Author: editor.udayarashmi@gmail.com

ಚಿರ್ಚಿನಕಲ್ಲ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಲಾ ಕಲೋತ್ಸವ ಕಾರ್ಯಕ್ರಮದಲ್ಲಿ ತಹಶೀಲ್ದಾರ ಬಲರಾಮ ಕಟ್ಟಿಮನಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಶಿಕ್ಷರಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಜೊತೆಗೆ ಶಾಲಾ ಸೌಂದರ್ಯ ಮತ್ತು ಸುತ್ತಮುತ್ತಲಿನ ವಾತಾವರಣವನ್ನು ಅಚ್ಚುಕಟ್ಟಾಗಿಟ್ಟುಕೊಳ್ಳುವ ಮನೋಭಾವ ಬಂದಲ್ಲಿ ಆ ಶಾಲೆ ಮಾದರಿಯ ಶಾಲೆಯಾಗಿ ಹೊರಹೊಮ್ಮುವದು ಎಂದು ತಹಶೀಲ್ದಾರ ಬಲರಾಮ ಕಟ್ಟಿಮನಿ ಹೇಳಿದರು.ತಾಲೂಕಿನ ಚಿರ್ಚಿನಕಲ್ಲ ಗ್ರಾಮದ ಕಿರಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಲಾ ಕಲೋತ್ಸವ ಹಾಗೂ ಶಾಲಾ ದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಸರ್ಕಾರಿ ಶಾಲೆಯ ಶಿಕ್ಷಕರ ಆಯ್ಕೆ ಪ್ರಕ್ರೀಯೆಯಲ್ಲಿ ಸರ್ಕಾರ ಸಾಕಷ್ಟು ಕಟ್ಟು ನಿಟ್ಟಿನ ನಿಯಮಗಳನ್ನು ರೂಪಿಸಿರುತ್ತದೆ. ಪ್ರತಿಭಾನ್ವಿತ ಶಿಕ್ಷಕರು ಮಾತ್ರ ಸರ್ಕಾರಿ ಶಾಲೆಯ ಶಿಕ್ಷಕರಾಗಲು ಸಾಧ್ಯ. ಆದರೆ ಸಧ್ಯದ ದಿನಮಾನಗಳಲ್ಲಿ ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳತ್ತ ಪಾಲಕರು ಮುಖಮಾಡುತ್ತಿರುವದು ನೋವಿನ ಸಂಗತಿ. ಸಾರ್ವಜನಿಕರು ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಲು ಮುಂದಾಗಿಸಬೇಕೆ ಹೊರತು ಖಾಸಗಿ ಶಾಲೆಗಳ ಮೊರೆ ಹೋಗಬಾರದು ಅಂದಾಗ ನಿಮ್ಮ ಮಕ್ಕಳಿಗೆ ಗುಣಮಟ್ಟದ…

