Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಈರಕಾರ ಮುತ್ಯಾ ದೇವಸ್ಥಾನದ ಆವರಣದಲ್ಲಿ ಜ.೩ ರಂದು ಬೆಳಗ್ಗೆ ೧೦.೩೦ ಗಂಟೆಗೆ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆಯ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಕ್ರಾಂತಿವೀರ ಬ್ರಿಗೇಡ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮರೇಶಣ್ಣ ಕಾಮನಕೇರಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದು ಧರ್ಮದ ರಕ್ಷಣೆಗಾಗಿ ರಾಜ್ಯದಲ್ಲಿ ಕ್ರಾಂತಿವೀರ ಬ್ರಿಗೇಡ್ ಸಂಘಟನೆ ಅಸ್ತಿತ್ವಕ್ಕೆ ಬರಲಿದೆ. ಈ ಸಂಘಟನೆಯು ಫೆ.೪ ರಂದು ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿ ನಾಡಿನ ವಿವಿಧ ೧೦೦೮ ಪೂಜ್ಯರ, ಮಠಾಧೀಶರ ಪಾದಪೂಜೆಯೊಂದಿಗೆ ಉದ್ಘಾಟನೆಯಾಗಲಿದೆ. ಇದೊಂದು ಜಾತ್ಯಾತೀತ, ಪಕ್ಷಾತೀತ ಸಂಘಟನೆಯಾಗಿದೆ. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಸಾಕಷ್ಟು ಸಣ್ಣ-ಪುಟ್ಟ ಸಮಾಜಗಳು ಮರೆಯಾಗುತ್ತಿರುವದು ವಿಷಾದಕರ ಸಂಗತಿ. ಸರ್ಕಾರದ ಯಾವುದೇ ಸೌಲಭ್ಯಗಳು ಸರಿಯಾಗಿ ತಲುಪುತಿಲ್ಲ. ಈ ನಿಟ್ಟಿನಲ್ಲಿ ಸಮಾಜದಲ್ಲಿ ತುಳಿತಕ್ಕೊಳಗಾದ, ಸರ್ಕಾರದ ಸೌಲಭ್ಯದಿಂದ ವಂಚಿತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈ ಸಂಘಟನೆ ಧ್ವನಿ ಎತ್ತಲಿದೆ. ಸಮಾಜದಲ್ಲಿ ತುಳಿತಕ್ಕೊಳಗಾದ ಸಣ್ಣ ಸಣ್ಣ ಸಮಾಜಗಳನ್ನು ಮೇಲೆತ್ತುವ ಸದುದ್ದೇಶವನ್ನು ಸಂಘಟನೆ ಹೊಂದಿದೆ ಎಂದರು.ಕಾರ್ಯಕ್ರಮದ…
*ಉದಯರಶ್ಮಿ ದಿನಪತ್ರಿಕೆ*ಬಸವನಬಾಗೇವಾಡಿ: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕೆರೆ ಹೂಳೆತ್ತುವದು, ಸ್ವ-ಸಹಾಯ ಸಂಘದ ರಚನೆ, ಗ್ರಾಮ ಕಲ್ಯಾಣ ಯೋಜನೆ ಸೇರಿದಂತೆ ವಿವಿಧ ಜನಪರ ಯೋಜನೆಗಳನ್ನು ಜಾರಿ ಗೊಳಿಸುವ ಮೂಲಕ ಜನರಿಗೆ ಉತ್ತಮ ಸೇವೆ ಒದಗಿಸಲಾಗುತ್ತಿದೆ ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸಂತೋಷಕುಮಾರ ರೈ ಹೇಳಿದರು.