ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸ್ಥಳೀಯ ನಗರದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಮ್.ಮನಗೂಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶಿಕ್ಷಣಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಎಸ್.ಕೆ.ಹೂಗಾರ ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಗುಲಬರ್ಗಾ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಡಾ.ಹೂವಿನಭಾವಿ ಬಿ.ಎಲ್ ಇವರ ಮಾರ್ಗದರ್ಶನದಲ್ಲಿ “ಎ ಸ್ಟಡಿ ಆನ್ ಇಂಪ್ಯಾಕ್ಟ್ ಆಫ್ ಆಯ್.ಸಿ.ಟಿ ಇನ್ ಎಂಫಾವರಮೆoಟ್ ಆಫ್ ಬಿ.ಇಡಿ ಕೋರ್ಸ ಇನ್ ಟಿಚರ್ ಎಜುಕೇಶನ್ ಇನ್ಸಿಟ್ಯೂಶನ್ಸ್” ಎಂಬ ವಿಷಯದ ಮೇಲೆ ಮಂಡಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ನೀಡಿದೆ.
ಡಾಕ್ಟರೇಟ್ ಪದವಿಗೆ ಭಾಜನರಾದ ಸಂಸ್ಥೆಯ ಚೇರಮನ್ನರು ಹಾಗೂ ಶಾಸಕ ಅಶೋಕ ಮನಗೂಳಿ, ಡಾ.ಅರವಿಂದ ಮನಗೂಳಿ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಭೋದಕ ಭೋದಕೇತರ ಸಿಬ್ಬಂದಿಗಳು ಶುಭಕೋರಿದ್ದಾರೆ.