Read More

ಮುದ್ದೇಬಿಹಾಳ ಪಿಎಸ್‌ಐ ಸಂಜಯ ತಿಪರೆಡ್ಡಿ & ತಂಡದ ಸಾಹಸಕ್ಕೆ ಶ್ಲಾಘನೆ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಲೋಕಾಯುಕ್ತ ಡಿವಾಯ್‌ಎಸ್‌ಪಿ ಅಂತಾ ರಾಜ್ಯದ ತುಂಬೆಲ್ಲಾ ವಂಚಿಸುತ್ತಿದ್ದ ವಂಚಕನನ್ನು ಇಲ್ಲಿನ ಪಿಎಸ್‌ಐ ಸಂಜಯ ತಿಪರೆಡ್ಡಿ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತ ಆರೋಪಿ ಮುರಿಗೆಪ್ಪ ಕುಂಬಾರ ಎಂದು ತಿಳಿದು ಬಂದಿದ್ದು ಈತ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದವನಾಗಿದ್ದಾನೆ. ತಾನೊಬ್ಬ ಲೋಕಾಯುಕ್ತ ಡಿವಾಯ್‌ಎಸ್‌ಪಿ ಅಂತಾ ಅಧಿಕಾರಿಗಳಿಗೆ ಫೋನ್ ಮೂಲಕ ಬೆದರಿಸಿ ದುಡ್ಡಿಗಾಗಿ ಬೇಡಿಕೆ ಇಡುತ್ತಿದ್ದ ಎನ್ನಲಾಗಿದೆ. ರಾಜ್ಯದಲ್ಲಿ ಹಲವು ಅಧಿಕಾರಿಗಳಿಗೆ ಈತ ಇದೇ ರೀತಿ ಬೆದರಿಸಿ ವಂಚಿಸಿ ಹಣ ಪಡೆದಿದ್ದು ಒಟ್ಟು ಈತನ ಮೇಲೆ ೫೭ ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ.ಕಳೆದ ಕೆಲ ದಿನಗಳ ಹಿಂದೆ ಇಲ್ಲಿನ ಕೆಬಿಜೆಎನ್‌ಎಲ್ ಇಂಜೀನಿಯರ್ ಒಬ್ಬರಿಗೆ ತನ್ನ ಚಾಲಾಕಿತನವನ್ನು ತೋರಿಸಲು ಮುಂದಾಗಿ ೭೦ ಸಾವಿರಗಳ ಬೇಡಿಕೆ ಇಟ್ಟಿದ್ದು, ಚಾಣಾಕ್ಷ ಇಂಜಿನೀಯರ ಈತ ಬೇಡಿಕೆ ಇಡುವದನ್ನು ಕಾಲ್ ರಿಕಾರ್ಡ ಮಾಡಿಕೊಂಡಿದ್ದಾರೆ. ಬಳಿಕ ವಿಚಾರಿಸಿದಾಗ ಈತ ಲೋಕಾಯುಕ್ತ ಡಿವಾಯ್‌ಎಸ್‌ಪಿ ಅಲ್ಲ ಎನ್ನುವದು ಖಚಿತವಾಗಿ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಅನಧಿಕೃತ ಗೈರಾಗಿರುವ ಶಿಕ್ಷಕಿಯ ವೇತನ ಸೆಳೆದ ಗಂಭೀರ ಆರೋಪ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸದ್ದು ಮಾಡಿದೆ.ಕಚೇರಿ ವ್ಯಾಪ್ತಿಯ ತಾಳಿಕೋಟೆ ತಾಲೂಕಿನ ಬ.ಸಾಲವಾಡಗಿಯ ಸಹ ಶಿಕ್ಷಕಿಯೊಬ್ಬರು ಶಾಲಾ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರಾಗಿದ್ದು ಅವರ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಳ್ಳದೇ ನಿಯಮಬಾಹಿರವಾಗಿ ವೇತನ ಸೆಳೆಯಲಾಗಿದೆ ಎಂದು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ದೂರಿದ್ದು, ಬಗ್ಗೆ ಸೂಕ್ತ ತನಿಖೆ ನಡೆಸಿ ಸ್ಪಷ್ಟ ಅಭಿಪ್ರಾಯವನ್ನು ಸಲ್ಲಿಸುವಂತೆ ಶಿಕ್ಷಣ ಇಲಾಖೆಯ ಧಾರವಾಡದ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ ಅವರು ಡಿಡಿಪಿಐ ಗೆ ಬರೆದಿದ್ದಾರೆ.ಈ ಬಗ್ಗೆ ಸಂಪೂರ್ಣ ತನಿಖೆಯಾದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಕೆಲವರಿಗೆ ತಲೆದಂಡವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದ್ದು, ಶಿಂತ್ರಿ ಅವರು ಪತ್ರವನ್ನು ಜ೧೬ ರಂದೇ ಬರೆದಿದ್ದು ಈ ವರೆಗೂ ಯಾವುದೇ ಸ್ಪಷ್ಟತೆ ಬಾರದಿರುವದು ತನಿಖೆಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕೆಲವರು ದೂರಿದ್ದಾರೆ.

