Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿವಿಧ ಬೇಡಿಕೆಗಳ ಈಡೇರಿಕೆಗೆ ಡಿಎಸ್ಎಸ್ ಧರಣಿ ಸತ್ಯಾಗ್ರಹ

ಗ್ರಾಹಕರ ಕಾಯ್ದೆಯಿಂದ ನ್ಯಾಯಸಮ್ಮತ ಸೇವೆ, ಸುರಕ್ಷಿತ ಉತ್ಪನ್ನ ಲಭ್ಯ

ಮಾ.೩೦ ರಿಂದ ಲಿವರ್ ಸಮಸ್ಯೆ ಕುರಿತು ಉಚಿತ ತಪಾಸಣೆ & ಚಿಕಿತ್ಸೆ ಶಿಬಿರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಇಂದಿನಿಂದ ಉಮರಜ ಗ್ರಾಮದ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವ
(ರಾಜ್ಯ ) ಜಿಲ್ಲೆ

ಇಂದಿನಿಂದ ಉಮರಜ ಗ್ರಾಮದ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವರದಿ: ಸಿದ್ರಾಮ ಮಾಳಿ
ಚಡಚಣ: ಸಮೀಪದ ಉಮರಜ ಗ್ರಾಮದಲ್ಲಿ ಶ್ರೀ ರೇವಣಸಿದ್ಧೇಶ್ವರ ಜಾತ್ರೆಯು ಇದೇ ಫೆ.೧೧ ರ ಮಂಗಳವಾರದ ಶ್ರೀ ಶಾಲಿವಾಹನ ಶಕೆ ೧೯೪೬ ಕ್ರೋಧಿನಾಮ ಸಂವತ್ಸರ ಮಾಘಮಾಸ ಶುಕ್ಲಪಕ್ಷ ಚತುರ್ಥಶಿ ತಿಥಿಯಂದು ನೆರವೇರಲಿದೆ. ಜಾತ್ರೆಯಲ್ಲಿ ಘೋಳೇಶ್ವರ ಮಹಾರಾಜರ ನುಡಿಮುತ್ತುಗಳನ್ನು ಕೇಳಲು ರಾಜ್ಯದ ಹಾಗೂ ಮಹಾರಾಷ್ಟ್ರ ಸೇರಿದಂತೆ ನಾನಾ ಭಾಗಗಳಿಂದ ಸುಮಾರು ಲಕ್ಷಾಂತರ ಭಕ್ತ ಸಾಗರವು ಹರಿದು ಬರಲಿದೆ.
ಜಾತ್ರೆಯ ಹಿನ್ನಲೆ-೧೨ನೇ ಶತಮಾನದಲ್ಲಿ ಭೀಮಾ ನದಿಯ ದಡದಲ್ಲಿ ರೇವಣಸಿದ್ಧರ ಶಿಷ್ಯನಾದ ತುಕ್ಕಪ್ಪರಾಯನು ದೇವಾಸ್ಥಾನವನ್ನು ಕಟ್ಟಿಸಿದನೆಂದು ತಿಳಿಯಲಾಗಿದೆ. ಗರ್ಭ ಗುಡಿ. ಸುಕನಾಸಿ. ನವರಂಗ. ಸಭಾಮಂಟಪ. ಪ್ರದಕ್ಷಿಣಾ ಪಥ ಮತ್ತು ಚಂದ್ರ ಶಾಲೆಯನ್ನು ಒಳಗೊಂಡ ೫೦ ಅಡಿ ಎತ್ತರವಾದ ಶಿಖರವನ್ನು ಹೊಂದಿದ್ದು. ಚಾಲುಕ್ಯರ ಕಾಲದ ದ್ರಾವಿಡ ಶೈಲಿಯನ್ನು ಹೊಂದುತ್ತಿದೆ. ಬೃಹತ್ ಗಾತ್ರದ ಸಿದ್ಧೇಶ್ವರರ ಲಿಂಗವೂ ಇದೆ.
