ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಅಯುರ್ವೇದ ಮಹಾವಿದ್ಯಾಲಯದಲ್ಲಿ ಜನೇವರಿ 8 ರಿಂದ ಜನೇವರಿ 10ರ ವರೆಗೆ ಮೂರು ದಿನಗಳ ಕಾಲ ಆಮ್ಲಪಿತ್ತ(ಅಸಿಡಿಟಿ) ಅಂದರೆ ಸಾಮಾನ್ಯ ಲಕ್ಷಣಗಳಾದ ಎದೆ ಉರಿ, ಹುಳಿತೇಗು, ಅಜೀರ್ಣ, ಪಿತ್ತವಾಂತಿ, ತಲೆ ನೋವು, ಅರುಚಿ ಮೂಂತಾದ ಪಿತ್ತದ ತೊಂದರೆಗಳಿಗೆ ಸಂಬಂಧಿಸಿದ ರೋಗಗಳ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ನಡೆಯಲಿದೆ.
ಈ ನಿಗದಿತ ದಿನಗಳಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯ ವರೆಗೆ ತಪಾಸಣೆ ಮತ್ತು ಚಿಕಿತ್ಸೆ ನಡೆಯಲಿದ್ದು, ಸಾರ್ವಜನಿಕರು ಈ ಉಚಿತ ಶಿಬಿರದ ಸದುಪಯೊಗ ಪಡೆದುಕೊಳ್ಳಬೇಕು ಎಂದು ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮತ್ತು ಪೂರ್ವ ನೋಂದಣಿಗಾಗಿ ಡಾ.ಕಿರಣ ಸಿ. ಎಂ, ಮೊಬೈಲ್ ನಂ. 8095808011 ಮತ್ತು 7204748422 ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