Read More

ಲೇಖನ- ವಿವೇಕಾನಂದ. ಎಚ್. ಕೆ.ಬೆಂಗಳೂರುಮೊ: 9844013068 ಉದಯರಶ್ಮಿ ದಿನಪತ್ರಿಕೆ ಎಂತಹ ಅತ್ಯಂತ ಕೆಟ್ಟ ಕೊಳಕ ರಾಜಕೀಯ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ ಮತ್ತು ಅದಕ್ಕೆ ಜೀವಂತ ಸಾಕ್ಷಿಯಾಗಿದ್ದೇವೆ ಎಂಬುದೇ ನಮ್ಮ ನೈತಿಕತೆ ಮತ್ತು ಆತ್ಮವಿಶ್ವಾಸ ಕುಸಿಯುವಂತೆ ಮಾಡುತ್ತಿದೆ.ಎಲ್ಲಾ ಪಕ್ಷಗಳ ಅಧಿಕಾರದಾಹದ ಈ ಭಿನ್ನಮತೀಯ ಚಟುವಟಿಕೆಗಳ ದಿನನಿತ್ಯದ ನಿರಂತರ ಸುದ್ದಿಗಳನ್ನು ಕೇಳುತ್ತಾ ಮನಸ್ಸು ಏನೇನೋ ಯೋಚಿಸುತ್ತಿದೆ.ರಾಜಕೀಯ ಎಂಬ ಸೇವಾ ವಲಯವನ್ನು ಪುಂಡ ಪೋಕರಿಗಳ, ಬೀದಿ ಜಗಳಗಳ ಮಟ್ಟಕ್ಕೆ ಇಳಿಸಿದ್ದಾರೆ. ಇವರಿಗೆ ಕ್ಷಮೆಯೇ ಇಲ್ಲ. ಛೆ.. ಏನೂ ಮಾಡಲು ಸಾಧ್ಯವಾಗುತ್ತಿಲ್ಲ..ಇವರೇನು ಜನ ಪ್ರತಿನಿಧಿಗಳೋ ಅಥವಾ ರೇಸು ಕುದುರೆಗಳೋ..ದಿನದ 24 ಗಂಟೆ ಕೆಲಸ ಮಾಡಿದರೂ ಮುಗಿಯದಷ್ಟು ಸಮಸ್ಯೆಗಳು ತುಂಬಿ ತುಳುಕುತ್ತಿದ್ದರೂ,7 ಕೋಟಿ ಜನರಲ್ಲಿ ಕೇವಲ 224 ಜನರಿಗೆ ಮಾತ್ರ ಸಿಗಬಹುದಾದ ಅತ್ಯುತ್ತಮ ಸ್ಥಾನ ದೊರೆತಿದ್ದರೂ, ಇನ್ನೂ ಹಣ ಅಧಿಕಾರ ದುರಹಂಕಾರಕ್ಕೆ ಬಲಿಯಾಗುತ್ತಿದ್ದಾರಲ್ಲ ಇವರಿಗೆ ಏನು ಮಾಡುವುದು.ಇವರನ್ನು ಮರೆತು ನೆಮ್ಮದಿಯಾಗಿ ಇರೋಣವೆಂದರೆ..ಆಸ್ಪತ್ರೆಗಳ ಅವ್ಯವಸ್ಥೆ ಕಂಡಾಗ ಇವರು ನೆನಪಾಗುತ್ತಾರೆ.ಶಾಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸ ಮತ್ತು ಅದರ ಖರ್ಚು ನೆನಪಾದಾಗ ಇವರೇ ಕಾಡುತ್ತಾರೆ.ಬಸ್…

Read More

ರಚನೆ- ಸುಧಾ ಪಾಟೀಲಬೆಳಗಾವಿ ಉದಯರಶ್ಮಿ ದಿನಪತ್ರಿಕೆ ನೆನಪಾದ ಬಸವಣ್ಣಅಡಿಗಡಿಗೆಅವರಿವರ ಆಚಾರವಿಚಾರಅಜ್ಞಾನದ ಪರಮಾವಧಿಕಂಡುಎತ್ತ ಸಾಗಿದೆ ಜನರಜೀವನ ಸಿದ್ಧಾಂತವೈಚಾರಿಕ ನಿಲುವುಎಂಬ ಕಳವಳವಹೊತ್ತು ನೆನಪಾದಬಸವಣ್ಣ ಅಡಿಗಡಿಗೆ ಕಂಡ ಕಂಡಲ್ಲಿ ಮುಳುಗುವವರದೇವರ ಹೆಸರಲ್ಲಿಉಪವಾಸ ಮಾಡುವವರಅಭಿಷೇಕ ಮಾಡಿಸಿಗುಡಿಯ ಸುತ್ತುವವರಅಂಧಕಾರದ ಮನವ ಕಂಡುನೆನಪಾದ ಬಸವಣ್ಣಅಡಿಗಡಿಗೆ ತನ್ನೊಳಗಿನ ಪ್ರಜ್ವಲಿಸುವಜ್ಯೋತಿಯ ಕಾಣದೆತನ್ನ ಕೆಲಸವನ್ನು ತಾನು ಮಾಡದೆಹಗಲಿರುಳು ಜಪ ಮಾಡುವಭಂಡ ಭಕ್ತರ ನೋಡಿನೆನಪಾದ ಬಸವಣ್ಣಅಡಿಗಡಿಗೆ ಸಮಾನತೆಯ ಮೆರೆಯದೆಭೇದ -ಭಾವ ಅರಸುವವ್ಯಾಮೋಹದಲ್ಲಿ ಮಿಂದುಸ್ವಾರ್ಥಿಯಾಗುವಗೊಡ್ಡು ಸಂಪ್ರದಾಯಗಳಿಗೆಮೊರೆಹೋಗುವ ಜಿಡ್ಡುಮನಸುಗಳ ಕಂಡುನೆನಪಾದ ಬಸವಣ್ಣಅಡಿಗಡಿಗೆ

