ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಬಬಲಾದ ಗ್ರಾಮದ ಸರಕಾರಿ ಮತ್ತು ಕ್ಷೇಮ ಕೇಂದದ ಸರಕಾರಿ ವೈದ್ಯರ ಕೋಣೆಗೆ ಸದಾ ಬೀಗ ಹಾಕಿರುತ್ತದೆ.
ಇಲ್ಲಿ ನಾಲ್ಕು ಜನ ಸಿಬ್ಬಂದಿ ಇದ್ದಾರೆ. ಒಬ್ಬರು ವೈದ್ಯರು, ಒಬ್ಬರು ಸಮುದಾಯ ಆರೋಗ್ಯ ಅಧಿಕಾರಿ ಒಬ್ಬರು ಡಿ.ದರ್ಜೆ ನೌಕರರು ಮತ್ತು ಒಬ್ಬರು ಸ್ಟಾಫ್ ನರ್ಸ.
ಸ್ಟಾಫ್ ನರ್ಸ ಹಿರೇಮಠ ರವರು ಮಾತ್ರ ಆಸ್ಪತ್ರೆಯಲ್ಲಿ ಇರುತ್ತಾರೆ. ಉಳಿದವರು ಇರುವದಿಲ್ಲ. ಆಗೊಮ್ಮೆ ಈಗೊಮ್ಮೆ ಬರುತ್ತಾರೆ ಎಂಬುದು ಗ್ರಾಮಸ್ಥರ ವಾದ.
ಇಲ್ಲಿ ಕೇವಲ ಸ್ಟಾಫ್ ನರ್ಸರವರು ಜ್ವರ, ಕೆಮ್ಮು ನೆಗಡಿ, ಸಂಡಾಸ ಮಾತ್ರ ಔಷಧಿ ನೀಡುತ್ತಾರೆ. ಸಿರಿಯಸ್ ರೋಗಿ ಬಂದರೆ ಅವರಿಗೆ ಮಂಚಗಳಿಲ್ಲ, ಸರಿಯಾದ ಉಪಕರಣಗಳಿಲ್ಲ ಮತ್ತು ಔಷದೋಪಚಾರ ಇರುವದಿಲ್ಲ. ಇನ್ನೂ ಗರ್ಭೀಣಿಯರು ಹೆರಿಗೆಗೆ ಇಂಡಿ ವಿಜಯಪುರ ಅಥವಾ ಸೋಲಾಪುರಕ್ಕೆ ಹೋಗಬೇಕು.
ಸುಸಜ್ಜಿತ ಆಸ್ಪತ್ರೆ ಇದೆ, ಆದರೆ ಸರಿಯಾದ ವ್ಯವಸ್ಥೆ ಇಲ್ಲ ಎಂಬುದು ಗ್ರಾಮಸ್ಥರ ವಾದ.
“ಇಲ್ಲಿಯ ವೈದ್ಯರಿಗೆ ಹೊರ್ತಿಗೆ ನಿಯೋಜನೆ ಮಾಡಿದ್ದಾರೆ. ಅದನ್ನು ರದ್ದು ಮಾಡಿ ಮತ್ತೆ ಅವರಿಗೆ ಬಬಲಾದಕ್ಕೆ ನಿಯೋಜಿಸಲಾಗುತ್ತಿದೆ.”
– ಆರ್.ಎಸ್.ಇಂಗಳೆ
ಪ್ರಭಾರಿ ತಾಲೂಕಾ ವೈದ್ಯಾಧಿಕಾರಿಗಳು, ಇಂಡಿ
“ಇಲ್ಲಿಯ ಜನಸಂಖ್ಯೆ ಮೂರು ಸಾವಿರ ಇದೆ. ಗರ್ಭೀಣಿಯರಿಗೆ ಆಸ್ಪತ್ರೆಯಲ್ಲಿ ಯಾವ ವ್ಯವಸ್ಥೆ ಇಲ್ಲ. ಬಡವರಿಗೆ ತುಂಬಾ ಅನಾನುಕೂಲವಾಗುತ್ತದೆ. ಹೀಗಾಗಿ ಗರ್ಭೀಣಿಯರಿಗೆ ಮತ್ತು ದವಾಖಾನೆ ಪ್ರತಿದಿನ ಸೇವೆ ಸಿಗುವ ವ್ಯವಸ್ಥೆ ಆಗಬೇಕು.”
– ಭುವನೇಶ್ವರಿ ಕಾಂಬಳೆ
ಸಾಮಾಜಿಕ ಹೋರಾಟಗಾರರು, ಬಬಲಾದ

