Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮಂಡ್ಯ: ಜೀವನಾಡಿ ಕನ್ನಡ ಪತ್ರಿಕೆಯ ಐದನೇ ವಾರ್ಷಿಕೋತ್ಸವ ಅಂಗವಾಗಿ ದಿನಾಂಕ: 13-09-2026ರ ಭಾನುವಾರದಂದು ಬೆಳಗ್ಗೆ 10ಗಂಟೆಗೆ ಮಂಡ್ಯದ ಸ್ಟೇಡಿಯಂ ಪಕ್ಕದಲ್ಲಿರುವ ಗಾಂಧಿ ಭವನದಲ್ಲಿ ಜೀವನಾಡಿ ಕನ್ನಡ ಸಾಹಿತ್ಯ ಸ್ಪರ್ಧೆ-2026ರ ಕಾರ್ಯಕ್ರಮದಲ್ಲಿ ಸಣ್ಣಕಥೆ, ಪ್ರಬಂಧ, ಕವಿತೆ, ಪ್ರಕಾರಗಳಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಗುವುದು, ಆಸಕ್ತರು ಈ ಕೆಳಕಂಡ ವಿಭಾಗಗಳಿಗೆ ಲೇಖನಗಳನ್ನು ಕಳಿಸಬಹುದೆಂದು ಜೀವನಾಡಿ ಪತ್ರಿಕೆ ಸಂಪಾದಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಆದರ್ಶ ಸೇವೆ, ಕರ್ತವ್ಯನಿಷ್ಠೆ, ಶಿಸ್ತು, ಬದ್ಧತೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ನೀಡಿರುವ ಅಮೂಲ್ಯ ಕೊಡುಗೆಯನ್ನು ಗೌರವಿಸಿ, ಸಿಂದಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೂವಿನಹಳ್ಳಿಯ ಶಿಕ್ಷಕ ಬಿ.ವಿ. ಹಿರೇಮಠ ಅವರಿಗೆ ‘ಸಿಂದಗಿ ಸಿರಿ ಆದರ್ಶ ಶಿಕ್ಷಕ ಪ್ರಶಸ್ತಿ-೨೦೨೫-೨೬’ ನೀಡಿ ಗೌರವಿಸಲಾಗಿದೆ.ಕನ್ನಡ ಸಾಹಿತ್ಯ ಗೆಳೆಯರ ಬಳಗ, ಸಿಂದಗಿ ವತಿಯಿಂದ ಶ್ರೀ ರಾಜಶೇಖರ ಕೂಚಬಾಳ ಇವರ ೫೭ನೇ ಹುಟ್ಟುಹಬ್ಬದ ಸಂಭ್ರಮ ಹಾಗೂ ಜನ್ಮದಿನದ ಅಂಗವಾಗಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಶಿಕ್ಷಣ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ಶ್ರೀ ಬಿ.ವಿ. ಹಿರೇಮಠ ಅವರ ಸೇವಾ ಯಾತ್ರೆಯು ಹೀಗೆಯೇ ನಿರಂತರವಾಗಿ ಸಾಗಲಿ ಎಂದು ಕನ್ನಡ ಸಾಹಿತ್ಯ ಗೆಳೆಯರ ಬಳಗದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾರೈಸಿ, ಶುಭ ಹಾರೈಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಿಜಯಪುರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು, ಸಿಂದಗಿ ಇವರ ಸಹಯೋಗದಲ್ಲಿ ಮಂಗಳವಾರ ಸಿಂದಗಿಯಲ್ಲಿ ನಡೆದ “ವಿಜಯಪುರ ಜಿಲ್ಲಾ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ”ದಲ್ಲಿಡಾ. ಸುರೇಖಾ ರಾಠೋಡ ಅವರಿಗೆ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗಿದೆ.ಸಾಹಿತ್ಯ ಕ್ಷೇತ್ರಕ್ಕೆ ಡಾ. ಸುರೇಖಾ ರಾಠೋಡ ಅವರು ನೀಡಿದ ಕೊಡುಗೆಯನ್ನು ಗುರುತಿಸಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ವತಿಯಿಂದ ಅವರಿಗೆ ಈ ಪ್ರಶಸ್ತಿ ಲಭಿಸಿದೆ.ಪ್ರಶಸ್ತಿಗೆ ಭಾಜನರಾದ ಡಾ. ಸುರೇಖಾ ರಾಠೋಡ ಅವರಿಗೆ ’ಉದಯರಶ್ಮಿ’ ಬಳಗ ಅಭಿನಂದನೆಗಳನ್ನು ಸಲ್ಲಿಸಿದೆ.
