Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಎಚ್ ಡಿ ಕೋಟೆ: ಅದಿವಾಸಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ಸಕಲ ಸವಲತ್ತು ಕಲ್ಪಿಸಿಕೊಟ್ಟಿದೆ. ಈ ಬಾರಿಯ sslc ಪರೀಕ್ಷೆಯಲ್ಲಿ ತಾಲೂಕಿನಲ್ಲಿ 68 ಹಾಡಿ ಮಕ್ಕಳು ತೇರ್ಗಡೆಯಾಗಿದ್ದಾರೆ. ಎಸ್ ಎಲ್ ಸಿ ಮುಗಿದ ಬಳಿಕ ಪಿಯುಸಿಗೆ ಮಕ್ಕಳನ್ನು ಪೋಷಕರು ಸೇರಿಸುತ್ತಿಲ್ಲದಿರುವುದು ನನ್ನ ಗಮನಕ್ಕೆ ಬಂದಿದೆ. ಯಾವುದೇ ಕಾರಣಕ್ಕೂ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿ ಮಾಡಬೇಡಿ. ಕನಿಷ್ಠ ಪಿಯುಸಿ ಓದಿಸಿದರೆ ಅವರು ಸಮಾಜದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಎನ್ ರಾಜು ಹೇಳಿದರುಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಪೀಪಲ್ ಟ್ರೀ ಸಂಸ್ಥೆಯ ಚಿಲ್ಡ್ರನ್ಸ್ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ತಾಲೋಕಿನಲ್ಲಿ ಆದಿವಾಸಿ ಮಕ್ಕಳ ಶಿಕ್ಷಣ, ಆರೋಗ್ಯ, ಆಹಾರದ ವಿಷಯಗಳಲ್ಲಿ ಪೀಪಲ್ ಟ್ರೀ ಸಂಸ್ಥೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದು ಇದು ಶ್ಲಾಘನೀಯ ಕೆಲಸವಾಗಿದೆ. ಇಂತಹ ಉತ್ತಮ ಕೆಲಸ ಮಾಡುತ್ತಿರುವ ಈ ಸಂಸ್ಥೆಯಲ್ಲಿ ಓದುತ್ತಿರುವ ಮಕ್ಕಳಿಗೆ ನನ್ನ ಕೈಲಾದ ಸಹಾಯ ಮಾಡುತ್ತೆನೆ ಎಂದು…
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಮಗಳ ಜನ್ಮ ದಿನದ ನಿಮಿತ್ಯ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಅಂಕಲಿಪಿ, ಬಣ್ಣದ ಪೆನ್ಸಿಲ್ ಹಾಗೂ ಪೆನ್ ನೀಡುವ ಮೂಲಕ ವಿಶೇಷವಾಗಿ ಹುಟ್ಟು ಹಬ್ಬವನ್ನು ಯೋಧ ಆಚರಿಸಿದ್ದಾನೆ.ತಾಲ್ಲೂಕಿನ ಘೋಣಸಗಿ ಎಲ್.