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: 12 ನೇ ಹಿಂದುಳಿದ ಹಾಗೂ ಶ್ರಮಜೀವಿಗಳ ಸಮಾನತೆಗೆ ಸಾಮಾಜಿಕ ಕ್ರಾಂತಿ ಮಾಡಿದವರಲ್ಲಿ ಮಾಚಿದೇವರು ಒಬ್ಬರು. ಆಧ್ಯಾತ್ಮಿಕ ಪ್ರವೃತ್ತಿಯ ಮೂಲಕ ಜನರಲ್ಲಿ ಭಕ್ತಿ ಪ್ರಧಾನ ಚಿಂತನೆಗಳನ್ನು ಮೂಡಿಸಿದ ಮಾಚಿದೇವರ ತತ್ವಾದರ್ಶಗಳು ಸರ್ವಕಾಲಕ್ಕೂ ಅನ್ವಯ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಶನಿವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಮಡಿವಾಳ ಮಾಚಿದೇವರ ಜಯಂತಿ ಆಚರಣೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು.ಕಲ್ಯಾಣ ಕ್ರಾಂತಿಯ ಕೊನೆಯ ಘಟ್ಟದ ಹೋರಾಟದಲ್ಲಿ ಮಾಚಿದೇವರು ತಮ್ಮ ಪರಾಕ್ರಮದಿಂದ ವಚನ ಸಾಹಿತ್ಯ ಉಳಿಸುವಲ್ಲಿ ಅನುಪಮ ಸೇವೆಗೈದಿದ್ದಾರೆ. ಮಡಿವಾಳ ಮಾಚಿದೇವರು ಮನದ ಮೈಲಿಗೆ ಕಳೆದ ಸರ್ವ ಶ್ರೇಷ್ಠ ಶರಣ, ದಿಟ್ಟ ಗಣಾಚಾರಿ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಹಿರೇರೂಗಿ ಉರ್ದು ಕ್ಲಸ್ಟರ್ ಸಿ ಆರ್ ಪಿ ಬಾದಶಾ ಚಪ್ಪರಬಂದ ಮಾತನಾಡಿ, ಮೇಲು ಕೀಳು, ಬಡವರು,ಸಾಮಾಜಿಕ ಬಹಿಷ್ಕಾರ ಹಾಗೂ ಶೋಷಣೆಗೊಳಗಾದವರ ಬಗ್ಗೆ ಚಿಂತಿಸಿ,ವ್ಯಕ್ತಿ-ವ್ಯಕ್ತಿಗಳ ನಡುವೆ ಇರುವ ಅಂತರವನ್ನು ಹೋಗಲಾಡಿಸಲು ಹೋರಾಡಿದ ಮಾಚಿದೇವರ ಜೀವನ ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಹೇಳಿದರು.ಮುಖ್ಯ ಶಿಕ್ಷಕ ಎಸ್ ಎಸ್…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಗ್ರಾಮದಲ್ಲಿ ಅವ್ಯಾಹತವಾಗಿ ಜರುಗುತ್ತಿರುವ ಅಕ್ರಮ ಮದ್ಯ ಮಾರಾಟ ಕಡಿವಾಣಕ್ಕೆ ಆಗ್ರಹಿಸಿ ಹಂಚಲಿ ಗ್ರಾಮದ ವೃದ್ಧರು ಪ್ರಭಾರಿ ಸಿಪಿಐ ಪರಶುರಾಮ ಮನಗೂಳಿ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಪೊಲೀಸ್ ಠಾಣೆಗೆ ಶನಿವಾರದಂದು ಆಗಮಿಸಿದ ಹಂಚಲಿ ಗ್ರಾಮದ ವೃದ್ಧರು ತಮ್ಮ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಕುರಿತು ಸಿಪಿಐ ಅವರ ಗಮನ ಸೆಳೆದರು.ಈ ಸಂದರ್ಭದಲ್ಲಿ ವೃದ್ಧ ಶಿವಪ್ಪ ಸಜ್ಜನ ಹಾಗೂ ವೃದ್ಧೆ ಮಹಾದೇವಿ ಚವನಭಾವಿ ಮಾತನಾಡಿ, ನಮ್ಮ ಗ್ರಾಮದಲ್ಲಿ ಮದ್ಯ ಮಾರಾಟದಿಂದ ಬಡ ಕುಟುಂಬಗಳು ಪರಿಸ್ಥಿತಿ ನೋಡದಂತಾಗಿವೆ. ಅದರಲ್ಲೂ ಮನೆ ಜೀವನ ನಡೆಸುವ ಮಹಿಳೆಯರ ಸ್ಥಿತಿಗತಿಗಳು ಮತ್ತು ಅವರ ಮೇಲೆ ಆಗುತ್ತಿರುವ ದೌರ್ಜನ್ಯ ಹಾಗೂ ಪರಿಣಾಮಗಳು ಹೇಳತೀರದಂತಾಗಿವೆ. ಈ ಕುರಿತು ನಾವು ಹಲವು ಬಾರಿ ಪೊಲೀಸ್ ಠಾಣೆಗೆ ಮನವಿ ಮಾಡಿದ್ದಾಗಿದೆ ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ತಾವು ಸ್ಪಂದಿಸಿ ಅಕ್ರಮ ಸರಾಯಿ ಮಾರಾಟವನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.