ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಾಲ್ಲೂಕಿನ ಜಂಬಗಿ (ಆ)ಗ್ರಾಮ ಪಂಚಾಯತಿಯಲ್ಲಿ ತಾಲ್ಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ ಅವರ ಉಪಸ್ಥಿತಿಯಲ್ಲಿ ಜರುಗಿದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಮಹ್ಮದ ಪೈಗಂಬರ ಜಾನೇಸಾಬ ಮುಲ್ಲಾ ಅವರು 13 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
ಪ್ರತಿಸ್ಪರ್ಧಿ ಬಸಮ್ಮ ಮುತ್ತಪ್ಪ ನಾಯ್ಕೋಡಿ 5 ಮತ ಪಡೆದುಕೊಂಡರು. ಚುನಾವಣೆಯಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಅಂಬಿಕಾ ಕಟಾಯಿ, ಲಕ್ಷ್ಮೀ ಮಸೂತಿ, ರೇಣುಕಾ ಪೂಜಾರಿ, ಸುರೇಸ ತಳವಾರ, ಸಿದ್ದು ನಾಯ್ಯೋಡಿ, ಯಲ್ಲವ್ವ ಭಾವಿಮನಿ, ಶ್ರೀಶೈಲ ತಳವಾರ, ಧರೆಪ್ಪ ಕಡಕೋಳ, ಲಕ್ಷ್ಮೀ ಹಚಡದ, ದಾವಲಸಾಬ ನದಾಫ, ಸಂಗೀತಾ ಅಶೋಕ ಹೊನ್ನಳ್ಳಿ, ಶ್ರೀಶೈಲ ತೊನಶ್ಯಾಳ ಇನ್ನಿತರರು ಉಪಸ್ಥಿತರಿದ್ದರು.

