Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಸರ್ಕಾರದ ಯೋಜನೆಯಾದ “ಯುವನಿಧಿ” ಯೋಜನೆಯಲ್ಲಿ 2022-23 ಹಾಗೂ 2023-24ನೇ ಸಾಲಿನಲ್ಲಿ ತೇರ್ಗಡೆಯಾದ ಪದವಿ, ಸ್ನಾತಕೋತ್ತರ ಪದವಿ ಮತ್ತು ಡಿಪ್ಲೋಮಾ ಅಭ್ಯರ್ಥಿಗಳನ್ನು ಯುವನಿಧಿ ಯೋಜನೆ ವ್ಯಾಪ್ತಿಗೆ ತರಲು ಜನವರಿ 6ರಿಂದ 20ರವರೆಗೆ ವಿಶೇಷ ನೋಂದಣಿ ಅಭಿಯಾನವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.ಈ ಯೋಜನೆಯಡಿ ಅರ್ಹ ಪದವಿಧರರಿಗೆ ಮಾಸಿಕ 3,000ರೂ ಹಾಗೂ ಡಿಪ್ಲೋಮಾ ತೇರ್ಗಡೆಯಾದವರಿಗೆ ರೂ 1,500 ಮಾಸಿಕ ಭತ್ಯೆ ಸಿಗಲಿದೆ. ಅರ್ಹ ಅಭ್ಯರ್ಥಿಗಳು ನೇರವಾಗಿ ಸೇವಾ ಸಿಂಧು ಪೋರ್ಟಲ್ https://sevssindhugs.karnataka.gov.in ನಲ್ಲಿ ತಮ್ಮ ಹೆಸರು ನೋಂದಾಯಿಸಿ ಕೊಳ್ಳಬಹುದು. ಅರ್ಜಿ ಸಲ್ಲಿಸಿದ ನಂತರ ಸೇವಾ ಸಿಂಧು ಪೋರ್ಟಲ್‌ನಲ್ಲಿ ತಮ್ಮ ದಾಖಲಾತಿಯನ್ನು ಪರಿಶೀಲಿಸಿಕೊಳ್ಳಬಹುದು. ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ದಾಖಲಾತಿ ಆಗಿರದಿದ್ದರೆ ಅಭ್ಯರ್ಥಿಗಳನ್ನು ತಮ್ಮ ದಾಖಲಾತಿಗಳನ್ನು ತೆಗೆದುಕೊಂಡು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿಗೆ ಎಸ್.ಎಸ್.ಎಲ್.ಸಿ ಪ್ರಮಾಣ ಪತ್ರ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿಗೆ ಪಿಯುಸಿ ಪ್ರಮಾಣ ಪತ್ರ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾನಗರಪಾಲಿಕೆ ದೀನ್ ದಯಾಳ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಡೇ-ನಲ್ಮ್ ಅಭಿಯಾನದಡಿ ಜಿಲ್ಲೆಯ ಆಸ್ತಿ ತೆರಿಗೆ ಹಾಗೂ ನೀರಿನ ಶುಲ್ಕ ವಸೂಲಾತಿ ಸಂಗ್ರಹಣೆ ಮಾಡುವ ಕಾರ್ಯಕ್ರಮ ಅನುಷ್ಠಾನಗೊಳಿಸಲು ಅರ್ಹ ಮಹಿಳಾ ಸ್ವಸಹಾಯ ಸಂಘಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಹ ಮಹಿಳಾ ಸ್ವಸಹಾಯ ಸಂಘವು ಈಗಾಗಲೇ ಡೇ-ನಲ್ ಅಭಿಯಾನದಡಿ ನೊಂದಾಯಿಸಿರಬೇಕು ಹಾಗೂ ಪಂಚಸೂತ್ರ ಅನುಸರಿಸುತ್ತಿರಬೇಕು. ಸಂಘಸ ಸದಸ್ಯರು ಕನಿಷ್ಠ 7ನೇ ತರಗತಿಯ ವರೆಗೆ ಶಿಕ್ಷಣ ಹಾಗೂ ಎಲೆಕ್ಟಾçನಿಕ್ ಪರಿಕರಗಳ ಬಳಕೆ ಗೊತ್ತಿರಬೇಕು. ಸಂಘದ ಹೆಸರಿನಲ್ಲಿ ಸಕ್ರಿಯ ಬ್ಯಾಂಕ್ ಖಾತೆ ಹೊಂದಿರಬೇಕು ಹಾಗೂ ಬ್ಯಾಂಕನ ತಮ್ಮ ಖಾತೆಯಲ್ಲಿ ಸಾಲ ಪಡೆದು ನಿಯಮಿತವಾಗಿ ಮರು ಪಾವತಿ ಮಾಡಿರಬೇಕು. ಸ್ವ-ಸಹಾಯ ಗುಂಪು ಸಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಡೇ.ಎನ್‌ಯುಎಲ್‌ಎಂ ಅಭಿಯಾನದಡಿ ನೋಂದಾಯಿಸಿಕೊಂಡು ಮಾನ್ಯತೆ ಇರುವ ಎಂಐಎಸ್ ಕೋಡ್ ಹೊಂದಿರಬೇಕು. ಸಂಘ ರಚನೆಯಾಗಿ ಕನಿಷ್ಟ 3 ವರ್ಷ ಪೂರೈಸಿರಬೇಕು. ಸಂಘ ಅಥವಾ ಸಂಘದ ಸದಸ್ಯ ಯಾವುದೇ ಅಪರಾಧ, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರಬಾರದು. ನಗರ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕೇಂದ್ರ ಸರ್ಕಾರದ ಸಮರ್ಥ ಜವಳಿ ಇಲಾಖೆಯಲ್ಲಿನ ಯೋಜನೆಯಾದ ಉಚಿತ ಹೋಲಿಗೆ ತರಬೇತಿ ಹಾಗೂ ಕೌಶಲ್ಯ ತರಬೇತಿಗೆ ಪಟ್ಟಣದ ವಿಜಯಪುರ ರಸ್ತೆಯ ಎನ್.ಎಸ್.ಹಿರೇಮಠ ಬಿಲ್ಡಿಂಗ್‌ನಲ್ಲಿರುವ ಓಜೋನ್ ಸಲ್ಯುಶನ್ ಕೇಂದ್ರದ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗುತ್ತಿದೆ.೧೮-೪೦ರ ವಯೋಮಾನದ ಎಲ್ಲಾ ವರ್ಗದ ಯುವಕ ಯುವತಿಯರಿಗೆ ಯಾಂತ್ರೀಕೃತ ಹೊಲಿಗೆ ಯಂತ್ರ ತರಬೇತಿ, ವ್ಯಕ್ತಿತ್ವ ವಿಕಸನ ತರಬೇತಿ, ಹಾಗೂ ಇನ್ನಿತರ ಕೌಶಲ್ಯ ತರಬೇತಿ ಪ್ರಾರಂಭ ಮಾಡಲಾಗುತ್ತಿದೆ. ತರಬೇತಿ ಮುಗಿದ ನಂತರ ಪ್ರಮಾಣ ಪತ್ರ ನೀಡುವುದರ ಜೊತೆಗೆ ಉದ್ಯೋಗ ಅವಕಾಶ ಕಲ್ಪಿಸಲಾಗುವುದು. ತರಬೇತಿ ಅವಧಿಯಲ್ಲಿ ಪಠ್ಯಪುಸ್ತಕ ಸೇರಿದಂತೆ ಇನ್ನಿತರ ಹೋಲಿಗೆ ಸಾಮಗ್ರಿಗಳನ್ನು ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಆಧಾರ್ ಕಾರ್ಡ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ೪ಭಾವಚಿತ್ರದ ಜೊತೆಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ನೀಡಬೇಕು. ಕನಿಷ್ಠ ೭ನೇ ತರಗತಿ ಪಾಸಾಗಿರಬೇಕು. ಮೇಲೆ ತಿಳಿಸಿದ ಎಲ್ಲ ದಾಖಲಾತಿಗಳನ್ನು ದ್ವಿಪ್ರತಿಯಲ್ಲಿ ಖುದ್ದಾಗಿ ಕಾರ್ಯಾಲಯಕ್ಕೆ ಬಂದು ಅರ್ಜಿ ಸಲ್ಲಿಸಬೇಕು. ಮತ್ತು ಹೆಚ್ಚಿನ ಮಾಹಿತಿಗಾಗಿ ೯೪೭೨೯೭೪೧೬೦ ಸಂಖ್ಯೆಗೆ ಸಂಪರ್ಕಿಸಬೇಕು ಎಂದು ಸಂಸ್ಥೆಯ ಮುಖ್ಯಸ್ಥ…

Read More

ಬಂದಾಳದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಶಾಸಕ ಅಶೋಕ ಮನಗೂಳಿ ಅಧಿಕಾರಿಗಳಿಗೆ ಖಡಕ್ ಸೂಚನೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಗ್ರಾಮೀಣ ಪ್ರದೇಶದ ಶ್ರೇಯೋಭಿವೃದ್ಧಿಗೆ ಸರಕಾರ ಹಲವಾರು ಯೋಜನೆಗಳಿಗಾಗಿ ಅನುದಾನ ಮಂಜೂರು ಮಾಡುತ್ತಿದೆ. ಸದುಪಯೋಗವಾಗಬೇಕೆನ್ನುವ ನಿಟ್ಟಿನಲ್ಲಿ ಪ್ರತಿಯೊಬ್ಬ ಅಧಿಕಾರಿಗಳು ಕ್ರೀಯಾಯೋಜನೆ ಮಾಡಿ ಸರಕಾರಿ ಶಾಲೆಗಳ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಸೂಚಿಸಿದರು.ತಾಲೂಕಿನ ಬಂದಾಳ ಗ್ರಾಮದಲ್ಲಿ ಹಮ್ಮಿಕೊಂಡ ಜನಸಂಪರ್ಕ ಸಭೆಯನ್ನು ಶಾಸಕ ಅಶೋಕ ಮನಗೂಳಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಶಾಲೆಗಳ ಮೂಲಭೂತ ಸೌಕರ್ಯಗಳಾದ ಶೌಚಾಲಯ, ನೀರು, ಶಾಲಾ ಕಂಪೌಂಡ ಸೇರಿದಂತೆ ಅನೇಕ ಸೌಲಭ್ಯ ಪೂರೈಸಲು ಇಲಾಖಾವಾರು ಸಭೆ ನಡೆಸಿ ಬಂದಾಳ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಚಿಕ್ಕಸಿಂದಗಿ, ಓತಿಹಾಳ, ಬೂದಿಹಾಳ, ಬಂದಾಳ ಜನರ ಮೂಲಭೂತ ಸಮಸ್ಯೆಗಳನ್ನು ನರೇಗಾ ಯೋಜನೆಯಲ್ಲಿ ನಿರ್ವಹಿಸಬಹುದು. ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಸಿಎಂ ಸಿದ್ದರಾಮಯ್ಯ ಅವರ ಕನಸಿನ ಮೇರೆಗೆ ತಾಲೂಕಿನ ಪ್ರತಿಯೊಂದು ಗ್ರಾಪಂ ವ್ಯಾಪ್ತಿಯಲ್ಲಿ ಜನಸಂಪರ್ಕ ಸಭೆಯನ್ನು ಹಮ್ಮಿಕೊಂಡು ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಪರಿಹಾರ ದೊರಕಿಸಿ ಕೋಡಬೇಕು…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಓತಿಹಾಳ ಗ್ರಾಮದ ರಸ್ತೆಗಳು ಅನೇಕ ವರ್ಷಗಳಿಂದ ಹದಗೆಟ್ಟಿದ್ದು, ಅದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಕಾರಣ ರಸ್ತೆಗಳನ್ನು ದುರಸ್ಥಿಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು. ಮತ್ತು ಬಂದಾಳ ಓತಿಹಾಳ, ಬೂದಿಹಾಳ ಹಾಗೂ ಹರನಾಳ ಮಾರ್ಗವಾಗಿ ವಿಜಯಪುರಕ್ಕೆ ತೆರಳಲು ಸಾರಿಗೆ ಬಸ್ಸ ವ್ಯವಸ್ಥೆ ಕಲ್ಪಿಸಬೇಕು ಎಂದು ಶಾಸಕರಿಗೆ ವಿಜಯಪುರ ಜಿಲ್ಲಾ ಸಹಕಾರಿ ಯೂನಿಯನ್ ಮಾಜಿ ಉಪಾಧ್ಯಕ್ಷ ಚಂದ್ರಶೇಖರ ದೇವರೆಡ್ಡಿ ಮನವಿ ಮಾಡಿಕೊಂಡರು.