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಕಾಲುವೆ ಮತ್ತೀತರ ಉದ್ದೇಶಕ್ಕಾಗಿ ರೈತರಿಂದ ವಶಪಡಿಸಿಕೊಂಡ ಭೂಮಿಗೆ ನ್ಯಾಯಾಲಯ ನಿಗದಿಪಡಿಸಿದ ಹೆಚ್ಚುವರಿ ಪರಿಹಾರ ನೀಡದ ಕಾರಣ ಮಂಗಳವಾರ ಕೃಷ್ಣಾ ಭಾಗ್ಯ ಜಲ ನಿಗಮದ ಇಲ್ಲಿಯ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯನ್ನು ಜಪ್ತಿ ಮಾಡಲಾಯಿತು.ರೈತರಾದ ನಾನಾಗೌಡ ಪಾಟೀಲ ಅವರ 41,96,074 ರೂ, ದೇವೇಂದ್ರ ಬಸಣ್ಣ ತಳವಾರ ಅವರ 32,07,990 ರೂ, ಭೀಮನಗೌಡ ಬಸನಗೌಡ ಟಕ್ಕಳಕಿ ಅವರಿಗೆ ,65,39,367 ರೂ ಪರಿಹಾರವನ್ನು ಇಂಡಿ ನಗರದ ಯುಕೆಪಿಯ ವಿಶೇಷ ಭೂಸ್ವಾಧೀನಾಧಿಕಾರಿಗಳು ನೀಡಬೇಕಿತ್ತು. ಪರಿಹಾರ ನೀಡಲು ವಿಫಲರಾದ ಕಾರಣ ವಿಜಯಪುರದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶದಂತೆ ಮಂಗಳವಾರ ಒಂದು ಕಂಪ್ಯೂಟರ್ ನ್ನು ಜಪ್ತಿ ಮಾಡಲಾಯಿತು.ವಕೀಲರಾದ ಡಿ.ಜಿ. ಬಿರಾದಾರ, ಕೆ.ಎಚ್. ನಿಡೋಣಿ, ಕೆ.ಪಿ. ಬೂದಿಹಾಳ, ಐ.ಜಿ. ವಾದಿಶೆಟ್ಟಿ ರೈತರ ಪರ ವಾದ ಮಂಡಿಸಿದ್ದರು.
ವಿಜಯಪುರದಲ್ಲಿ ನಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಆನಂದ್ ಕೆ. ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೋಷರಹಿತ ಹಾಗೂ ಪಾರದರ್ಶಕ ಮತದಾರರ ಪಟ್ಟಿ ಸಿದ್ಧಪಡಿಸುವಲ್ಲಿ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ಆನಂದ್ ಕೆ. ಅವರು ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಉತ್ತಮವಾಗಿ ನಡೆಯುತ್ತಿದೆ. ಯಾವುದೇ ಗೊಂದಲಗಳಿಲ್ಲದೆ ನಿಖರವಾದ ಮತದಾರರ ಪಟ್ಟಿ ತಯಾರಿಸಲು ರಾಜಕೀಯ ಪಕ್ಷಗಳ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ದೋಷ ಸರಿಪಡಿಸುವ ನಿಟ್ಟಿನಲ್ಲಿ ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದ್ದು, ಬಿ.ಎಲ್.ಓ.ಗಳು ಮನೆ ಮನೆಗೆ ಭೇಟಿ ನೀಡಿ ನಿಖರ ಮಾಹಿತಿ ಸಂಗ್ರಹಿಸುತ್ತಿದ್ದು, ರಾಜಕೀಯಕ ಪಕ್ಷಗಳ ಏಜೆಂಟರು ಸೂಕ್ತ ಸಹಕಾರ ನೀಡಬೇಕು. ಎಸ್.ಐ.ಆರ್…
