Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ೩ನೇ ತ್ರೈಮಾಸಿಕದ ದಿಶಾ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಸ್ತೆಗಳಲ್ಲಿ ಅವಶ್ಯವಿರುವ ಕಡೆ ಇಲಾಖೆ ಮಾನದಂಡ ಅನುಸಾರವಾಗಿ ಹಂಪ್ಸ್ ನಿರ್ಮಿಸಿ ಕ್ರಮ ವಹಿಸುವಂತೆ ಸಂಸದ ರಮೇಶ ಜಿಗಜಿಣಗಿ ಸೂಚಿಸಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜ.೧೦ ಇಂದು ಆಯೋಜಿಸಿದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ೩ನೇ ತ್ರೈಮಾಸಿಕದ ದಿಶಾ ಸಮಿತಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗ್ರಾಮೀಣ, ರಾಜ್ಯ ರಸ್ತೆಗಳಲ್ಲಿ ಅಗತ್ಯವಿರುವ ಕಡೆ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಶುದ್ಧ ನೀರಿನ ಘಟಕಗಳನ್ನು ದುರಸ್ಥಿಗೊಳಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡುವಂತೆ ಹಾಗೂ ನಾಗಠಾಣ ಮತಕ್ಷೇತ್ರದ ಕೇಲವು ವಾರ್ಡ್ಗಳಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಅಧಿಕಾರಿಗಳಿಗೆ ತಿಳಿಸಿದರು.ಜುಮನಾಳ ರೈಲ್ವೆ ಮೇಲ್ಸೆತುವೆ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಸುಮಾರು ೬೫೨ ಗ್ರಾಮಗಳಲ್ಲಿ ಜೇ ಜೇ ಎಂ. ಕಾಮಗಾರಿ ಅನುಷ್ಠಾನ ಗೊಳಿಸಲಾಗಿದೆ ಎಲ್ಲ ಕಾಮಗಾರಿಗಳನ್ನು ಉತ್ತಮ ರೀತಿಯಿಂದ ನಿರ್ಮಾಣ ಮಾಡಿ ವಾರದ ೨೪ ಗಂಟೆ ನೀರು ಸರಬರಾಜು ಗ್ರಾಮ ಎಂದು ಘೋಷಿಸಲು ಆಯಾ ಗ್ರಾಮದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ವಿಜಯಪುರ ಜಿಲ್ಲೆಯ ಸಾರವಾಡ ಗ್ರಾಮದ ಈಶ್ವರ ದೇವಾಲಯದಲ್ಲು ಹಮ್ಮಿಕೊಂಡ ಸಾರವಾಡ ಗ್ರಾಮವು ೨೪ ಘಿ ೭ ನೀರು ಸರಬರಾಜು ಗ್ರಾಮ ಘೋಷಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಿತವಾಗಿ ನೀರು ಬಳಸಿ ೨೪ ಘಿ ೭ ನೀರು ಸರಬರಾಜು ಗ್ರಾಮ ಎಂಬುದನ್ನು ನಿರಂತರವಾಗಿ ನಡೆಸಿಕೊಂಡು ಹೋಗುವಂತೆ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಅವರು ಸೂಚಿಸಿದರು.