Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ನೋಬೆಲ್ ಪ್ರಶಸ್ತಿ ವಿಜೇತೆ ಮೇರಿ ಕ್ಯೂರಿ
ವಿಶೇಷ ಲೇಖನ

ನೋಬೆಲ್ ಪ್ರಶಸ್ತಿ ವಿಜೇತೆ ಮೇರಿ ಕ್ಯೂರಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ

ಉದಯರಶ್ಮಿ ದಿನಪತ್ರಿಕೆ

ಮೇರಿ ಕ್ಯೂರಿ ಯುರೇನಿಯಂ ಅದಿರನ್ನು ಜಗತ್ತಿಗೆ ಪರಿಚಯಿಸಿದ ಪೋಲ್ಯಾoಡಿನ ಖ್ಯಾತ ಮಹಿಳಾ ವಿಜ್ಞಾನಿ. 1867ರಲ್ಲಿ ಪೋಲ್ಯಾಂಡಿನ ವಾರ್ಸಾದಲ್ಲಿ ಇವರು ಜನಿಸಿದರು. ಅವರ ತಂದೆ ಗಣಿತ ಮತ್ತು ಭೌತಶಾಸ್ತ್ರವನ್ನು ಕಲಿಸುತ್ತಿದ್ದರು. ಇದರಿಂದಾಗಿಯೇ ವಿಜ್ಞಾನದ ಬಗ್ಗೆ ಆರಂಭಿಕ ಪ್ರತಿಭೆಯನ್ನು ಕ್ಯೂರಿ ಬೆಳೆಸಿಕೊಂಡರು. ಚಿಕ್ಕಂದಿನಿಂದಲೇ ಚತುರೆಯಾಗಿದ್ದ ಇವರು ಪ್ರೌಢಶಾಲೆಯಲ್ಲೇ ಚಿನ್ನದ ಪದಕವನ್ನು ಗಳಿಸಿದ್ದರು. 1891 ರಲ್ಲಿ ಇವರು ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ಯಾರಿಸ್ ಗೆ ತೆರಳಿದರು. ಸೌಕನ್ ವಿಶ್ವವಿದ್ಯಾನಿಲಯದಲ್ಲಿ ಬಿಎಸ್ಸಿ ಪದವಿಯನ್ನು ಪಡೆದರು.
ಮೇರಿ ಕ್ಯೂರಿ ಒಬ್ಬ ಸುಶಿಕ್ಷಿತ ಪ್ರತಿಭಾವಂತ ಸರಳ ಸ್ವಭಾವದ ಮಹಿಳೆ. ದೈಹಿಕ ಶ್ರಮ ಮತ್ತು ಗುರುಸೇವೆ ಮಾಡಿ ವಿಜ್ಞಾನದ ಪದವಿಯನ್ನು ಪಡೆದರು. ಪ್ರಧಾನ ಬೋಧಕರಾಗಿದ್ದ ಅನೇಕ ಸಂಶೋಧನೆಗಳನ್ನು ಮಾಡಿದ್ದ ಪಿಯರಿ ಕ್ಯೂರಿ ಅವರ ಬಳಿ ಕಲಿಯುತ್ತಿದ್ದಾಗ ಅವರಲ್ಲಿ ಗೌರವ,ಮೈತ್ರಿ, ಪ್ರೀತಿ ಬೆಳೆದು 1895 ರಲ್ಲಿ ಮೇರಿ -ಪಿಯರಿ ದಂಪತಿಗಳಾದರು.
ಉತ್ತಮ ಸಹಧರ್ಮಣಿಯಾಗಿ ಮನೆ ಕೆಲಸದ ಜೊತೆಗೆ ಪತಿಯ ಸೇವೆ ಮಾಡುತ್ತಿದ್ದರು. ವಿರಾಮ ಕಾಲದಲ್ಲಿ ಪತಿಯೊಡನೆ ವೈಜ್ಞಾನಿಕ ವಿಷಯಗಳ ಬಗ್ಗೆ ಚರ್ಚೆ- ಪ್ರಯೋಗಗಳಲ್ಲಿ ಭಾಗವಹಿಸುತ್ತಿದ್ದರು.
ಪಾಶ್ಚಾತ್ಯ ದೇಶಗಳಲ್ಲಿ ಪುರುಷರ ಸರಿ ಸಮಕ್ಕೆ ನಿಂತು ವೈಜ್ಞಾನಿಕ ಸಂಶೋಧನೆ ನಡೆಸಿದ ಸ್ತ್ರೀಯರಲ್ಲಿ ಕ್ಯೂರಿ ಅಗ್ರಗಣ್ಯರು. ಪ್ರಕೃತಿಯಲ್ಲಿನ ಶಕ್ತಿಗಳ ಪ್ರಭಾವವನ್ನು ಅರಿಯುವ ಅಸಾಧಾರಣ ಕುತೂಹಲ ಅವರಲ್ಲಿದ್ದಿತು. ಗಂಡ ಪಿಯರಿ ಕ್ಯೂರಿ ಗೆ ಸಿಕ್ಕಿದ ವಿಜ್ಞಾನಿಗಳ ಸಂಸ್ಥೆಯ ಸದಸ್ತ್ವವು ಯೋಗ್ಯತೆ ಅರ್ಹತೆಗಳಿದ್ದರೂ ಸ್ತ್ರೀ ಎಂಬ ಒಂದೇ ಕಾರಣದಿಂದ ಇವರಿಗೆ ಸಿಗಲಿಲ್ಲ.