ತಾಲೂಕಿನ ಡೋಣೂರ ಗ್ರಾಮದಲ್ಲಿ ಬುಧವಾರ ಕೆರೆ ಹಸ್ತಾಂತರ, ಬಾಗಿನ ಅರ್ಪಣೆ ಹಾಗೂ ನಾಮಫಲಕ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮದ ಕೆರೆಯ ಹೂಳೆತ್ತುವ ಕಾಮಗಾರಿಯನ್ನು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್‌ಯ ಕೆರೆ ಸಮಿತಿ, ಗ್ರಾಮ ಪಂಚಾಯತ್ ಸಹಯೋಗದಲ್ಲಿ ಕೈಗೊಳ್ಳಲಾಗಿತ್ತು. ನಮ್ಮ ಊರು ನಮ್ಮ ಕೆರೆ ಯೋಜನೆಯಲ್ಲಿ ಇದು ೭೬೩ ನೇ ಕೆರೆಯಾಗಿದೆ. ಈ ಕೆರೆ ಗ್ರಾಮಕ್ಕೆ ಶಾಶ್ವತವಾಗಿ ನೀರು ತುಂಬಿ ಗ್ರಾಮಸ್ಥರಿಗೆ, ಕೃಷಿ ಭೂಮಿಗೆ,ಜಾನುವಾರುಗಳಿಗೆ, ಪಕ್ಷಿಗಳಿಗೆ ಅನುಕೂಲವಾಗಲಿದೆ ಎಂದರು.ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯಿಂದ ಸಮಾಜಮುಖಿ ಕಾರ್ಯಗಳಾದ ಕೆರೆ ಹೂಳೆತ್ತುವದು, ದೇವಸ್ಥಾನದ ಜೀರ್ಣೋದ್ಧಾರ, ಹಿಂದು ರುದ್ರಭೂಮಿ ಅಭಿವೃದ್ಧಿ, ಶಾಲಾ…
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯ ತಡೆಯಲು ರೈತಸಂಘ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಹೋಗಲಾಡಿಸಲು ಹಲವಾರು ಬಾರಿ ಮನವಿ ಕೊಟ್ಟರೂ ಉಪಯೋಗ ಆಗಿರುವುದಿಲ್ಲ ಎಂದು ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿ ವಿ ರಮೇಶ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲೆಯ ಸಮಸ್ತ ರೈತರಿಗೆ ಆಗುತ್ತಿರುವ ಮೋಸ ತಡೆಯುವಂತೆ ಮನವಿ ಸಲ್ಲಿಸಲಾಯಿತು.ಈ ವೇಳೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡುತ್ತಾ, ಕಾಯಂ ಕಾರ್ಯದರ್ಶಿ ಹುದ್ದೆ ಭರ್ತಿ ಮಾಡಬೇಕು ಅಂದಾಗ ಮಾತ್ರ ರೈತರಿಗೆ ನ್ಯಾಯ ಸಿಗುವುದು, ಇಲ್ಲಿ ಪ್ರಮುಖವಾಗಿ ರೈತರಿಗೆ ತೂಕದಲ್ಲಿ ಮೊಸ, ತರಕಾರಿಗಳಿಗೆ ಶೇ ೧೦% ಕಮಿಷನ್, ಪ್ಯಾಕಿಂಗ್ ಹಾಗೂ ಹಮಾಲಿ, ಖಾಲಿ ಚೀಲ, ಸೂಟ್, ಜಕಾತಿ ಎಂದು ರೈತರಿಗೆ ಮೊಸದ ಮೇಲೆ ಮೊಸ ಮಾಡುತ್ತಿರುವುದು ನಿಲ್ಲಬೇಕು. ದ್ರಾಕ್ಷಿ ಹರಾಜು ಪ್ರಕ್ರೀಯೆ ಹೊರಗಡೆ ಕೆ.