Author: editor.udayarashmi@gmail.com

ರಚನೆ- ವಿನಯ ಆದಿಶಿರಸಿ ಉದಯರಶ್ಮಿ ದಿನಪತ್ರಿಕೆ ಹರೆಯದ ಬದುಕೆಲ್ಲ ಚಂದಇರಲು ಅನುರಾಗ ಬಂಧಬೆಸೆದು ಭಾವದಾನುಬಂಧಒಲವಿನ‌ ನವರಾಗದಿಂದ ನವ್ಯ ಕನಸಿಗೆ ರೆಕ್ಕೆ ಮೂಡಿಹೃದಯ ಸುಸ್ವರದಿ ಹಾಡಿಸಪ್ತಪದಿಯಲಿ ಜೊತೆಗೂಡಿಮನದಿ ಸಪ್ತವರ್ಣ ಮೂಡಿ ಉಲ್ಲಾಸ ಉತ್ಸಾಹದ ಕಾಲಯೌವ್ವನ ಆಶಿಸಿ ಅನುಗಾಲಯುವಮನದಿ ಮೋಹಜಾಲಜಗದಿ ಪ್ರೇಮಸ್ವರ್ಗದ ಹಂಬಲ

Read More

ಲೇಖನ- ಎಸ್ ಎಂ ಹೆಗಡೆಮುಖ್ಯ ಶಿಕ್ಷಕರುಸರ್ಕಾರಿ ಪ್ರೌಢ ಶಾಲೆಬಸಾಲೆ ಉದಯರಶ್ಮಿ ದಿನಪತ್ರಿಕೆ ವಿಕಾಸದ ಹಾದಿಯಲ್ಲಿ ಮಾನವ ಪ್ರಕೃತಿಯಿಂದ ಪಡೆದುಕೊಂಡ ಅದ್ಭುತವಾದ ವರಗಳೆಂದರೆ ಯೋಚನಾ ಶಕ್ತಿ ಮತ್ತು ಮಾತನಾಡೋ ಸಾಮರ್ಥ್ಯ. ಮಂಗ,ನಾಯಿಯಂತಹ ಕೆಲವು ಪ್ರಾಣಿಗಳಿಗೆ ಸ್ವಲ್ಪ ಮಟ್ಟಿಗೆ ಯೋಚನಾಶಕ್ತಿಯಿದೆ. ತನ್ನ ಯೋಚನೆಗಳನ್ನು, ವಿಚಾರಗಳನ್ನು ಮಾತಿನ ಮೂಲಕ ಅಭಿವ್ಯಕ್ತಗೊಳಿಸುವ ಸಾಮರ್ಥ್ಯ ಇರುವದು ಮಾನವನಿಗೆ ಮಾತ್ರ. ಮಾನವನ ಈ ಗುಣಧರ್ಮ ಇತರ ಪ್ರಾಣಿಗಳಿಂದ ಆತನನ್ನು ಪ್ರತ್ಯೇಕಿಸಿದೆಯಲ್ಲದೆ ಸಮಾಜ ಜೀವಿಯಾಗಿರುವ ಅವನಿಗೆ ಒಂದು ಉತ್ತಮ ಸಂವಹನ ಮಾಧ್ಯಮವಾಗಿದೆ.ಪ್ರಾಚೀನ ಕಾಲದಲ್ಲಿ ಮಾತಿಗೆ ತುಂಬಾ ಪ್ರಾಧಾನ್ಯತೆ ಇತ್ತು. ‘ಮಾತು ಕೊಡುವದು’ ಎನ್ನುವ ಪದ್ಧತಿ ರೂಢಿಯಲ್ಲಿತ್ತು. ಮದುವೆ, ನೆಂಟಸ್ತನದಂತಹ ಕೆಲವು ವ್ಯವಹಾರಗಳಲ್ಲಿ ಮಾತೇ ಪ್ರಧಾನವಾಗಿತ್ತು. ವೀಳ್ಯದೆಲೆಯಲ್ಲಿ ನಾಣ್ಯವನ್ನಿಟ್ಟು ಮಾತುಕೊಟ್ಟರೆಂದರೆ ಮುಗಿಯಿತು ದೇವರ ಮುಂದೆ ಪ್ರಮಾಣ ಮಾಡಿದಂತೆ ಎಂದು ಪರಿಗಣಿಸಿ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿದ್ದರು. ವ್ಯವಹಾರ ಜ್ಞಾನದ ಜೊತೆಗೆ ಉತ್ತಮವಾದ ಮಾತಿನಕಲೆಯನ್ನು ಬಲ್ಲವರನ್ನು ಊರಿನ ಗ್ರಹಸ್ಥರು ಎನ್ನಲಾಗುತ್ತಿತ್ತು. ತಮ್ಮ ವ್ಯವಹಾರ ಸೂಕ್ಷ್ಮತೆ ಮಾತಿನ ಚಾತುರ್ಯದ ಮೂಲಕ ಊರಿನ ಎಷ್ಟೋ ವ್ಯಾಜ್ಯಗಳನ್ನು ಬಗೆಹರಿಸುತ್ತಿದ್ದರು.’ಬಾಯಿ ಇದ್ದರೆ…

