ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕೇಂದ್ರ ಸರ್ಕಾರದ ಸಮರ್ಥ ಜವಳಿ ಇಲಾಖೆಯಲ್ಲಿನ ಯೋಜನೆಯಾದ ಉಚಿತ ಹೋಲಿಗೆ ತರಬೇತಿ ಹಾಗೂ ಕೌಶಲ್ಯ ತರಬೇತಿಗೆ ಪಟ್ಟಣದ ವಿಜಯಪುರ ರಸ್ತೆಯ ಎನ್.ಎಸ್.ಹಿರೇಮಠ ಬಿಲ್ಡಿಂಗ್‌ನಲ್ಲಿರುವ ಓಜೋನ್ ಸಲ್ಯುಶನ್ ಕೇಂದ್ರದ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗುತ್ತಿದೆ.
೧೮-೪೦ರ ವಯೋಮಾನದ ಎಲ್ಲಾ ವರ್ಗದ ಯುವಕ ಯುವತಿಯರಿಗೆ ಯಾಂತ್ರೀಕೃತ ಹೊಲಿಗೆ ಯಂತ್ರ ತರಬೇತಿ, ವ್ಯಕ್ತಿತ್ವ ವಿಕಸನ ತರಬೇತಿ, ಹಾಗೂ ಇನ್ನಿತರ ಕೌಶಲ್ಯ ತರಬೇತಿ ಪ್ರಾರಂಭ ಮಾಡಲಾಗುತ್ತಿದೆ. ತರಬೇತಿ ಮುಗಿದ ನಂತರ ಪ್ರಮಾಣ ಪತ್ರ ನೀಡುವುದರ ಜೊತೆಗೆ ಉದ್ಯೋಗ ಅವಕಾಶ ಕಲ್ಪಿಸಲಾಗುವುದು. ತರಬೇತಿ ಅವಧಿಯಲ್ಲಿ ಪಠ್ಯಪುಸ್ತಕ ಸೇರಿದಂತೆ ಇನ್ನಿತರ ಹೋಲಿಗೆ ಸಾಮಗ್ರಿಗಳನ್ನು ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಆಧಾರ್ ಕಾರ್ಡ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ೪ಭಾವಚಿತ್ರದ ಜೊತೆಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ನೀಡಬೇಕು. ಕನಿಷ್ಠ ೭ನೇ ತರಗತಿ ಪಾಸಾಗಿರಬೇಕು. ಮೇಲೆ ತಿಳಿಸಿದ ಎಲ್ಲ ದಾಖಲಾತಿಗಳನ್ನು ದ್ವಿಪ್ರತಿಯಲ್ಲಿ ಖುದ್ದಾಗಿ ಕಾರ್ಯಾಲಯಕ್ಕೆ ಬಂದು ಅರ್ಜಿ ಸಲ್ಲಿಸಬೇಕು. ಮತ್ತು ಹೆಚ್ಚಿನ ಮಾಹಿತಿಗಾಗಿ ೯೪೭೨೯೭೪೧೬೦ ಸಂಖ್ಯೆಗೆ ಸಂಪರ್ಕಿಸಬೇಕು ಎಂದು ಸಂಸ್ಥೆಯ ಮುಖ್ಯಸ್ಥ ರಾಮ ಮೇತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
