ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಸುಮಾರು ೬೫೨ ಗ್ರಾಮಗಳಲ್ಲಿ ಜೇ ಜೇ ಎಂ. ಕಾಮಗಾರಿ ಅನುಷ್ಠಾನ ಗೊಳಿಸಲಾಗಿದೆ ಎಲ್ಲ ಕಾಮಗಾರಿಗಳನ್ನು ಉತ್ತಮ ರೀತಿಯಿಂದ ನಿರ್ಮಾಣ ಮಾಡಿ ವಾರದ ೨೪ ಗಂಟೆ ನೀರು ಸರಬರಾಜು ಗ್ರಾಮ ಎಂದು ಘೋಷಿಸಲು ಆಯಾ ಗ್ರಾಮದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ವಿಜಯಪುರ ಜಿಲ್ಲೆಯ ಸಾರವಾಡ ಗ್ರಾಮದ ಈಶ್ವರ ದೇವಾಲಯದಲ್ಲು ಹಮ್ಮಿಕೊಂಡ ಸಾರವಾಡ ಗ್ರಾಮವು ೨೪ ಘಿ ೭ ನೀರು ಸರಬರಾಜು ಗ್ರಾಮ ಘೋಷಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಿತವಾಗಿ ನೀರು ಬಳಸಿ ೨೪ ಘಿ ೭ ನೀರು ಸರಬರಾಜು ಗ್ರಾಮ ಎಂಬುದನ್ನು ನಿರಂತರವಾಗಿ ನಡೆಸಿಕೊಂಡು ಹೋಗುವಂತೆ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಕಾರ್ಯಪಾಲಕ ಬಸವರಾಜ ಕುಂಬಾರ ಮಾತನಾಡಿ ವಾರದ ೨೪ ಗಂಟೆ ನೀರು ಸರಬರಾಜು ಯೋಜನೆಯಡಿ ಪ್ರತಿ ಮನೆಗೆ ಮೀಟರ್ ಒದಗಿಸಲಾಗಿದೆ, ಪ್ರತಿ ದಿನ ಪ್ರತಿ ವ್ಯಕ್ತಿಗೆ ೫೫ಲೀಟರ್ ನೀರನ್ನು ಶುದ್ಧೀಕರಿಸಿ ಸ್ವಚ್ಚವಾದ ನೀರು ಪೂರೈಸಲಾಗುವುದು ಎಂದರು.
ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಸ್ವಸಹಾಯ ಸಂಘಗಳ ಬಳಕೆ ಮಾಡಿಕೊಳ್ಳಲಾಗುವುದು. ಸುಸ್ಥಿರತೆ ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಗಳಿಗೆ ತರಬೇತಿ ನೀಡಿ ಬಲಪಡೆಸಲಾಗಿದೆ. ಹಾಗೂ ಪ್ರತಿ ನಲ್ಲಿಯಿಂದ ಒಂದು ನಿಮಿಷಕ್ಕೆ೧೦ ಲೀಟರ್ ಪೂರೈಸಲಾಗುತ್ತದೆ ಎಂದು ಅವರು ಹೇಳಿದರು.
ಗ್ರಾ. ನೀ.ಸ.ಮತ್ತು ನೈರ್ಮಲ್ಯ ಸಹಾಯಕ ಕಾರ್ಯಪಾಲಕ ಸತೀಶ್ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು.
ರಾಜ್ಯ ಯೋಜನಾ ಸಮನ್ವಯಾಧಿಕಾರಿ ಡಾ.ನಂದಕುಮಾರ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೀತಾ ಕಲ್ಲವ್ವಗೋಳ ವಂದಿಸಿದರು.
ಸಹಾಯಕ ಕಾರ್ಯಪಾಲಕ ಶ್ರೀನಿವಾಸ ಡಿಪಿಎಂ, ಶ್ರೀ ಎಸ್.ಬಿ, ಪಾಟೀಲ ಅಭಿಯಂತರರು, ಶಾಖಾಧಿಕಾರಿ ಮಲ್ಲಿಕಾರ್ಜುನ್ ವಗ್ಗರ್, ಸಚಿನ ಸಿಂಪಿ ಹಾಗೂ ಗೀತಾ ಮಹಾರ್, ಡಿಟಿಎಸ್ ಸಿಬ್ಬಂದಿ ಉಪಸ್ಥಿತರಿದ್ದರು.

