ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ವಿದ್ಯಾರ್ಥಿಗಳು ಈ ದೇಶದ ಅಮೂಲ್ಯ ರತ್ನಗಳಾಗಿವೆ ಮತ್ತು ದೇಶದ ಮುಂದಿನ ಭವಿಷ್ಯ ರೂಪಿಸುವಂತವರಾಗಿದ್ದಾರೆ ಅವರನ್ನು ಶಾಲಾ ವಾಹನಗಳಲ್ಲಿ ಕರೆದುಕೊಂಡು ಹೋಗುವ ಚಾಲಕರು ಸುರಕ್ಷತೆಯನ್ನು ಕಾಪಾಡಿಕೊಂಡು ಸಾಗಬೇಕೆಂದು ಸ್ಥಳೀಯ ಪೊಲೀಸ್ ಠಾಣಾ ಪಿಎಸ್‌ಐ ಶ್ರೀಮತಿ ಜ್ಯೋತಿ ಖೋತ್ ಅವರು ಹೇಳಿದರು.
ಗುರುವಾರ ಪಟ್ಟಣದ ಮೈಲೇಶ್ವರ ಕ್ರಾಸ್‌ನಲ್ಲಿರುವ ಬ್ರಿಲಿಯಂಟ್ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಆಗಮಿಸಿದ ಅವರು ವಾಹನಗಳ ಫಿಟ್ನೆಸ್ ಪ್ರಮಾಣ ಪತ್ರ, ವಿಮೆ, ವೇಗ ನಿಯಂತ್ರಕಗಳನ್ನು ಪರಿಶೀಲಿಸಿ, ಎಲ್ಲ ವಾಹನಗಳು ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಂಡ ನಂತರ ಚಾಲಕರಿಗೆ ತಿಳಿ ಹೇಳಿದ ಅವರು ಶಾಲಾ ವಾಹನದಲ್ಲಿ ವಿದ್ಯಾರ್ಥಿಗಳನ್ನು ಹೆಚ್ಚಿಗೆ ತುಂಬಿಕೊಂಡು ಹೋಗುವಂತಾಗಬಾರದು ಸುರಕ್ಷತೆ ನೀಯಮವನ್ನು ಪಾಲನೆ ಮಾಡಬೇಕು ವಾಹನಗಳು ಸುಸ್ಥಿರದಲ್ಲಿರುವದನ್ನು ಖಚಿತ ಪಡಿಸಿಕೊಂಡು ವಾಹನವನ್ನು ಚಲಾಯಿಸುವಂತಾಗಬೇಕು ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹೋಗುವಾಗ ರಸ್ತೆಯ ಮೇಲೆ ವಾಹನಗಳನ್ನು ನಿಲ್ಲಿಸದೇ ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಸಮೀಪದ ಮೈದಾನ ಮತ್ತು ವಾಹನ ದಟ್ಟನೆ ಇಲ್ಲದ ಜಾಗೆಯನ್ನು ಆಯ್ಕೆ ಮಾಡಿಕೊಂಡು ಇಳಿಸುವಂತಹ ಕಾರ್ಯ ಮಾಡಬೇಕೆಂದು ಕಾನೂನು ನೀಯಮ ಪಾಲನೆ ಕುರಿತು ತಿಳುವಳಿಕೆ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ನಾನಾಗೌಡ ನಡುವಿನಮನಿ, ಉಪಾಧ್ಯಕ್ಷ ಆರ್.ಬಿ.ನಡುವಿನಮನಿ, ಕಾರ್ಯದರ್ಶಿ ಎಮ್ ಬಿ ಮಡಿವಾಳರ, ಪೊಲೀಸ್ ಸಿಬ್ಬಂದಿಗಳು ಹಾಗೂ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