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕಾಂಗ್ರೇಸ್ ಪಕ್ಷವು ಅವೈಜ್ಞಾನಿಕ ನಿಲುವನ್ನು ಕೈಗೆತ್ತಿಕೊಂಡು ಚುನಾವಣೆ ಗೆಲ್ಲುವ ಭರದಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸಂಪೂರ್ಣ ಹದಗೆಡಿಸಿ ರಾಜ್ಯವನ್ನು ದಿವಾಳಿಯತ್ತ ದುಡಿದ್ದಾರೆ. ಮತ್ತೇ ಇದೀಗ ಏಕಾ ಏಕಿ ಶೇ.೧೫ರಷ್ಟು ಬಸ್ ದರವನ್ನು ಹೆಚ್ಚಿಸುವ ಮುಖಾಂತರ ಕಾಂಗ್ರೆಸ್ ಸರ್ಕಾರದ ಬಂಡವಾಳ ಬಯಲಿಗೆ ಬಿದ್ದಿದೆ. ಇಂತಹ ಗ್ಯಾರಂಟಿ ಯೋಜನೆಗಳು ಯಾರಿಗೆ ಬೇಕು ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ. ತೈಲದರ ಹೆಚ್ಚಳವಾಗದೇ ಬಸ್ ದರ ಹೆಚ್ಚಳ ಮಾಡಿರುವುದು ನೋಡಿದರೇ ಸರ್ಕಾರ ದಿವಾಳಿಯಾಗಿದೆ ಎಂಬುದು ಗೊತ್ತಾಗುತ್ತಿದೆ. ಈ ಬಸ ದರ್ ಹೆಚ್ಚಳವನ್ನು ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷ ತೀವ್ರವಾಗಿ ವಿರೋಧಿಸುತ್ತದೆ. ಮತ್ತು ಈ ಸರ್ಕಾರದ ಅವೈಜ್ಞಾನಿಕ ನಿಲುವನ್ನು ಜನರ ಮದ್ಯ ತಂದು ಜನರನ್ನು ರಾಜ್ಯಾದ್ಯಂತ ಜನಾಂದೋಲನ ಮಾಡಲಾಗುವುದು ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷ ರಾಜ್ಯ ಉಪಾಧ್ಯಕ್ಷ ಡಾ.ದಸ್ತಗೀರ ಮುಲ್ಲಾ ಎಚ್ಚರಿಕೆ ನೀಡಿದ್ದಾರೆ.

Read More

ಡಾ.ಎಂ.ಎಂ.ಕಲಬುರ್ಗಿ ಅವರ ಸೃಜನ ಸಾಹಿತ್ಯ ಕುರಿತಾದ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಾಗೂ ನಾಟಕ ಪ್ರದರ್ಶನ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಶರಣರ ಪರಂಪರೆಯ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದ ಡಾ.ಕಲಬುರ್ಗಿ ಅವರು ಕಲ್ಯಾಣದ ಅವಸಾನದ ದಿನಗಳನ್ನು ನಾಟಕ ರೂಪದಲ್ಲಿ ಹೇಳಿದ್ದಾರೆ ಎಂದು ಚಡಚಣ ಶ್ರೀ ಸಂಗಮೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಎಂ.ಎಸ್.ಮಾಗಣಗೇರಿ ಹೇಳಿದರು.ಅವರು ಪಟ್ಟಣದ ಮಾಂಗಲ್ಯ ಭವನದಲ್ಲಿ ಕರ್ನಾಟಕ ಸರ್ಕಾರದ ಧಾರವಾಡದ ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ಹಾಗು ವಿಜಯಪುರದ ಕಲಬುರ್ಗಿ ಫೌಂಡೇಶನ್ ಸಹಯೋಗದಲ್ಲಿ ನಡೆದ ಡಾ.ಎಂ.ಎಂ.