ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಅನಧಿಕೃತ ಗೈರಾಗಿರುವ ಶಿಕ್ಷಕಿಯ ವೇತನ ಸೆಳೆದ ಗಂಭೀರ ಆರೋಪ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸದ್ದು ಮಾಡಿದೆ.
ಕಚೇರಿ ವ್ಯಾಪ್ತಿಯ ತಾಳಿಕೋಟೆ ತಾಲೂಕಿನ ಬ.ಸಾಲವಾಡಗಿಯ ಸಹ ಶಿಕ್ಷಕಿಯೊಬ್ಬರು ಶಾಲಾ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರಾಗಿದ್ದು ಅವರ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಳ್ಳದೇ ನಿಯಮಬಾಹಿರವಾಗಿ ವೇತನ ಸೆಳೆಯಲಾಗಿದೆ ಎಂದು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ದೂರಿದ್ದು, ಬಗ್ಗೆ ಸೂಕ್ತ ತನಿಖೆ ನಡೆಸಿ ಸ್ಪಷ್ಟ ಅಭಿಪ್ರಾಯವನ್ನು ಸಲ್ಲಿಸುವಂತೆ ಶಿಕ್ಷಣ ಇಲಾಖೆಯ ಧಾರವಾಡದ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ ಅವರು ಡಿಡಿಪಿಐ ಗೆ ಬರೆದಿದ್ದಾರೆ.
ಈ ಬಗ್ಗೆ ಸಂಪೂರ್ಣ ತನಿಖೆಯಾದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಕೆಲವರಿಗೆ ತಲೆದಂಡವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದ್ದು, ಶಿಂತ್ರಿ ಅವರು ಪತ್ರವನ್ನು ಜ೧೬ ರಂದೇ ಬರೆದಿದ್ದು ಈ ವರೆಗೂ ಯಾವುದೇ ಸ್ಪಷ್ಟತೆ ಬಾರದಿರುವದು ತನಿಖೆಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕೆಲವರು ದೂರಿದ್ದಾರೆ.