ಮನವಿ ಸ್ವೀಕರಿಸಿ ಮಾತನಾಡಿದ ಸಿಪಿಐ, ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ನೀಲಕಂಠರಾಯ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮಾಚಿದೇವನ ಜನ್ಮಭೂಮಿಯಲ್ಲಿ ಜನಿಸಿದ ನಾವೆಲ್ಲ ಮಾಚಿದೇವ, ಬಸವಣ್ಣ ಸೇರಿದಂತೆ ಎಲ್ಲ ಶರಣರ ಕಾಯಕ ತತ್ವವನ್ನು ತನು, ಮನದಿಂದ ಅಳವಡಿಸಿಕೊಳ್ಳಬೇಕಾಗಿದೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಶನಿವಾರ ಜರುಗಿದ ಮಡಿವಾಳ ಮಾಚಿದೇವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪೂಜೆ ಸಲ್ಲಿಸಿ ಮಾತನಾಡಿದರು.ಜೀವನದಲ್ಲಿ ಶರಣರ ನಡೆ-ನುಡಿ ಇಂದಿಗೂ ಪ್ರಸ್ತುತ. ಅವರನ್ನು ಕೇವಲ ಜಯಂತಿಗಳಿಗೆ ಸೀಮಿತಗೊಳಿಸದೇ ಅವರ ನಡೆದ ಮಾರ್ಗ, ಕಾಯಕ ತತ್ವ, ವಚನಸಾರ, ಸಾಧನೆಗಳನ್ನು ಅರಿತು ಪಾಲಿಸಬೇಕಾಗಿದೆ ಎಂದರು.ನಿವೃತ್ತ ಶಿಕ್ಷಕ ಬಿ.ಆಯ್.ಹೊಸಳ್ಳಿ, ಶಿಕ್ಷಕ ಅರುಣ ಕೋರವಾರ ಉಪನ್ಯಾಸ ನೀಡಿ ಮಾತನಾಡಿದರು.ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಸ್.ಬಾಗಲಕೋಟ, ಉಪತಹಶೀಲ್ದಾರ ಸುರೇಶ ಮ್ಯಾಗೇರಿ, ಆಹಾರ ನಿರೀಕ್ಷಕ ದಳವಾಯಿ, ರಾಮಯ್ಯ ನಾಶೀಮಠ, ಬಸವರಾಜ ಮೆಟಗಾರ, ಮಲ್ಲಪ್ಪ ಭತಗುಣಕಿ. ಶ್ರೀಶೈಲ ಅಗಸರ, ಕಾಶೀನಾಥ ಅಗಸರ, ಶಂಕರಗೌಡ ಪಾಟೀಲ, ಆನಂದ ಮಶಾನವರ, ಬಸವರಾಜ ಅಗಸರ ಸಿಬ್ಬಂದಿ ರಾಜು ಕಂಠಿ, ಸಂತೋಷ ತಳವಾರ ಹಾಗೂ ಇತರರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪ್ರಸ್ತುತ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ವತಿಯಿಂದ ಕೊಡ ಮಾಡುವ ರಾಜ್ಯ ಪುರಸ್ಕಾರಕ್ಕೆ ಸಿಂದಗಿ ಜಿ.ಪಿ.ಪೋರವಾಲ್ ಕಲಾ, ವಾಣಿಜ್ಯ ಮತ್ತು ವ್ಹಿ.ವ್ಹಿ.ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದ ರೇಂಜರ್ ಪೂಜಾ ಕದ್ನಳ್ಳಿ ಆಯ್ಕೆಯಾಗಿದ್ದಾರೆ.ಕರ್ನಾಟಕ ರಾಜಭವನದಲ್ಲಿ ಜರುಗುವ ರಾಜ್ಯ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯ ಪುರಸ್ಕಾರವನ್ನು ಸ್ವೀಕರಿಸಲಿದ್ದಾರೆ.ವಿದ್ಯಾರ್ಥಿನಿಯ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಆಡಳಿತ ಮಂಡಳಿ ಸದಸ್ಯರು, ಕಾಲೇಜಿನ ಪ್ರಾಚಾರ್ಯ ಡಿ.ಎಂ.ಪಾಟೀಲ, ರೇಂಜರ್ ಲೀಡರ್ ಪ್ರತಿಕಾ ತಳವಾರ, ರೋವರ್ ಲೀಡರಾದ ತೇಜು ಪ್ರಕಾಶ ರಾಠೋಡ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಯವರು ಅಭಿನಂದನೆ ಸಲ್ಲಿಸಿದ್ದಾರೆ.