ಕಾರ್ಯಪಾಲಕ ಬಸವರಾಜ ಕುಂಬಾರ ಮಾತನಾಡಿ ವಾರದ ೨೪ ಗಂಟೆ ನೀರು ಸರಬರಾಜು ಯೋಜನೆಯಡಿ ಪ್ರತಿ ಮನೆಗೆ ಮೀಟರ್ ಒದಗಿಸಲಾಗಿದೆ, ಪ್ರತಿ ದಿನ ಪ್ರತಿ ವ್ಯಕ್ತಿಗೆ ೫೫ಲೀಟರ್ ನೀರನ್ನು ಶುದ್ಧೀಕರಿಸಿ ಸ್ವಚ್ಚವಾದ ನೀರು ಪೂರೈಸಲಾಗುವುದು ಎಂದರು.ಕಾರ್ಯಾಚರಣೆ ಮತ್ತು ನಿರ್ವಹಣೆಗೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಘಟಕದ ಐದು ನ್ಯಾಯಾಲಯಗಳ ಬಳಕೆಗಾಗಿ ಫೋಟೊಕಾಪಿಯರ್ ಸೇವೆಗಳ ಹೊರಗುತ್ತಿಗೆಗಾಗಿ ಟೆಂಡರ್ ಆಹ್ವಾನಿಸಲಾಗಿದೆ. ಆಸಕ್ತ ಬಿಡ್ಡರಗಳು ಫೆಬ್ರವರಿ ೨೦೨೫ರ ಸಂಜೆ ೫ರ ಒಳಗಾಗಿ ತಮ್ಮ ಅರ್ಜಿಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿ ವಿಳಾಸಕ್ಕೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ https://vijayapura.dcourts.gov.in/notice-category/tender/ ಸಂಪರ್ಕಿಸಬಹುದು ಎಂದು ಜಿಲ್ಲಾ ನ್ಯಾಯಾಲಯ ಮುಖ್ಯ ಆಡಳಿತಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ೨೨ನೇ ಅವಧಿಗೆ ಮಹಾಪೌರರ ಹಾಗೂ ಉಪ ಮಹಾಪೌರರ ಸ್ಥಾನಗಳಿಗೆ ನಡೆಯುವ ಚುನಾವಣೆಯನ್ನು ಜ.೨೭ರಂದು ನಿಗದಿಪಡಿಸಲಾಗಿದೆ. ಅಂದು ಬೆಳಿಗ್ಗೆ ೯ ಗಂಟೆಯಿಂದ ೧೧ಗಂಟೆ ವರೆಗೆ ನಾಮಪತ್ರ ಸ್ವೀಕರಿಸಲಾಗುವುದು. ಮಧ್ಯಾಹ್ನ ೧ಗಂಟೆ ಯಿಂದ ಚುನಾವಣೆ ನಡೆದು ಅಂದೇ ಪಲಿತಾಂಶ ಘೋಷಣೆ ಮಾಡಲಾಗುವುದು ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಸಂಸ್ಥೆಯು ನಗರದ ಸಿದ್ದೇಶವರ ಸಂಸ್ಥೆಯ ಶಿವಾನುಭವ ಮಂಟಪ, ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಜ.೧೧ ರಿಂದ ೨೦ ರವರೆಗೆ ಸಾಬೂನು ಮೇಳ ಎಂಬ ವಿಭಿನ್ನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ ಎಂದು ಕೆ.ಎಸ್.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಶಾಂತ ಪಿ.ಕೆ.ಎಮ್ ಹೇಳಿದರು.