ಟಿ ಗ್ರಾಮದ ಭಾರತೀಯ ಸಿಐಎಸ್ಎಪ್ ಯೋಧ ಬಬನ್ ರಾಠೋಡ ರಾಜಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಜೆಗೆ ಸ್ವಗ್ರಾಮಕ್ಕೆ ಆಗಮಿಸಿದ ಕುಟುಂಬವು ತಮ್ಮ ಮಗಳು ಸಿಯಾಳ ಜನ್ಮ ದಿನದ ಆಚರಣೆ ನಿಮಿತ್ಯ ಸರ್ಕಾರಿ ಶಾಲೆಯ ಮಕ್ಕಳ ಶಿಕ್ಷಣಕ್ಕೆ ಅನೂಕೂಲವಾಗಲು ಈ ಕಾರ್ಯ ಮಾಡಿದ್ದಾರೆ.ಕಲಿಕೋಪಕರಣ ಪಡೆದುಕೊಂಡ ಸರ್ಕಾರಿ ಶಾಲಾ ಮಕ್ಕಳು ಖುಷಿಯಿಂದ ಜನ್ಮ ದಿನಕ್ಕೆ ಶುಭಾಶಯ ಕೋರಿ ವೀರಯೋಧ ಬಬನ ರಾಠೋಡ ಕುಟುಂಬಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಆದೇಶ | ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆಡಳಿತಾತ್ಮಕ ಮತ್ತು ಯೋಜನೆ ಸಮರ್ಪಕ ಅನುಷ್ಠಾನದ ಹಿತದೃಷ್ಠಿಯಿಂದ ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯ ಒಂದು ಹೊಸ ವಿಭಾಗ ಮತ್ತು ಮೂರು ಉಪವಿಭಾಗ ಕಚೇರಿಗಳನ್ನು ಜಿಲ್ಲೆಯ ತಿಕೋಟಾದಲ್ಲಿ ಪ್ರಾರಂಭಿಸಲು ಆದೇಶ ಹೊರಡಿಸಲಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.ತಿಕೋಟಾದಲ್ಲಿ ಕಚೇರಿಗಳನ್ನು ಪ್ರಾರಂಭಿಸುವಂತೆ ಜಲಸಂಪನ್ಮೂಲ ಇಲಾಖೆಗೆ ಈ ಮುಂಚೆಯೇ ಪತ್ರ ಬರೆದಿದ್ದೆ. ಈಗ ನಮ್ಮ ಮನವಿಗೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಸ್ಪಂದಿದ್ದಾರೆ. ಸಚಿವರಿಗೆ ಧನ್ಯವಾದಗಳು. ನಮ್ಮ ಬೇಡಿಕೆಯಂತೆ ತಿಕೋಟಾ ಪಟ್ಟಣದಲ್ಲಿ ಹೊಸದಾಗಿ ಒಂದು ವಿಭಾಗ ಕಚೇರಿ ಮತ್ತು ಅದರ ಅಡಿ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆ ಉಪವಿಭಾಗ- 1 ಮತ್ತು ಉಪವಿಭಾಗ- 2 ಹಾಗೂ ಉಪವಿಭಾಗ- 3 ತಿಕೋಟಾ ಹೊಸ ಕಚೇರಿಗಳನ್ನು ಪ್ರಾರಂಭಿಸಲು ಜಲಸಂಪನ್ಮೂಲ ಇಲಾಖೆ ಆದೇಶ…