ರೇವಪ್ಪನ ಜನ್ಮದ ರಹಸ್ಯ- ಗಿರಿಜೆಯು ಶಿವಗಣ ಪಾದರೇಣುವಿನಿಂದ ಗೊಂಬೆಯನ್ನು ಮಾಡಲು ಪರಶಿವನು ಆ ಗೊಂಬೆಗೆ ಜೀವ ಕಳೆಯನ್ನು ತುಂಬಿ ರೇಣುಕ ಗಣೇಶ್ವರನನ್ನು ಮಾಡಿದ. ಆತನು ಒಮ್ಮೆ ದೇವ ಸಭೆಯಲ್ಲಿ ಕುಳಿತ್ತಿದ್ದ ಪರಶಿವನ ಉಯ್ತುಂಬಲವನ್ನು ತಗೆದುಕೊಳ್ಳುವುದಕ್ಕೆಂದು ಸಂಭ್ರಮದಿಂದ ಬರುತ್ತಿರುವಾಗ ದಾರಕನೆಂಬ ಗಣಾವಿಪನನ್ನು ತಗೆದುಕೊಳ್ಳುವುದ್ದನ್ನು ದಾರಕನು ಕೋಪದಿಂದ ಈತನನ್ನು ಶಪಿಸಲು ರೇಣುಕಾ ಗಣೇಶ್ವರನಾಗಿ ಭೂಮಿಯ ಮೇಲೆ ಅಂದರೆ ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ಮಧ್ಯದಲ್ಲಿರುವ ಭೀಮಾ ನದಿಯ ಮಧ್ಯದಲ್ಲಿರುವ ನಾಗೇಶ ಮಠ/ರಾಮತಿರ್ಥದಲ್ಲಿರುವ ಅಂಗದಿಂದ ರೇವಪ್ಪನೆಂಬ ಹೆಸರಿನಿಂದ ಜನಿಸಿದ.
ರುದ್ರಕಟ್ಟೆಯ ಮಹಿಮೆ- ಗ್ರಾಮದ ಮೇಲೆ ಬ್ಯಾಡರ ಕಾಟ ಬಹಳಿತ್ತು. ಈ ಉಮ್ಮಳೆಯ ದೇವಾಸ್ಥಾನದ ಮೇಲೆ ಸುಮಾರು ೨೦೦ ರಿಂದ ೭೫೬ ಬೇಡರು ದಾಳಿ ಮಾಡಿದರು.ಆಗ ಮಾಳಿಂಗರಾಯನು ಸಿದ್ಧೇಶ್ವರರ ದರ್ಶನಕ್ಕಾಗಿ ಬಂದಿದ್ದ. ಆಗ ೭೫೬ ಬೇಡರನ್ನು ಹೊಡೆದು ದೇವಾಸ್ಥಾನದ ಮುಂಭಾಗದಲ್ಲಿಯೇ ಗುಡ್ಡೇ ಹಾಕುತ್ತಾನೆ. ಆಗ ಊರಿನ ಜನರಿಗೆ ವಿಷಯ ತಿಳಿಯುತ್ತಿದ್ದಂತೆ ಆ ಹೆಣಗಳ ರಾಶಿಯ ಮೇಲೆ ಕಟ್ಟೆ ಕಟ್ಟುತ್ತಾನೆ. ಅದು ಈ ರುದ್ರ ಕಟ್ಟೆಯಾಗಿ ಹೆಸರಾಗಿದೆ ಹಾಗೂ ರೇವಣಸಿದ್ಧರನ್ನು ಕರೆದುಕೊಂಡು ಹೋಗಲು ದೇವಲೋಕದಿಂದ ೧೧ಜನ ರುದ್ರರು ಬಂದು ಇದೇ ಕಟ್ಟೆಯ ಮೇಲೆ ಕುಳಿತು ಭೋಜನ ಸೇವಿಸಿದ್ದರು ಎಂಬ ಹೇಳಿಕೆಯು ಇದೇ. ಈ ರುದ್ರ ಕಟ್ಟೆಯ ಮೇಲೆ ಘೋಳೇಶ್ವರ ಮಹಾರಾಜರಿಂದ ಪ್ರತಿ ವರ್ಷ ನುಡಿಮುತ್ತುಗಳು ಜರುಗುತ್ತ ಬಂದಿವೆ.
ನುಡಿಗಳು ಅಂದರೆ-ಈ ನುಡಿಗಳು ಪ್ರಸ್ತುತ ದಿನಗಳಲ್ಲಿ ಸತ್ಯವನ್ನು ಸುಳ್ಳನ್ನಾಗಿ. ಸುಳ್ಳನ್ನು ಸತ್ಯವನ್ನಾಗಿ ಮಾಡುವ ಇಂದಿನ ಕಾಲದಲ್ಲಿ. ಘೋಳೇಶ್ವರ ಮಹಾರಾಜರ ನುಡಿಗಳು ಮುಂದಾಗುವುದ್ದನ್ನೇ ಒಂದೊಂದು ನುಡಿಗಳಾಗಿ ಹೇಳುವುದ್ದನ್ನು ನುಡಿಗಳೆನ್ನುತ್ತಾರೆ.
