ರಚನೆ
– ವಿನಯ ಆದಿ
ಶಿರಸಿ
ಉದಯರಶ್ಮಿ ದಿನಪತ್ರಿಕೆ
ಹರೆಯದ ಬದುಕೆಲ್ಲ ಚಂದ
ಇರಲು ಅನುರಾಗ ಬಂಧ
ಬೆಸೆದು ಭಾವದಾನುಬಂಧ
ಒಲವಿನ ನವರಾಗದಿಂದ
ನವ್ಯ ಕನಸಿಗೆ ರೆಕ್ಕೆ ಮೂಡಿ
ಹೃದಯ ಸುಸ್ವರದಿ ಹಾಡಿ
ಸಪ್ತಪದಿಯಲಿ ಜೊತೆಗೂಡಿ
ಮನದಿ ಸಪ್ತವರ್ಣ ಮೂಡಿ
ಉಲ್ಲಾಸ ಉತ್ಸಾಹದ ಕಾಲ
ಯೌವ್ವನ ಆಶಿಸಿ ಅನುಗಾಲ
ಯುವಮನದಿ ಮೋಹಜಾಲ
ಜಗದಿ ಪ್ರೇಮಸ್ವರ್ಗದ ಹಂಬಲ
