ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಗ್ರಾಮದ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಕುಮಾರಿ ನೀಲಮ್ಮ ನಿಂಗಪ್ಪ ಬಿಸನಾಳ ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾಳೆ.
ಅಸ್ಕಿ ಗ್ರಾಮದ ನಿಂಗಪ್ಪ ಬಿಸನಾಳ ಎಂಬ ಬಡ ರೈತರ ಮಗಳಾದ ಇವರು ಮೂಲತ ಕೃಷಿ ಕುಟುಂಬದಿಂದ ಬಂದಿದ್ದು ಇವರ ತಂದೆ ಪ್ರತಿದಿನವೂ ಕೂಲಿ ಮಾಡಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಹಗಳಿರಳು ಶ್ರಮಿಸುತ್ತಿದ್ದಾರೆ. ಇವರ ಮಗಳಾದ ಕುಮಾರಿ ನೀಲಮ್ಮ ಬೀಸನಾಳ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಕನ್ನಡ 98 ಇಂಗ್ಲೀಷ 86 ಇತಿಹಾಸ 97 ಅರ್ಥಶಾಸ್ತ್ರ 95 ಸಮಾಜಶಾಸ್ತ್ರ 93 ರಾಜ್ಯಶಾಸ್ತ್ರ 100ಕೆ 100 ಅಂಕಗಳೊಂದಿಗೆ ಶೇಕಡಾ 94.83 ರಷ್ಟು ಅಂಕಗಳನ್ನು ಗಳಿಸಿ ಪರೀಕ್ಷಾ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ.
