಾಸ್ಯೆಯ ದಿನ ಬೀಜಗುಂತಿಯ ಹುತ್ತದ ಮೇಲೆ ಹತ್ತಿ ಬೀಜವನ್ನು ನಾಟಿ ಮಾಡಿ. ಅದು ಬೆಳದು ಹೂವಾಗಿ, ಕಾಯಾಗಿ, ಹತ್ತಿಯಾಗಿ ಒಡೆದು. ಆ ಹತ್ತಿಯನ್ನು ನೇಯ್ದು. ಮುಂಡಾಸವನ್ನು ತಯಾರು ಮಾಡಿ ಸಾಕ್ಷಾತ್ ಶಿವ-ಪಾರ್ವತಿಯರು ಕೈಲಾಸದಿಂದ ಧರೆಗಿಳಿದು ಬಂದು ಮುಂಡಾಸು ಸುತ್ತುತ್ತಾನೆ ಎಂಬುದು ಭಕ್ತರ ನಂಬಿಕೆ.ಗುರುವಾರದ ಮಧ್ಯರಾತ್ರಿ ದೀಪಾವಳಿ ಅಮವಾಸ್ಯೆಯ ನಿಮಿತ್ತ ಮಾಳಿಂಗರಾಯನ ಮುಂಡಾಸ್‌ನ್ನು ನೋಡಲು ಜನಸಾಗರ ಮಧ್ಯರಾತ್ರಿಯಲ್ಲಿಯೇ ದೇವಾಸ್ಥಾನದ ಸುತ್ತಮುತ್ತ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಸುಕ್ಷೇತ್ರ ದೇವರನಾವದಗಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಇದೆ ಸೋಮವಾರ 04 ನವೆಂಬರ ದಂದು ವಾಸುದೇವ ಬಲವಂತ ಫಡಕೆ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯವರು ಹಮ್ಮಿಕೊಂಡ ಆದ್ಯ ಕ್ರಾಂತಿಕಾರಿ ಹುಟ್ಟು ಸ್ವಾತಂತ್ರ್ಯ ಹೋರಾಟಗಾರ ವಾಸುದೇವ ಬಲವಂತ ಫಡಕೆ ರವರ 122 ನೇ ಜಯಂತೋತ್ಸವ ಕಾರ್ಯಕ್ರಮ ಜರುಗುವುದು.ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು ಡಾ. ಚೆನ್ನಮಲ್ಲ ಶಿವಯೋಗಿ ಶಿವಾಚಾರ್ಯರು ತೇರಿನ ಮಠ ಬಡದಾಳ, ಸಾನಿಧ್ಯ ವೇ. ಬಸಲಿಂಗಯ್ಯ ಮಾ.ಹಿರೇಮಠ ದೇವರನಾದಗಿ, ಅಧ್ಯಕ್ಷತೆ ಅಶೋಕ ಮ.ಮನಗೂಳಿ ಶಾಸಕರು ಸಿಂದಗಿ,ಸಮಾರಂಭದ ಉದ್ಘಾಟಕರಾಗಿ ಬಸನಗೌಡರ ರಾ.ಪಾಟೀಲ (ಯತ್ನಾಳ) ಮಾಜಿ ಕೇಂದ್ರ ಸಚಿವರು ಹಾಗೂ ಶಾಸಕರು ವಿಜಯಪುರ,ನೇತೃತ್ವ ರಮೇಶ ಬಾ.ಭೂಸನೂರ ಮಾಜಿ ಶಾಸಕರು ಸಿಂದಗಿ,ದಿಕ್ಸೂಚಿ ಭಾಷಣ ಆರ್.ಎಸ್.ಪಾಟೀಲ (ಕುಚುಬಾಳ) ಬಿಜೆಪಿ ಅಧ್ಯಕ್ಷರು ವಿಜಯಪುರ,ಮುಖ್ಯ ಅತಿಥಿಗಳಾಗಿ ಶ್ರೀಮಂತ ನಾಗೂರ ಮಾಜಿ ಜಪಂ ಸದಸ್ಯರು ದೇವಣಗಾವ, ಗುರಣ್ಣಗೌಡ ಸಿ.ಗುಗ್ಗರಿ ಬಿಜೆಪಿ ಮುಖಂಡರು ದೇವರನಾವದಗಿ, ನಿಂಗಣ್ಣ ಗು.