Read More

ಧಾರವಾಡ ಪ್ರಾದೇಶಿಕ ಪತ್ರಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ ಎಲಿಗಾರ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಶಿಕ್ಷಣ ಪಡೆಯದೆಇರುವ ಅನೇಕ ಜನರು ಸ್ವಾತಂತ್ರ್ಯಕ್ಕಾಗಿ ಹೋರಾಡಿದೇಶಪ್ರೇಮವನ್ನು ಮೆರೆದವರು. ಆದರೆ ನಾವೆಲ್ಲ ಶಿಕ್ಷಣವಂತರು, ವಿದ್ಯಾವಂತರು ನಾವು ದೇಶಕ್ಕಾಗಿ ಏನು ನೀಡುತಿದ್ದೇವೆ ಎಂಬುದನ್ನು ನಾವು ಅವಲೋಕನ ಮಾಡಿಕೊಳ್ಳಬೇಕು ಎಂದು ಧಾರವಾಡ ಪ್ರಾದೇಶಿಕ ಪತ್ರಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ ಎಲಿಗಾರ ಹೇಳಿದರು.ಸಿಂದಗಿ ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಂ.ಮನಗೂಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ವಿಜಯಪುರ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಕ್ರಾಂತಿಕಾರಿಗಳು ವಿಷಯದ ಕುರಿತಾದ ಎರಡು ದಿನಗಳ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.ವಿಜಯಪುರ ಜಿಲ್ಲೆಯಲ್ಲಿ ಇಂಚಗೇರಿ ಮಠ ಸೇರಿದಂತೆ ಅನೇಕ ಮಠಗಳು, ಸಂಘ ಸಂಸ್ಥೆಗಳು ಮತ್ತು ಅನೇಕರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಬದುಕನ್ನೆ ತ್ಯಾಗ ಮಾಡಿದಂತವರು ಎಂದ ಅವರು ೧೯೭೩ರಲ್ಲಿ ರಾಜ್ಯದಲ್ಲಿ…

Read More