Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಪ್ರೌಢ ಶಾಲೆಯಲ್ಲಿ ಸುಭಾಷಚಂದ್ರ ಬೋಸರವರ ಜಯಂತ್ಯುತ್ಸವವನ್ನು ಆಚರಿಸಲಾಯಿತು.ಈ ವೇಳೆ ಮುಖ್ಯೋಪಾಧ್ಯಾಯ ರಾಮಚಂದ್ರ ಹೆಗಡೆ, ಸಂಸ್ಥೆಯ ಅಧ್ಯಕ್ಷ ಬಿ.ಪಿ.ಕುಲಕರ್ಣಿ, ಸಲಹಾ ಸಮಿತಿಯ ಸದಸ್ಯ ಜಿ.ಜೆ.ಪಾದಗಟ್ಟಿ, ಆಂಗ್ಲ ಮಾಧ್ಯಮ ಮುಖ್ಯಗುರುಮಾತೆ ರಂಜಿತಾ ಭಟ್ಟ, ಶಿಕ್ಷಕರುಗಳಾದ ಮಂಜುನಾಥ ಪಡದಾಳಿ, ಕಿರಣ ಕಡಿ, ಬಿ.ಟಿ.ಭಜಂತ್ರಿ, ಲೋಹಿತ ಜೈನಾಪೂರ, ಎಸ್.ಎಸ್.ಹಂಜಗಿ, ರಾಧಾ ಕೋಲಕಾರ, ಗುರುಬಾಯಿ ತಂಗಡಗಿ, ಆರ್.ಜೆ.ಸಾಗರ, ಅನ್ನಪೂರ್ಣ ಹೊಸಮನಿ, ತ್ರಿವೇಣಿ ಕುಲಕರ್ಣಿ, ಮೀನಾಕ್ಷಿ ಗಣಾಚಾರಿ, ಶಿವಶಂಕರಯ್ಯ ಮಠ, ರೂಪಾ ನಾಟೇಕರ, ವಿನಾಯಕ ನಾಗರಾಳ, ಶಾಹಿನ ನಾಲತವಾಡ ಸೇರಿದಂತೆ ಹಲವರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ನ್ಯಾಯವಾದಿಗಳ ಸಂಘದ ಸದಸ್ಯ ಈರಣ್ಣ ಶಂಕರಗೌಡ ವಡವಡಗಿ(ಗುಳಬಾಳ) ಅವರ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಸ್ಥಳೀಯ ನ್ಯಾಯಾಲಯದ ಕಲಾಪಗಳಿಂದ ನ್ಯಾಯವಾದಿಗಳು ಗುರುವಾರ ದೂರ ಉಳಿಯುವ ಮೂಲಕ ಘಟನೆಯನ್ನು ಖಂಡಿಸಿದರು.ಈ ವಿಷಯದ ಕುರಿತು ನ್ಯಾಯವಾದಿಗಳ ಸಂಘದ ಕಚೇರಿಯಲ್ಲಿ ತುರ್ತು ಸಭೆ ಕರೆದು ಸಭೆಯಲ್ಲಿ ಸಂಘದ ಸದಸ್ಯ ಈರಣ್ಣ ವಡವಡಗಿ ಅವರ ಮೇಲೆ ಜ.೨೨ ರಂದು ಸಂಜೆ ಮಾರಣಾಂತಿಕ ಹಲ್ಲೆಯಾಗಿರುವದನ್ನು ತೀವ್ರವಾಗಿ ಖಂಡಿಸಲಾಯಿತು. ಹಲ್ಲೆಗೊಳಾಗದ ನ್ಯಾಯವಾದಿಗಳು ಮುಂಚಿತವಾಗಿ ಆರೋಪಿಗಳಿಂದ ನನಗೆ ಜೀವ ಬೆದರಿಕೆಯಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ಲಿಖಿತ ರೂಪದಲ್ಲಿ ನೀಡಿದ್ದರು. ಈ ಕುರಿತು ಪೊಲೀಸ್ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವದನ್ನು ಸಭೆಯು ತೀವ್ರವಾಗಿ ಖಂಡಿಸಿತು. ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಆರೋಪಿಗಳನ್ನು ಬಂಽಸುವವರೆಗೂ ನ್ಯಾಯಾಲಯದ ಕಲಾಪಗಳಿಂದ ದೂರ ಉಳಿಯುಲು ಸಭೆ ನಿರ್ಧರಿಸಿತು. ಈ ಆರೋಪಿತರ ಪರ ಸಂಘದ ಯಾವ ಸದಸ್ಯರು ವಕಾಲತ್ತು ವಹಿಸಬಾರದು. ಅಲ್ಲದೇ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಲೋಕಸಭಾ ಸದಸ್ಯೆ ಪ್ರಿಯಾಂಕಾ ವಾದ್ರಾ ಅವರನ್ನು ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ, ಕನ್ನಡ ನಾಡಿನ ಅಸ್ಮಿತೆಯ ಪ್ರತೀಕ ವೀರ ರಾಣಿ ಚೆನ್ನಮ್ಮನವರೊಂದಿಗೆ ಹೋಲಿಕೆ ಮಾಡಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾತು ಸರಿಯಾದ ಕ್ರಮವಲ್ಲ. ವೀರರಾಣಿ ಕಿತ್ತೂರು ಚೆನ್ನಮ್ಮ ನವರು ಸ್ವತಂತ್ರ ಹೋರಾಟಕ್ಕಾಗಿ ಬ್ರಿಟಿಷರೊಂದಿಗೆ ಹೋರಾಟ ಮಾಡಿ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಧರ್ಮದ ಬಗ್ಗೆ ಅಪಾರ ಕಳಕಳಿಯನ್ನು ಹೊಂದಿದವರಾಗಿದ್ದರು. ಅವರು ದೇಶದ ಎಲ್ಲ ಜನರಿಗೆ ಮಾದರಿಯಾಗಿ ನಮ್ಮ ಮುಂದೆ ನಿಲ್ಲುತ್ತಾರೆ. ಕಿತ್ತೂರು ಚನ್ನಮ್ಮನವರ ವ್ಯಕ್ತಿತ್ವದ ಮುಂದೆ ಪ್ರಿಯಾಂಕ ವಾದ್ರಾ ಅವರು ಏನು ಅಲ್ಲ ಎನ್ನುವ ಸತ್ಯವನ್ನು ಮಲ್ಲಿಕಾರ್ಜುನ ಖರ್ಗೆ ತಿಳಿದುಕೊಳ್ಳಬೇಕು. ಅವರು ಪ್ರಿಯಾಂಕ ವಾದ್ರಾ ಅವರನ್ನು ಹೊಗಳಲು ನಮ್ಮದೇನು ಅಭ್ಯಂತರವಿಲ್ಲ. ಆದರೆ ವೀರರಾಣಿ ಕಿತ್ತೂರು ಚೆನ್ನಮ್ಮನವರ ಜೊತೆಗೆ ಹೋಲಿಸುವುದು ಸರ್ವತಾ ಒಪ್ಪುವ ಮಾತಲ್ಲ. ಈ ರೀತಿ ಮಾತನಾಡುವ ಮೂಲಕ ಕನ್ನಡ ನಾಡಿಗೆ ಅವಮಾನ ಮಾಡಿದ್ದೀರಿ. ಇನ್ನು ಮುಂದೆ ಈ ರೀತಿ ಮಾತನಾಡಬಾರದು. ಇದು ದೇಶದ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ವಿಜಯಪುರ ನಗರದ ಹತ್ತಿರ ಇರುವ ಇಟ್ಟಂಗಿ ಬಟ್ಟಿಯಲ್ಲಿ ಬಾಗಲಕೋಟೆ ಜಿಲ್ಲೆಯ ಚಿಕ್ಕಲಕಿ ಗ್ರಾಮದ ಕೂಲಿ ಕಾರ್ಮಿಕರ ಮೇಲೆ ಇಟ್ಟಂಗಿ ಬಟ್ಟಿ ಮಾಲೀಕ ಒಂದು ಚಿಕ್ಕ ಕಾರಣಕ್ಕೆ ಅಮಾನವೀಯ ಹಾಗೆ ಹಲ್ಲೆ ಮಾಡಿರುವುದು ಖಂಡನೀಯ.ತಮ್ಮ ಹೊಟ್ಟೆ ಪಾಡಿಗೆ ಕೂಲಿ ಕೆಲಸವನ್ನು ಮಾಡುವ ಬಡವರ ಮೇಲೆ ಅಮಾನವೀಯ ರಾಕ್ಷಸ ಪ್ರವೃತ್ತಿಯಿಂದ ಮನಸಾ ಇಚ್ಛೆ ಹಲ್ಲೆ ಮಾಡಿರುವ ವಿಡಿಯೋವನ್ನು ನೋಡಿದರೆ ಹಲ್ಲೆ ಮಾಡಿದ ದುಷ್ಕರ್ಮಿಗಳಿಗೆ ಸ್ವಲ್ಪವೂ ಕರುಣೆನೆ ಇಲ್ಲದ ಹಾಗೆ ಕಾಣಿಸುತ್ತದೆ. ಹಲ್ಲೆಗೊಳಗಾದ ಕೂಲಿ ಕಾರ್ಮಿಕರು ಎಷ್ಟೇ ಅಂಗಲಾಚಿ ಬೇಡಿಕೊಂಡರೂ ಸ್ವಲ್ಪವೂ ಕರುಣೆ ತೋರಿಸದೇ ಹಲ್ಲೆ ಮಾಡಿರುವವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ದುಷ್ಕರ್ಮಿಗಳ ಪರ ಯಾವ ನ್ಯಾಯವಾದಿಗಳು ಜಾಮೀನು ಕೊಡಿಸಲು ಮುಂದಾಗಬಾರದು ಎಂದು ನ್ಯಾಯವಾದಿಗಳಲ್ಲಿ ಮನವಿ ಮಾಡುತ್ತೇನೆ. ಹಲ್ಲೆಗೊಳಗಾದ ಕಾರ್ಮಿಕರಿಗೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು. ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸಬೇಕೆಂದು ಸರ್ಕಾರವನ್ನು ಆಗ್ರಹಿಸುವುದಾಗಿ ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದಲ್ಲಿ ಬಂಜಾರ ಸಮಾಜ ಬಾಂಧವರು ಜನಸಂಖ್ಯೆ ಆಧಾರದ ಮೇಲೆ ಒಳಮೀಸಲಾತಿ ಮಾಡುತ್ತಿರುವ ಸರ್ಕಾರದ ನಡೆಯನ್ನು ಖಂಡಿಸಿ ನ್ಯಾ.ನಾಗಮೋಹನದಾಸ್ ಅವರಿಗೆ ಬರೆದ ಪತ್ರವನ್ನು ಅಂಚೆ ಪೆಟ್ಟಿಗೆಯಲ್ಲಿ ಗುರುವಾರ ಹಾಕಿದರು.ಅಂಚೆಪೆಟ್ಟಿಗೆಯಲ್ಲಿ ಪತ್ರ ಹಾಕುವ ಮುನ್ನ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಸೇರಿದ ಸಭೆಯಲ್ಲಿ ಕರ್ನಾಟಕ ಪ್ರದೇಶ ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಡಾ.ಬಸವರಾಜ ಚವ್ಹಾಣ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ,ಬಂಜಾರ ನಿಗಮ ಮಂಡಳಿ ಮಾಜಿ ನಿರ್ದೇಶಕ ಮಲ್ಲಿಕಾರ್ಜುನ ನಾಯಕ ಮಾತನಾಡಿ, ನ್ಯಾಯಮೂರ್ತಿ ನಾಗಮೋಹನದಾಸರು ಒಳಮೀಸಲಾತಿ ಪ್ರಕಟಿಸುವ ಮೊದಲು ೨೦೧೨ ರ ಜನಸಂಖ್ಯೆಯನ್ನು ಪರಿಗಣಿಸದೇ ಸಧ್ಯದಲ್ಲಿಯೇ ಕೇಂದ್ರ ಸರ್ಕಾರ ನಡೆಸುವ ೨೦೨೫ರ ಜನಗಣತಿ ಪರಿಗಣಿಸಬೇಕು. ಆಗ ಮಾತ್ರ ಎಲ್ಲರಿಗೂ ನ್ಯಾಯ ಸಿಗಲು ಸಾಧ್ಯವಿದೆ ಎಂದರು.ಪ್ರತಿ ತಾಂಡಾಗಳಿಗೆ ಭೇಟಿ ನೀಡಿ ವಾಸ್ತವಿಕ ದತ್ತಾಂಶ ಸಂಗ್ರಹಿಸಬೇಕು. ಬಂಜಾರ ಸಮಾಜ ಬಾಂಧವರ ಕುರಿತು ಹಿಂದೆ ನೀಡಿದ ವರದಿಯನ್ನು ವರದಿ ಪರಿಗಣಿಸಬೇಕು. ಒಳಮೀಸಲಾತಿ ಪ್ರಕಟಿಸುವ ಮೊದಲು ಇದನ್ನು ಪರಿಗಣಿಸಬೇಕಾದ ಅಗತ್ಯವಿದೆ ಎಂದರು.ಸಭೆಯಲ್ಲಿ ಮುಖಂಡರಾದ ಹರಿಲಾಲ ನಾಯಕ, ಕೃಷ್ಣ ನಾಯಕ, ಗುರಪ್ಪ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ಸಂಜೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಬೀದಿ ಬದಿಯ ವ್ಯಾಪಾರಿಗಳ ವಿಭಾಗದಿಂದ ಸ್ಥಳೀಯ ಕೃಷಿ ಪತ್ತಿನ ಸಹಕಾರಿ ಸಂಘ, ತಾಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕು, ಬಸವೇಶ್ವರ ಅರ್ಬನ್ ಬ್ಯಾಂಕಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ, ನಿರ್ದೇಶಕರಿಗೆ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿದ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಬೀದಿ ಬದಿಯಲ್ಲಿ ನಿತ್ಯ ತಮ್ಮ ವ್ಯಾಪಾರ ಮಾಡಿಕೊಂಡು ತಮ್ಮ ಜೀವನ ನಿರ್ವಹಿಸುತ್ತಿರುವ ಬಾಂಧವರು ಒಗ್ಗೂಟ್ಟಿನಿಂದ ಸ್ಥಳೀಯ ವಿವಿಧ ಬ್ಯಾಂಕಿಗೆ ಆಯ್ಕೆಯಾದ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ ಸನ್ಮಾನಿಸುತ್ತಿರುವದು ಶ್ಲಾಘನೀಯ ಸಂಗತಿ. ಇವರು ತಮ್ಮ ದುಡಿಮೆಯಿಂದ ಬಂದಿರುವದರಲ್ಲಿ ಪಾಲು ನೀಡಿ ನಮ್ಮ ಎಲ್ಲ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳನ್ನು ಸನ್ಮಾನಿಸುವ ಮೂಲಕ ತಮ್ಮ ಪಾತ್ರ ವಹಿಸಿ ಸನ್ಮಾನಿಸಿರುವದು ಎಲ್ಲರಿಗೂ ಸಂತಸ ತಂದಿದೆ ಎಂದರು.ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿ, ಬೀದಿ ಬದಿಯ ವ್ಯಾಪಾರಸ್ಥರು ಅಲ್ಪ ಬಂಡವಾಳ…
ಉದಯರಶ್ಮಿ ದಿನಪತ್ರಿಕೆ ಚಡಚಣ: ನೇತಾಜಿ ಎಂದು ಜನಪ್ರಿಯರಾಗಿ ಕರೆಯಲ್ಪಡುವ ಸುಭಾಷ್ ಚಂದ್ರ ಬೋಸ್ ಅವರು ಬ್ರಿಟೀಷ್ ಆಳ್ವಿಕೆಯಿಂದ ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟದಲ್ಲಿ ಅತ್ಯಂತ ಪ್ರಮುಖ ಮತ್ತು ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು ಎಂದು ಶಿಕ್ಷಕ ಬಸವರಾಜ ಕರಜಗಿ ಹೇಳಿದರು.ಅವರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂ-೨ ಮರಡಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ನೇತಾಜಿ ಸುಭಾಷ್ ಚಂದ್ರ ಬೋಸರ ಜಯಂತಿ ಕುರಿತು ಮಾತನಾಡುತ್ತಿದ್ದರು.ನೇತಾಜಿಯವರ ಅಚಲ ನಿರ್ಣಯ, ದೂರದೃಷ್ಟಿಯ ನಾಯಕತ್ವ ಮತ್ತು ಕ್ರಾಂತಿಕಾರಿ ವಿಚಾರಗಳು ಅವರನ್ನು ಧೈರ್ಯ ಮತ್ತು ದೇಶಪ್ರೇಮದ ಸಂಕೇತವನ್ನಾಗಿ ಮಾಡಿತು ಎಂದು ಹೇಳಿದರು.ಶಿಕ್ಷಕ ಜಗದೀಶ ಚಲವಾದಿ ಮಾತನಾಡಿ ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದವರು.ಅವರು ಭಾರತ ಮಹಾನ್ ವ್ಯಕ್ತಿಯಾಗಿದ್ದರು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ ಮಾತನಾಡಿ ಬೋಸರು ಆಗಾಗ ಹೇಳುತ್ತಿದ್ದರು ನೀವು ನಮಗೆ ರಕ್ತ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕೆಲವು ದಿನಗಳ ಹಿಂದೆ ವಿಜಯಪುರ ನಗರದ ಹೊರವಲಯದಲ್ಲಿ ಇಟ್ಟಂಗಿ ಬಟ್ಟಿಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರನ್ನು ಅವರನ್ನು ಕೆಲಸಕ್ಕೆ ಕರೆದೊಯ್ದು. ಮಾಲಿಕ ಗ್ಯಾಂಗ್ ಕಟ್ಟಿಕೊಂಡು ಮನಬಂದಂತೆ ಥಳಿಸಿ ಮೃಗಿಯ ವರ್ತನೆ ಮೆರೆದಿರುವ ಘಟನೆ ಇಡೀ ಮಾನವ ಕುಲ ತಲೆತಗ್ಗಿಸುವ ವಿಷಯವಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ ಹೇಳಿದರು.ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಸಂವಿಧಾನ ಜಾರಿಯಾಗಿ ೭೫ರ ಸುವರ್ಣ ಮಹೋತ್ಸವ ಆಚರಿಸುವ ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದು ಅತ್ಯಂತ ಖೇದಕರ ಸಂಗತಿ. ದೌರ್ಜನ್ಯಕೋರರೆಲ್ಲರನ್ನೂ ಪೊಲೀಸ್ ಇಲಾಖೆ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ನೊಂದ ಕುಟುಂಬಗಳಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು. ಅಲ್ಲದೇ ಸದರಿ ದೌರ್ಜನ್ಯದಲ್ಲಿ ನೊಂದವರಿಗೆ ತಲಾ ೧೦ಲಕ್ಷ ರೂ. ಪರಿಹಾರ ಘೋಷಿಸಬೇಕು. ಸದರಿ ಇಟ್ಟಂಗಿ ಬಟ್ಟಿಯ ಪರವಾನಿಗೆ ರದ್ದು ಪಡಿಸಬೇಕು. ಹಾಗೂ ಜಿಲ್ಲೆಯ ಎಲ್ಲ ಇಟ್ಟಂಗಿ ಬಟ್ಟಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸೂಕ್ತ ರಕ್ಷಣೆ…
ಆದಿಶೇಷ ಸಂಸ್ಥಾನ ಹಿರೇಮಠದ ೨೯ನೇ ಜಾತ್ರಾ ಮಹೋತ್ಸವ | ಡಾ.ಚಂದ್ರಶೇಖರ ಶ್ರೀಗಳ ೫೪ನೇ ವರ್ಷದ ಅನುಷ್ಠಾನದ ಸುರ್ವಣ ಮಹೋತ್ಸವ | ಪುರಾಣ ಮಹಾ ಮಂಗಲ | ಧರ್ಮಸಭೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸರಕಾರ ಪಂಚ ಗ್ಯಾರಂಟಿ ಯೋಜನೆಗೆ ಬಹಳಷ್ಟು ದುಡ್ಡು ಖರ್ಚಾಗುವ ಕಾರಣ ಆಯಾ ಭಾಗದ ಕಾರ್ಯ ಎಷ್ಟು ನಡೆಯಬೇಕಿತ್ತು ಅಷ್ಟು ಕಾರ್ಯ ನಡೆಯುತ್ತಿಲ್ಲ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ವಿಷಾದವ್ಯಕ್ತಪಡಿಸಿದರು.