Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವರದಿ: ಸಿದ್ರಾಮ ಮಾಳಿಚಡಚಣ: ಸಮೀಪದ ಉಮರಜ ಗ್ರಾಮದಲ್ಲಿ ಶ್ರೀ ರೇವಣಸಿದ್ಧೇಶ್ವರ ಜಾತ್ರೆಯು ಇದೇ ಫೆ.೧೧ ರ ಮಂಗಳವಾರದ ಶ್ರೀ ಶಾಲಿವಾಹನ ಶಕೆ ೧೯೪೬ ಕ್ರೋಧಿನಾಮ ಸಂವತ್ಸರ ಮಾಘಮಾಸ ಶುಕ್ಲಪಕ್ಷ ಚತುರ್ಥಶಿ ತಿಥಿಯಂದು ನೆರವೇರಲಿದೆ. ಜಾತ್ರೆಯಲ್ಲಿ ಘೋಳೇಶ್ವರ ಮಹಾರಾಜರ ನುಡಿಮುತ್ತುಗಳನ್ನು ಕೇಳಲು ರಾಜ್ಯದ ಹಾಗೂ ಮಹಾರಾಷ್ಟ್ರ ಸೇರಿದಂತೆ ನಾನಾ ಭಾಗಗಳಿಂದ ಸುಮಾರು ಲಕ್ಷಾಂತರ ಭಕ್ತ ಸಾಗರವು ಹರಿದು ಬರಲಿದೆ.ಜಾತ್ರೆಯ ಹಿನ್ನಲೆ-೧೨ನೇ ಶತಮಾನದಲ್ಲಿ ಭೀಮಾ ನದಿಯ ದಡದಲ್ಲಿ ರೇವಣಸಿದ್ಧರ ಶಿಷ್ಯನಾದ ತುಕ್ಕಪ್ಪರಾಯನು ದೇವಾಸ್ಥಾನವನ್ನು ಕಟ್ಟಿಸಿದನೆಂದು ತಿಳಿಯಲಾಗಿದೆ. ಗರ್ಭ ಗುಡಿ. ಸುಕನಾಸಿ. ನವರಂಗ. ಸಭಾಮಂಟಪ. ಪ್ರದಕ್ಷಿಣಾ ಪಥ ಮತ್ತು ಚಂದ್ರ ಶಾಲೆಯನ್ನು ಒಳಗೊಂಡ ೫೦ ಅಡಿ ಎತ್ತರವಾದ ಶಿಖರವನ್ನು ಹೊಂದಿದ್ದು. ಚಾಲುಕ್ಯರ ಕಾಲದ ದ್ರಾವಿಡ ಶೈಲಿಯನ್ನು ಹೊಂದುತ್ತಿದೆ. ಬೃಹತ್ ಗಾತ್ರದ ಸಿದ್ಧೇಶ್ವರರ ಲಿಂಗವೂ ಇದೆ.ರೇವಪ್ಪನ ಜನ್ಮದ ರಹಸ್ಯ- ಗಿರಿಜೆಯು ಶಿವಗಣ ಪಾದರೇಣುವಿನಿಂದ ಗೊಂಬೆಯನ್ನು ಮಾಡಲು ಪರಶಿವನು ಆ ಗೊಂಬೆಗೆ ಜೀವ ಕಳೆಯನ್ನು ತುಂಬಿ ರೇಣುಕ ಗಣೇಶ್ವರನನ್ನು ಮಾಡಿದ. ಆತನು ಒಮ್ಮೆ ದೇವ ಸಭೆಯಲ್ಲಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಲ್ಲೂಕಿನ ಜಂಬಗಿ (ಆ)ಗ್ರಾಮ ಪಂಚಾಯತಿಯಲ್ಲಿ ತಾಲ್ಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ ಅವರ ಉಪಸ್ಥಿತಿಯಲ್ಲಿ ಜರುಗಿದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಮಹ್ಮದ ಪೈಗಂಬರ ಜಾನೇಸಾಬ ಮುಲ್ಲಾ ಅವರು 13 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.