ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದಲ್ಲಿ ಬಂಜಾರ ಸಮಾಜ ಬಾಂಧವರು ಜನಸಂಖ್ಯೆ ಆಧಾರದ ಮೇಲೆ ಒಳಮೀಸಲಾತಿ ಮಾಡುತ್ತಿರುವ ಸರ್ಕಾರದ ನಡೆಯನ್ನು ಖಂಡಿಸಿ ನ್ಯಾ.ನಾಗಮೋಹನದಾಸ್ ಅವರಿಗೆ ಬರೆದ ಪತ್ರವನ್ನು ಅಂಚೆ ಪೆಟ್ಟಿಗೆಯಲ್ಲಿ ಗುರುವಾರ ಹಾಕಿದರು.
ಅಂಚೆಪೆಟ್ಟಿಗೆಯಲ್ಲಿ ಪತ್ರ ಹಾಕುವ ಮುನ್ನ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಸೇರಿದ ಸಭೆಯಲ್ಲಿ ಕರ್ನಾಟಕ ಪ್ರದೇಶ ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಡಾ.ಬಸವರಾಜ ಚವ್ಹಾಣ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ,ಬಂಜಾರ ನಿಗಮ ಮಂಡಳಿ ಮಾಜಿ ನಿರ್ದೇಶಕ ಮಲ್ಲಿಕಾರ್ಜುನ ನಾಯಕ ಮಾತನಾಡಿ, ನ್ಯಾಯಮೂರ್ತಿ ನಾಗಮೋಹನದಾಸರು ಒಳಮೀಸಲಾತಿ ಪ್ರಕಟಿಸುವ ಮೊದಲು ೨೦೧೨ ರ ಜನಸಂಖ್ಯೆಯನ್ನು ಪರಿಗಣಿಸದೇ ಸಧ್ಯದಲ್ಲಿಯೇ ಕೇಂದ್ರ ಸರ್ಕಾರ ನಡೆಸುವ ೨೦೨೫ರ ಜನಗಣತಿ ಪರಿಗಣಿಸಬೇಕು. ಆಗ ಮಾತ್ರ ಎಲ್ಲರಿಗೂ ನ್ಯಾಯ ಸಿಗಲು ಸಾಧ್ಯವಿದೆ ಎಂದರು.
ಪ್ರತಿ ತಾಂಡಾಗಳಿಗೆ ಭೇಟಿ ನೀಡಿ ವಾಸ್ತವಿಕ ದತ್ತಾಂಶ ಸಂಗ್ರಹಿಸಬೇಕು. ಬಂಜಾರ ಸಮಾಜ ಬಾಂಧವರ ಕುರಿತು ಹಿಂದೆ ನೀಡಿದ ವರದಿಯನ್ನು ವರದಿ ಪರಿಗಣಿಸಬೇಕು. ಒಳಮೀಸಲಾತಿ ಪ್ರಕಟಿಸುವ ಮೊದಲು ಇದನ್ನು ಪರಿಗಣಿಸಬೇಕಾದ ಅಗತ್ಯವಿದೆ ಎಂದರು.
ಸಭೆಯಲ್ಲಿ ಮುಖಂಡರಾದ ಹರಿಲಾಲ ನಾಯಕ, ಕೃಷ್ಣ ನಾಯಕ, ಗುರಪ್ಪ ಲಮಾಣಿ,ಡಾ.ಅರವಿಂದ ಚವ್ಹಾಣ, ರವಿ ಲಮಾಣಿ, ಬಾಬು ಚವ್ಹಾಣ, ಶಾಂತಪ್ಪ ರಾಠೋಡ, ವಿನೋದ ನಾಯಕ, ಪಿಂಟು ಚವ್ಹಾಣ, ಸುಭಾಸಚಂದ್ರ ರಾಠೋಡ, ರಾಜು ಲಮಾಣಿ, ಭೀಮು ಪವಾರ, ಆನಂದ ಲಮಾಣಿ, ಸುನೀಲ ನಾಯಕ, ವಿಜಯ ನಾಯಕ, ನಂಜುಂಡಿ ಚವ್ಹಾಣ, ಮೀಟು ಜಾಧವ, ಸಂತೋಷ ನಾಯಕ, ಕುಮಾರ ನಾಗವಾಡ ಇತರರು ಇದ್ದರು.