ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶದಲ್ಲಿ ಜಿಲ್ಲೆಯ ಆಲಮಟ್ಟಿ ಎಸ್.ವಿ.ವಿ.ಸಂಸ್ಥೆಯ ಮಂಜಪ್ಪ ಹಡೇ೯ಕರ ಸ್ಮಾರಕ ಸಂಯುಕ್ತ ಪದವಿಪೂರ್ವ (ಎಂಎಚ್ಎಂ) ಕಾಲೇಜು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಅತ್ಯತ್ತಮ ಫಲಿತಾಂಶ ದಾಖಲಿಸಿಕೊಂಡಿದೆ.
2025-2026 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಕಲಾ,ವಾಣಿಜ್ಯ ವಿಭಾಗದಲ್ಲಿ ಈ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ಕಾಲೇಜಿಗೆ, ಸಂಸ್ಥೆಗೆ ಹಾಗೂ ಆಲಮಟ್ಟಿ ಗ್ರಾಮಕ್ಕೆ ಅಪಾರ ಕೀತಿ೯ ತಂದಿದ್ದಾರೆ.
ಕಲಾ ವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 91 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ್ತಿದ್ದ 31 ವಿದ್ಯಾರ್ಥಿಗಳಲ್ಲಿ 30 ಜನ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಲಾ ವಿಭಾಗದ ಫಲಿತಾಂಶ ಶೇ, 98.91 ರಷ್ಟಾಗಿದೆ. ವಾಣಿಜ್ಯ ವಿಭಾಗದ ರಿಜಲ್ಟ್ ಶೇ,96.97 ರಷ್ಟಾಗಿದೆ. ಇವೆರಡೂ ವಿಭಾಗ ಸೇರಿ ಈ ಬಾರಿ ಕಾಲೇಜಿನ ಒಟ್ಟು ಫಲಿತಾಂಶ ಶೇ, 98.27 ರಷ್ಟು ದಾಖಲಾಗಿದೆ.
ಕಲಾ ವಿಭಾಗದಲ್ಲಿ 20 ಡಿಸ್ಟಿಂಕ್ಷನ್, 60 ಪ್ರಥಮ, 08 ದ್ವಿತೀಯ, 03 ತೃತೀಯ ದಜೆ೯ಯಲ್ಲಿ ಹಾಗೂ ವಾಣಿಜ್ಯ ವಿಭಾಗದಲ್ಲಿ 15 ಡಿಸ್ಟಿಂಕ್ಷನ್,10 ಪ್ರಥಮ, 03 ದ್ವಿತೀಯ, 02 ತೃತೀಯ ಶ್ರೇಣಿಯಲ್ಲಿ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕಲಾ,ವಾಣಿಜ್ಯ ಸೇರಿ ಒಟ್ಟು ಪರೀಕ್ಷೆಗೆ ಕುಳಿತ 123 ವಿದ್ಯಾರ್ಥಿಗಳಲ್ಲಿ 121 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕೇವಲ ಇಬ್ಬರು ವಿದ್ಯಾರ್ಥಿಗಳು ಮಾತ್ರ ಫೇಲ್ ಅಗಿದ್ದಾರೆ.
ಕಲಾ ವಿಭಾಗದಲ್ಲಿ ಬಸವರಾಜ, ವಾಣಿಜ್ಯ ವಿಭಾಗದಲ್ಲಿ ಫಕ್ಕೀರಪ್ಪ ಕಾಲೇಜಿಗೆ ಪ್ರಥಮ:
ಕಲಾ ವಿಭಾಗದಲ್ಲಿ ಬಸವರಾಜ ತಳವಾರ 581 ಅಂಕ ಪಡೆದು ಕಾಲೇಜಿಗೆ ಪ್ರಥಮ ಬಂದರೆ ಬೋರಮ್ಮ ಹೂಗಾರ 578 ಅಂಶದೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಆಫೀ೯ನ್ ದಾಲರೂಟ್ 568 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.