ಜನಿವಾರ ನೋಡಲ್ ಅಧಿಕಾರಿಗಳು ಡಿಸಿಸಿ ಮುದ್ದೇಬಿಹಾಳ,ವಿಶೇಷ ಸನ್ಮಾನಿತರಾಗಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಜೋರಾಗುತ್ತಿದ್ದಂತೆ ನಗರದಲ್ಲಿ ಅಂಗಡಿ ಮುಂಗಟುಗಳ ತೆರವು ಕಾರ್ಯಾಚರಣೆ ಚುರುಕುಗೊಂಡಿದೆ ಆದರೆ ಸಿದ್ದಲಿಂಗ ಶ್ರೀಗಳ (ಹಳೆಯ ಎಸ್.ಬಿ.ಐ) ರಸ್ತೆಯ ಅಂಗಡಿಗಳ ಸಣ್ಣ ಪುಟ್ಟ ವ್ಯಾಪಾರಸ್ಥರು ಬೀದಿಗೆ ಬರುವ ಪರಿಸ್ಥಿತಿ ಉದ್ಭವವಾಗಿದೆ. ಕಳೆದ 2013 ರಲ್ಲಿ ಮಾಸ್ಟರ್ ಪ್ಲ್ಯಾನ್ ನಲ್ಲಿ ಅಂಗಡಿಗಳು ತೇರುವಾಗಿದ್ದು, ಸದ್ಯಕ್ಕೆ ಎರಡು ಬದಿಯ ಚರಂಡಿ ಮೇಲಿರುವ ಅಂಗಡಿಗಳನ್ನು ಮಾತ್ರ ತೆರವುಗೊಳಿಸಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಪುರಸಭೆ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಹೇಳಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಅಂಗಡಿ ಮುಂಗಟ್ಟುಗಳ ತೆರವು ಕಾರ್ಯಾಚರಣೆ ಚುರುಕುಗೊಂಡಿದ್ದು ಸಂತಸದ ವಿಷಯ. ಅದರಿಂದ ಪಟ್ಟಣ ಅಭಿವೃದ್ಧಿಯಾಗುವ ಎಲ್ಲ ಗುಣಲಕ್ಷಣಗಳು ಕಾಣುತ್ತಿವೆ. ಬಸ್ ನಿಲ್ದಾಣದಿಂದ ಹಳೆಯ ಮೋರಟಗಿ ರೋಡವರೆಗೆ ಮದ್ಯ ರಸ್ತೆಯಿಂದ 45 ಫಿಟ್ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಈಗಾಗಲೇ ತೆರವು ಮಾಡಿಕೊಳ್ಳುತ್ತಿದ್ದಾರೆ. ಈ ಕಾರ್ಯ ಈಗಾಗಲೇ ಟಿಪ್ಪು ಸುಲ್ತಾನ್ ವೃತ್ತದವರೆಗೂ ಬಂದು ತಲುಪಿದೆ. ಟಿಪ್ಪು ಸುಲ್ತಾನ…
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಕಿಡಿಕಾರಿದ ಸಚಿವ ಎಂ.ಬಿ.ಪಾಟೀಲ ಆರೋಪ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಕ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಜಮೀರ್ ಅಹಮದ್ ಖಾನ್ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸುತ್ತಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ವಿರುದ್ಧ ಸಚಿವ ಎಂ.