ರಾಷ್ಟ್ರೀಯ ಅತ್ಯುತ್ತಮ ಆಯುರ್ವೇದ ಕಾಲೇಜುಗಳಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್. ಆಯುರ್ವೇದ ಕಾಲೇಜಿಗೆ ೪ನೇ ರ‌್ಯಾಂಕ್ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್. ಆಯುರ್ವೇದ ಕಾಲೇಜು ರಾಷ್ಟ್ರೀಯ ಅತ್ಯುತ್ತಮ ಆಯುರ್ವೇದ ಕಾಲೇಜುಗಳಲ್ಲಿ ಸತತ ಎರಡನೇ ಬಾರಿಗೆ 4ನೇ ರ‌್ಯಾಂಕ್ ಪಡೆದಿದೆ.ದೇಶದ ಹೆಸರಾಂತ ನಿಯತಕಾಲಿಕ ಔಟಲುಕ್ ಐಸಿಎಆರ್‌ಇ- 2026 ನಡೆಸಿದ ರಾಷ್ಟ್ರೀಯ ಸಮೀಕ್ಷೆಯಲ್ಲಿ ದೇಶದ ಪ್ರತಿಷ್ಠಿತ 20 ಆಯುರ್ವೇದ ಕಾಲೇಜುಗಳಲ್ಲಿ ಬಿ.ಎಲ್.ಡಿ.ಇ ಆಯುರ್ವೇದ ಕಾಲೇಜು 4ನೇ ರ‌್ಯಾಂಕ್ ಲಭಿಸಿದೆ.ಕಾಲೇಜಿನಲ್ಲಿ ಬೋಧನೆ, ಕಲಿಕಾ ಪರಿಸರ, ವಿದ್ಯಾರ್ಥಿಗಳಿಗೆ ನೀಡಲಾಗಿರುವ ಸೌಲಭ್ಯಗಳು, ಆಸ್ಪತ್ರೆಯಲ್ಲಿರುವ ಕಲಿಕಾ ಸೌಲಭ್ಯಗಳು, ಮಂಡಿಸಲಾಗಿರುವ ಸಂಶೋಧನೆ ಪ್ರಬಂಧಗಳು ಸೇರಿದಂತೆ ಮಾನದಂಡಗಳನ್ನು ಪರಿಗಣಿಸಿ ಈ ರ‌್ಯಾಂಕ್ ನೀಡಲಾಗಿದೆ.ಪ್ರತಿ ವರ್ಷ ಕಾಲೇಜಿನಲ್ಲಿ 100 ವಿದ್ಯಾರ್ಥಿಗಳು ಬಿ. ಎ. ಎಂ. ಎಸ್ ಪದವೀಧರರಾಗಿ ಮತ್ತು 22 ವೈದ್ಯರುಗಳು ಎಂ. ಡಿ ಹಾಗೂ ಎಂ. ಎಸ್ ಸ್ನಾತಕಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ.ಕಾಲೇಜಿನ ಸಾಧನೆಗೆ ಬಿ. ಎಲ್. ಡಿ. ಇ ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಶ್ರೀ ಸಿದ್ದೇಶ್ವರ ಕಲಾಭವನದಲ್ಲಿ ರೈಸ್ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಇಂತಹ ರೈಸ್ ದುಶ್ಚಟಗಳ ಜಾಗೃತಿ ಅಭಿಯಾನ ಕಾರ್ಯಕ್ರಮ ಕೇವಲ ಇಲಾಖೆಯಿಂದ ಮತ್ತು ಸರ್ಕಾರದಿಂದ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಈ ದೇಶದ ಪ್ರತಿಯೊಬ್ಬ ಯುವ ಸಮೂಹದ ಜವಾಬ್ದಾರಿ ಇದೆ. ಸಾಕಷ್ಟು ಯುವ ಸಮೂಹ ಬಲಿಯಾಗುತ್ತಿದ್ದು ತಮ್ಮ ಭವಿಷ್ಯದ ಗಮನಹರಿಸದೆ ಇಂತಹ ವ್ಯಸನಕ್ಕೆ ತಮ್ಮ ಜೀವನ ಹಾಳು ಮಾಡಿಕೊಳುತ್ತಿದ್ದಾರೆ. ಯಾವುದೆ ಕಾರಣಕ್ಕೂ ಯುವಕರು ಬಲಿಯಾಗಬಾರದು ಎಂದು ಜಾಗೃತಿ ಮೂಡಿಸಿದರು.ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದ ಮಾತನಾಡಿ, ಯುವಕರು ತಮ್ಮ ಗುರಿ ಮುಟ್ಟುವ ಕಡೆ ಹೆಚ್ಚು ಗಮನ ಹರಿಸಿ ತಂದೆ ತಾಯಿಗಳ ಕನಸು ನನಸಾಗುವ ನಿಟ್ಟಿನಲ್ಲಿ ಬದಕನ್ನು ಕಟ್ಟಿಕೊಳ್ಳಬೇಕು ಎಂದರು.ಡಾ.ದೀಪಾ ರೆಡ್ಡಿ, ಅಧ್ಯಕ್ಷತೆ ವಹಿಸಿದ ಶರಣಯ್ಯ ಭಂಡಾರಿ ಮಠ ಮಾತನಾಡಿದರು.ಪ್ರಸ್ತಾವಿಕವಾಗಿ ಸಿಪಿಐ ಪ್ರದೀಪ್ ತಳಕೇರಿ ಮಾತನಾಡಿದರು. ಪ್ರತಿಜ್ಞಾವಿಧಿಯನ್ನು ಸಂಚಾರಿ ಠಾಣೆಯ ಇನ್ಸ್ಪೆಕ್ಟರ್ ಆದ ಅಲಿ ಷೇಕ್…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪರಿಸರ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವನನ್ನ ಗಿಡ ನನ್ನ ಭೂಮಿ ಸಂಘಟನೆಯ ಸಹಯೋಗದಲ್ಲಿವಿಜಯಪುರ ನಗರದ ಜಿಲ್ಲಾ ರೈಪಲ್ ಅಸೋಸಿಯೆಷನ್ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಯುವ ಭಾರತ ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ ಮಾತನಾಡಿ, ಪರಿಸರ ರಕ್ಷಣೆ ಕೇವಲ ಪರಿಸರ ದಿನಾಚರಣೆಗೆ ಸೀಮಿತವಾಗಬಾರದು, ಪರಿಸರ ರಕ್ಷಣೆ ಎನ್ನುವುದು ಅನುದಿನದ ಕಾರ್ಯವಾಗಬೇಕು, ನನ್ನ ಗಿಡ ನನ್ನ ಭೂಮಿ ಸಂಘಟನೆ ನಿರಂತರವಾಗಿ ಪರಿಸರ ರಕ್ಷಣಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಪ್ರತಿಯೊಬ್ಬರಿಗೂ ಪರಿಸರ ರಕ್ಷಣೆ ಸ್ಪೂರ್ತಿ ದೊರಕಿಸುತ್ತಿದೆ ಎಂದರು.ಸಸಿ ನೆಡುವುದು ಹಾಗೂ ಅದನ್ನು ಪೋಷಿಸುವುದು ಒಂದು ಅಪೂರ್ವ ಪರಿಸರ ರಕ್ಷಣಾ ಚಟುವಟಿಕೆ, ಶುಭ ಸಂದರ್ಭದಲ್ಲಿ ಸೇರಿದಂತೆ ವಿವಿಧ ಸಮಾರಂಭದಲ್ಲಿ ಸಸಿ ನೆಡುವ ಪರಂಪರೆ ಮೂಡಿಸಿಕೊಳ್ಳಬೇಕು ಎಂದರು.ಬಸವರಾಜ ಬೈಚಬಾಳ, ಚಿದಾನಂದ ಔರಂಗಬಾದ, ಮಂಜುನಾಥ ಆಸಂಗಿ ಕೃಷ್ಣಾ ಗುನ್ನಾಳಕರ, ಬಸವರಾಜ ಯಾದವಾಡ ವಿನಾಯಕ ಕಾಳೆ, ವಿಜಯ ಬೋಸಲೇ, ಯಲ್ಲಪ್ಪ ಮಾಳಿ, ದ್ಯಾಮಣ್ಣ ಗೋಮಟೆ, ಕರಾಟೆ ಶಿಕ್ಷಕ ಪ್ರೇಮ ಮೊದಲಾದವರು ಪಾಲ್ಗೊಂಡಿದ್ದರು.
