ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಹಿರೇಬೇವನೂರ ಗ್ರಾಮದ ಹತ್ತಿರ ಟಂ ಟಂ ನಲ್ಲಿ ಸಾಗಿಸುತ್ತಿದ್ದ ೫೦ ಕೆಜಿ ಒಂದು ಚೀಲದ ೩೦ ಚೀಲಗಳನ್ನು ವಶ ಪಡಿಸಿಕೊಂಡಿದ್ದು ಅದರ ಅಂದಾಜು ಮೌಲ್ಯ ೪೨ ಸಾವಿರ ರೂ ಇದೆ ಆಹಾರ ನೀರಿಕ್ಷಕ ಪರಮಾನಂದ ಹೂಗಾರ ಜಪ್ತಿ ಮಾಡಿದ್ದಾರೆ.
ಇಂಡಿಯ ತಹಸೀಲ್ದಾರರು ನೀಡಿದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದು
ಟಂ ಟಂ ನಲ್ಲಿ ಸಾಗಿಸುತ್ತಿದ್ದ ಅಕ್ಕಿ ಸಮೇತ ಸಾಬೀರ ಬಾಗವಾನ ಮತ್ತು ಯೂನುಶ ಚಾಂದ ಬಾಗವಾನ ಸೋಲಾಪುರದ ಮೂಳೇಗಾವದವರನ್ನು ಬಂಧಿಸಿ ಅಕ್ಕಿ ವಶ ಮಾಡಿಕೊಂಡಿದ್ದಾರೆ.
ಗ್ರಾಮೀಣ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

