ರಚನೆ
– ಸುಧಾ ಪಾಟೀಲ
ಬೆಳಗಾವಿ
ಉದಯರಶ್ಮಿ ದಿನಪತ್ರಿಕೆ
ನೆನಪಾದ ಬಸವಣ್ಣ
ಅಡಿಗಡಿಗೆ
ಅವರಿವರ ಆಚಾರ
ವಿಚಾರ
ಅಜ್ಞಾನದ ಪರಮಾವಧಿ
ಕಂಡು
ಎತ್ತ ಸಾಗಿದೆ ಜನರ
ಜೀವನ ಸಿದ್ಧಾಂತ
ವೈಚಾರಿಕ ನಿಲುವು
ಎಂಬ ಕಳವಳವ
ಹೊತ್ತು ನೆನಪಾದ
ಬಸವಣ್ಣ ಅಡಿಗಡಿಗೆ
ಕಂಡ ಕಂಡಲ್ಲಿ ಮುಳುಗುವವರ
ದೇವರ ಹೆಸರಲ್ಲಿ
ಉಪವಾಸ ಮಾಡುವವರ
ಅಭಿಷೇಕ ಮಾಡಿಸಿ
ಗುಡಿಯ ಸುತ್ತುವವರ
ಅಂಧಕಾರದ ಮನವ ಕಂಡು
ನೆನಪಾದ ಬಸವಣ್ಣ
ಅಡಿಗಡಿಗೆ
ತನ್ನೊಳಗಿನ ಪ್ರಜ್ವಲಿಸುವ
ಜ್ಯೋತಿಯ ಕಾಣದೆ
ತನ್ನ ಕೆಲಸವನ್ನು ತಾನು ಮಾಡದೆ
ಹಗಲಿರುಳು ಜಪ ಮಾಡುವ
ಭಂಡ ಭಕ್ತರ ನೋಡಿ
ನೆನಪಾದ ಬಸವಣ್ಣ
ಅಡಿಗಡಿಗೆ
ಸಮಾನತೆಯ ಮೆರೆಯದೆ
ಭೇದ -ಭಾವ ಅರಸುವ
ವ್ಯಾಮೋಹದಲ್ಲಿ ಮಿಂದು
ಸ್ವಾರ್ಥಿಯಾಗುವ
ಗೊಡ್ಡು ಸಂಪ್ರದಾಯಗಳಿಗೆ
ಮೊರೆಹೋಗುವ ಜಿಡ್ಡು
ಮನಸುಗಳ ಕಂಡು
ನೆನಪಾದ ಬಸವಣ್ಣ
ಅಡಿಗಡಿಗೆ