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಆಲಮಟ್ಟಿಯ ವಿವಿಧ ಉದ್ಯಾನಗಳಿಗೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತೃತ್ವದ ತಂಡ ಮಂಗಳವಾರ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಅರ್ಪಿಸಿತು.ಮನವಿ ಸಲ್ಲಿಸಿ ಮಾತನಾಡಿದ ಚಂದ್ರಶೇಖರ ನುಗ್ಗಲಿ, “ಆಲಮಟ್ಟಿಯ ಉದ್ಯಾನ ವೀಕ್ಷಿಸಲು ೬ ವರ್ಷ ಮೇಲ್ಪಟ್ಟ ಎಲ್ಲರಿಗೂ ಪೂರ್ತಿ ದರ ವಿಧಿಸಲಾಗುತ್ತಿದೆ. ಪ್ರವೇಶಕ್ಕೆ ಪ್ರತಿಯೊಬ್ಬರೂ ೨೫೦ ರೂ. ಪಾವತಿಸಬೇಕಾಗುತ್ತದೆ. ರಾಜ್ಯದ ಮೂಲೆ-ಮೂಲೆಗಳಿಂದ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಾನಕ್ಕೆ ಬರುತ್ತಾರೆ. ಆದ್ದರಿಂದ ಸರ್ಕಾರಿ ಪ್ರಾಥಮಿಕ ಶಾಲೆಯ ಎಲ್.ಕೆ.ಜಿಯಿಂದ ೮ನೇ ತರಗತಿವರೆಗಿನ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.ಯಾತ್ರಿ ನಿವಾಸ ನಿರ್ಮಾಣ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆಯೂ ಅವರು ಮನವಿಯಲ್ಲಿ ಕೋರಿದರು.ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ನಿಡಗುಂದಿ ತಾಲ್ಲೂಕು ಘಟಕದ ಅಧ್ಯಕ್ಷ ಸಲೀಂ ದಡೆದ, ಎಂ.ಎಸ್. ಯಳಮೇಲಿ, ಮುತ್ತು ಹೆಬ್ಬಾಳ, ವಿ.ಕೆ. ಮಸೂತಿ, ಪ್ರಭಾಕರ ಹೆಬ್ಬಾಳ,…
೮೦ ಸಾವಿರ ಕೋಟಿ ರೂ. ಅಗತ್ಯ | ೧.೩೩ ಲಕ್ಷ ಎಕರೆ ಭೂಸ್ವಾಧೀನ | ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಆಲಮಟ್ಟಿ ಜಲಾಶಯದ ಎತ್ತರವನ್ನು ೫೧೯.೬೦ ಮೀಟರ್‌ನಿಂದ ೫೨೪.೨೫೬ ಮೀಟರ್‌ಗೆ ಹೆಚ್ಚಿಸಲು ಭೂಸ್ವಾಧೀನ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸುಮಾರು ₹೮೦ ಸಾವಿರ ಕೋಟಿ ಅಗತ್ಯವಿದೆ. ಇದಕ್ಕಾಗಿ ೧.೩೩ ಲಕ್ಷ ಎಕರೆ ಜಮೀನು ವಶಪಡಿಸಿಕೊಳ್ಳಬೇಕಿದೆ. ಮುಂದಿನ ಮೂರು ವರ್ಷಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.ಜಲಸಂಪನ್ಮೂಲ ಸಚಿವರಾದ ನಂತರ ಮಂಗಳವಾರ ಪ್ರಥಮ ಬಾರಿಗೆ ಆಲಮಟ್ಟಿಗೆ ಭೇಟಿ ನೀಡಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.”ಈ ವರ್ಷ ಸರ್ಕಾರ ₹೩,೦೦೦ ಕೋಟಿ ಅನುದಾನ ಒದಗಿಸಿದೆ. ಇದು ಸಾಂಕೇತಿಕ ಅನುದಾನವಾಗಿದೆ. ಪೂರಕ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ” ಎಂದರು.ಕೃಷ್ಣಾ ನೀರು ವಿವಾದಕೃಷಾ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಮಹಾರಾಷ್ಟ್ರ ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳ ನಡುವೆ ಇರುವ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಲು ರಾಜ್ಯ ಸರ್ಕಾರ…