Read More

ಲೇಖನಡಾ.ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ತಾಂಬೂಲ ಹಂಚುವ ಕಾಯಕವನ್ನು ಹಡಪದ ರೇಚಣ್ಣ ಕೈಗೊಂಡಿದ್ದ. ಈತ ಕಲ್ಯಾಣಕ್ರಾಂತಿಯ ಸಂದರ್ಭದಲ್ಲಿ ಶರಣರ ದಂಡಿನೊಂದಿಗೆ ಉಳುವಿಯತ್ತ ಹೋಗಿದ್ದನೆಂದು ತಿಳಿಯುತ್ತದೆ. ಶಿವಭಕ್ತರ ಗುಣಲಕ್ಷಣ, ವ್ರತನಿಷ್ಠೆ, ಭಕ್ತರ ಗುಣ ಲಕ್ಷಣ, ಶರಣನ ಇರುವು ಅಪ್ರಾಮಾಣಿಕರ ದೂಷಣೆ, ಶರಣಸ್ತುತಿ ಅವುಗಳ ವಸ್ತು. ಮಹಾಮನೆಯಲ್ಲಿ ಪ್ರಸಾದವನ್ನು ಹಂಚುವುದು, ಪ್ರಸಾದವಾದ ಮೇಲೆ ಎಲೆ ಅಡಿಕೆ ತಾಂಬೂಲವನ್ನು ಹಂಚುವುದು ಅವನ ಕಾಯಕವಾಗಿತ್ತು. ಎನ್ನಾಧಾರಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಬಸವಣ್ಣನು.ಎನ್ನ ಸ್ವಾದಿಷ್ಠಾನಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಚೆನ್ನಬಸವಣ್ಣನು.ಎನ್ನ ಮಣಿಪೂರಕಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾಘಟ್ಟಿವಾಳ ಮದ್ದಯ್ಯನು.ಎನ್ನ ಅನಾಹತಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಸಿದ್ಧರಾಮಯ್ಯನು.ಎನ್ನ ವಿಶುದ್ಧಿಚಕ್ರಸ್ಥಾನದಲ್ಲಿಸ ಮೂರ್ತಿಗೊಂಡನಯ್ಯಾ ಮರುಳಶಂಕರದೇವರು.ಎನ್ನ ಆಜ್ಞಾಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಪ್ರಭುದೇವರು.ಆಧಾರಕ್ಕಾಚಾರಲಿಂಗವಾದಾತ ಬಸವಣ್ಣ.ಸ್ವಾಧಿಷ್ಠಾನಕ್ಕೆ ಗುರುಲಿಂಗವಾದಾತ ಚೆನ್ನಬಸವಣ್ಣ.ಮಣಿಪೂರಕಕ್ಕೆ ಶಿವಲಿಂಗವಾದಾತ ಘಟ್ಟಿವಾಳ ಮದ್ದಯ್ಯ.ಅನಾಹತಕ್ಕೆ ಜಂಗಮಲಿಂಗವಾದಾತ ಸಿದ್ಧರಾಮಯ್ಯ.ವಿಶುದ್ಧಿಗೆ ಪ್ರಸಾದಲಿಂಗವಾದಾತ ಮರುಳಶಂಕರದೇವರು.ಆಜ್ಞೆಗೆ ಮಹಾಲಿಂಗವಾದಾತ ಪ್ರಭುದೇವರು.ನಿಃಕಳಂಕ ಕೂಡಲ [ಚೆನ್ನ]ಸಂಗಮದೇವಾ,ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು. ಹಡಪದ ರೇಚಣ್ಣನ ಹೆಸರಿನ ಮುಂದೆ ಇರುವ ಹಡಪದ – ಅಡಪ -ಸಂಚಿ- ಎಲೆ ಅಡಿಕೆ ತಾಂಬೂಲ ಸಂಗ್ರಹಿಸಿ ಇಡುವ ಸಾಧನ, ಕಟ್ಟಿಗೆಯ ಡಬ್ಬಿ. ಇವನೊಬ್ಬ ಅನುಭವಿ ಸಾಧಕ, ಈತನ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಸ್ವಾಗತಕೊರುವ ‘ಆರಂಭ ೨೦೨೫’ ಕಾರ್ಯಕ್ರಮವನ್ನು ಇದೇ ದಿ. ೬ ರಂದು ಬೆಳಗ್ಗೆ ೧೧:೦೦ ಗಂಟೆಗೆ ವಿಭಾಗದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಜಯಪುರದ ಪ್ರಜಾವಾಣಿ ದಿನಪತ್ರಿಕೆಯ ಹಿರಿಯ ಜಿಲ್ಲಾ ವರದಿಗಾರ ಬಸವರಾಜ ಸಂಪಳ್ಳಿ ಭಾಗವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ್ ಕಾಕಡೆ ವಹಿಸಲಿದ್ದಾರೆ. ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ತಹಮೀನಾ ಕೋಲಾರ ಮತ್ತು ಸಂದೀಪ ನಾಯಕ, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