ಬಿ.ಪಾಟೀಲ್ ಕಿಡಿಕಾರಿದ್ದಾರೆ.ನಗರದಲ್ಲಿ ಶುಕ್ರವಾರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಬಿಜೆಪಿಯವರು ರೈತರಿಗೆ ನೋಟಿಸ್ ನೀಡಿದ್ದಲ್ಲದೆ, ಭೂದಾಖಲೆಯಲ್ಲಿ ವಕ್ಫ್ ಹೆಸರನ್ನೂ ಸೇರಿಸಿದ್ದಾರೆ ಎಂದು ಆರೋಪಿಸಿದರು.ಇದೇ ವೇಳೆ ರೈತರ ಹೆಸರನ್ನು ಪಟ್ಟಿ ಮಾಡಿದ ಸಚಿವರು, ಬಿಜೆಪಿಯವರು ಭೂ ದಾಖಲೆಗಳಲ್ಲಿ ವಕ್ಫ್ ಹೆಸರನ್ನು ನಮೂದಿಸಿ ಭೂಮಿಯನ್ನು ಕಬಳಿಸಿಕೊಂಡಿರುವ ರೈತರ ಪಟ್ಟಿ ಇದಾಗಿದೆ. ಹಿಂದಿನ ಬಿಜೆಪಿ ಸರ್ಕಾರವು ವಕ್ಫ್ ಭೂಮಿ ಎಂದು ಭೂಮಿಯನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಹೇಳಿದರು.ಜಮೀರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಹಿಂದೂಗಳ ಹೋರಾಟಗಾರರು ಎಂದು ಕರೆಸಿಕೊಳ್ಳುವವರು ಕೆಲವರು ಒತ್ತಾಯಿಸುತ್ತಿದ್ದಾರೆ. ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆ ಮತ್ತು ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗಳಲ್ಲಿ ರಾಜಕೀಯ ಮಾಡಲು ಬಿಜೆಪಿ ವಕ್ಫ್ ವಿಷಯವನ್ನು ಎತ್ತುತ್ತಿದೆ ಎಂದು ಕಿಡಿಕಾರಿದರು.ಸರ್ಕಾರ ರೈತರಿಂದ ಒಂದು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಿರಿಯ ಪತ್ರಕರ್ತರಾದ ಮೋಹನ ಕುಲಕರ್ಣಿ, ಬಸವರಾಜ ಉಳ್ಳಾಗಡ್ಡಿ, ಮಲ್ಲಿಕಾರ್ಜುನ ಸೊನ್ನದ, ಟಿವಿ9 ಕ್ಯಾಮೆರಾಮನ್ ಶ್ರೀಶೈಲ ಕೊಟ್ಟಲಗಿ ಸೇರಿ ಕೆಳಕಂಡ 25 ಜನ ಸಾಧಕರಿಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಶಿಲ್ಪಕಲೆ: 1.ಷಣ್ಮುಖಪ್ಪ ದೇವೇಂದ್ರಪ್ಪ ಪತ್ತಾರ-ಸಾರವಾಡಚಿತ್ರಕಲೆ: 2.ಹುಸೇನ ಹುನೇರ ಅಲಿಶಾ ಮಕಾನದಾರ-ತಾಳಿಕೋಟೆಬಯಲಾಟ: 3.ಯಲ್ಲಪ್ಪ ಈರಪ್ಪ ಗೊಂದಳಿ-ಸಾರವಾಡಜಾನಪದ ಕ್ಷೇತ್ರ: 4.