ಕಲಬುರ್ಗಿ ಅವರ ಸೃಜನ ಸಾಹಿತ್ಯ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಾಗೂ ನಾಟಕ ಪ್ರದರ್ಶನ ಸಮಾರಂಭದಲ್ಲಿ ಕಲಬುರ್ಗಿ ಅವರು ರಚಿಸಿದ ಕೆಟ್ಟಿತ್ತು ಕಲ್ಯಾಣ ಎಂಬ ನಾಟಕದ ಕುರಿತಾಗಿ ಮಾತನಾಡಿದರು.ಅವರದು ಚಲನಶೀಲವಾದ ಸಂಶೋಧನೆ. ಸುಮಾರು ೧೨ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕಾರ್ಯ ಶ್ಲಾಘನೀಯ ಎಂದರು.ಈ ವೇಳೆ ಡಾ.ಕಲಬುರ್ಗಿ ಅವರ ಕಾವ್ಯವಾದ ನೀರು ನೀರಡಿಸಿತ್ತು ಮತ್ತು ನೀರಾಗ ನಿಂತೀನಿ ನಿರಡಿಸಿ ಕಾವ್ಯದ ಕುರಿತು…

Read More

ಉದಯರಶ್ಮಿ ದಿನಪತ್ರಿಕೆ ನವದೆಹಲಿ: ಕುಮಾರಿ ಹರ್ಷಿತಾ ಕುಶಾಲಪ್ಪ ಅವರು ಭರತ ನಾಟ್ಯ ಶಾಸ್ತ್ರೀಯ ನೃತ್ಯದ ವಿದ್ವತ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.ಪ್ರಸ್ತುತ ಇವರು ರಾಷ್ಟ್ರದ ರಾಜಧಾನಿ ಕ್ಷೇತ್ರವಾದ ನೋಯ್ಡಾದ ಪ್ರತಿಷ್ಟಿತ ಶಾಲೆಯೊಂದರಲ್ಲಿ ನೃತ್ಯ ಗುರುಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ದೆಹಲಿಯಲ್ಲಿ‌ ನಡೆಯುವ ಅನೇಕ ಕಾರ್ಯಕ್ರಮಗಳಲ್ಲಿ ಇವರು ಪ್ರಸ್ತುತಿ ನೀಡಿ ಭೇಷ್‌ ಎನಿಸಿಕೊಂಡಿದ್ದಾರೆ.ಇಲ್ಲಿನ ಅನೇಕ ಕನ್ನಡಿಗರಿಗೆ ನೃತ್ಯ ಸಂಯೋಜನೆ ಮಾಡಿ ಕನ್ನಡಿಗರ ಮನೆಮಾತಾಗಿದ್ದಾರೆ.ವಿದ್ವಾನ ದೀಪಕ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ಪುತ್ತೂರಿನ ಶ್ರೀ ಮೂಕಾಂಬಿಕಾ ಸಾಂಸ್ಕೃತಿಕ ಅಕಾಡೆಮಿಯಿಂದ 2023-24ನೇ ಸಾಲಿನಲ್ಲಿ ನಡೆದ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ನಡೆಸಿದ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ.ಇವರು ತಮ್ಮ ಹತ್ತನೇ ತರಗತಿಯಿಂದಲೇ ಭರತ ನಾಟ್ಯದಲ್ಲಿ ಆಸಕ್ತಿ ಹೊಂದಿ, ಆ ದಿಸೆಯಲ್ಲಿ ಸತತ ಅಧ್ಯಯನದೊಂದಿಗೆ ಆಸಕ್ತಿಯುತವಾಗಿ ಭರತ ನಾಟ್ಯವನ್ನು ತಮ್ಮ ಉಸಿರಾಗಿಸಿಕೊಂಡು ಸತತ‌ ಪರಿಶ್ರಮದಿಂದ ವಿದ್ವತ್ ಪರೀಕ್ಷೆ ಪಾಸು ಮಾಡಿರುವ ಹರ್ಷಿತ ಕುಶಾಲಪ್ಪ ಅವರಭವ್ಯ ಭವಿತವ್ಯ ಉಜ್ವಲವಾಗಲೆಂದು ಸ್ವರಾಂಜಲಿ,ಗಣೇಶ ಮಿತ್ರ ಮಂಡಳಿ ಹಾಗೂ ಡೆಲ್ಲಿ ಫ್ರೆಂಡ್ಸ್ ಗೆಳೆಯರ ಬಳಗದ ಸದಸ್ಯರು ಶುಭ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ 2ನೇ ಪುಣ್ಯಸ್ಮರಣೆಯ ಗುರುನಮನ ಮಹೋತ್ಸವದ ಅಂಗವಾಗಿ ನಗರದ ಜ್ಞಾನಯೋಗಾಶ್ರಮದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯ ವತಿಯಿಂದ ಎರಡು ದಿನಗಳ ಕಾಲ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಚಿಕಿತ್ಸಾ ಶಿಬಿರ ಮತ್ತು ರಕ್ತದಾನ ಶಿಬಿರ ಗುರುವಾರ ಮತ್ತು ಶುಕ್ರವಾರ ನಡೆಯಿತು.