Read More

ಗುತ್ತಿಗೆದಾರ ಸಚಿನ್ ಪಾಂಚಲ್ ಆತ್ಮಹತ್ಯೆ ಪ್ರಕರಣ | ಬಿಜೆಪಿ ಪ್ರತಿಭಟನೆ | ಹಲವು ಬಿಜೆಪಿ ನಾಯಕರು ಪೊಲೀಸರ ವಶಕ್ಕೆ ಕಲಬುರಗಿ: ಬೀದರ್ ಮೂಲದ ಸಿವಿಲ್ ಗುತ್ತಿಗೆದಾರ ಸಚಿನ್ ಪಾಂಚಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮತ್ತು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಜಗತ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಮಂದಿ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡರು. ಪೊಲೀಸ್ ಬಿಗಿ ಭದ್ರತೆ ನಡುವೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಬಳಿಕ ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದಾಗ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ನೇತೃತ್ವದಲ್ಲಿ ಬಿಜೆಪಿ ನಾಯಕರನ್ನು ವಶಕ್ಕೆ ಪಡೆಯಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪ್ರಿಯಾಂಕ್ ಖರ್ಗೆ ಅವರ ನಿವಾಸದ ಹೊರಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.…

Read More

ಮಕರ ಸಂಕ್ರಾಂತಿ ಜಾನುವಾರುಗಳ ಜಾತ್ರೆ | ಜಾನುವಾರುಗಳ ಆಯ್ಕೆಯಲ್ಲಿ ಅನ್ಯಾಯ | ರೈತಸಂಘ ಆರೋಪ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಾನುವಾರಗಳನ್ನು ಮರೆತು ಆಧುನಿಕ ಯಂತ್ರೋಪಕರಣಗಳಿಗೆ ಬೆನ್ನು ಹತ್ತಿದ ಇಂದಿನ ದಿನಮಾನಗಳಲ್ಲಿ ಜಾನುವಾರುಗಳನ್ನು ಉಳಿಸಿಕೊಂಡು ಬೆಳಸಬೇಕಾದ ಕಾರ್ಯ ಸಮಾಜದ ಎಲ್ಲರ ಮೇಲಿದೆ ಆ ನಿಟ್ಟಿನಲ್ಲಿ ದೇಶಿ ಹಸುಗಳ ತಳಿಗಳನ್ನು ಪ್ರೋತ್ಸಾಹಿಸಲು ಅನೇಕ ಯೋಜನೆ, ಕಾರ್ಯಕ್ರಮ, ನಡೆಸಬೇಕಾದ ಜವಾಬ್ದಾರಿ ಇದೆ, ಅದರಡಿ ಜಾನುವಾರು ಜಾತ್ರೆಗಳು ಬಹು ಮುಖ್ಯಪಾತ್ರವಹಿಸುತ್ತವೆ, ಇಲ್ಲಿ ವಿಶೇಷ ಕಾಳಜಿಯಿಂದ ಜಾನುವಾರುಗಳನ್ನು ಸಾಕಿ ತಮ್ಮ ಸ್ವಂತ ಮಕ್ಕಳಂತೆ ಸಲುಹಿ ಒಳ್ಳೆಯ ಕಟ್ಟುಮಸ್ತಾಗಿ ಬೆಳೆಸಿರುವ ಒಳ್ಳೆಯ ರಾಸುಗಳಿಗೆ ಸೂಕ್ತ ಬಹುಮಾನ ನೀಡಿ ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ.ವಿಜಯಪುರ ಜಿಲ್ಲೆಯಲ್ಲಿ ಪ್ರತಿವರ್ಷ ಮಕರ ಸಂಕ್ರಾಂತಿಯ ವೇಳೆ ನಡೆಯುವ ಜಾನುವಾರುಗಳ ಜಾತ್ರೆಯಲ್ಲಿ ನಡೆಯುವ ಜಾನುವಾರುಗಳ ಆಯ್ಕೆಯಲ್ಲಿ ಅನ್ಯಾಯವಾಗುತ್ತಿದ್ದು ಇದರಿಂದ ವಿಜಯಪುರ ಮಾತ್ರವಲ್ಲದೇ ನೆರೆಯ ಜಿಲ್ಲೆ ಹಾಗೂ ಮಹಾರಾಷ್ಟ್ರದಿಂದ ಜಾತ್ರೆಗೆ ಜಾನುವಾರುಗಳನ್ನು ತರುವ ರೈತರಿಗೆ ತುಂಬಾ ಅನ್ಯಾಯದಿಂದ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಚಾಂಪಿಯನ್ ಆಯ್ಕೆ ಕುರಿತು ಅನೇಕ ಗೊಂದಲಗಳಿವೆ, ಇಲ್ಲಿ ಕೇವಲ…