ಪ್ರತಿಸ್ಪರ್ಧಿ ಬಸಮ್ಮ ಮುತ್ತಪ್ಪ ನಾಯ್ಕೋಡಿ 5 ಮತ ಪಡೆದುಕೊಂಡರು. ಚುನಾವಣೆಯಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಅಂಬಿಕಾ ಕಟಾಯಿ, ಲಕ್ಷ್ಮೀ ಮಸೂತಿ, ರೇಣುಕಾ ಪೂಜಾರಿ, ಸುರೇಸ ತಳವಾರ, ಸಿದ್ದು ನಾಯ್ಯೋಡಿ, ಯಲ್ಲವ್ವ ಭಾವಿಮನಿ, ಶ್ರೀಶೈಲ ತಳವಾರ, ಧರೆಪ್ಪ ಕಡಕೋಳ, ಲಕ್ಷ್ಮೀ ಹಚಡದ, ದಾವಲಸಾಬ ನದಾಫ, ಸಂಗೀತಾ ಅಶೋಕ ಹೊನ್ನಳ್ಳಿ, ಶ್ರೀಶೈಲ ತೊನಶ್ಯಾಳ ಇನ್ನಿತರರು ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಮನಗೂಳಿ ಪಟ್ಟಣದ ಉಕ್ಕಲಿ ರಸ್ತೆಯಲ್ಲಿರುವ ಕೆರೆ ಅಭಿವೃದ್ಧಿ, ಪಟ್ಟಣದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಅಮೃತ ಯೋಜನೆ ೨.೦ ಅಡಿಯಲ್ಲಿ ಅಂದಾಜು ೩,೫೦೦ ನಲ್ಲಿ ಸಂಪರ್ಕ, ಭಜನಾ ಮಂಟಪದ ನವೀಕರಣ, ಅಗಸಿ ದ್ವಾರದ ಕಾಮಗಾರಿ ಸೇರಿದಂತೆ ಪಟ್ಟಣಕ್ಕೆ ಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಮೂಲಕ ಪಟ್ಟಣವು ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ ಎಂದು ಜವಳಿ, ಕಬ್ಬು ಮತ್ತು ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ತಾಲೂಕಿನ ಮನಗೂಳಿ ಪಟ್ಟಣದ ವಿಠ್ಠಲ ಮಂದಿರದ ಹತ್ತಿರ ಮನಗೂಳಿ ಪಟ್ಟಣ ಪಂಚಾಯಿತಿಯ ಸನ್ ೨೦೨೩-೨೪ ನೇ ಸಾಲಿನ ಎಸ್.ಎಫ್.ಸಿ ವಿಶೇಷ ಅನುದಾನದಲ್ಲಿ ಅಂದಾಜು ಮೊತ್ತ ೨೦ ಲಕ್ಷ ರೂ.ಯಲ್ಲಿ ಕೈಗೊಂಡಿರುವ ವಿಠ್ಠಲ ಮಂದಿರದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪಟ್ಟಣದ ಉಕ್ಕಲಿ ರಸ್ತೆಯಲ್ಲಿರುವ ಕೆರೆ ಅಭಿವೃದ್ಧಿ ಮಾಡುವ ಜೊತೆಗೆ ಅಲ್ಲಿ ವಾಯು ವಿಹಾರ ಟ್ರ್ಯಾಕ್, ಮಕ್ಕಳಿಗೆ ಆಟಿಕೆ ಸಾಮಾನುಗಳ ಅಳವಡಿಕೆ,…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಶ್ರೀಸಿದ್ಧಾರೂಢರ ಮಹಾಪುರಾಣ ಮಂಗಲ ಕಾರ್ಯಕ್ರಮದ ಅಂಗವಾಗಿ ಜೋಡಿ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು.ಗ್ರಾಮದ ಶ್ರೀಕಾಶೀ ವಿಶ್ವನಾಥ ಕೈಲಾಸ ಮಂದಿರದಲ್ಲಿ ಹಮ್ಮಿಕೊಂಡ ಸಿದ್ಧಾರೂಢರ ಮಹಾಪುರಾಣ ಮಂಗಲದ ಅಂಗವಾಗಿ ವಾಲಗ, ಕಳಸ,ಕುಂಭ, ಪುರವಂತರ ಸೇವೆಯೊಂದಿಗೆ ಆರಂಭಗೊಂಡ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಚೌಕಿಮಠದ ಅಭಿನವ ಮುರುಗೇಂದ್ರ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.ಕಾರ್ಯಕ್ರಮದಲ್ಲಿ ಪುರಾಣಿಕ ರಮೇಶ ಶರಣರು, ನಿಂಗಣ್ಣ ಶರಣರು, ಶಿವಪ್ಪ ತಾಳಿಕೋಟಿ, ಗುರಣ್ಣ ಚಾಂದಕವಟೆ, ನಿಂಗಣ್ಣ ಸಜ್ಜನ, ಚನ್ನಪ್ಪ ಭದ್ರಗೊಂಡ, ಚಿದಾನಂದ ನಾಶೀ, ಭೀಮನಗೌಡ ಹಳವಣ್ಣಿ, ಬಸವರಾಜ ಸುಂಬಡ, ಚನ್ನಪ್ಪಗೌಡ ಬಿರಾದಾರ, ಅಶೋಕ ಹುಣಸಗಿ, ಸಂತೋಷ ಯತ್ನಾಳ, ಮಾಂತೇಶ ಜಂಬುಗೋಳ, ಎಂ.ಡಿ.ಮನಹಳ್ಳಿ , ರಾಮು ಯತ್ನಾಳ ಸೇರಿದಂತೆ ಮಹಿಳೆಯರು, ಮಕ್ಕಳು ಇದ್ದರು.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಬಹುಮತ ಗಳಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಸಂಜೆ ಸೇರಿದ ಕಾರ್ಯಕರ್ತರು ಪಕ್ಷದ ಜಯವನ್ನು ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಪ್ರಕೋಷ್ಟ ಸಂಚಾಲಕ ಭೀಮನಗೌಡ ಲಚ್ಯಾಣ, ಮಂಡಲದ ಖಜಾಂಚಿ ಸೋಮಶೇಖರ ಮಾತನಾಡಿ, ದೆಹಲಿಯಲ್ಲಿ ಬಿಜೆಪಿಯ ೨೭ ವರ್ಷಗಳ ವನವಾಸ ಕೊನೆಗೊಳ್ಳುವುದರ ಮೂಲಕ ಪ್ರಧಾನಿ ಮೋದಿ ಹಾಗೂ ಅಮೀತ್ ಶಾ ಅವರ ಬಹುದಿನದ ಕನಸು ನನಸಾಗಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದೂ ಸ್ಥಾನ ನೀಡದೇ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದ ದೆಹಲಿ ಮತದಾರರು ಉತ್ತಮ ಕಾರ್ಯವನ್ನೇ ಮಾಡಿದ್ದಾರೆ. ಅವರಿಗೆ ಧನ್ಯವಾದಗಳು ಎಂದರು.ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ, ಪಟ್ಟಣ ಪಂಚಾಯಿತಿ ಸದಸ್ಯ ಕಾಸುಗೌಡ ಜಲಕತ್ತಿ, ಮಂಡಲ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಬಿರಾದಾರ, ರಾವುತ ಅಗಸರ, ರಮೇಶ ಈಳಗೇರ, ಕಲ್ಮೇಶ ಬುದ್ನಿ, ಶ್ರೀಶೈಲ ಯಂಭತ್ನಾಳ, ಸೋಮು ದೇವೂರ, ಬಸವರಾಜ ದೇವಣಗಾಂವ, ಕಾಶೀನಾಥ ಕಡ್ಲೇವಾಡ, ರಮೇಶ ಹಂಚಲಿ, ಶ್ರೀಧರ…
ಯಶಸ್ಸಿಗೆ ಪರಿಶ್ರಮದ ಹೊರತಾದ ಅಡ್ಡಮಾರ್ಗಗಳಿಲ್ಲ :ಎಸಿ ಗದ್ಯಾಳ ಉದಯರಶ್ಮಿ ದಿನಪತ್ರಿಕೆ ಇಂಡಿ: ಬಡತನದಲ್ಲಿ ಹುಟ್ಟಿದ್ದು ತಪ್ಪಲ! ಆದರೆ ಬಡತನದಲ್ಲಿ ಸಾಯುವುದು ತಪ್ಪು.! ಬಡತನವನ್ನು ಮೆಟ್ಟಿ ನಿಲ್ಲಲು ಬಡತನವನ್ನು ಚಾಲೆಂಜಾಗಿ ಸ್ವೀಕಾರ ಮಾಡಬೇಕು. ನಿಮ್ಮಲ್ಲಿರುವ ಬಡತನವನ್ನು ಓಡಿಸುವ ಜೊತೆಗೆ ನಿಮ್ಮ ಸುತ್ತಮುತ್ತಲಿರುವ ಪರಿಸರ, ಪ್ರಕೃತಿಯಲ್ಲಿಯ ಬಡತನ ಓಡಿಸಬೇಕು ಎಂದು ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಹೇಳಿದರು.ಪಟ್ಟಣದ ಅಲ್ಪಸಂಖ್ಯಾತ ಮೊರಾರ್ಜಿ ವಸತಿ ಶಾಲೆ ಹಾಗೂ ಪಿ.ಯು ಕಾಲೇಜಿನ ಆಶ್ರಯದಲ್ಲಿ ಜರುಗಿದ ಎಸ್ ಎಸ್ ಎಲ್ ಸಿ ಹಾಗೂ ಪಿಯು ಕಾಲೇಜು ವಿಧ್ಯಾರ್ಥಿಗಳ ಬಿಳ್ಕೋಡುವ ಹಾಗೂ ವಾರ್ಷಿಕ ಸ್ನೇಹ ಸಮ್ಮೆಳದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಯಶಸ್ಸಿಗೆ ನಿರಂತರ ಪರಿಶ್ರಮ, ಬದ್ಧತೆ, ಪ್ರಾಮಾಣಿಕತೆ ಅನಿವಾರ‍್ಯ,ಅತ್ಯಗತ್ಯ. ಯಶಸ್ಸಿಗೆ ಪರಿಶ್ರಮದ ಹೊರತಾದ ಅಡ್ಡಮಾರ್ಗಗಳಿಲ್ಲ. ಮಕ್ಕಳ ಸರ್ವಾಂಗೀಣ ವಿಕಾಸವೇ ಶಿಕ್ಷಣದ ಆಶಯ. ಶಿಕ್ಷ ಣ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಕಲಿಸುವ ಮೂಲಕ ಸಾತ್ವಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತದೆ. ವಿದ್ಯಾರ್ಥಿ ದಿಸೆಯಲ್ಲೆ ಒಳ್ಳೆಯ ಗುಣನಡತೆಗಳನ್ನು ರೂಢಿಸಿಕೊಳ್ಳಬೇಕು. ಪ್ರೀತಿ, ತ್ಯಾಗ, ಪರೋಪಕಾರ, ಸತ್ಯ,…