ಅದವ್ವಾ ಚಂದಪ್ಪ ಕದ್ರಿ-ಹಡಗಲಿ, 5.ಸಿದ್ದಪ್ಪ ಗುರುಪಾದಪ್ಪ ಅಲಗೊಂಡ(ಜೋಗತಿ)-ಮನಗೂಳಿ, 6.ಶಾಂತಾಬಾಯಿ ಲಚ್ಚು ನಾಯಕ-ವಿಜಯಪುರಸಮಾಜ ಸೇವೆ: 7.ಬಸವರಾಜ ಮಡಿವಾಳಪ್ಪ ಪಾಟೀಲ-ವಿಜಯಪುರ, 8.ಮಹಾವೀರ ಭರಮಪ್ಪ ನಗರಿ-ಮುದ್ದೇಬಿಹಾಳ, 9.ಚನ್ನಬಸಯ್ಯ ಸಿದ್ದರಾಮಯ್ಯ ಹಿರೇಮಠ-ವಿಜಯಪುರ, 10.ಶ್ರೀಕಾಂತ ದಶರಥ ಬಿರಾದಾರ-ಹಂಚಿನಾಳ, 11.ಮಲ್ಲು ಸಾಬು ಬಿದರಿ-ತಾಜಪೂರ, 12.ಸುರೇಶ ಸೋಮಲಿಂಗ ಗೊಣಸಗಿ-ದೇವರ ನಿಂಬರಗಿವೈದ್ಯಕೀಯ: 13.ಶಿವಾನಂದ ಸಿದ್ರಾಮಪ್ಪ ಜಂಗಿನಮಠ-ವಿಜಯಪುರ, 14.ಬಾಬು ಬಸಪ್ಪ ಕುಚನೂರ-ವಿಜಯಪುರಮಾಧ್ಯಮ ಕ್ಷೇತ್ರ: 15.ಮಲ್ಲಿಕಾರ್ಜುನ ಯಲ್ಲಣ್ಣ ಸೊನ್ನದ-ಮುದ್ದೇಬಿಹಾಳ, 16.ಮೋಹನ ಪಾಂಡುರಂಗ ಕುಲಕರ್ಣಿ-ವಿಜಯಪುರ, 17.ಬಸವರಾಜ ಶಂಕರಪ್ಪ ಉಳ್ಳಾಗಡ್ಡಿ-ವಿಜಯಪುರ, 18.ಶ್ರೀಶೈಲ ಬಾಳಪ್ಪ ಕೊಟ್ಟಲಗಿ-ವಿಜಯಪುರಸಾಹಿತ್ಯ: 19.ಬಿಂದುರಾವ್ ರಾಮರಾವ ನಾಡಗೌಡ-ವಿಜಯಪುರ, 20.ದ್ರಾಕ್ಷಾಯಿಣಿ ರಮೇಶ ಬಿರಾದಾರ-ಅಗಸಬಾಳರಂಗಭೂಮಿ: 21.ಮಹಾದೇವಪ್ಪ ಈರಪ್ಪ ಹುಣಶ್ಯಾಳ-ದೇವರ ನಾವದಗಿಶಿಕ್ಷಣ: 23.ಡಾ. ಮಲ್ಲಿಕಾರ್ಜುನ ಲಕ್ಷ್ಮಣ ವಡ್ಡರ-ಕಲಕೇರಿ,…
ನೋಟಿಸ್‌ಗಳನ್ನು ತಕ್ಷಣದಿಂದಲೇ ವಾಪಸ್ ಪಡೆಯಿರಿ | ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ! ಬೆಂಗಳೂರು: ವಕ್ಫ್ ಆಸ್ತಿ ವಿಚಾರ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ರೈತರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ತಕ್ಷಣದಿಂದಲೇ ವಾಪಸ್ ಪಡೆಯುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ.ಕಂದಾಯ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಮತ್ತು ವಕ್ಫ್ ಮಂಡಳಿಯ ಹಿರಿಯ ಅಧಿಕಾರಿಗಳ ಜೊತೆ ಶನಿವಾರ ಸಿಎಂ ಸಿದ್ದರಾಮಯ್ಯ ಸುದೀರ್ಘ ಸಭೆ ನಡೆಸಿದರು.