Read More

ಡಾ.ಬಿ.ಆರ್. ಅಂಬೇಡ್ಕರ್ ರವರ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ಖಂಡನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ದಲಿತ ಸೇನೆ ತಾಲೂಕ ಸಮಿತಿ ಬಬಲೇಶ್ವರ ವತಿಯಿಂದ ತಹಶೀಲ್ದಾರ ಬಬಲೇಶ್ವರ ರವರ ಮುಖಾಂತರ ಘನವೆತ್ತ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಇತ್ತೀಚಿಗೆ ಸಂಸತ್ ಅಧಿವೇಶನದಲ್ಲಿ ಗೃಹ ಸಚಿವರಾದ ಅಮಿತ್ ಶಾ ರವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ರವರ ಬಗ್ಗೆ ಹಗುರವಾಗಿ ಹಾಗೂ ಅವಮಾನಕಾರಿ ರೀತಿಯಲ್ಲಿ ಮಾತನಾಡಿದ್ದು, ಇದು ದೇಶದ ದಲಿತರು , ಶೋಷಿತರು ಹಾಗೂ ಎಲ್ಲಾ ನ್ಯಾಯಪ್ರಿಯ ಪ್ರಜೆಯ ಹೃದಯವನ್ನು ತೀವ್ರವಾಗಿ ನೋಯಿಸಿರುವ ಘಟನೆಯಾಗಿದೆ. ಅಂಬೇಡ್ಕರವರು ಇಡೀ ದೇಶದ ಪ್ರಜಾಪ್ರಭುತ್ವದ ಬುನಾದಿಯಾಗಿದ್ದಾರೆ. ಅವರು ಈ ದೇಶದಲ್ಲಿ ಸಮಾನತೆ ಭ್ರಾತೃತ್ವ ಮತ್ತು ನ್ಯಾಯದ ತತ್ವಗಳನ್ನು ಸ್ಥಾಪಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ದಲಿತರು, ಧಮನೀತರು, ಮಹಿಳೆಯರು ಮತ್ತು ಎಲ್ಲಾ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸುವಲ್ಲಿ ಅವರ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ರಾಘವೇಂದ್ರ ಮಂಗಲ ಕಾರ್ಯಾಲಯದಲ್ಲಿ ಜ.೫ ರಂದು ಬೆಳಿಗ್ಗೆ ೧೧ ಗಂಟೆಗೆ ಅಮರ ಶಿಲ್ಪಿ ಜಕಣಾಚಾರ್ಯರ ಸಂಸ್ಮರಣಾ ದಿನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಸಮಾಜದ ಎಲ್ಲ ಬಾಂಧವರು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ವಿಶ್ವಕರ್ಮ ಸಮಾಜದ ಮುಖಂಡ ಬಸವರಾಜ ಹಡಗಲಿ ತಿಳಿಸಿದರು.ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಲೇಬಗಿರಿ ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ಶ್ರೀ ನಾಗಮೂರ್ತೇಂದ್ರ ಮಹಾಸ್ವಾಮಿಗಳು ವಹಿಸಲಿದ್ದು, ಮುರನಾಳದ ಮಹಾ ಪರುಷ ಮಳೆರಾಜೇಂದ್ರಸ್ವಾಮಿ ಮಠದ ಜಗನ್ನಾಥ ಮಹಾಸ್ವಾಮಿಗಳು, ನಾಲತವಾಡದ ಬ್ರಹ್ಮಾಂಡಭೇರಿ ಮಠದ ಪಂಪಾಪತಿ ಮಹಾಸ್ವಾಮಿಗಳು, ವಿಜಯಪುರದ ಮೂರುಝಾವದ ಮಠದ ಮಹೇಂದ್ರ ಮಹಾಸ್ವಾಮಿಗಳು, ದೇವರ ಹಿಪ್ಪರಗಿಯ ಮೂರುಝಾವದ ಶಾಖಾ ಮಠದ ದೇವೆಂದ್ರ ಮಹಾಸ್ವಾಮಿಗಳು, ಸಾಸನೂರಿನ ಮೂರುಝಾವದ ಮಠದ ಶ್ರೀಶೈಲ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾದ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರು ಉದ್ಘಾಟಿಸಲಿದ್ದು, ಬಾವೂರಿನ ಪ್ರಭಾಕರ ಪತ್ತಾರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ರಾಯಚೂರಿನ ಪತ್ರಕರ್ತರಾದ ಮಾರುತಿ ಬಡಿಗೇರ,…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಸರ್ಕಾರಿ ಶಾಲೆಗಳಲ್ಲಿ ಕಲಿಯುವಂತಹ ಮಕ್ಕಳು ಸಹ ಪ್ರತಿಭಾವಂತರು ಇರುವದನ್ನು ಕಾಣುತ್ತೇವೆ. ಈಚೆಗೆ ಹೆಣ್ಣುಮಕ್ಕಳಿಗೆ ಶಿಕ್ಷಣ ಕಲಿಯಲು ಹೆಚ್ಚು ಅವಕಾಶ ನೀಡಿದ್ದರಿಂದಾಗಿ ಶೇ.೭೦ ರಷ್ಟು ವಿದ್ಯಾರ್ಥಿನಿಯರು ಹೆಚ್ಚು ಉತ್ತೀರ್ಣರಾಗುವದನ್ನು ಕಾಣುತ್ತೇವೆ. ಇದೊಂದು ಉತ್ತಮ ಬೆಳವಣಿಗೆಯಾಗಿದೆ ಎಂದು ಸಕ್ಕರೆ, ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಭಾರತ ಸೇವಾದಳದ ಸಭಾಂಗಣದಲ್ಲಿ ಲಾಡ್ಲಿ ಫೌಂಡೇಶನ್ ಟ್ರಸ್ಟ್ ಶುಕ್ರವಾರ ಹಮ್ಮಿಕೊಂಡಿದ್ದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣಕ್ಕೆ ಸಿಗುವ ಶೇ.೧೦೦ ರಷ್ಟು ಅನುದಾನದಲ್ಲಿ ಶೇ.