ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಾಚಿದೇವನ ಜನ್ಮಭೂಮಿಯಲ್ಲಿ ಜನಿಸಿದ ನಾವೆಲ್ಲ ಮಾಚಿದೇವ, ಬಸವಣ್ಣ ಸೇರಿದಂತೆ ಎಲ್ಲ ಶರಣರ ಕಾಯಕ ತತ್ವವನ್ನು ತನು, ಮನದಿಂದ ಅಳವಡಿಸಿಕೊಳ್ಳಬೇಕಾಗಿದೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಶನಿವಾರ ಜರುಗಿದ ಮಡಿವಾಳ ಮಾಚಿದೇವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪೂಜೆ ಸಲ್ಲಿಸಿ ಮಾತನಾಡಿದರು.
ಜೀವನದಲ್ಲಿ ಶರಣರ ನಡೆ-ನುಡಿ ಇಂದಿಗೂ ಪ್ರಸ್ತುತ. ಅವರನ್ನು ಕೇವಲ ಜಯಂತಿಗಳಿಗೆ ಸೀಮಿತಗೊಳಿಸದೇ ಅವರ ನಡೆದ ಮಾರ್ಗ, ಕಾಯಕ ತತ್ವ, ವಚನಸಾರ, ಸಾಧನೆಗಳನ್ನು ಅರಿತು ಪಾಲಿಸಬೇಕಾಗಿದೆ ಎಂದರು.
ನಿವೃತ್ತ ಶಿಕ್ಷಕ ಬಿ.ಆಯ್.ಹೊಸಳ್ಳಿ, ಶಿಕ್ಷಕ ಅರುಣ ಕೋರವಾರ ಉಪನ್ಯಾಸ ನೀಡಿ ಮಾತನಾಡಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಸ್.ಬಾಗಲಕೋಟ, ಉಪತಹಶೀಲ್ದಾರ ಸುರೇಶ ಮ್ಯಾಗೇರಿ, ಆಹಾರ ನಿರೀಕ್ಷಕ ದಳವಾಯಿ, ರಾಮಯ್ಯ ನಾಶೀಮಠ, ಬಸವರಾಜ ಮೆಟಗಾರ, ಮಲ್ಲಪ್ಪ ಭತಗುಣಕಿ. ಶ್ರೀಶೈಲ ಅಗಸರ, ಕಾಶೀನಾಥ ಅಗಸರ, ಶಂಕರಗೌಡ ಪಾಟೀಲ, ಆನಂದ ಮಶಾನವರ, ಬಸವರಾಜ ಅಗಸರ ಸಿಬ್ಬಂದಿ ರಾಜು ಕಂಠಿ, ಸಂತೋಷ ತಳವಾರ ಹಾಗೂ ಇತರರು ಇದ್ದರು.