ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿ ಬರುವ ಡಾ.ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ (ರಿ), ಧಾರವಾಡ ಹಾಗೂ ಕಲಬುರ್ಗಿ, ಫೌಂಡೇಶನ್, ವಿಜಯಪುರ ಸಂಯುಕ್ತಾಶ್ರಯದಲ್ಲಿ ಜನವರಿ 4ರಂದು ಜಿಲ್ಲೆಯ ಸಿಂದಗಿ ಮಾಂಗಲ್ಯ ಭವನದಲ್ಲಿ ಡಾ.ಎಂ.ಎಂ ಕಲಬುರ್ಗಿಯವರ ಸೃಜನ ಸಾಹಿತ್ಯ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ಡಾ.ಲಿಂಗಣ್ಣ ಕಲಬುರ್ಗಿ ಉದ್ಘಾಟಿಸುವರು. ಪ್ರತಿಷ್ಠಾನದ ಅಧ್ಯಕ್ಷ ಡಾ.ವೀರಣ್ಣ ರಾಜೂರ ಅಧ್ಯಕ್ಷತೆ ವಹಿಸುವರು. ವಿಚಾರ ಸಂಕಿರಣದಲ್ಲಿ ಡಾ.ಎಂ.ಎಂ.ಕಲಬುರ್ಗಿ ಅವರ ‘ಕೆಟ್ಟಿತ್ತು ಕಲ್ಯಾಣ’ ನಾಟಕ ಕುರಿತು ಡಾ.ಎಂ.ಎಸ್.ಮಾಗಣಗೇರಿ ಹಾಗೂ ‘ನೀರು ನೀರಡಿಸಿತ್ತು’ ಮತ್ತು ‘ನೀರಾಗ ನಿಂತೀನಿ ನೀರಡಿಸಿ’ ಕವನ ಸಂಕಲನದ ಕುರಿತು ಮನು ಪತ್ತಾರ ಕಲಕೇರಿ ಪ್ರಬಂಧ ಮಂಡಿಸುವರು.
ಕಾರ್ಯಕ್ರಮದ ನಿರೂಪಣೆಯನ್ನು ಡಾ.ಎಂ. ಎಂ. ಪಡಶೆಟ್ಟಿ ಮಾಡುವರು. ಕೊನೆಯಲ್ಲಿ ಎಂ. ಎಂ.ಕಲಬುರ್ಗಿಯವರ ಕುರಿತು ರಚನೆಯಾದ ‘ರಕ್ತ ವಿಲಾಸ’ ನಾಟಕ ಪ್ರದರ್ಶನೆ ಮಾಡಲಾಗುವುದು ಎಂದು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