೬೦ ರಷ್ಟು ಶಿಕ್ಷಕರ ವೇತನ, ಇತರೇ ಅಧಿಕಾರಿಗಳ ವೇತನಕ್ಕೆ ಹೋಗುತ್ತದೆ. ಉಳಿದ ಶೇ. ೪೦ ರಷ್ಟು ಅನುದಾನದಲ್ಲಿ ಶಾಲೆಗಳ ಕಟ್ಟಡ ನಿರ್ಮಾಣ ಸೇರಿದಂತೆ ಶಾಲೆಗಳಿಗೆ ಎಲ್ಲ ಸೌಲಭ್ಯ ಒದಗಿಸಲು ಬಳಕೆ ಮಾಡಬೇಕಿದೆ. ಸರ್ಕಾರದ ಸರ್ಕಾರಿ ಶಾಲೆಗಳನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿಯಿದೆ. ಈ ಮೊದಲು…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ವಿಶ್ವಕರ್ಮ ಸಮಾಜ ಬಾಂಧವರು ಮಿನಿವಿಧಾನಸೌಧದಲ್ಲಿರುವ ತಹಸೀಲ್ದಾರ ಕಚೇರಿಯ ಮುಂಭಾಗ ಶನಿವಾರ ಜಮಾಯಿಸಿ ಗುತ್ತಿಗೆದಾರ ಸಚಿನ ಪಂಚಾಳ ಅವರ ನಿಗೂಢ ಸಾವಿನ ಕುರಿತು ಸರ್ಕಾರ ತನಿಖೆ ಮಾಡುವಂತೆ ಆಗ್ರಹಿಸಿ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಮೂಲಕ ಸಲ್ಲಿಸಿದರು. ಮನವಿ ಪತ್ರವನ್ನು ಶಿರಸ್ತೇದಾರ ಎಸ್.ಎಂ.ಜಾಗೀರದಾರ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಇಂಗಳೇಶ್ವರದ ಮಹೇಂದ್ರ ಸ್ವಾಮೀಜಿ ಮಾತನಾಡಿ, ಬೀದರ ಜಿಲ್ಲೆಯ ಬಾಲ್ಕಿ ತಾಲೂಕಿನ ತುಗಾಂವ ಗ್ರಾಮದ ಗುತ್ತಿಗೆದಾರರಾಗಿದ್ದ ಸಚಿನ ಮೋನಪ್ಪ ಪಂಚಾಳ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಆತ್ಮಹತ್ಯೆಗೆ ಕಾರಣೀಕರ್ತರನ್ನು ತಕ್ಷಣವೇ ಬಂಽಸಿ ಸಮಗ್ರ ತನಿಖೆ ನಡೆಸಿ ಸರ್ಕಾರ ನ್ಯಾಯ ಒದಗಿಸಬೇಕು. ಇವರ ಬಡ ಕುಟುಂಬಕ್ಕೆ ಸರ್ಕಾರ ಪರಿಹಾರವನ್ನು ಒದಗಿಸಿ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ತಾಲೂಕಾಧ್ಯಕ್ಷ ಕೆ.ಬಿ.ಕಡೆಮನಿ, ಮುಖಂಡರಾದ ಪ್ರಭು ಬಡಗೇರ, ಜಗನ್ನಾಥ ಪತ್ತಾರ, ಬಸವರಾಜ ಯಂಭತ್ನಾಳ, ಮುತ್ತು ಪತ್ತಾರ, ಕಾಳು ಪತ್ತಾರ, ಶ್ರೀಶೈಲ ಪತ್ತಾರ, ಬಸವರಾಜ ಬಡಿಗೇರ, ಮಂಜುನಾಥ…

Read More