ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಗ್ರಾಮದಲ್ಲಿ ಅವ್ಯಾಹತವಾಗಿ ಜರುಗುತ್ತಿರುವ ಅಕ್ರಮ ಮದ್ಯ ಮಾರಾಟ ಕಡಿವಾಣಕ್ಕೆ ಆಗ್ರಹಿಸಿ ಹಂಚಲಿ ಗ್ರಾಮದ ವೃದ್ಧರು ಪ್ರಭಾರಿ ಸಿಪಿಐ ಪರಶುರಾಮ ಮನಗೂಳಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪೊಲೀಸ್ ಠಾಣೆಗೆ ಶನಿವಾರದಂದು ಆಗಮಿಸಿದ ಹಂಚಲಿ ಗ್ರಾಮದ ವೃದ್ಧರು ತಮ್ಮ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಕುರಿತು ಸಿಪಿಐ ಅವರ ಗಮನ ಸೆಳೆದರು.
ಈ ಸಂದರ್ಭದಲ್ಲಿ ವೃದ್ಧ ಶಿವಪ್ಪ ಸಜ್ಜನ ಹಾಗೂ ವೃದ್ಧೆ ಮಹಾದೇವಿ ಚವನಭಾವಿ ಮಾತನಾಡಿ, ನಮ್ಮ ಗ್ರಾಮದಲ್ಲಿ ಮದ್ಯ ಮಾರಾಟದಿಂದ ಬಡ ಕುಟುಂಬಗಳು ಪರಿಸ್ಥಿತಿ ನೋಡದಂತಾಗಿವೆ. ಅದರಲ್ಲೂ ಮನೆ ಜೀವನ ನಡೆಸುವ ಮಹಿಳೆಯರ ಸ್ಥಿತಿಗತಿಗಳು ಮತ್ತು ಅವರ ಮೇಲೆ ಆಗುತ್ತಿರುವ ದೌರ್ಜನ್ಯ ಹಾಗೂ ಪರಿಣಾಮಗಳು ಹೇಳತೀರದಂತಾಗಿವೆ. ಈ ಕುರಿತು ನಾವು ಹಲವು ಬಾರಿ ಪೊಲೀಸ್ ಠಾಣೆಗೆ ಮನವಿ ಮಾಡಿದ್ದಾಗಿದೆ ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ತಾವು ಸ್ಪಂದಿಸಿ ಅಕ್ರಮ ಸರಾಯಿ ಮಾರಾಟವನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಿಪಿಐ, ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ನೀಲಕಂಠರಾಯ ಬುದ್ನಿ, ಎಸ್.ಎಸ್.ಜಮಖಂಡಿ, ಶಾಂತಪ್ಪ ಮೇಟಿ, ಆನಂದ ದೊಡಮನಿ, ಮಲ್ಲಪ್ಪ ಯರನಾಳ, ಶಾಂತಗೌಡ ಹಚ್ಯಾಳ, ಸಾಯಬಣ್ಣ ಬೋಸಗಿ, ಪ್ರಶಾಂತ ಹಿರೂರ, ಸುಭಾಸ ಬುದ್ನಿ, ಶಿವಣ್ಣ ಗೋಟಖಂಡಕಿ, ಶರಣು ಜಮಖಂಡಿ, ಶರಣು ಇಟಗಿ, ಲಗಮವ್ವ ನಾಗರಾಳ, ನಿಂಗಮ್ಮ ಮೇಟಿ, ಶಾಂತಮ್ಮ ಬೋರಗಿ, ಈರಮ್ಮ ಇಟಗಿ, ಬಸಮ್ಮ ಚವನಭಾವಿ, ಶಿವಬಾಯಿ ಕನ್ನೂರ, ಸುಮಂಗಲಾ ಕರಡಿ, ಶಿವಲಿಂಗಮ್ಮ ಲಗಳಿ, ಬಂಗಾರಮ್ಮ ತಿಪ್ಪಗೋಳ ಇದ್ದರು.