ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಸರ್ಕಾರಿ ಪದವಿ ಪೂರ್ವ ಕಾಲೇಜುಗಳೆಂದರೆ ಮೂಗುಮುರಿಯುವವರೇ ಜಾಸ್ತಿ ಆದರೆ ನಿಜವಾದ ಗುಣಾತ್ಮಕ ಬದಲಾವಣೆಗಳು ಇರುವುದು ಸರಕಾರಿ ಕಾಲೇಜುಗಳಲ್ಲಿ ಎಂಬುದನ್ನ ಸರಕಾರಿ ಪದವಿ ಪೂರ್ವ ಕಾಲೇಜು, ಕೂಡಗಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ತೋರಿಸಿಕೊಟ್ಟಿದ್ದಾರೆ ೨೦೨೫- ೨೬ ನೇ ಸಾಲಿನ ಪಿಯುಸಿ ದ್ವಿತೀಯ ಫಲಿತಾಂಶ ಶೇಕಡ ೯೫.೫೨ ರಷ್ಟಾಗಿದ್ದು ಕಾಲೇಜಿನ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಗ್ರಾಮದ ಗುರು ಹಿರಿಯರು ಶುಭ ಹಾರೈಸಿದ್ದಾರೆ.
ಇಡೀ ಕಾಲೇಜಿಗೆ ಲಕ್ಷ್ಮಿಹಂಗರಗಿ ೫೬೬, ಭಾಗ್ಯಶ್ರೀ ಮೋಡೆ ೫೪೯, ಶಿಲ್ಪಾ ಆಸಂಗಿ ೫೪೬, ರಕ್ಷಿತಾ ಇಬ್ರಾಹಿಂಪುರ್ ೫೪೫, ರೇಖಾ ಜಲದಿ ೫೨೯, ಶೃತಿ ಹಂಗರಗಿ ೫೧೩, ರಕ್ಷಿತಾ ತೋಳಮಟ್ಟಿ ೫೧೩, ಶಿವನಗೌಡ ಪಾಟೀಲ್ ೫೦೬ ಹಾಗೂ ಪ್ರೇರಣಾ ಹಿರೇಮಠ ೪೯೯, ಮನೋಜ ಸಾಲಹಳ್ಳಿ ೪೯೯ ಅಂಕಗಳನ್ನು ಪಡೆಯುವುದರ ಮೂಲಕ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.
೬೭ ವಿದ್ಯಾರ್ಥಿ ಗಳಲ್ಲಿ ೬೫ ವಿದ್ಯಾರ್ಥಿಗಳು ಪಾಸಾಗೋದರ ಮೂಲಕ ಖುಷಿಪಟ್ಟಿದ್ದಾರೆ. ೦೭ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದರೆ, ೫೧ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, ೦೫ ವಿದ್ಯಾರ್ಥಿಗಳ ದ್ವಿತೀಯ ದರ್ಜೆಯಲ್ಲಿ ಪಾಸ್ ಆಗುವುದರ ಮೂಲಕ ಕಾಲೇಜಿನ, ಗ್ರಾಮದ ಕೀರ್ತಿಯನ್ನು ಜಿಲ್ಲಾಮಟ್ಟದಲ್ಲಿ ಅಷ್ಟೇ ಅಲ್ಲದೆ ರಾಜ್ಯಮಟ್ಟದಲ್ಲೂ ಕೂಡ ಬೆಳಗಿದ್ದಾರೆ.
ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕಾಲೇಜಿನ ಪ್ರಾಚಾರ್ಯರು, ಸಿಬ್ಬಂದಿ ವರ್ಗ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಗ್ರಾಮದ ಗುರು ಹಿರಿಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಕಾಲೇಜಿನ ಫಲಿತಾಂಶವನ್ನು ಕಂಡು ಕಾಲೇಜ್ ಅಭಿವೃದ್ದಿ ಸಮಿತಿ ಅಧ್ಯಕ್ಷ ಹನುಮಂತ ಮಸೂತಿ ಮಾತನಾಡಿ ಕಾಲೇಜಿನ ಸಿಬ್ಬಂದಿ ವರ್ಗದವರ ಬಗ್ಗೆ ಹಾಗೂ ಪ್ರಾಚಾರ್ಯರ ಬಗ್ಗೆ ನಮಗೆ ತುಂಬಾ ಅಭಿಮಾನವಿದೆ ಹಾಗೂ ಕಾಲೇಜಿನ ಫಲಿತಾಂಶದಲ್ಲಿ ನಿಮ್ಮೆಲ್ಲರ ಪಾತ್ರ ಮೆಚ್ಚುವಂಥದ್ದು ಎಂದು ಹರುಷ ವ್ಯಕ್ತಪಡಿಸಿ ಅಭಿನಂದಿಸಿದರು.

