ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಂದು ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಅಮರ ಶಿಲ್ಪಿ ಜಕಣಾಚಾರಿ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಪುಷ್ಪ ನಮನ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಯಿತು
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಕಂದಾಯ ನಿರೀಕ್ಷ ಸಂತೋಷ ಪಾಠಕ, ಮೂರುಜಾವರ ತಡಲಗಿಯ ರಾಮಾ ಅವಧೂತ ಮಠದ ಮಹೇಂದ್ರ ಸ್ವಾಮಿಗಳು, ಪ್ರಕಾಶ ಮಹಾರಾಜರು, ಸಮಾಜ ಮುಖಂಡರಾದ ಪರಮಾನಂದ ಬಡಿಗೇರ, ಮುಕುಂದ ಕುಂದನಗಾರ, ಶಾರದಾ ಪತ್ತಾರ, ಮೀನಾ ಕುಂದನಗಾರ, ಕಾಳಮ್ಮ ಪತ್ತಾರ, ಈರಣ್ಣ ಕನಮಡಿ, ಶಿವುಕುಮಾರ ಪತ್ತಾರ, ಶ್ರೀಕಾಂತ ಕುಂದನಗಾರ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.

