ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಚಿಕ್ಕರೂಗಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಜರುಗಿತು ಅಧ್ಯಕ್ಷ ಸ್ಥಾನಕ್ಕೆ ನಾಗಣ್ಣ ಮುಳಜಿ ಉಪಾಧ್ಯಕ್ಷ ಸ್ಥಾನಕ್ಕೆ ಪಿಡ್ಡಪ್ಪ ಗಣಜಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಂತರ ಗ್ರಾಮದ ಹಿರಿಯರಾದ ಎ.ಬಿ.ಕೊಂಡಗೂಳಿ ಯವರು ಮಾತನಾಡಿ, ನಮ್ಮ ಸಂಘವು ಹಿಂದೆ ಎರಡುಸಾವಿರದ ಶೇರ್ ನಿಂದ ಪ್ರಾರಂಭ ಸಂಸ್ಥೆ ಇಂದಿನ ಇಪ್ಪತ್ತು ಕೋಟಿಗಿಂತ ಹೆಚ್ಚು ವ್ಯವಹಾರ ಹೊಂದಿ ಹೆಮ್ಮರವಾಗಿ ಬೆಳೆದು ನಿಂತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಹಿಂದೆ ಆಡಳಿತ ವರ್ಗ ಮಾಡಿದ ಪರಿಶ್ರಮವೇ ಇದಕ್ಕೆ ಕಾರಣ. ಮುಂದೆ ಕೂಡಾ ಹೊಸ ಆಡಳಿತ ಮಂಡಳಿಯು ಸಂಘದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟು ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ತಾವುಗಳು ಕೆಲಸ ಮಾಡಬೇಕು ಎಂದು ಹೇಳಿದರು.
ಸಂಘದ ಮಾಜಿ ಅಧ್ಯಕ್ಷ ಜವಾಹರ್ ದೇಶಪಾಂಡೆ ಮಾತನಾಡಿ, ನಮ್ಮ ಸಂಘವು ಮೊದಲಿನಿಂದಲೂ ರೈತರ ಹಿತದೃಷ್ಟಿಯಿಂದ ನಾವು ಕೆಲಸ ಮಾಡುತ್ತ ಬಂದಿದ್ದು ಮುಂದೆ ಕೂಡಾ ನಮ್ಮ ಆಡಳಿತ ಮಂಡಳಿಯು ಸಂಘದ ಅಭಿವೃದ್ಧಿಯತ್ತ ಸಾಗಲು ಕೆಲಸ ಮಾಡುತ್ತಾರೆ ಎಂದು ವಿಶ್ವಾಸ ಇದೆ ಎಂದು ಹೇಳಿದರು. ಮಾಜಿ.ಗ್ರಾ.ಪಂ.ಅಧ್ಯಕ್ಷ ಗುಂಡಪ್ಪಗೌಡ ಬಿರಾದಾರ ಮಾತಾನಾಡಿದರು.
ಈ ಸಂದರ್ಭದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಭೀಮರಾಯಗೌಡ ಬಿರಾದಾರ, ಗ್ರಾ.ಪಂ.ಅಧ್ಯಕ್ಷ ಸಿದಗೊಂಡಪ್ಪಗೌಡ ಪಾಟೀಲ, ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಮ್.ಆನಂದಿ, ನ್ಯಾಯವಾದಿ ಶ್ರೀಶೈಲ ಮುಳಜಿ, ರಾಜುಸಾಹುಕಾರ ಚಂಡಕಿ, ಅಶೋಕ ಸಾಹುಕಾರ ಸೂಳಿಬಾವಿ, ವಿಠ್ಠಲಸಾಹುಕಾರ ಕನ್ನೋಳ್ಳಿ, ತಾ.ಪಂ.ಮಾಜಿ ಸದಸ್ಯ ವಿಠ್ಠಲ ದೆಗಿನಾಳ, ಸಂಘದ ನಿರ್ದೇಶಕರಾದ ಸೋಮನಗೌಡ ಪಾಟೀಲ ಕಡ್ಲೇವಾಡ, ಜಟ್ಟೇಪ್ಪಸಾಹುಕಾರ ಚಂಡಕಿ, ಸುಜಾತಾ ಬಾಗಲಕೋಟ, ಪುನ್ನಪ್ಪ ಖೈರಾವಿಕರ, ಹಣಮಂತ್ರಾಯ ಬಿರಾದಾರ, ಗುರಣ್ಣ ಅಂಜುಟಗಿ, ಚಂದ್ರಕಾಂತ ಬಿರಾದಾರ, ಲಕ್ಷ್ಮಣ ತಳಕೇರಿ, ಸುಂದ್ರಬಾಯಿ ನಾಟೀಕಾರ, ರಾಜಬಕ್ಸರ ಚಾಂದಕವಠೆ, ಶೇಖು ಗಣಜಲಿ, ವಿದ್ಯಾಧರ ಸಂಗೋಗಿ, ಕುಮಾರಗೌಡ ಬಿರಾದಾರ, ಹಣಮಂತ್ರಾಯ ಮುಳಜಿ, ಈರಣ್ಣಶಾಸ್ರೀ, ದಾದಾ ಸಿಂದಗಿ, ಮಹಾಂತೇಶ ಉಡಗಿ, ಚನ್ನಪ್ಪ ಬನಸೋಡೆ, ಬಾಬು ಖೋಜಗೀರ, ಜಾವೀದ್ ಕೊಲ್ಹಾರ, ಸಿದ್ದು ಬೋಳೆಗಾಂವ, ಮಲ್ಲಪ್ಪ ಮಾಶ್ಯಾಳ, ಶಿರಾಜ ಇನಾಮದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