ಶುಕ್ರವಾರದಂದು ನಗರದ ಖಾಸಗಿ ಹೊಟೇಲ್ ಒಂದರಲ್ಲಿ, ಸೋಪ್ ಮೇಳ ಆಯೋಜನೆ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸ್ಥೆಯು ರಾಜ್ಯದ ಪ್ರಮುಖ ನಗರಗಳಲ್ಲಿ ಸೋಪ್ ಮೇಳ ಹಮ್ಮಿಕೊಳ್ಳುತ್ತಿದ್ದು, ಈ ಬಾರಿ ವಿಜಯಪುರದಲ್ಲಿ ಸೋಪ್ ಮೇಳ ಆಯೋಜನೆ ಮಾಡಲಾಗಿದೆ. ಮೇಳವು ಜ.೨೦ ರವರೆಗೆ ಪ್ರತಿ ದಿನ ಬೆಳಿಗ್ಗೆ ೯.೩೦ ಗಂಟೆಯಿಂದ ರಾತ್ರಿ ೯.೩೦ ರವರೆಗೆ ನಡೆಯಲಿದೆ ಎಂದರು.ಸಾಬೂನು ಮೇಳದಲ್ಲಿ ಮೈಸೂರು ಅರಮನೆಯ ದರ್ಬಾರ್ ಹಾಲ್ ಸೆಟ್ ವಿಶೇಷ ಆಕರ್ಷಣೆಯನ್ನಾಗಿ ಮಾಡಲಾಗಿದ್ದು, ಸಂಸ್ಥೆ ಉತ್ಪಾದಿಸುತ್ತಿರುವ ೪೮ ಕ್ಕೂ ಹೆಚ್ಚು ಉತ್ಕುರ್ಷ ದರ್ಜೆಯ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಾಡಲಾಗುವುದು ಎಂದು ಹೇಳಿದರು.ಈ ಮೇಳದಲ್ಲಿ ಗ್ರಾಹಕರು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರು ನಾಳೆ ದಿ.11 ಶನಿವಾರ ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ.ವಿಜಯಪುರ ನಗರದಲ್ಲಿ ದಿ.11 ಶನಿವಾರ ಬೆ.10.30ಗಂ. ಶಿವಾನುಭವ ಮಂಟಪದಲ್ಲಿ ಕೆ.ಎಸ್.ಡಿ.ಎಲ್. ಸಾಬೂನು ಮೇಳ ಉದ್ಘಾಟಿಸುವರು. ಬೆ.11ಗಂ. ಹಳೆ ತಹಶೀಲ್ದಾರ ಕಚೇರಿಯಲ್ಲಿ ತಿಕೋಟಾ ಮತ್ತು ಬಬಲೇಶ್ವರ ತಾಲೂಕಿನ ಭೂಸುರಕ್ಷಾ (ಭೂದಾಖಲೆಗಳ ಗಣಕೀಕರಣ) ಯೋಜನೆಗೆ ಚಾಲನೆ ನೀಡಲಿದ್ದಾರೆ. ಮ.12ಗಂ. ಹಿಟ್ನಳ್ಳಿ ಫಾರ್ಮ್ ನಲ್ಲಿ ಕೃಷಿ ಮೇಳ ಉದ್ಘಾಟಿಸಲಿದ್ದಾರೆ.ಸಂಜೆ 6ಗಂ. ಬೆಳಗಾವಿ ಜಿಲ್ಲೆಯ ಅಥಣಿಯ ಮೊಟಗಿ ಮಠದಲ್ಲಿ ಶ್ರೀ ಚನ್ನಬಸವೇಶ್ವರ ಯುವಕ ಸಂಘದ ಸುವರ್ಣಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾ8.00ಗಂ. ಅಥಣಿಯಿಂದ ಹೊರಟು ಬೆಳಗಾವಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.ದಿ. 12 ರವಿವಾರರಂದು ಬೆ.8.30ಗಂ. ಬೆಳಗಾವಿ ವಿಮಾನ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಚಿಕ್ಕರೂಗಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಹಿನ್ನಲೆ ಬಿ ಡಿ ಸಿ ಸಿ ಬ್ಯಾಂಕ ಅಧ್ಯಕ್ಷರು ಚಿಕ್ಕರೂಗಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಹಿನ್ನಲೆ ಬಿ ಡಿ ಸಿ ಸಿ ಬ್ಯಾಂಕ ಅಧ್ಯಕ್ಷರು ಹಾಗೂ ಸಚಿವರಾದ ಶಿವಾನಂದ ಪಾಟೀಲ ಅವರನ್ನು ಬೇಟಿ ಮಾಡಿ ಸತ್ಕರಿಸಲಾಯಿತುಸಂಘದ ಅಧ್ಯಕ್ಷರಾದ ನಾಗಣ್ಣ ಮುಳಜಿ, ಉಪಾಧ್ಯಕ್ಷರಾದ, ಪಿಡ್ಡಪ್ಪ ಗಣಜಲಿ, ಮಾಜಿ ಅಧ್ಯಕ್ಷ ಭಿಮರಾಯಗೌಡ ಬಿರಾದಾರ, ಜವಾಹರ್ ದೇಶಪಾಂಡೆ, ಸೋಮನಗೌಡ ಪಾಟೀಲ ಕಡ್ಲೇವಾಡ, ನ್ಯಾಯವಾದಿ ಶ್ರೀಶೈಲ ಮುಳಜಿ, ಸಂಘದ ಕಾರ್ಯನಿರ್ವಾಹಕ ಅಧಿಕಾರಿಯಾದ ಎಸ್.ಎಂ.ಆನಂದಿ, ಚಂದ್ರಕಾಂತ ಬಿರಾದಾರ, ಲಕ್ಷ್ಮಣ ತಳಕೇರಿ, ದಾದಾ ಸಿಂದಗಿ, ಶಂಕರಗೌಡ ಪಾಟೀಲ ಇದ್ದರು
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಚಿಕ್ಕರೂಗಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಜರುಗಿತು ಅಧ್ಯಕ್ಷ ಸ್ಥಾನಕ್ಕೆ ನಾಗಣ್ಣ ಮುಳಜಿ ಉಪಾಧ್ಯಕ್ಷ ಸ್ಥಾನಕ್ಕೆ ಪಿಡ್ಡಪ್ಪ ಗಣಜಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ನಂತರ ಗ್ರಾಮದ ಹಿರಿಯರಾದ ಎ.ಬಿ.ಕೊಂಡಗೂಳಿ ಯವರು ಮಾತನಾಡಿ, ನಮ್ಮ ಸಂಘವು ಹಿಂದೆ ಎರಡುಸಾವಿರದ ಶೇರ್ ನಿಂದ ಪ್ರಾರಂಭ ಸಂಸ್ಥೆ ಇಂದಿನ ಇಪ್ಪತ್ತು ಕೋಟಿಗಿಂತ ಹೆಚ್ಚು ವ್ಯವಹಾರ ಹೊಂದಿ ಹೆಮ್ಮರವಾಗಿ ಬೆಳೆದು ನಿಂತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಹಿಂದೆ ಆಡಳಿತ ವರ್ಗ ಮಾಡಿದ ಪರಿಶ್ರಮವೇ ಇದಕ್ಕೆ ಕಾರಣ. ಮುಂದೆ ಕೂಡಾ ಹೊಸ ಆಡಳಿತ ಮಂಡಳಿಯು ಸಂಘದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟು ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ತಾವುಗಳು ಕೆಲಸ ಮಾಡಬೇಕು ಎಂದು ಹೇಳಿದರು.ಸಂಘದ ಮಾಜಿ ಅಧ್ಯಕ್ಷ ಜವಾಹರ್ ದೇಶಪಾಂಡೆ ಮಾತನಾಡಿ, ನಮ್ಮ ಸಂಘವು ಮೊದಲಿನಿಂದಲೂ ರೈತರ ಹಿತದೃಷ್ಟಿಯಿಂದ ನಾವು ಕೆಲಸ ಮಾಡುತ್ತ ಬಂದಿದ್ದು ಮುಂದೆ ಕೂಡಾ ನಮ್ಮ ಆಡಳಿತ ಮಂಡಳಿಯು ಸಂಘದ ಅಭಿವೃದ್ಧಿಯತ್ತ ಸಾಗಲು ಕೆಲಸ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಲಿಂಗ ಸಮಾನತೆಯನ್ನು ಸಾಧಿಸಲು ಶಿಕ್ಷಣವು ಮೂಲಭೂತ ಸಾಧನವಾಗಿದೆ. ಐತಿಹಾಸಿಕವಾಗಿ, ಮಹಿಳೆಯರು