ಉದಯರಶ್ಮಿ ದಿನಪತ್ರಿಕೆ ಇಂಡಿ: ಪಟ್ಟಣದ ವಿಜಯಪುರ ರಸ್ತೆಯ ಕರ್ನಾಟಕ ಬ್ಯಾಂಕ ಹತ್ತಿರದ ಮೈನೋದ್ದಿನ ಚಪ್ಪರಬಂದ ಇವರಿಗೆ ಸೇರಿದ ಅಂಗಡಿಗೆ ಬೆಳಿಗ್ಗೆ ೧೦.೧೫ ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ.ಅಂಗಡಿಯು ಮೋಟಾರು ಬಾಯಿಕ ಶೋ ರೋಮ ಮತ್ತು ಬಿಡಿಭಾಗ ಮತ್ತು ಸೀಟ ಕವರ ಮಾರಾಟ ಮಾಡುವದಾಗಿದೆ.ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಒಂದು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ವಸ್ತುಗಳು ಸುಟ್ಟು ಕರಕಲಾಗಿವೆ.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಜೀವನ ಹಣೆಬರಹದ ಮೇಲೆ ನಿಲ್ಲದೇ ಅದು ನಮ್ಮ ಹಣೆಬೆವರಿನ ಮೇಲೆ ನಿಂತಿದೆ. ಸಾಧನೆಯನ್ನು ಯಾರೂ ಬೇಕಾದರೂ ಮಾಡಬಹುದು. ತಾವು ಮಾಡುವ ಕೆಲಸದ ಬಗ್ಗೆ ಕೀಳರಿಮೆ ತಾಳದೇ ತಮ್ಮ ಕೆಲಸವನ್ನು ತೃಪ್ತಿಯಿಂದ ಮಾಡಿದರೆ ಸಾಧನೆ ಮಾಡಲು ಸಾಧ್ಯ ಎಂದು ವೈದ್ಯಭೂಷಣ ಪ್ರಶಸ್ತಿ ಪುರಸ್ಕ್ರತ, ಪ್ರೇರಣದಾಯಕ ಭಾಷಣಕಾರ ಡಾ.ರಾಹುಲ್ ದೇವರಾಜ ಹೇಳಿದರು.ಪಟ್ಟಣದ ಮಸಬಿನಾಳ ರಸ್ತೆಯಲ್ಲಿರುವ ನಂದಿ ಶಿಕ್ಷಣ ಸಂಸ್ಥೆಯ ನಂದಿ ಪ್ರಾಥಮಿಕ ಮತ್ತು ಪ್ರೌಢಶಾಲೆ(ಆಂಗ್ಲ ಮತ್ತು ಕನ್ನಡ ಮಾಧ್ಯಮ) ಹಾಗೂ ನಂದಿ ಸಂಸ್ಕ್ರತ ಪಾಠಶಾಲೆಯ ಶಾಲಾ ವಾರ್ಷಿಕೋತ್ಸವದಂಗವಾಗಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿ ಮಾತನಾಡಿದ ಅವರು, ಮಕ್ಕಳಿಗೂ ಯಾವದರಲ್ಲಿ ಕುಗ್ಗದಂತೆ ಬೆಳೆಸಬೇಕು. ಜೀವನದಲ್ಲಿ ಕಷ್ಟ ಇರುತ್ತದೆ. ಇದನ್ನು ಜಯಿಸಬೇಕು. ಮಕ್ಕಳಲ್ಲಿ ಸದೃಢ ವರ್ತನೆ ಬೆಳೆಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರವನ್ನು ನೀಡಬೇಕು. ಮಕ್ಕಳು ದೊಡ್ಡವರಿಗೆ ಗೌರವ ಕೊಡುವುದನ್ನು ಕಲಿಸಬೇಕೆಂದರು.ಜಗತ್ತಿನಲ್ಲಿ ಸಂಪತ್ತನ್ನು ಕಳ್ಳರು ಕದಿಯುತ್ತಾರೆ. ಅದೇ ನಮ್ಮಲ್ಲಿರುವ ವಿದ್ಯೆಯನ್ನು ಯಾರೂ ಕಲಿಯಲು ಸಾಧ್ಯವಿಲ್ಲ. ಇಂತಹ ಅಮೂಲ್ಯವಾದ ವಿದ್ಯೆಯನ್ನು…
– ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ ಉದಯರಶ್ಮಿ ದಿನಪತ್ರಿಕೆ ಮೇರಿ ಕ್ಯೂರಿ ಯುರೇನಿಯಂ ಅದಿರನ್ನು ಜಗತ್ತಿಗೆ ಪರಿಚಯಿಸಿದ ಪೋಲ್ಯಾoಡಿನ ಖ್ಯಾತ ಮಹಿಳಾ ವಿಜ್ಞಾನಿ. 1867ರಲ್ಲಿ ಪೋಲ್ಯಾಂಡಿನ ವಾರ್ಸಾದಲ್ಲಿ ಇವರು ಜನಿಸಿದರು. ಅವರ ತಂದೆ ಗಣಿತ ಮತ್ತು ಭೌತಶಾಸ್ತ್ರವನ್ನು ಕಲಿಸುತ್ತಿದ್ದರು. ಇದರಿಂದಾಗಿಯೇ ವಿಜ್ಞಾನದ ಬಗ್ಗೆ ಆರಂಭಿಕ ಪ್ರತಿಭೆಯನ್ನು ಕ್ಯೂರಿ ಬೆಳೆಸಿಕೊಂಡರು. ಚಿಕ್ಕಂದಿನಿಂದಲೇ ಚತುರೆಯಾಗಿದ್ದ ಇವರು ಪ್ರೌಢಶಾಲೆಯಲ್ಲೇ ಚಿನ್ನದ ಪದಕವನ್ನು ಗಳಿಸಿದ್ದರು. 1891 ರಲ್ಲಿ ಇವರು ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ಯಾರಿಸ್ ಗೆ ತೆರಳಿದರು. ಸೌಕನ್ ವಿಶ್ವವಿದ್ಯಾನಿಲಯದಲ್ಲಿ ಬಿಎಸ್ಸಿ ಪದವಿಯನ್ನು ಪಡೆದರು.ಮೇರಿ ಕ್ಯೂರಿ ಒಬ್ಬ ಸುಶಿಕ್ಷಿತ ಪ್ರತಿಭಾವಂತ ಸರಳ ಸ್ವಭಾವದ ಮಹಿಳೆ. ದೈಹಿಕ ಶ್ರಮ ಮತ್ತು ಗುರುಸೇವೆ ಮಾಡಿ ವಿಜ್ಞಾನದ ಪದವಿಯನ್ನು ಪಡೆದರು. ಪ್ರಧಾನ ಬೋಧಕರಾಗಿದ್ದ ಅನೇಕ ಸಂಶೋಧನೆಗಳನ್ನು ಮಾಡಿದ್ದ ಪಿಯರಿ ಕ್ಯೂರಿ ಅವರ ಬಳಿ ಕಲಿಯುತ್ತಿದ್ದಾಗ ಅವರಲ್ಲಿ ಗೌರವ,ಮೈತ್ರಿ, ಪ್ರೀತಿ ಬೆಳೆದು 1895 ರಲ್ಲಿ ಮೇರಿ -ಪಿಯರಿ ದಂಪತಿಗಳಾದರು.ಉತ್ತಮ ಸಹಧರ್ಮಣಿಯಾಗಿ ಮನೆ ಕೆಲಸದ ಜೊತೆಗೆ ಪತಿಯ ಸೇವೆ ಮಾಡುತ್ತಿದ್ದರು.…
ರಚನೆ- ಡಾ. ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ನಿನ್ನ ಅರ್ಧ ಕನಸುನನ್ನ ಅರ್ಧ ಕನವರಿಕೆಕೂಡಿ ಕೊಂಡವುಸುಂದರ ನನಸುಸ್ನೇಹ ಪ್ರೀತಿ ಒಲವುಬೆಸುಗೆ ಹಾಕಿದ ಮನಸ್ಸುಅದೆಷ್ಟೋ ದೂರದ ದಾರಿಸವೆಸಿದ್ದು ಗೊತ್ತಾಗಲಿಲ್ಲನಿನಗೆ ನಾನುನನಗೆ ನೀನುಭಾವ ಭದ್ರತೆಯಚಿಗುರು ಸೊಗಸುಇದೆ ಬಾಳ ಬಟ್ಟೆಯಗಟ್ಟಿ ಗುರಿಚೆಲುವ ಕನಸು