ಸಿಂದಗಿಯಲ್ಲಿ ೨೧ನೇ ಕನ್ನಡ ಸಾಹಿತ್ಯ ಜಿಲ್ಲಾ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ | ಸರ್ವಾಧ್ಯಕ್ಷರ ಮೆರವಣಿಗೆ | ಶಾಸಕ ಅಶೋಕ ಮನಗೂಳಿ ಉದ್ಘಾಟನೆ | ಸರ್ವಾಧ್ಯಕ್ಷ ಹ.ಮ.ಪೂಜಾರ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಯುವ ಪಿಳೀಗೆ ಸಾಹಿತ್ಯ ಕ್ಷೇತ್ರದಲ್ಲಿ ಮುಂದೆ ಬರಬೇಕು. ಇಡೀ ನಾಡಿಗೆ ಕೊಟ್ಟಂತ ಹಿರಿಯರ ಸಂದೇಶವನ್ನು ಈ ಸಾಹಿತ್ಯ ಸಮ್ಮೇಳನದ ಮೂಲಕ ಜನರಿಗೆ ತಲುಪಿಸಬೇಕು ಎನ್ನುವ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ನಗರದ ಎಚ್.ಜಿ.ಪ ಪೂ ಕಾಲೇಜು ಆವರಣದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಆಧುನಿಕ ಭಗಿರಥ ದಿ. ಎಂ.ಸಿ.ಮನಗೂಳಿ ವೇದಿಕೆಯಲ್ಲಿ ಹಮ್ಮಿಕೊಂಡ ಜಿಲ್ಲಾ ೨೧ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕನ್ನಡ ನಾಡು-ನುಡಿ, ನೆಲ, ಜಲ, ಭಾಷೆ ಇವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮ್ಮೇಳನಗಳು ಮಹತ್ವದ ಪಾತ್ರ ಹಾಗೂ ಸಾಹಿತ್ಯ ಪ್ರೇಮಿಗಳಿಗೆ ಪ್ರೇರಣೆ ನೀಡಬೇಕೆನ್ನುವ ಉದ್ದೇಶದಿಂದ ಸಾಹಿತ್ಯ ಸಮ್ಮೇಳನಗಳು ಹಮ್ಮಿಕೊಳ್ಳಲಾಗುತ್ತಿದೆ. ಕನ್ನಡ ಸಾಹಿತ್ಯ ಸಮ್ಮೇಳನ…
ಇಂದು ಮತ್ತು ನಾಳೆ (ಜುಲೈ ೨೧ – ೨೨) ಸಿಂದಗಿಯಲ್ಲಿ ನಡೆಯುವ ೨೧ ನೇ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಮಕ್ಕಳ ಸಾಹಿತಿ ಹ.ಮ.ಪೂಜಾರ ಕುರಿತ ವಿಶೇಷ ಲೇಖನ ಲೇಖನ- ಎ.ಆರ್. ಹೆಗ್ಗನದೊಡ್ಡಿಅಧ್ಯಕ್ಷರು, ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮವಿಜಯಪುರ ಉದಯರಶ್ಮಿ ದಿನಪತ್ರಿಕೆ “ಬನ್ನಿ ನಮ್ಮ ಮಕ್ಕಳಿಗೆ ಜೀವಿಸಿ ” ಎಂಬ ಶಿಕ್ಷಣ ತಜ್ಞ ಪ್ರೊಬೆಲರ ಮಾತಿನಂತೆ ತಮ್ಮ ಇಡೀ ಜೀವನವನ್ನು ಮಕ್ಕಳ ಸೇವೆಗಾಗಿ ಮುಡುಪಾಗಿಟ್ಟ ಸಿಂದಗಿಯ ಚಾಚಾ ನೆಹರು ಎಂದೇ ಖ್ಯಾತರಾದ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಮಕ್ಕಳ ಸಾಹಿತಿ ಹ.ಮ. ಪೂಜಾರ ಗುರುಗಳು ವೃತ್ತಿಯಿಂದ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಆದರ್ಶ ಶಿಕ್ಷಕರಾಗಿ ಪ್ರವೃತ್ತಿಯಿಂದ ಮಕ್ಕಳ ಸಾಹಿತಿಗಳಾಗಿ ಅನುಕರಣೀಯ, ಆದರ್ಶ ಮತ್ತು ಮೌಲ್ಯಯುತ ಬದುಕನ್ನು ಬದುಕಿದವರು. ‘ಮಕ್ಕಳ ಸಾಹಿತಿಗಳ ತೊಟ್ಟಿಲು’ ಎಂದು ಕರೆಸಿಕೊಳ್ಳುವ ವಿಜಯಪುರ ಜಿಲ್ಲೆಯ ಮಕ್ಕಳ ಸಾಹಿತಿಗಳಲ್ಲಿ ಎದ್ದು ಕಾಣುವಂತ ಆಕರ್ಷಕ ವ್ಯಕ್ತಿತ್ವ ಹ. ಮ. ಪೂಜಾರ ಗುರುಗಳದು. ಇದೇ ಜುಲೈ 21 ಮತ್ತು 22 ರಂದು…
