ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸಿಂದಗಿ ನಗರ-೨ ಮಾರ್ಗದ ಮೇಲೆ ತುರ್ತು ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ಸಿಂದಗಿ ನಗರ-೨ ಮಾರ್ಗದ ಮೇಲೆ ಬರುವ ವಿದ್ಯಾನಗರ, ಇಂಡಸ್ಟ್ರಿಯಲ್ ಏರಿಯಾ, ಆರ್.ಡಿ.ಪಾಟೀಲ ಕಾಲೇಜ, ಹೊನ್ನಪ್ಪಗೌಡ ಲೇಔಟ್, ಬೂದಿಹಾಳ ಲೇಔಟ್, ರಾಜರಾಜೇಶ್ವರಿ ಕಲ್ಯಾಣ ಮಂಟಪ, ಶುಭಂ ನಗರ, ಮೊಗಲಾಯಿ ಲೇಔಟ್, ಲೋಯೊಲಾ ಶಾಲೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಬಂದಾಳ ಎನ್‌ಜೆವಾಯ್ & ಬ್ಯಾಕೋಡ ಐಪಿ ಮಾರ್ಗಗಳಲ್ಲಿ ಜು.೧೦ರಂದು ಬೆಳಿಗ್ಗೆ ೧೧:೦೦ ಗಂಟೆಯಿಂದ ಮದ್ಯಾಹ್ನ ೪:೦೦ ಗಂಟೆಯವರೆಗೆ ವಿದ್ಯುತ್ ವ್ಯತ್ಯೆಯವಾಗುವುದರಿಂದ ಸದರಿ ಮಾರ್ಗಗಳ ಮೇಲೆ ಬರುವ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಸಿಂದಗಿ ಹೆಸ್ಕಾಂ ಉಪವಿಭಾಗದ ಸಹಾಯಕ ನಿರ್ವಾಹಕ ಅಭಿಯಂತರ ಚಂದ್ರಕಾಂತ ನಾಯಕ ಪತ್ರಿಕಾ ಪ್ರಕಟಣೆಯ ಮೂಲಕ ತಿಳಸಿದ್ದಾರೆ.
