ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕಾಂಗ್ರೇಸ್ ಪಕ್ಷವು ಅವೈಜ್ಞಾನಿಕ ನಿಲುವನ್ನು ಕೈಗೆತ್ತಿಕೊಂಡು ಚುನಾವಣೆ ಗೆಲ್ಲುವ ಭರದಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸಂಪೂರ್ಣ ಹದಗೆಡಿಸಿ ರಾಜ್ಯವನ್ನು ದಿವಾಳಿಯತ್ತ ದುಡಿದ್ದಾರೆ. ಮತ್ತೇ ಇದೀಗ ಏಕಾ ಏಕಿ ಶೇ.೧೫ರಷ್ಟು ಬಸ್ ದರವನ್ನು ಹೆಚ್ಚಿಸುವ ಮುಖಾಂತರ ಕಾಂಗ್ರೆಸ್ ಸರ್ಕಾರದ ಬಂಡವಾಳ ಬಯಲಿಗೆ ಬಿದ್ದಿದೆ. ಇಂತಹ ಗ್ಯಾರಂಟಿ ಯೋಜನೆಗಳು ಯಾರಿಗೆ ಬೇಕು ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ. ತೈಲದರ ಹೆಚ್ಚಳವಾಗದೇ ಬಸ್ ದರ ಹೆಚ್ಚಳ ಮಾಡಿರುವುದು ನೋಡಿದರೇ ಸರ್ಕಾರ ದಿವಾಳಿಯಾಗಿದೆ ಎಂಬುದು ಗೊತ್ತಾಗುತ್ತಿದೆ. ಈ ಬಸ ದರ್ ಹೆಚ್ಚಳವನ್ನು ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷ ತೀವ್ರವಾಗಿ ವಿರೋಧಿಸುತ್ತದೆ. ಮತ್ತು ಈ ಸರ್ಕಾರದ ಅವೈಜ್ಞಾನಿಕ ನಿಲುವನ್ನು ಜನರ ಮದ್ಯ ತಂದು ಜನರನ್ನು ರಾಜ್ಯಾದ್ಯಂತ ಜನಾಂದೋಲನ ಮಾಡಲಾಗುವುದು ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷ ರಾಜ್ಯ ಉಪಾಧ್ಯಕ್ಷ ಡಾ.ದಸ್ತಗೀರ ಮುಲ್ಲಾ ಎಚ್ಚರಿಕೆ ನೀಡಿದ್ದಾರೆ.