ಸಿಂದಗಿ ಪಟ್ಟಣದ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ ೨೯ನೇ ಜಾತ್ರಾ ಮಹೋತ್ಸವ ಹಾಗೂ ರಾಜಯೋಗಿ ಡಾ.ಚಂದ್ರಶೇಖರ ಶ್ರೀಗಳವರ ೫೪ನೇ ವರ್ಷದ ಅನುಷ್ಠಾನದ ಸುರ್ವಣ ಮಹೋತ್ಸವ, ಶ್ರೀ ರೇವಣಸಿದ್ದೇಶ್ವರ ಮಹಾಪುರಾಣ ಮಹಾ ಮಂಗಲ ಹಾಗೂ ಧರ್ಮಸಭೆಯ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಧನ ಕನಕಾದಿ ವಸ್ತುಗಳು ಬಹಿರಂಗದ ಸಿರಿ. ಸತ್ಯ ಶಾಂತಿಗಳು ಆಂತರಿಕ ಸಿರಿ. ಹೊರಗಿನ ಸಿರಿಯನ್ನು ಕಳ್ಳರು ಕದಿಯಬಹುದು. ಆದರೆ ಅಂತರಂಗದ ಗುಣ ಸಿರಿಯನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದ ವೀರಶೈವ…
ಅಂತರರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ -2025 ರ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಬೆಂಗಳೂರು: ಕೃಷಿ ಆಧಾರಿತ ಮಂಡ್ಯ ಜಿಲ್ಲೆಯಲ್ಲಿ ಸಮಗ್ರ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ.ಈ ವಿಶ್ವವಿದ್ಯಾಲಯವು ಕೃಷಿ, ತೋಟಗಾರಿಕೆ ಮತ್ತು ಪಶುಸಂಗೋಪನೆ ಕೋರ್ಸ್‌ಗಳನ್ನು ನೀಡಲಿದ್ದು, ಮಂಡ್ಯ, ಹಾಸನ, ಮೈಸೂರು ಮತ್ತು ಚಾಮರಾಜನಗರ ಪ್ರದೇಶಗಳ ರೈತರಿಗೆ ಸಾವಯವ ಮತ್ತು ಧಾನ್ಯ ಕೃಷಿಗಾಗಿ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಲಿದೆ ಎಂದು ತಿಳಿಸಿದರು.ನಗರದ ಅರಮನೆ ಮೈದಾನದಲ್ಲಿ ನಡೆದ ಅಂತರರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ -2025 ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ, ರೈತರ ಬಹುದಿನಗಳ ಬೇಡಿಕೆಯಾಗಿರುವ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಜಾರಿಗೆ ತರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.”ಭಾರತ ಕೃಷಿ ದೇಶ ಮತ್ತು ನಾವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಆಹಾರದ ಕೊರತೆ ಇತ್ತು. ಆದರೆ ಈಗ, ಭಾರತವು ಅನೇಕ ಆಹಾರ ಧಾನ್ಯಗಳನ್ನು ರಫ್ತು ಮಾಡುತ್ತಿರುವುದು…