ಸಾಮಾಜಿಕ ನಿಯಮಗಳು, ಆರ್ಥಿಕ ಅಡೆತಡೆಗಳು ಮತ್ತು ಸಾಂಸ್ಕೃತಿಕ ಸಂಪ್ರದಾಯಗಳಿಂದಾಗಿ ಶಿಕ್ಷಣದ ಪ್ರವೇಶದ ವಿಷಯದಲ್ಲಿ ಅನಾನುಕೂಲವಾಗಿದೆ. ಆದಾಗ್ಯೂ, ಮಹಿಳೆಯರು ಶಿಕ್ಷಣಕ್ಕೆ ಪ್ರವೇಶವನ್ನು ಪಡೆದಾಗ, ಅದು ಈ ಸಾಮಾಜಿಕ ರಚನೆಗಳು ಮತ್ತು ನಿಯಮಗಳಿಗೆ ಸವಾಲು ಹಾಕುತ್ತದೆ. ಲಿಂಗ ಆಧಾರಿತ ಹಿಂಸಾಚಾರ, ತಾರತಮ್ಯ ಮತ್ತು ಇತರ ರೀತಿಯ ದಬ್ಬಾಳಿಕೆಯನ್ನು ಪ್ರಶ್ನಿಸಲು ಮಹಿಳೆಯರು ಸಜ್ಜುಗೊಳ್ಳುತ್ತಾರೆ ಎಂದು ನವದೆಹಲಿಯ ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆಯ ಕುಲಪತಿ ಪ್ರೊ.ಶಶಿಕಲಾ ವಂಜಾರಿ ಅಭಿಪ್ರಾಯಪಟ್ಟರು.ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ನಡೆದ ೧೬ನೆಯ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಮಹಿಳೆಯರು ಶಿಕ್ಷಣ ಪಡೆದಾಗ, ಅವರು ಉತ್ತಮ ಸಂಬಳದ ಉದ್ಯೋಗಗಳನ್ನು ಪಡೆಯುವ ಸಾಧ್ಯತೆಯಿದೆ, ಇದು ಅವರಿಗೆ ಮತ್ತು ಅವರ ಕುಟುಂಬಗಳಿಗೆ ಸುಧಾರಿತ ಆರ್ಥಿಕ ಸ್ಥಿರತೆಗೆ ಕಾರಣವಾಗುತ್ತದೆ. ಅಭಿವೃದ್ಧಿಶೀಲ ದೇಶಗಳಲ್ಲಿ ಇದು ವಿಶೇಷವಾಗಿ ಮುಖ್ಯವಾಗಿದೆ, ಅಲ್ಲಿ ಮಹಿಳೆಯರು ಹೆಚ್ಚಾಗಿ ಆರ್ಥಿಕ ಭಾಗವಹಿಸುವಿಕೆಗೆ ಗಮನಾರ್ಹ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ನಡೆದ ೧೬ನೇ ಘಟಿಕೋತ್ಸವದಲ್ಲಿ ಸ್ನಾತ್ತಕೋತ್ತರ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿನಿಯಾದ ತೇಜಶ್ವಿನಿ ಸಚೇಂದ್ರ ಲಂಬು ಅವರು ಪ್ರೋ. ಶಾಂತಾದೇವಿ ಟಿ. ಅವರ ಮಾರ್ಗದರ್ಶನದಲ್ಲಿ ಸಲ್ಲಿಸಿದ “ಇನ್ಫರ್ಮೇಷನ್ ಲಿಟರೆಸಿ ಸ್ಕಿಲ್ಸ್ ಅಮಂಗ್ ಡಿಸೇಬಲ್ಡ್ ಪೀಪಲ್: ಎ ಸ್ಟಡಿ ಆಫ್ ವಿಜಯಪುರ ಡಿಸ್ಟ್ರಿಕ್ಟ್” ಕುರಿತು ಸಲ್ಲಿಸಿದ ಮಹಾ ಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಲಾಗಿದೆ.ಇವರಿಗೆ ಕುಲಪತಿ ಪ್ರೋ. ಬಿ.ಕೆ. ತುಳಸಿಮಾಲಾ, ಕುಲಸಚಿವ ಪ್ರೋ. ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೋ.ಎಚ್.ಎಂ. ಚಂದ್ರಶೇಖರ ಅವರು ಅಭಿನಂದಿಸಿದ್ದಾರೆ.
