ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಜ್ಯೋತಿಬಾ ಫುಲೆ ಆದರ್ಶ ವ್ಯಕ್ತಿಗಳಾಗಿದ್ದರು, ಎಲ್ಲರಿಗೂ ಶಿಕ್ಷಣ ದೊರೆಯಲಿ ಎಂದು ಹಿಂದುಳಿದ ವರ್ಗ, ದೀನ ದಲಿತರಿಗೆ ಶಿಕ್ಷಣ ನೀಡಿದರು, ಸಾಮಾಜಿಕ ಸಮಾನತೆ ಮತ್ತು ಮಹಿಳಾ ಶಿಕ್ಷಣಕ್ಕಾಗಿ ಹೋರಾಡಿದವರು ಎಂದು ಶಿಕ್ಷಣ ಪ್ರೇಮಿ ಮಹಾನಿಂಗ ರಾಮದುರ್ಗ ಹೇಳಿದರು.
ಸಮೀಪದ ಕಡಪಟ್ಟಿ ಗ್ರಾಮದ ಮಾಳಿ ಸಮಾಜ ಹಾಗೂ ಶ್ರೀ ಜ್ಯೋತಿಬಾ ಫುಲೆ ಯುವಕ ಮಂಡಳ ಇವರ ಸಹಯೋಗದಲ್ಲಿ ನಡೆದ ಮಹಾತ್ಮ ಜ್ಯೋತಿಬಾ ಫುಲೆ ಅವರ 199 ನೆಯ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ಆದರ್ಶ ದಂಪತಿಗಳಾಗಿದ್ದರು ಅವರ ಆದರ್ಶಗಳನ್ನು ನಾವು ಪಾಲಿಸಬೇಕು, ಅವರು ಮಾಡಿದ ಸಾಮಾಜಿಕ ಕಾರ್ಯಗಳನ್ನು ನಾವು ಎಂದಿಗೂ ಮರೆಯಬಾರದು, ಎಲ್ಲರೂ ಸೇರಿ ಸಮಾಜವನ್ನು ಒಗ್ಗೂಡಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಸಾಮಾಜಿಕ ಹೋರಾಟಗಾರ ಜಕ್ಕಪ್ಪ ಮೆಂಡಿಗೇರಿ ಮಾತನಾಡಿ,ಜ್ಯೋತಿಬಾ ಫುಲೆ ಅವರು ಶಿಕ್ಷಣ ಪ್ರೇಮಿಯಾಗಿದ್ದರು ಸಮಾಜದ ಪ್ರತಿಯೊಬ್ಬ ಮಹಿಳೆಯರಿಗೆ ಶಿಕ್ಷಣ ದೊರೆಯಲಿ ಎಂದು ಹಗಲಿರುಳು ದುಡಿದವರು, ಸ್ವತಂತ್ರ ಪೂರ್ವದಲ್ಲಿ ಮಹಿಳೆಯರಿಗೆ ಶಿಕ್ಷಣ ದೊರೆಯಬಾರದೆಂದು ಫುಲೆ ದಂಪತಿಗಳಿಗೆ ಕಲ್ಲು ಹೊಡೆದರು, ಸಾಮಾಜಿಕವಾಗಿ ನಿಂದಿಸಿದರು ಆದರೆ ಅವರು ಎದೆಗುಂದದೆ ಮಹಿಳೆಯರಿಗೆ ಶಿಕ್ಷಣ ದೊರೆಯುವಂತೆ ಮಾಡಿದರು. ಇಂದು ನಾವೆಲ್ಲರೂ ಸುಶಿಕ್ಷಿತವಾಗಲು ಫುಲೆ ದಂಪತಿಗಳಿಗೆ ಕಾರಣ, ಅವರು ನಮ್ಮ ಮಾಳಿ ಸಮಾಜದವರು ಎಂದು ಹೇಳಲು ನಮಗೆ ಹೆಮ್ಮೆಯಾಗುತ್ತದೆ ಎಂದು ಎಂದು ಹೇಳಿದರು.
ಯುವ ನಾಯಕ ಮಹೇಶ್ ಬೆಳಗಲಿ ಮಾತನಾಡಿ, ಮಹಾತ್ಮ ಜ್ಯೋತಿಬಾ ಫುಲೆ ಅವರು ಭಾರತದ ಶ್ರೇಷ್ಠ ಸಮಾಜ ಸುಧಾರಕರು, ಸ್ತ್ರೀ ಶಿಕ್ಷಣದ ಹರಿಕಾರ ಮತ್ತು ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಮಹಾನ್ ಚೇತನ. ದಲಿತರು, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರ ಏಳಿಗೆಗಾಗಿ, ಶಿಕ್ಷಣಕ್ಕಾಗಿ ಅವರು ನೀಡಿದ ಕೊಡುಗೆ ಅಪಾರವಾದದ್ದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಗದೀಶ್ ಮಾಳಿ, ಹಣಮಂತ ಗುಲಗಂಜಿಕೊಪ್ಪ, ಮಹಾನಿಂಗ ಜಂಬಗಿ, ಬಸಪ್ಪ ಕೊಕಟನೂರ, ಶ್ರೀಕಾಂತ ರಾಮದುರ್ಗ, ಚನ್ನಪ್ಪ ಶಿರೋಳ, ಸಿದ್ಧಲಿಂಗ ಮಾಳಿ, ಆನಂದ ಬೊಮ್ಮಣ್ಣವರ, ಮಹಾದೇವ ಬೊಮ್ಮಣ್ಣವರ, ಮಂಜು ಮಾಳಿ, ರಾಜು ಬಡಕನವರ, ಮಹೇಶ್ ರಾವಳೋಜಿ , ಚಂದು ರಾವಳೋಜಿ, ಕಿರಣ ಮಾಳಿ, ಅಪ್ಪಣ್ಣ ಜಂಬಗಿ,ಬಸು ಜಂಬಗಿ,ಲಕ್ಕಪ್ಪ ರಾವಳೋಜಿ , ಸಂತೋಷ್ ಬೆಳಗಲಿ, ಮಹಾಂತೇಶ್ ಬೆಳಗಲಿ , ಬಸು ಜಾಲಿಬೇರಿ, ಮಹೇಶ್ ಬೆಳಗಲಿ, ಹರೀಶ್ ಕಲ್ಯಾಣಿ, ಪ್ರಕಾಶ್ ತಿಗಣಿಬಿದರಿ, ಕಾಡಪ್ಪ ಜಾಲಿಬೇರಿ, ಸಿದ್ದು ಮಾಳಿ ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಪಾಲ್ಗೊಂಡಿದ್ದರು.