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಮತದಾನದ ಮಹತ್ವದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಚಿಕ್ಕಪಡಸಲಗಿಯ ರಾಯಲ್ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶೈಕ್ಷಣಿಕ ಚುನಾವಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ನೈಜ ಚುನಾವಣಾ ಮಾದರಿಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಆಂಗ್ಲ ಭಾಷಾ ಶಿಕ್ಷಕ ಶ್ರೀ ಸಂಗಮೇಶ ತೇಲಿಯವರು, ವಿದ್ಯಾರ್ಥಿ ಜೀವನದಲ್ಲಿಯೇ ಪ್ರಜಾಪ್ರಭುತ್ವದ ತತ್ವಗಳನ್ನು ಅರಿತುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಮತದಾನದ ಹಕ್ಕಿನ ಮಹತ್ವ, ಉತ್ತಮ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ತತ್ವಗಳನ್ನು ಇಂತಹ ಶೈಕ್ಷಣಿಕ ಚುನಾವಣೆಗಳ ಮೂಲಕ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕಲಿಯುತ್ತಾರೆ ಎಂದು ತಿಳಿಸಿದರು.ಶಾಲೆಯ ಮುಖ್ಯಮಂತ್ರಿ ಸೇರಿದಂತೆ ವಿವಿಧ ಸಚಿವ ಸಂಪುಟದ ಹುದ್ದೆಗಳಿಗೆ ಚುನಾವಣೆ ನಡೆಸಲಾಯಿತು. ನಾಮಪತ್ರ ಸಲ್ಲಿಕೆ, ಅಭ್ಯರ್ಥಿಗಳ ಪ್ರಚಾರ, ಮತದಾನ, ಮತದಾರರ ಬೆರಳಿಗೆ ಶಾಯಿ ಗುರುತು ಹಾಕುವುದು, ಮತ ಎಣಿಕೆ, ಫಲಿತಾಂಶ ಪ್ರಕಟಣೆ ಹಾಗೂ ಆಯ್ಕೆಯಾದ ಪ್ರತಿನಿಧಿಗಳ ಪ್ರಮಾಣವಚನ ಸ್ವೀಕಾರದವರೆಗೆ ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ನೈಜ ಚುನಾವಣೆಯ ಮಾದರಿಯಲ್ಲೇ…
ಬಬಲೇಶ್ವರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ.ಜಿ.ಗಡೇದ ಪ್ರಕಟಣೆ ಉದಯರಶ್ಮಿ ದಿನಪತ್ರಿಕೆ ಬಬಲೇಶ್ವರ: ಪಟ್ಟಣದ ಎಲ್ಲಾ ಮನೆಗಳಲ್ಲಿ ಇರುವ ಶೌಚಾಲಯದ ಸೆಪ್ಟಿಕ್ ಟ್ಯಾಂಕ್‌ಗಳು ತುಂಬಿದಾಗ ಸೆಪ್ಟಿಕ್ ಟ್ಯಾಂಕ್‌ಗಳನ್ನು ಕೆಲಸಗಾರರ ಮೂಲಕ ನೇರವಾಗಿ ಸ್ವಚ್ಚಗೊಳಿಸುವುದು ಮ್ಯಾನುವಲ್ ಸ್ಕ್ಯಾವೇಂಜರ್ ಕಾಯ್ದೆ ೨೦೧೩ ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು, ಸಾರ್ವಜನಿಕರು ಕೆಲಸಗಾರರ ಮೂಲಕ ಸೆಪ್ಟಿಕ್ ಟ್ಯಾಂಕ್ ಸ್ವಚ್ಚಗೋಳಿಸಿದ್ದಲ್ಲಿ ಅಂತವರ ಮೇಲೆ ಮ್ಯಾನುವಲ್ ಸ್ಕ್ಯಾವೇಂಜರ್ ಕಾಯ್ದೆ ೨೦೧೩ ರ ಪ್ರಕಾರ ಶಿಸ್ತು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ.ಜಿ.ಗಡೇದ ಪ್ರಕಟಣೆ ಮೂಲಕ ತಿಳಿಸಿದ್ದಾರೆ.ಪಟ್ಟಣದ ಯಾವುದೇ ಮನೆಗಳಲ್ಲಿ ಸೆಪ್ಟಿಕ್ ಟ್ಯಾಂಕ್‌ಗಳು ತುಂಬಿದಾಗ ತಾವು ಪ್ರೈವೇಟ್ ಸಕ್ಕಿಂಗ್ ಮಶೀನ್ ವಾಹನವನ್ನು ಬಾಡಿಗೆಗೆ ಹೇಳುತ್ತಿರುತ್ತಿರಿ. ಅದರಂತೆ ಇನ್ನು ಮುಂದೆ ತಮ್ಮ ಸೆಪ್ಟಿಕ್ ಟ್ಯಾಂಕ್ನ್ನು ಪ್ರೈವೇಟ್ ಸಕ್ಕಿಂಗ್ ಮಷಿನ್ ರವರ ಹತ್ತಿರ ಕ್ಲೀನ್ ಮಾಡಿಸುವ ಮುನ್ನ ಪಟ್ಟಣ ಪಂಚಾಯತ ಕಾರ್ಯಾಲಯಕ್ಕೆ ತಿಳಿಸುವುದು ಕಡ್ಡಾಯವಾಗಿರುತ್ತದೆ.ಸಕ್ಕಿಂಗ್ ಮಷೀನ್ ವಾಹನದ ಮಾಲೀಕರು ತಾವು ಬಬಲೇಶ್ವರ ಪಟ್ಟಣದ ವ್ಯಾಪ್ತಿಯಲ್ಲಿ ಸೆಪ್ಟಿಕ್ ಟ್ಯಾಂಕನ್ನು ಕ್ಲಿನ್ ಮಾಡಿ ಸಂಗ್ರಹಿಸಿದ…
ಲೇಖನ- ಡಾ. ಶಶಿಕಾಂತ ಪಟ್ಟಣ.ರಾಮದುರ್ಗ – ಪುಣೆ ಉದಯರಶ್ಮಿ ದಿನಪತ್ರಿಕೆ ಕನ್ನಡ ಸಾಹಿತ್ಯ ಪರಂಪರೆಯು ಸುಮಾರು ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಸುದೀರ್ಘ ಇತಿಹಾಸವನ್ನು ಹೊಂದಿರುವ ಅತ್ಯಂತ ಶ್ರೀಮಂತ ಮತ್ತು ವೈವಿಧ್ಯಮಯವಾದ ಸಂಪ್ರದಾಯವಾಗಿದೆ. ಭಾರತದ ಅತ್ಯಂತ ಹಳೆಯ ಸಾಹಿತ್ಯ ಸಂಪ್ರದಾಯಗಳಲ್ಲಿ ಇದು ಮೂರನೇ ಸ್ಥಾನದಲ್ಲಿದ್ದು, ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಚಳವಳಿಗಳೊಂದಿಗೆ ಬೆರೆತು ವಿಕಸನಗೊಂಡಿದೆ.ಕನ್ನಡ ಭಾಷೆ ಹಲ್ಮಡಿ ಶಾಸನದಲ್ಲಿ ಕಂಡು ಬಂದರೂ ಸಹಿತ ಅದಕ್ಕಿಂತ ಮೂರು ಶತಮಾನಕ್ಕೂ ಅಧಿಕವಾದ ಪ್ರಾಚೀನ ಭಾರತೀಯ ದ್ರಾವಿಡ ಭಾಷೆಯಾಗಿದೆ.ಪೂರ್ವದ ಹಳಗನ್ನಡ ಮತ್ತು ಹಳಗನ್ನಡ ಕಾಲ(ಜೈನ ಯುಗ / ಪಂಪ ಯುಗ)ಕ್ರಿ.