ಈ‌ ಶಿಬಿರವನ್ನು ಸಸಿಗೆ ನೀರೆರೆಯುವ ಮೂಲಕ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರು ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ನಮ್ಮನ್ನು ಅಗಲಿ 2 ವರ್ಷಗಳಾದರೂ, ಅವರು ತೋರಿದ ಸನ್ಮಾರ್ಗ, ಜ್ಞಾನ ದಾಸೋಹಗಳು ಅಜರಾಮರವಾಗಿವೆ. ಯಾವಾಗಲೂ ಪ್ರಕೃತಿಯ ಆರಾಧಕರಾಗಿದ್ದರು. ನಾವು ಪ್ರಕೃತಿಯ ಜೊತೆ ಪ್ರೀತಿಯಿಂದಿದ್ದರೆ, ಸುಖಕರ ಜೀವನ ಸಾಗಿಸಬಹುದು ಎಂದು ತೋರಿಸಿ ಕೊಟ್ಟಿದ್ದರು. ಇಂದಿನ ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ಆರೋಗ್ಯಕರ ಜೀವನಶೈಲಿ ಪಾಲಿಸಿ, ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.ಪ್ರತಿ ವರ್ಷ ಗುರು ಪೂರ್ಣಿಮೆ ಮತ್ತು ಗುರುನಮನ ಮಹೋತ್ಸವದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಅಯುರ್ವೇದ ಮಹಾವಿದ್ಯಾಲಯದಲ್ಲಿ ಜನೇವರಿ 8 ರಿಂದ ಜನೇವರಿ 10ರ ವರೆಗೆ ಮೂರು ದಿನಗಳ ಕಾಲ ಆಮ್ಲಪಿತ್ತ(ಅಸಿಡಿಟಿ) ಅಂದರೆ ಸಾಮಾನ್ಯ ಲಕ್ಷಣಗಳಾದ ಎದೆ ಉರಿ, ಹುಳಿತೇಗು, ಅಜೀರ್ಣ, ಪಿತ್ತವಾಂತಿ, ತಲೆ ನೋವು, ಅರುಚಿ ಮೂಂತಾದ ಪಿತ್ತದ ತೊಂದರೆಗಳಿಗೆ ಸಂಬಂಧಿಸಿದ ರೋಗಗಳ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ನಡೆಯಲಿದೆ.ಈ ನಿಗದಿತ ದಿನಗಳಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯ ವರೆಗೆ ತಪಾಸಣೆ ಮತ್ತು ಚಿಕಿತ್ಸೆ ನಡೆಯಲಿದ್ದು, ಸಾರ್ವಜನಿಕರು ಈ ಉಚಿತ ಶಿಬಿರದ ಸದುಪಯೊಗ ಪಡೆದುಕೊಳ್ಳಬೇಕು ಎಂದು ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮತ್ತು ಪೂರ್ವ ನೋಂದಣಿಗಾಗಿ ಡಾ.ಕಿರಣ ಸಿ. ಎಂ, ಮೊಬೈಲ್ ನಂ. 8095808011 ಮತ್ತು 7204748422 ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

Read More