ಐ.ಡಿ.ಬಿಯಲ್ಲಿ ಅನಧಿಕೃತವಾಗಿ ಖರೀಧಿ ಮಾಡುತ್ತಿದ್ದು, ರೈತರಿಗೆ ದೊಡ್ಡಮಟ್ಟದ ಅನ್ಯಾಯವಾಗುತ್ತಿದೆ. ಈ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಪ್ರಕಟಿಸಿರುವ ೨೦೨೫ನೆಯ ವರ್ಷದ ಕ್ಯಾಲೆಂಡರ್‌ನ್ನು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಅವರು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ್, ಕ್ಯಾಲೆಂಡರ್ ಸಮಿತಿ ಅಧ್ಯಕ್ಷ ಪ್ರೊ.ಓಂಕಾರ ಕಾಕಡೆ, ಸದಸ್ಯ ಸಂಚಾಲಕರಾದ ಡಾ.ದೀಪಕ ಶಿಂದೆ, ಸದಸ್ಯರಾದ ಪ್ರೊ.ಸಕ್ಪಾಲ್ ಹೂವಣ್ಣ, ಪ್ರೊ.ವಿಷ್ಣು ಶಿಂದೆ, ಪ್ರೊ.ಉದಯಕುಮಾರ ಕುಲಕರ್ಣಿ ಹಾಗೂ ಪ್ರೊ.ರೇಣುಕಾ ಮೇಟಿ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನರು, ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಮತ್ತಿತರರು ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ಇಂಡಿ: ಅಮರಶಿಲ್ಪಿ ಜಕಣಾಚಾರಿ ಜಗತ್ತು ಕಂಡ ಶ್ರೇಷ್ಠ ಶಿಲ್ಪಿ. ವಿಚಾರಧಾರೆ, ಸಂಸ್ಕೃತಿಯ ಬಗ್ಗೆ ಎಲ್ಲರೂ ಅರ್ಥೈಸಿಕೊಂಡು, ಶ್ರದ್ದೆ-ನಂಬಿಕೆಯಿಂದ ಮುನ್ನಡೆದಾಗ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಬುಧವಾರದಂದು ಜರುಗಿದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಉದ್ಧೇಶಿಸಿ ಮಾತನಾಡಿದರು.ಭಾರತೀಯ ಶಿಲ್ಪಕಲೆಗೆ ಜಕಣಾಚಾರಿ ಅವರ ಕೊಡುಗೆ ಅನನ್ಯ. ಕನ್ನಡ ಶಿಲ್ಪಕಲೆಯ ಪರಂಪರೆಯನ್ನು ಶ್ರೀಮಂತಗೊಳಿಸಿದ ಕೀರ್ತಿ ಜಕಣಾಚಾರಿ ಅವರಿಗೆ ಸಲ್ಲುತ್ತದೆ. ಬೇಲೂರು, ಹಳೆಬೀಡು, ಹಂಪಿ, ಪಟ್ಟದಕಲ್ಲು, ಐಹೊಳೆಯಂತಹ ಸ್ಥಳಗಳಲ್ಲಿ ಶಿಲೆಯಲ್ಲಿ ಜೀವಂತ ಕಲೆ ನಿರ್ಮಾಣ ಮಾಡಿದ ಮಹಾನ್ ವ್ಯಕ್ತಿ ಎಂದು ಹೇಳಿದರು.ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯ ಸಂಸ್ಕೃತಿಯ ಪ್ರತೀಕವಾದ ವಾಸ್ತುಶಿಲ್ಪ ಕಲೆಯನ್ನು ಅಜರಾಮರಗೊಳಿಸಿದ ಕೀರ್ತಿ ಜಕಣಾಚಾರಿ ಅವರಿಗೆ ಸಲ್ಲುತ್ತದೆ. ಅವರನ್ನು ಸ್ಮರಿಸಿ, ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ, ಗ್ರಾಮಸ್ಥರಾದ ಬೇಗಂ ಮುಲ್ಲಾ, ಕಮಲಾಬಾಯಿ ದಳವಾಯಿ ಸೇರಿದಂತೆ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಕನ್ನಡ ಚಿತ್ರರಂಗವನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಲು ಮೇರು ನಟ ಸಾಹಸಸಿಂಹ, ಕಲಿಯುಗದ ಕರ್ಣ ಎಂದು ಖ್ಯಾತರಾಗಿದ್ದ ಡಾ.ವಿಷ್ಣುವರ್ಧನ್ ಅವರು ಸಹ ಪ್ರಮುಖ ಕಾರಣರಾಗಿದ್ದಾರೆಂದು ವಿ ಎಸ್ ಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಶಿವು ಬಡಿಗೇರ ಹೇಳಿದರು.ನಗರದ ವಿಜಯಪುರ ರಸ್ತೆಯ ಮಾರ್ಗದ ಬ್ಯಾಂಕ್ ಆಫ್ ಇಂಡಿಯಾ ಎದುರು ಇರುವ ಡಾ. ವಿಷ್ಣುವರ್ಧನ್ ವೃತ್ತದಲ್ಲಿ ಡಾ. ವಿಷ್ಣುವರ್ಧನ್ 15 ನೇ ಪುಣ್ಯ ಸ್ಮರಣೊತ್ಸವ ನಿಮಿತ್ಯ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ್ದರು.ನಟನೆಯೊಂದಿಗೆ ಸಾಮಾಜಿಕ ಕಾರ್ಯದಲ್ಲಿ ತೊಡುಗುವ ಮೂಲಕ ಡಾ. ವಿಷ್ಣುವರ್ಧನ್ ಸಮಾಜಕ್ಕೆ ಮಾದರಿ ಹಾಗೂ ಆದರ್ಶವಾಗಿದ್ದಾರೆ.ಸಾಹಸ ಸಿಂಹ, ಅಭಿನಯ ಭಾರ್ಗವ, ಕೋಟಿಗೊಬ್ಬ, ಕಲಾದೈವ, ಮೈಸೂರು ರತ್ನ ಎಂಬ ಬಿರುದುಗಳಿಂದ ಜನಪ್ರಿಯತೆ ಪಡೆದವರು ಡಾ.ವಿಷ್ಣುವರ್ಧನ್. ‘ದಿ ಫೀನಿಕ್ಸ್ ಆಫ್ ಇಂಡಿಯನ್ ಸಿನಿಮಾ’ ಅಂತಲೇ ಖ್ಯಾತಿ ಪಡೆದಿದ್ದ ಡಾ.ವಿಷ್ಣುವರ್ಧನ್ ಪ್ರೀತಿಯ ಅಭಿಮಾನಿಗಳಿಂದ ‘ಹೃದಯವಂತ’ ಅಂತಲೇ ಕರೆಯಿಸಿಕೊಂಡವರು ಎಂದು ಹೇಳಿದರು.ಇಂದಿನ ಕಲಾವಿದರು ಹಾಗೂ ಸಮಾಜದಲ್ಲಿರುವ ತರುಣ ಯುವಕರು ಡಾ.ವಿಷ್ಣುವರ್ಧನ್ ಅವರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಂದು ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಅಮರ ಶಿಲ್ಪಿ ಜಕಣಾಚಾರಿ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಪುಷ್ಪ ನಮನ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಯಿತುಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಕಂದಾಯ ನಿರೀಕ್ಷ ಸಂತೋಷ ಪಾಠಕ, ಮೂರುಜಾವರ ತಡಲಗಿಯ ರಾಮಾ ಅವಧೂತ ಮಠದ ಮಹೇಂದ್ರ ಸ್ವಾಮಿಗಳು, ಪ್ರಕಾಶ ಮಹಾರಾಜರು, ಸಮಾಜ ಮುಖಂಡರಾದ ಪರಮಾನಂದ ಬಡಿಗೇರ, ಮುಕುಂದ ಕುಂದನಗಾರ, ಶಾರದಾ ಪತ್ತಾರ, ಮೀನಾ ಕುಂದನಗಾರ, ಕಾಳಮ್ಮ ಪತ್ತಾರ, ಈರಣ್ಣ ಕನಮಡಿ, ಶಿವುಕುಮಾರ ಪತ್ತಾರ, ಶ್ರೀಕಾಂತ ಕುಂದನಗಾರ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪಿಂಚಣಿದಾರರ ಅಹವಾಲು ಆಲಿಸಲು ಹಾಗೂ ಅರ್ಹರಿಗೆ ಪಿಂಚಣಿ ಮಂಜೂರು ಮಾಡುವ ಕುರಿತ ಸಾಮಾಜಿಕ ಭದ್ರತಾ ಯೋಜನೆಯಡಿಯ ಜಿಲ್ಲೆಯ 13 ಗ್ರಾಮಗಳಲ್ಲಿ ಜ.4 ರಂದು ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.ಜ.4 ರ ಬೆಳಿಗ್ಗೆ 11 ಗಂಟೆಗೆ ವಿಜಯಪುರದ ಉಪವಿಭಾಗಾಧಿಕಾರಿ ವಿಜಯಪುರದ ಯೋಗಾಪೂರ ಕಾಲನಿಯ ವಾರ್ಡ ನಂ 16 ರ ಶ್ರೀ ಹನುಮಾನ ದೇವಸ್ಥಾನದಲ್ಲಿ, ಇಂಡಿ ಉಪವಿಭಾಗಾಧಿಕಾರಿಗಳು ಬೆಳಿಗ್ಗೆ 11ಗಂಟೆಗೆ ಬಿಸನಾಳ ಗ್ರಾಮದ ಹನುಮಾನ ದೇವಸ್ಥಾನದಲ್ಲಿ, ತಿಕೋಟಾದ ಗ್ರೇಡ್-2 ತಹಶೀಲ್ದಾರ ಬೆಳಿಗ್ಗೆ 11ಗಂಟೆಗೆ ಕೋಟ್ಯಾಳ ಗ್ರಾಮದ ಹನುಮಾನ ದೇವಸ್ಥಾನದಲ್ಲಿ, ಬಬಲೇಶ್ವರ್ ಗ್ರೇಡ್-2 ತಹಶೀಲ್ದಾರ ಬೆಳಿಗ್ಗೆ 11ಗಂಟೆಗೆ ಬೆಳ್ಳುಬ್ಬಿ ಗ್ರಾಮದ ಶ್ರೀ ಮಳೆಸ್ವಾಮಿ ದೇವಸ್ಥಾನದಲ್ಲಿ, ಬಸವನ ಬಾಗೇವಾಡಿಯ ಗ್ರೇಡ್-2 ತಹಶೀಲ್ದಾರ ಬೆಳಿಗ್ಗೆ 11ಗಂಟೆಗೆ ಬಿಸನಾಳ ಗ್ರಾಮದ ಶ್ರೀ ಹನುಮಾನ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.ನಿಡಗುಂದಿ ಗ್ರೇಡ್-2 ತಹಶೀಲ್ದಾರ ಬೆಳಿಗ್ಗೆ 11ಗಂಟೆಗೆ ಗಣಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ, ಕೊಲ್ಹಾರ ಗ್ರೇಡ್-1 ತಹಶೀಲ್ದಾರ ಬೆಳಿಗ್ಗೆ 11ಗಂಟೆಗೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೀನ್ ದಯಾಳ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಡೇ-ನಲ್ಮ್ ಅಭಿಯಾನದಡಿ “ಅಕ್ಕ ಕೆಫೆ” ಪ್ರಾರಂಭಿಸಲು ಅರ್ಹ ಮಹಿಳಾ ಸ್ವ ಸಹಾಯ ಸಂಘಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸುವ ಸ್ವ-ಸಹಾಯ ಸಂಘಗಳು ಡೇ-ನಲ್ಮ್ ಅಭಿಯಾನದಡಿ ರಚನೆಯಾಗಿರಬೇಕು. ಪ್ರತಿ ಮಹಾನಗರ ಪಾಲಿಕೆಯಿಂದ ಕನಿಷ್ಟ ಇಬ್ಬರು ಮಹಿಳಾ ಸ್ವ-ಸಹಾಯ ಸಂಘಗಳನ್ನು ಗುರುತಿಸಲಾಗುವುದು. ಸಂಘದ ಸದಸ್ಯರು ಬಿಪಿಎಲ್ ಕಾರ್ಡ್ ಹೊಂದಿರಬೇಕು. ಆಯ್ಕೆಯಾಗುವ ಸಂಘವು ಗುಂಪು ಚಟುವಟಿಕೆಯ ರೂಪದಲ್ಲಿ “ಅಕ್ಕ ಕೆಫೆ” ನಿರ್ವಹಿಸಲು ಹಾಗೂ ಕ್ಯಾಂಟಿನ ಪ್ರಾರಂಭಿಸಲು ಬಂಡವಾಳ ಹೂಡಲು ಆಸಕ್ತರಿರಬೇಕು.ಆಸಕ್ತ ಮಹಿಳಾ ಸ್ವಸಹಾಯ ಸಂಘಗಳು ಕಾರ್ಯಾಲಯದಿಂದ ಅರ್ಜಿ ನಮೂನೆ ಪಡೆದು ಜನವರಿ- 15ರ ಒಳಗಾಗಿ ತಮ್ಮ ಅರ್ಜಿಯನ್ನು ಮುಚ್ಚಿದ ಲಕೋಟೆಯಲ್ಲಿ ಕಾರ್ಯಾಲಯಕ್ಕೆ ಸಲ್ಲಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿ ಬರುವ ಡಾ.ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ (ರಿ), ಧಾರವಾಡ ಹಾಗೂ ಕಲಬುರ್ಗಿ, ಫೌಂಡೇಶನ್, ವಿಜಯಪುರ ಸಂಯುಕ್ತಾಶ್ರಯದಲ್ಲಿ ಜನವರಿ 4ರಂದು ಜಿಲ್ಲೆಯ ಸಿಂದಗಿ ಮಾಂಗಲ್ಯ ಭವನದಲ್ಲಿ ಡಾ.ಎಂ.ಎಂ ಕಲಬುರ್ಗಿಯವರ ಸೃಜನ ಸಾಹಿತ್ಯ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ.ಕಾರ್ಯಕ್ರಮವನ್ನು ಡಾ.ಲಿಂಗಣ್ಣ ಕಲಬುರ್ಗಿ ಉದ್ಘಾಟಿಸುವರು. ಪ್ರತಿಷ್ಠಾನದ ಅಧ್ಯಕ್ಷ ಡಾ.ವೀರಣ್ಣ ರಾಜೂರ ಅಧ್ಯಕ್ಷತೆ ವಹಿಸುವರು. ವಿಚಾರ ಸಂಕಿರಣದಲ್ಲಿ ಡಾ.ಎಂ.ಎಂ.ಕಲಬುರ್ಗಿ ಅವರ ‘ಕೆಟ್ಟಿತ್ತು ಕಲ್ಯಾಣ’ ನಾಟಕ ಕುರಿತು ಡಾ.ಎಂ.ಎಸ್.ಮಾಗಣಗೇರಿ ಹಾಗೂ ‘ನೀರು ನೀರಡಿಸಿತ್ತು’ ಮತ್ತು ‘ನೀರಾಗ ನಿಂತೀನಿ ನೀರಡಿಸಿ’ ಕವನ ಸಂಕಲನದ ಕುರಿತು ಮನು ಪತ್ತಾರ ಕಲಕೇರಿ ಪ್ರಬಂಧ ಮಂಡಿಸುವರು.ಕಾರ್ಯಕ್ರಮದ ನಿರೂಪಣೆಯನ್ನು ಡಾ.ಎಂ. ಎಂ. ಪಡಶೆಟ್ಟಿ ಮಾಡುವರು. ಕೊನೆಯಲ್ಲಿ ಎಂ. ಎಂ.ಕಲಬುರ್ಗಿಯವರ ಕುರಿತು ರಚನೆಯಾದ ‘ರಕ್ತ ವಿಲಾಸ’ ನಾಟಕ ಪ್ರದರ್ಶನೆ ಮಾಡಲಾಗುವುದು ಎಂದು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