ಇವರ ನುಡಿಗಳು ಬಹಳ ಸತ್ಯ ಅವರ ನುಡಿಮುತ್ತುಗಳು ಹತ್ತು ಹಲವು ಪವಾಡಗಳು ನಡೆದಿವೆ. ಹೀಗಾಗಿಯೇ ಪ್ರತಿ ವರ್ಷ ಭಾರತ ಹುಣ್ಣಿಮೆಯ ನಸುಕಿನ ಜಾವ ಘೋಳೇಶ್ವರ ಮಹಾರಾಜರಿಂದ ನುಡಿಗಳು ಜರುಗುತ್ತವೆ.
ಈ ವರ್ಷವು ಫೆ.೧೧ ರ ಮಂಗಳವಾರ ನಸುಕಿನ ಜಾವ ೪ ಗಂಟೆಯಿಂದ ಭಕ್ತರಿಂದ ಭೀಮಾನದಿಯಿಂದ ದೀರ್ಘದಂಡ ನಮಸ್ಕಾರ, ೬ ಗಂಟೆಗೆ ದೇವಾಸ್ಥಾನಕ್ಕೆ ಮಹಾಮಜ್ಜನ, ೭ ಗಂಟೆಗೆ ಮಹಾಪೂಜ್ಯರಿಂದ ಹಾಗೂ ಪೂಜಾರಿಗಳಿಂದ ಮಹಾರುದ್ರಾಭಿಷೇಕ ಮತ್ತು ವಿಶೇಷ ಪೂಜೆ, ೧೦ ಗಂಟೆಗೆ ವಿಶೇಷ ಆಹ್ವಾನಿತರ ಸಮ್ಮುಖದಲ್ಲಿ ಘೂಳೇಶ್ವರ ಮಹಾರಾಜರು ವಿರಚಿತ ಗ್ರಂಥಗಳ ಬಿಡುಗಡೆ ಮತ್ತು ಸನ್ಮಾನ. ದೇವಾಸ್ಥಾನದ ಅಭಿವೃದ್ಧಿಗೆ ಈ ವರ್ಷ ಧನ ಸಹಾಯ ಮಾಡಿದ ದಾನಿಗಳಿಗೆ ದೇವಸ್ಥಾನ ಟ್ರಸ್ಟ್ ವತಿಯಿಂದ ಸನ್ಮಾನ ಮತ್ತು ಗೌರವಾರ್ಪಣೆ. ರಾತ್ರಿ ೧೨ ಗಂಟೆಗೆ ವಾದ್ಯ ವೈಭವಗಳೊಂದಿಗೆ ಶ್ರೀ ಸಿದ್ಧೇಶ್ವರರ ಪಲ್ಲಕ್ಕಿ ಉತ್ಸವ ಹಾಗೂ ಚಿತ್ರ-ವಿಚಿತ್ರವಾದ ಮದ್ದು ಸುಡಲಾಗುವುದು.
ಅಲ್ಲದೇ ಫೆ.೧೨ರ ಬುಧವಾರದ ನಸುಕಿನ ಜಾವ ೩:೩೦ ಗಂಟೆಗೆ ರುದ್ರಾವತಾರಿ ಶ್ರೀ ಘೋಳೇಶ್ವರ ದೇವರೊಡಗೂಡಿ ದೇವಾಸ್ಥಾನಕ್ಕೆ ಬಾನ ಒಯ್ಯವುದು. ನಂತರ ನಸುಕಿನ ೦೫ ಗಂಟೆಯ ಒಳಗಾಗಿ ಶ್ರೀ ಘೋಳೇಶ್ವರರಿಂದ ಕಾಲಜ್ಞಾನದ ನುಡಿಮುತ್ತುಗಳು ಜರುಗುವವು. ಬೆಳಗ್ಗೆ ೧೦ ಗಂಟೆಗೆ ಸುಪ್ರಸಿದ್ದ ಜಂಗಿ ನಿಕಾಲಿ ಕುಸ್ತಿಗಳು ಜರುಗಲಿವೆ. ರಾತ್ರಿ ೯:೩೦ ಗಂಟೆಗೆ ಶ್ರೀ ಸಿದ್ಧೇಶ್ವರ ಹವ್ಯಾಸಿ ಕಲಾ ನಾಟಕ ತಂಡದವರಿಂದ ‘ಎಚ್ಚರ ತಂದಿ ಎಚ್ಚರ’ ಎಂಬ ಸಾಮಾಜಿಕ ಕ್ರಾಂತಿಕಾರಿ ನಾಟಕ ಜರುಗುವುದು ಎಂದು ಶ್ರೀ ಸಿದ್ಧೇಶ್ವರ ಸಮಿತಿ ವತಿಯಿಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿವಿಧ ಬೇಡಿಕೆಗಳ ಈಡೇರಿಕೆಗೆ ಡಿಎಸ್ಎಸ್ ಧರಣಿ ಸತ್ಯಾಗ್ರಹ

ಗ್ರಾಹಕರ ಕಾಯ್ದೆಯಿಂದ ನ್ಯಾಯಸಮ್ಮತ ಸೇವೆ, ಸುರಕ್ಷಿತ ಉತ್ಪನ್ನ ಲಭ್ಯ

ಮಾ.೩೦ ರಿಂದ ಲಿವರ್ ಸಮಸ್ಯೆ ಕುರಿತು ಉಚಿತ ತಪಾಸಣೆ & ಚಿಕಿತ್ಸೆ ಶಿಬಿರ

ರಾಷ್ಟ್ರಕವಿ ಶಿವರುದ್ರಪ್ಪನವರು ಕನ್ನಡದ ಅಸ್ಮಿತೆ :ಪ್ರೊ.ಮೇತ್ರಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿವಿಧ ಬೇಡಿಕೆಗಳ ಈಡೇರಿಕೆಗೆ ಡಿಎಸ್ಎಸ್ ಧರಣಿ ಸತ್ಯಾಗ್ರಹ
    In (ರಾಜ್ಯ ) ಜಿಲ್ಲೆ
  • ಗ್ರಾಹಕರ ಕಾಯ್ದೆಯಿಂದ ನ್ಯಾಯಸಮ್ಮತ ಸೇವೆ, ಸುರಕ್ಷಿತ ಉತ್ಪನ್ನ ಲಭ್ಯ
    In (ರಾಜ್ಯ ) ಜಿಲ್ಲೆ
  • ಮಾ.೩೦ ರಿಂದ ಲಿವರ್ ಸಮಸ್ಯೆ ಕುರಿತು ಉಚಿತ ತಪಾಸಣೆ & ಚಿಕಿತ್ಸೆ ಶಿಬಿರ
    In (ರಾಜ್ಯ ) ಜಿಲ್ಲೆ
  • ರಾಷ್ಟ್ರಕವಿ ಶಿವರುದ್ರಪ್ಪನವರು ಕನ್ನಡದ ಅಸ್ಮಿತೆ :ಪ್ರೊ.ಮೇತ್ರಿ
    In (ರಾಜ್ಯ ) ಜಿಲ್ಲೆ
  • ಮುಂದುವರೆದ ಅಡುಗೆ ಅನಿಲ ಸಿಲಿಂಡರ್‌ಗಳ ಅಭಾವ
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್ ಅಭ್ಯರ್ಥಿಗೆ 25 ಸಾವಿರ ಮತಗಳ ಅಂತರದ ಗೆಲುವು ಖಚಿತ
    In (ರಾಜ್ಯ ) ಜಿಲ್ಲೆ
  • ಮಾ.31ರಂದು ವಿಶ್ವ ಮಹಿಳಾ ದಿನಾಚರಣೆ & ಮುತ್ತೈದೆಯರಿಗೆ ಉಡಿ ತುಂಬುವಿಕೆ
    In (ರಾಜ್ಯ ) ಜಿಲ್ಲೆ
  • ರಾಮನ ಜೀವನದ ಮೌಲ್ಯಗಳು ಬದುಕಿಗೆ ಶಾಶ್ವತ ಪ್ರೇರಣೆ
    In ವಿಶೇಷ ಲೇಖನ
  • ಬಿರುಗಾಳಿ – ವರುಣನ ಅರ್ಭಟಕ್ಕೆ ನಲುಗಿದ ದ್ರಾಕ್ಷಿ ಬೆಳೆಗಾರರು
    In (ರಾಜ್ಯ ) ಜಿಲ್ಲೆ
  • ಜನಗಣತಿ ಸಿಬ್ಬಂದಿ ತರಬೇತಿ ಸದುಪಯೋಗ ಪಡೆದುಕೊಳ್ಳಬೇಕು
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.