ಈ ವೇಳೆ ವಕ್ಫ್ ಜಮೀನು ವಿಚಾರದಲ್ಲಿ ಇತ್ತೇಚೆಗೆ ನಡೆದಿರುವ ಬೆಳವಣಿಗೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ನೋಟಿಸ್ ವಿಚಾರದಲ್ಲಿ ಕೆಲ ಅಧಿಕಾರಿಗಳು ಕೈಗೊಂಡಿರುವ ಕ್ರಮದ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ದು ಈ ರೀತಿಯ ತೊಂದರೆ ನೀಡದಂತೆ ಅಧಿಕಾರಿಗಳಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ವಕ್ಫ್ ವಿಚಾರವನ್ನು ಜೆಡಿಎಸ್ ಮತ್ತು ಬಿಜೆಪಿ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದು ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿವೆ. ಇಂತಹ ಹೀನ ಪ್ರಯತ್ನಗಳಿಗೆ ರಾಜ್ಯದ ಜನರು ಸೊಪ್ಪು ಹಾಕದಂತೆ ಸಿದ್ದರಾಮಯ್ಯ ವಿನಂತಿ ಮಾಡಿದ್ದು ಅವರ ಅಪ…
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಉಪನ್ಯಾಸಕರು, ಬೆಳಗಾವಿ, ಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಇತ್ತೀಚಿನ ನಮ್ಮ ಧಾವಂತದ ಬದುಕು ಸೂತ್ರ ಹರಿದ ಪಟದಂತೆ ಎತ್ತೆತ್ತಲೋ ಸಾಗುತ್ತಿದೆ. ಅರ್ಥವನ್ನೇ ಕಳೆದುಕೊಳ್ಳುತ್ತಿದೆ. ಬದುಕು ಹಸನಾಗಬೇಕಾದರೆ ನಿರ್ಧಿಷ್ಟ ಗುರಿಯೊಂದು ಇರಲೇಬೇಕು. ಆ ಗುರಿ ಸಾಧಿಸಲು ನಿಶ್ಚಿತ ಯೋಜನೆಗಳು ಬೇಕು.. ಬಲವಾದ ಯೋಜನೆಗಳನ್ನು ಹಾಕಿಕೊಂಡು ಮನೋಬಲವೇ ಇಲ್ಲದಿದ್ದರೆ ಗುರಿಯ ಶಿಖರ ಹತ್ತುವುದು ಅಸಾಧ್ಯದ ಮಾತೇ ಸರಿ. ‘ಧೈರ್ಯವಾಗಿ ನೀನು ಒಂದು ಹೆಜ್ಜೆ ಇಟ್ಟರೆ ಯಶಸ್ಸು ಹತ್ತು ಹೆಜ್ಜೆ ಮುಂದೆ ಹಾಕುತ್ತದೆ.’ ಎಂಬುದು ಕವಿ ರವೀಂದ್ರನಾಥ ಟ್ಯಾಗೋರ್‌ರ ಅನುಭವದ ಮಾತು. ಇದನ್ನೇ ಸಂಸ್ಕೃತದಲ್ಲಿ “ಧೈರ್ಯಂ ಸರ್ವತ್ರ ಸಾಧನಂ” ಎಂದು ಹೇಳಿದ್ದಾರೆ. ದಿನವೂ ನಿರೀಕ್ಷಿತ ಗುರಿಯ ಎದೆಯ ಕದವ ತಟ್ಟಲೇಬೇಕು. ಬದಲಾದ ಕಾಲದಲ್ಲಿ ಗುರಿಯೊಂದಿಗೆ ಬೆಸೆಯಲು ಮಹತ್ವದ ಹೊಸ ಸೃಜನಶೀಲತೆಯ ಹೆಜ್ಜೆ ಹಾಕಲು ಆಗುತ್ತಿಲ್ಲ ಎಂದು ಎಷ್ಟೋ ಸಲ ಬೇಸರಿಸಿಕೊಳ್ಳುತ್ತೇವೆ. ಗುರಿ ಎನ್ನುವುದು ದೂರದಲ್ಲಿ ಮಿನುಗುವ ತಾರೆಯಂತೆ ಅದರತ್ತ ಚಿತ್ತಗೊಟ್ಟು ದೃಷ್ಟಿ ಹರಿಸಬೇಕು. ಮನೋಸ್ಥೈರ್ಯದ ಬೆಳಕು ಹೆಚ್ಚಾದಾಗ ಅಸ್ಪಷ್ಟವಾಗಿದ್ದ ದಾರಿ ನಿಖರವಾಗತೊಡುಗುತ್ತದೆ. ರಾತ್ರೋರಾತ್ರಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು.ಈ ವೇಳೆಯಲ್ಲಿ ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಡಾ.ಅನೀಲ.ಬಿ.ನಾಯಕ, ಪಿಯುಸಿ ಪ್ರಾಚಾರ್ಯರಾದ ಪ್ರೊ.ಸಿ.ಬಿ.ಪಾಟೀಲ, ಮಹಾವಿದ್ಯಾಲಯ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ಭಾಷೆಗೆ ಶ್ರೀಮಂತ ಇತಿಹಾಸವಿದ್ದು, ತನ್ನದೇ ಶ್ರೇಷ್ಠತೆಯ ಆಸ್ಮಿತೆಯನ್ನು ಹೊಂದಿದೆ. ಅನ್ಯ ಭಾಷೆಗಳ ಹಾವಳಿಗಳ ಮಧ್ಯೆಯೂ ಕನ್ನಡ ಭಾಷೆ ತನ್ನ ಗತ ವೈಭವದಿಂದ ಅಸ್ಮಿತೆ ಉಳಿಸಿಕೊಂಡು ಮಿನುಗಿದೆ. ಕನ್ನಡ ಸಂಸ್ಕೃತಿಯ ಬೆಡಗು, ಭಿನ್ನಾಣ ವೈವಿಧ್ಯಮಯವಾಗಿದೆ ಎಂದು ನಗರದ ಉದ್ಯಮಿ ಸಂಜೀವ ಪಾಟೀಲ (ಕನ್ನೂರ) ಹೇಳಿದರು.ನಗರದ ಆಶ್ರಮ ರಸ್ತೆಯಲ್ಲಿರುವ ರಾಮಕೃಷ್ಣ ಬಡಾವಣೆಯಲ್ಲಿ ಗಜಾನನ ಮಿತ್ರ ಮಂಡಳಿ ಶುಕ್ರವಾರ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಡಾವಣೆಯ ಹಿರಿಯರಾದ ಶ್ರೀಶೈಲ ಮಹಾಜನಶೆಟ್ಟಿ ಅವರು ನಾಡ ಧ್ವಜಾರೋಹಣ ನೆರವೇರಿಸಿದರು.ಶಿಕ್ಷಕ ಎಸ್.ಜಿ.ಹೆಬ್ಬಾಳ, ಯೋಗ ಶಿಕ್ಷಕಿ ಸಾವಿತ್ರಿ ಮಠ ಮತ್ತು ಬಡಾವಣೆಯ ಮಾಲಿಕ ಸಿದ್ರಾಮ ಅಂಜಿಖಾನೆ ಮಾತನಾಡಿ, ಕರ್ನಾಟಕ ಏಕೀಕರಣ ದಿನ ನಮಗೆಲ್ಲ ವಿಶೇಷ ದಿನವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಹಲವು ಪ್ರಾಂತ್ಯಗಳಲ್ಲಿ ಚದುರಿ ಹೋಗಿದ್ದ ಕನ್ನಡಿಗರ ಹಲವು ಪ್ರದೇಶಗಳನ್ನು ಒಂದುಗೂಡಿಸಿ 1956 ರ ನವೆಂಬರ್ 1 ರಂದು ಏಕೀಕರಣ ಮಾಡಲಾಯಿತು. ಅಂದಿನಿಂದ ಪ್ರತಿ ವರ್ಷ ನವೆಂಬರ್ 1 ರಂದು ನಾವು ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಿರಿಯ ಪತ್ರಕರ್ತರಾದ ಮೋಹನ ಕುಲಕರ್ಣಿ, ಬಸವರಾಜ ಉಳ್ಳಾಗಡ್ಡಿ, ಮಲ್ಲಿಕಾರ್ಜುನ ಸೊನ್ನದ, ಟಿವಿ9 ಕ್ಯಾಮೆರಾಮನ್ ಶ್ರೀಶೈಲ ಕೊಟ್ಟಲಗಿ ಸೇರಿ ಕೆಳಕಂಡ 25 ಜನ ಸಾಧಕರಿಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಶಿಲ್ಪಕಲೆ: 1.ಷಣ್ಮುಖಪ್ಪ ದೇವೇಂದ್ರಪ್ಪ ಪತ್ತಾರ-ಸಾರವಾಡಚಿತ್ರಕಲೆ: 2.ಹುಸೇನ ಹುನೇರ ಅಲಿಶಾ ಮಕಾನದಾರ-ತಾಳಿಕೋಟೆಬಯಲಾಟ: 3.ಯಲ್ಲಪ್ಪ ಈರಪ್ಪ ಗೊಂದಳಿ-ಸಾರವಾಡಜಾನಪದ ಕ್ಷೇತ್ರ: 4.ಅದವ್ವಾ ಚಂದಪ್ಪ ಕದ್ರಿ-ಹಡಗಲಿ, 5.ಸಿದ್ದಪ್ಪ ಗುರುಪಾದಪ್ಪ ಅಲಗೊಂಡ(ಜೋಗತಿ)-ಮನಗೂಳಿ, 6.ಶಾಂತಾಬಾಯಿ ಲಚ್ಚು ನಾಯಕ-ವಿಜಯಪುರಸಮಾಜ ಸೇವೆ: 7.ಬಸವರಾಜ ಮಡಿವಾಳಪ್ಪ ಪಾಟೀಲ-ವಿಜಯಪುರ, 8.ಮಹಾವೀರ ಭರಮಪ್ಪ ನಗರಿ-ಮುದ್ದೇಬಿಹಾಳ, 9.ಚನ್ನಬಸಯ್ಯ ಸಿದ್ದರಾಮಯ್ಯ ಹಿರೇಮಠ-ವಿಜಯಪುರ, 10.ಶ್ರೀಕಾಂತ ದಶರಥ ಬಿರಾದಾರ-ಹಂಚಿನಾಳ, 11.ಮಲ್ಲು ಸಾಬು ಬಿದರಿ-ತಾಜಪೂರ, 12.ಸುರೇಶ ಸೋಮಲಿಂಗ ಗೊಣಸಗಿ-ದೇವರ ನಿಂಬರಗಿವೈದ್ಯಕೀಯ: 13.ಶಿವಾನಂದ ಸಿದ್ರಾಮಪ್ಪ ಜಂಗಿನಮಠ-ವಿಜಯಪುರ, 14.ಬಾಬು ಬಸಪ್ಪ ಕುಚನೂರ-ವಿಜಯಪುರಮಾಧ್ಯಮ ಕ್ಷೇತ್ರ: 15.ಮಲ್ಲಿಕಾರ್ಜುನ ಯಲ್ಲಣ್ಣ ಸೊನ್ನದ-ಮುದ್ದೇಬಿಹಾಳ, 16.ಮೋಹನ ಪಾಂಡುರಂಗ ಕುಲಕರ್ಣಿ-ವಿಜಯಪುರ, 17.ಬಸವರಾಜ ಶಂಕರಪ್ಪ ಉಳ್ಳಾಗಡ್ಡಿ-ವಿಜಯಪುರ, 18.ಶ್ರೀಶೈಲ ಬಾಳಪ್ಪ ಕೊಟ್ಟಲಗಿ-ವಿಜಯಪುರಸಾಹಿತ್ಯ: 19.ಬಿಂದುರಾವ್ ರಾಮರಾವ ನಾಡಗೌಡ-ವಿಜಯಪುರ, 20.ದ್ರಾಕ್ಷಾಯಿಣಿ ರಮೇಶ ಬಿರಾದಾರ-ಅಗಸಬಾಳರಂಗಭೂಮಿ: 21.ಮಹಾದೇವಪ್ಪ ಈರಪ್ಪ ಹುಣಶ್ಯಾಳ-ದೇವರ ನಾವದಗಿಶಿಕ್ಷಣ: 23.ಡಾ. ಮಲ್ಲಿಕಾರ್ಜುನ ಲಕ್ಷ್ಮಣ ವಡ್ಡರ-ಕಲಕೇರಿ,…
