ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೀನ್ ದಯಾಳ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಡೇ-ನಲ್ಮ್ ಅಭಿಯಾನದಡಿ “ಅಕ್ಕ ಕೆಫೆ” ಪ್ರಾರಂಭಿಸಲು ಅರ್ಹ ಮಹಿಳಾ ಸ್ವ ಸಹಾಯ ಸಂಘಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಸ್ವ-ಸಹಾಯ ಸಂಘಗಳು ಡೇ-ನಲ್ಮ್ ಅಭಿಯಾನದಡಿ ರಚನೆಯಾಗಿರಬೇಕು. ಪ್ರತಿ ಮಹಾನಗರ ಪಾಲಿಕೆಯಿಂದ ಕನಿಷ್ಟ ಇಬ್ಬರು ಮಹಿಳಾ ಸ್ವ-ಸಹಾಯ ಸಂಘಗಳನ್ನು ಗುರುತಿಸಲಾಗುವುದು. ಸಂಘದ ಸದಸ್ಯರು ಬಿಪಿಎಲ್ ಕಾರ್ಡ್ ಹೊಂದಿರಬೇಕು. ಆಯ್ಕೆಯಾಗುವ ಸಂಘವು ಗುಂಪು ಚಟುವಟಿಕೆಯ ರೂಪದಲ್ಲಿ “ಅಕ್ಕ ಕೆಫೆ” ನಿರ್ವಹಿಸಲು ಹಾಗೂ ಕ್ಯಾಂಟಿನ ಪ್ರಾರಂಭಿಸಲು ಬಂಡವಾಳ ಹೂಡಲು ಆಸಕ್ತರಿರಬೇಕು.
ಆಸಕ್ತ ಮಹಿಳಾ ಸ್ವಸಹಾಯ ಸಂಘಗಳು ಕಾರ್ಯಾಲಯದಿಂದ ಅರ್ಜಿ ನಮೂನೆ ಪಡೆದು ಜನವರಿ- 15ರ ಒಳಗಾಗಿ ತಮ್ಮ ಅರ್ಜಿಯನ್ನು ಮುಚ್ಚಿದ ಲಕೋಟೆಯಲ್ಲಿ ಕಾರ್ಯಾಲಯಕ್ಕೆ ಸಲ್ಲಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
