ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ಸಂಜೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಬೀದಿ ಬದಿಯ ವ್ಯಾಪಾರಿಗಳ ವಿಭಾಗದಿಂದ ಸ್ಥಳೀಯ ಕೃಷಿ ಪತ್ತಿನ ಸಹಕಾರಿ ಸಂಘ, ತಾಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕು, ಬಸವೇಶ್ವರ ಅರ್ಬನ್ ಬ್ಯಾಂಕಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ, ನಿರ್ದೇಶಕರಿಗೆ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಬೀದಿ ಬದಿಯಲ್ಲಿ ನಿತ್ಯ ತಮ್ಮ ವ್ಯಾಪಾರ ಮಾಡಿಕೊಂಡು ತಮ್ಮ ಜೀವನ ನಿರ್ವಹಿಸುತ್ತಿರುವ ಬಾಂಧವರು ಒಗ್ಗೂಟ್ಟಿನಿಂದ ಸ್ಥಳೀಯ ವಿವಿಧ ಬ್ಯಾಂಕಿಗೆ ಆಯ್ಕೆಯಾದ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ ಸನ್ಮಾನಿಸುತ್ತಿರುವದು ಶ್ಲಾಘನೀಯ ಸಂಗತಿ. ಇವರು ತಮ್ಮ ದುಡಿಮೆಯಿಂದ ಬಂದಿರುವದರಲ್ಲಿ ಪಾಲು ನೀಡಿ ನಮ್ಮ ಎಲ್ಲ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳನ್ನು ಸನ್ಮಾನಿಸುವ ಮೂಲಕ ತಮ್ಮ ಪಾತ್ರ ವಹಿಸಿ ಸನ್ಮಾನಿಸಿರುವದು ಎಲ್ಲರಿಗೂ ಸಂತಸ ತಂದಿದೆ ಎಂದರು.
ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿ, ಬೀದಿ ಬದಿಯ ವ್ಯಾಪಾರಸ್ಥರು ಅಲ್ಪ ಬಂಡವಾಳ ಹಾಕಿಕೊಂಡು ನಿತ್ಯವೂ ತಮ್ಮ ವ್ಯಾಪಾರ ವಹಿವಾಟು ಮಾಡಿಕೊಂಡು ತಮ್ಮ ಜೀವನ ನಿರ್ವಹಣೆ ಮಾಡುತ್ತಿರುತ್ತಾರೆ. ಬೀದಿ ಬದಿಯ ವ್ಯಾಪಾರಸ್ಥರಿಗೆ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ಸ್ಥಳೀಯ ಎಲ್ಲ ಬ್ಯಾಂಕುಗಳು ಸಾಲ ಸೌಲಭ್ಯ ಸೇರಿದಂತೆ ಇತರೇ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು. ಬೀದಿ ಬದಿಯ ವ್ಯಾಪಾರಸ್ಥರು ಸೌಲಭ್ಯ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದರು.
ಬಸವೇಶ್ವರ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಲೋಕನಾಥ ಅಗರವಾಲ, ಉಪಾಧ್ಯಕ್ಷ ಬಸವರಾಜ ಗೊಳಸಂಗಿ, ನಿರ್ದೇಶಕರಾದ ಶಂಕರಗೌಡ ಬಿರಾದಾರ, ಜಗದೀಶ ಕೊಟ್ರಶೆಟ್ಟಿ, ಮುತ್ತು ಕಿಣಗಿ,ಶ್ರೀಶೈಲ ಪತ್ತಾರ, ಕೆ.ಎಲ್.ತಿಪ್ಪನಗೌಡರ, ಉಮೇಶ ಹಾರಿವಾಳ, ಅನಿಲ ದುಂಬಾಳಿ, ನೀಲಪ್ಪ ನಾಯಕ, ಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ಉಪಾಧ್ಯಕ್ಷ ಮಲ್ಲೇಶಿ ಕಡಕೋಳ, ನಿರ್ದೇಶಕರಾದ ಈರಣ್ಣ ವಂದಾಲ, ಶ್ರೀಶೈಲ ಪರಮಗೊಂಡ, ನಿಂಗಪ್ಪ ಕುಳಗೇರಿ, ಸಂಗನಬಸಪ್ಪ ನಾಯ್ಕೋಡಿ, ಸುರೇಶ ನಾಯಕ, ಮುತ್ತು ಉಕ್ಕಲಿ, ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ನಿರ್ದೇಶಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಬೀದಿ ಬದಿಯ ವ್ಯಾಪಾರಿಗಳ ವಿಭಾಗದ ಅಧ್ಯಕ್ಷ ಮುತ್ತು (ಆದಪ್ಪ) ನಾಲತವಾಡ, ಉಪಾಧ್ಯಕ್ಷ ಮೈಬೂಬ ಅತ್ತಾರ, ತೌಫಿಕ ಶಾಬಾದಿ, ಸಿದ್ದು ವಂದಾಲ, ಶಕೀಲ ಚಡಚಣಕರ, ಮುಕ್ತುಬಸಾಬ ಬೈರವಾಡಗಿ, ಪ್ರಕಾಶ ಚಿಮ್ಮಲಗಿ, ವಿಜಯ ಶೆಟ್ಟಿ, ಮೋಹನ ರಾಠೋಡ, ಅಬ್ದುಲ್‌ರಜಾಕ ಬಾಗವಾನ, ನಾಮದೇವ ಗಾಯಕವಾಡ, ಮುಕ್ತಮ ಹೊಕ್ರಾಣಿ, ಜಹೀಲ ಬೆಲೀಪ್ ಸೇರಿದಂತೆ ಇತರರು ಇದ್ದರು.
ಶಿಕ್ಷಕ ಬಸವರಾಜ ನಂದಿಹಾಳ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.