ಧಾರವಾಡ ಪ್ರಾದೇಶಿಕ ಪತ್ರಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ ಎಲಿಗಾರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಶಿಕ್ಷಣ ಪಡೆಯದೆಇರುವ ಅನೇಕ ಜನರು ಸ್ವಾತಂತ್ರ್ಯಕ್ಕಾಗಿ ಹೋರಾಡಿದೇಶಪ್ರೇಮವನ್ನು ಮೆರೆದವರು. ಆದರೆ ನಾವೆಲ್ಲ ಶಿಕ್ಷಣವಂತರು, ವಿದ್ಯಾವಂತರು ನಾವು ದೇಶಕ್ಕಾಗಿ ಏನು ನೀಡುತಿದ್ದೇವೆ ಎಂಬುದನ್ನು ನಾವು ಅವಲೋಕನ ಮಾಡಿಕೊಳ್ಳಬೇಕು ಎಂದು ಧಾರವಾಡ ಪ್ರಾದೇಶಿಕ ಪತ್ರಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ ಎಲಿಗಾರ ಹೇಳಿದರು.
ಸಿಂದಗಿ ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಂ.ಮನಗೂಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ವಿಜಯಪುರ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಕ್ರಾಂತಿಕಾರಿಗಳು ವಿಷಯದ ಕುರಿತಾದ ಎರಡು ದಿನಗಳ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ವಿಜಯಪುರ ಜಿಲ್ಲೆಯಲ್ಲಿ ಇಂಚಗೇರಿ ಮಠ ಸೇರಿದಂತೆ ಅನೇಕ ಮಠಗಳು, ಸಂಘ ಸಂಸ್ಥೆಗಳು ಮತ್ತು ಅನೇಕರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಬದುಕನ್ನೆ ತ್ಯಾಗ ಮಾಡಿದಂತವರು ಎಂದ ಅವರು ೧೯೭೩ರಲ್ಲಿ ರಾಜ್ಯದಲ್ಲಿ ಪತ್ರಗಾರ ಇಲಾಖೆ ಪ್ರಾರಂಭಗೊಂಡು ಐತಿಹಾಸಿದ ದಾಖಲೆಗಳನ್ನು ಸಂಗ್ರಹಿಸಿ ಪ್ರಕಟಪಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳುತ್ತಲಿದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕ ಎಮ್.ಎಸ್.ಹೈಯಾಳಕರ ಅವರು ಆಶಯ ನುಡಿಗಳನ್ನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಸಿಂದಗಿ ವಿಜಯಪುರಜಿಲ್ಲೆಯಲ್ಲಿ ಮೊದಲು ಸ್ವಾತಂತ್ರಯದ ಬಂಡಾಯದ ಕೂಗಿಗೆ ಮುನ್ನುಡಿಯನ್ನು ಬರೆದ ನಗರ.ತೆರಿಗೆ ವಿಚಾರವಾಗಿಚಿದಂಬರ ದಿಕ್ಷಿತ, ರಾವಜಿ ರಾಸ್ತಿಯಾ, ದಿವಾಕರ ದಿಕ್ಷೀತ, ಬಾಳಪ್ಪ ದೇಶಪಾಂಡೆ ಸೇರಿದಂತೆಅನೇಕರು ಬಂಡಾಯ ಸಾರಿದವರು.
ಹರ್ಡೆಕರ ಮಂಜಪ್ಪ, ಭಂಥನಾಳ ಶಿವಯೋಗಿಗಳು ಜಿಲ್ಲೆಯಲ್ಲಿ ಮೊಟ್ಟ ಮೊದಲು ಸ್ವದೇಶಿ ಚಳುವಳಿಗೆ ಮುನ್ನುಡಿಯನ್ನು ಬರೆದವರು. ಗಾಂಧಿಜಿಯವರ ಪ್ರೇರಣೆಯಿಂದಜಿಲ್ಲೆಯ ಅನೇಕ ಜನರು ಪ್ರಭಾವಕ್ಕೆ ಒಳಗಾಗಿ ಹೋರಾಟದಲ್ಲಿ ಭಗವಹಿಸಿದ್ದು ಇತಿಹಾಸಎಂದರು.
ಈ ವೇಳೆ ಜಮಖಂಡಿಯ ಹುನ್ನೂರ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ನಿಂಗರಾಜ ಅಸ್ಕಿ ಮಾತನಾಡಿ, ಭಾರತವನ್ನು ಬೇರೆ ಬೇರೆ ಸಂಸ್ಕೃತಿಗಳು ಆಳಿದ್ದರಿಂದ ಭಾರತ ಬಹು ಸಂಸ್ಕೃತಿಯ ದೇಶವಾಗಿದೆ. ಇತಿಹಾಸದ ಆಕರಗಳನ್ನು ಸಂಗ್ರಹಿಸದೆ ಹೋದರೆ ಭವಿಷ್ಯತ್ತಿನಲ್ಲಿ ಇತಿಹಾಸ ಕಟ್ಟುವದಕ್ಕೆ ಸಾಧ್ಯವಿಲ್ಲ. ಬ್ರೀಟಿಷರು ತಮ್ಮ ಅನುಕೂಲಕ್ಕಾಗಿ ಕೆಲವೇ ಕೆಲವು ಭಾರತೀಯರಿಗೆ ಶಿಕ್ಷಣ ನೀಡಿದರೆ ವಿನ: ಭಾರತೀಯರ ಅಭಿವೃದ್ದಿಗಾಗಿ ಅಲ್ಲ. ಅವರು ರೂಪಿಸಿದ ಏಕ ರೂಪದ ಆಡಳಿತದಿಂದ ಕನ್ನಡಿಗರಲ್ಲಿ ಜಾಗೃತಿ ಮೂಡಿತು. ಬದಾಮಿ ಚಾಲುಕ್ಯರಿಂದ ದೇವಗಿರಿಯ ಯಾದವರು ಸೇರದಂತೆ ಸ್ವಾತಂತ್ರ್ಯ ಹೋರಾಟದಲ್ಲಿ ವಿಜಯಪುರ ಜಿಲ್ಲೆಯ ಕೊಡುಗೆ ಅಪಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ಇತಿಹಾಸ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ, ಎ.ಆರ್.ಹೆಗ್ಗಣದೊಡ್ಡಿ, ಪ್ರಾಚಾರ್ಯ ಡಾ.ಬಿ.ಜಿ.ಪಾಟೀಲ ಸ್ವಾತಂತ್ರ್ಯ ಹೋರಾಟಕ್ಕೆ ಜಿಲ್ಲೆಯ ಕೊಡುಗೆಯ ಬಗ್ಗೆ ಮಾತನಾಡಿದರು.
ಈ ವೇಳೆ ಅತಿಥಿಗಳಿಗೆ ರಾಜಭವನದಲ್ಲಿರುವಂತಹ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬಿ.ಪಿ.ಕರ್ಜಗಿ, ಡಾಎಂ.ಎಂ.ಪಡಶೆಟ್ಟಿ, ಶಿವಪ್ಪ ಗವಸಾನಿ, ಶಿವುಕುಮಾರ ಶಿವಶಿಂಪಿಗೇರ, ಬಿ.ಸಿ.ಪಾಟೀಲ, ಬಿ.ಎ.ಬಿರಾದಾರ, ಬಿ.ಜಿ.ಮಠ ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿ ವೃಂದ ಭಾಗವಹಿಸಿದ್ದರು.