ಉದಯರಶ್ಮಿ ದಿನಪತ್ರಿಕೆ
ಇಂಡಿ: ರಕ್ತದಾನದಿಂದ ರಕ್ತ ಕಳೆದುಕೊಂಡ ರೋಗಿಗಳಿಗೆ ಅನುಕೂಲವಾಗುವ ಜತೆಗೆ ರಕ್ತದಾನ ಮಾಡುವವರ ಆರೋಗ್ಯ ಉತ್ತಮ ವಾಗಲಿದೆ ಎಂದು ಸ್ಪಂದನಾ ಆಸ್ಪತ್ರೆಯ ವೈದ್ಯ ಡಾ|| ಶಿವಾನಂದ ಸೋನಾವನೆ ಹೇಳಿದರು.
ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಶ್ರೀ ಶಿವಯೋಗೀಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ನಡೆದ ೨೦೧೪ ರಲ್ಲಿ ಸಾಲೋಟಗಿಯ ಶಿವಯೋಗೀಶ್ವರ ಮಾಧ್ಯಮಿಕ ಶಾಲೆಯಲ್ಲಿ ಓದಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಗೆಳೆಯರ ಬಳಗ ಮತ್ತು ಶ್ರೀ ಶಿವಯೋಗೀಶ್ವರ ಜಾತ್ರಾ ಸಮಿತಿ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ನೇತ್ರ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಪ್ರತಿಯೊಬ್ಬರು ರಕ್ತದಾನ ಮಾಡಬಹುದು. ಸಂಘಟನೆಗಳ ಮೂಲಕ ಯುವಕರು ರಕ್ತದಾನ ಮಾಡುವದರಿಂದ ರಕ್ತದ ಅಗತ್ಯ ಇರುವವರಿಗೆ ಅನುಕೂಲವಾಗಲಿದೆ. ರಕ್ತ ತಯಾರಿಸಲು ಸಾದ್ಯವಿಲ್ಲ, ಮನುಷ್ಯನಿಂದಲೇ ಇನ್ನೊಬ್ಬರಿಗೆ ರಕ್ತವನ್ನು ನೀಡಬೇಕಾಗಿದೆ ಎಂದರು.
೨೧೦ ಜನರ ಆರೋಗ್ಯ ತಪಾಸಣೆ, ೪೨ ಜನರ ನೇತ್ರ ತಪಾಸಣೆ ಮತ್ತು ೪೫ ಜನರಿಂದ ರಕ್ತದಾನ ಮಾಡಲಾಯಿತು.
ಆರೋಗ್ಯ ಇಲಾಖೆಯ ವೈ.ವಿ.ಪೂಜಾರಿ , ಡಾ.ಲಕ್ಷ್ಮೀಕಾಂತ ಮೇತ್ರಿ, ಎಸ್ಸೆಸ್ಸೆಲ್ಸಿ ಗೆಳೆಯರ ಬಳಗದ ಇಂದ್ರಕುಮಾರ ವಾಲಿಕಾರ, ಕೇದಾರನಾಥ ಅಕ್ಕಲಕೋಟ, ಶ್ರೀಶೈಲ ಕಾಳೆ, ಸಿದ್ದು ಬಿರಾದಾರ,ಗಂಗಾಧರ ಗುಳೆದ, ಶಿವಪ್ರಸಾದ ಹತ್ತರಕಿ, ದೇವಸ್ಥಾನ ಸಮಿತಿ ಅಧ್ಯಕ್ಷ ಸೋಮಯ್ಯ ಚಿಕ್ಕಪಠ, ಮಲ್ಲನಗೌಡ ಪಾಟೀಲ, ಜೀತಪ್ಪ ಕಲ್ಯಾಣಿ, ವಿನೋದ ಗಾಣಿಗೇರ,ಮಲ್ಲಿಕಾರ್ಜುನ ಕಿವಡೆ , ಸರಕಾರಿ ಆಸ್ಪತ್ರೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತಿತರಿದ್ದರು.