ಶ. ೫ ನೇ ಶತಮಾನದ ಹಲ್ಮಿಡಿ ಶಾಸನ ಕನ್ನಡದ ಅತ್ಯಂತ ಪ್ರಾಚೀನ ಲಿಖಿತ ದಾಖಲೆಯಾಗಿದೆ. ಕ್ರಿ.ಶ. ೮೫೦ ರ ಸುಮಾರಿನ ಅಮೋಘವರ್ಷ ನೃಪತುಂಗನ ‘ಕವಿರಾಜಮಾರ್ಗ’ ನಮಗೆ ದೊರೆತಿರುವ ಮೊದಲ ಸಾಹಿತ್ಯಿಕ ಗ್ರಂಥವಾಗಿದೆ.ಪಂಪ ಯುಗ: ೧೦ ನೇ ಶತಮಾನವನ್ನು ಕನ್ನಡ ಸಾಹಿತ್ಯದ ‘ಚಿನ್ನದ ಯುಗ’ ಎನ್ನಲಾಗುತ್ತದೆ.ರತ್ನತ್ರಯರು: ಆದಿಕವಿ ಪಂಪ (ವಿಕ್ರಮಾರ್ಜುನ ವಿಜಯ, ಆದಿಪುರಾಣ),…
ಲೇಖನ- ಜಯಶ್ರೀ.ಜೆ.ಅಬ್ಬಿಗೇರಿ.ಇಂಗ್ಲೀಷ್ ಉಪನ್ಯಾಸಕರುಬೆಳಗಾವಿ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ‘ಕತ್ತಲೆಯ ದಾರಿಯಲ್ಲೂ ಗುರಿ ಸ್ಪಷ್ಟವಾಗಿದ್ದರೆ, ಬೆಳಕಿನ ಕಿರಣ ತಾನಾಗಿಯೇ ಹುಡುಕಿಕೊಂಡು ಬರುತ್ತದೆ.’ ಎನ್ನುವ ಮಾತೊಂದಿದೆ. ಗುರಿಯಿಲ್ಲದ ಜೀವನ ಗರಿ ಬಿಚ್ಚಲು ಸಾಧ್ಯವಿಲ್ಲ ಎಂಬುದು ಸರ್ವವೇದ್ಯ. ಆದ್ದರಿಂದಲೇ ಪ್ರತಿಯೊಬ್ಬರಿಗೂ ಜೀವನದಲ್ಲಿ ತನ್ನದೇ ಆದ ಒಂದು ಗುರಿ ಇರಲೇಬೇಕಾಗುತ್ತದೆ. ಗುರಿಯನ್ನು ನಿರ್ಧರಿಸಿದ ಮಾತ್ರಕ್ಕೆ ಅದನ್ನು ತಲುಪಲಾಗುವುದಿಲ್ಲ. ಏಕೆಂದರೆ ಗುರಿ ಸಾಧನೆಯ ಹಾದಿ ಹೂವಿನ ಹಾಸಿಗೆ ಆಗಿರುವುದಿಲ್ಲ. ಅದು ಕಲ್ಲು ಮುಳ್ಳುಗಳಿಂದ ಕೂಡಿದ ಹಾದಿ. ಹೀಗಾಗಿಯೇ ಗುರಿಯನ್ನು ಹೊಂದಿದ ಎಲ್ಲರೂ ಸಾಧಕರಾಗುವುದಿಲ್ಲ. ಆ ಹಾದಿಯಲ್ಲಿ ಬರುವ ಕಲ್ಲು ಮುಳ್ಳುಗಳೆಂಬ ಅಡೆತಡೆಗಳನ್ನು ಯಾರು ಎದೆಗಾರಿಕೆಯಿಂದ ಎದುರಿಸುವ ಎದೆಯನ್ನು ಹೊಂದಿರುತ್ತಾರೋ ಅವರು ಮಾತ್ರ ಸಾಧಕರಾಗಬಲ್ಲರು. ಅಂದರೆ ಗುರಿಯ ದಾರಿಯಲ್ಲಿ ಅನೇಕ ತಡೆಗೋಡೆಗಳಿವೆ. ಯಾರು ಆ ಗೋಡೆಗಳನ್ನು ಧೈರ್ಯದಿಂದ ದಾಟುವ ಧೈರ್ಯ ಮಾಡುತ್ತಾರೋ ಅವರು ಇತಿಹಾಸ ಸೃಷ್ಟಿಸುತ್ತಾರೆ. ಈ ಮಾತಿಗೆ ಇತಿಹಾಸವೇ ಸಾಕ್ಷಿ.‘ಗುರಿ ತಲುಪುವ ಹಾದಿಯಲ್ಲಿ ಕಲ್ಲು ಮುಳ್ಳುಗಳು ಇರುವುದು ಸಹಜ, ಆದರೆ ಅವು ನಿನ್ನನ್ನು ತಡೆಯಲು ಇರುವುದಲ್ಲ; ನಿನ್ನ ಹೆಜ್ಜೆಯ ವೇಗವನ್ನು…
