ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರು ನಾಳೆ ದಿ.11 ಶನಿವಾರ ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ವಿಜಯಪುರ ನಗರದಲ್ಲಿ ದಿ.11 ಶನಿವಾರ ಬೆ.10.30ಗಂ. ಶಿವಾನುಭವ ಮಂಟಪದಲ್ಲಿ ಕೆ.ಎಸ್.ಡಿ.ಎಲ್. ಸಾಬೂನು ಮೇಳ ಉದ್ಘಾಟಿಸುವರು. ಬೆ.11ಗಂ. ಹಳೆ ತಹಶೀಲ್ದಾರ ಕಚೇರಿಯಲ್ಲಿ ತಿಕೋಟಾ ಮತ್ತು ಬಬಲೇಶ್ವರ ತಾಲೂಕಿನ ಭೂಸುರಕ್ಷಾ (ಭೂದಾಖಲೆಗಳ ಗಣಕೀಕರಣ) ಯೋಜನೆಗೆ ಚಾಲನೆ ನೀಡಲಿದ್ದಾರೆ. ಮ.12ಗಂ. ಹಿಟ್ನಳ್ಳಿ ಫಾರ್ಮ್ ನಲ್ಲಿ ಕೃಷಿ ಮೇಳ ಉದ್ಘಾಟಿಸಲಿದ್ದಾರೆ.
ಸಂಜೆ 6ಗಂ. ಬೆಳಗಾವಿ ಜಿಲ್ಲೆಯ ಅಥಣಿಯ ಮೊಟಗಿ ಮಠದಲ್ಲಿ ಶ್ರೀ ಚನ್ನಬಸವೇಶ್ವರ ಯುವಕ ಸಂಘದ ಸುವರ್ಣಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾ8.00ಗಂ. ಅಥಣಿಯಿಂದ ಹೊರಟು ಬೆಳಗಾವಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ದಿ. 12 ರವಿವಾರರಂದು ಬೆ.8.30ಗಂ. ಬೆಳಗಾವಿ ವಿಮಾನ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