ಮೇರಿ ಕ್ಯೂರಿ ಸಾಮಾನ್ಯ ರೂಪದಲ್ಲಿ ಸಿಗುವಂತಹ ಯುರೇನಿಯಂ ಅದಿರಿನಲ್ಲಿ ಇನ್ನೊಂದು ವಿಕಿರಣ ಧಾತು ಇರಬೇಕೆಂದು ಕಂಡುಹಿಡಿದರು ಮತ್ತು ಇವರು ರೇಡಿಯಮ್ ಹಾಗೂ ಪೋಲೋನಿಯಂ ಎಂಬ ಎರಡು ಮೂಲ ಧಾತುಗಳನ್ನು ಸಹ ಕಂಡುಹಿಡಿದರು. 1903 ರಲ್ಲಿ ರೇಡಿಯಮ್ ಅನ್ನು ಪ್ರತ್ಯೇಕಿಸಿದ್ದಕ್ಕಾಗಿ ಕ್ಯೂರಿ ದಂಪತಿಗಳು ಹಾಗೂ ಫ್ರೆಂಚ್ ಭೌತವಿಜ್ಞಾನಿ ಬೇಕೆರಲ್ ಭೌತವಿಜ್ಞಾನದ ನೋಬೆಲ್ ಪ್ರಶಸ್ತಿಯನ್ನು ಹಂಚಿಕೊಂಡರು.
1906ರಲ್ಲಿ ಅಪಘಾತ ಕ್ಕೊಳಗಾಗಿ ಪತಿಯು ಮಡಿದ ನಂತರ ಅವರ ಸ್ಥಾನದಲ್ಲಿ ಭೌತಶಾಸ್ತ್ರ ಕಲಿಸುವ ಪ್ರಧಾನ ಬೋಧಕಿಯಾದರು . ವಿಜ್ಞಾನಾರ್ಜನೆಯಲ್ಲಿ ಆಸಕ್ತಿ ಇನ್ನೂ ಹೆಚ್ಚಿತು. ನಂತರ ರೇಡಿಯಮ್ ನಿಂದಾಗುವ ಉಪಯೋಗವನ್ನು ಕಂಡುಹಿಡಿದರು. ಹುಣ್ಣುಗಳು ಮಾಯುವಂತೆ ಮಾಡಲು, ಚರ್ಮ ವ್ಯಾಧಿಗಳನ್ನು ಗುಣಪಡಿಸಲು, ಕತ್ತಲೆಯಲ್ಲಿ ಗಡಿಯಾರವನ್ನು ನೋಡಿ ಕಾಲ ಗುರುತಿಸಲು ಇದರಿಂದ ಸಾಧ್ಯವಾಯಿತು. ಹೀಗೆ ರಸಾಯನ ಶಾಸ್ತ್ರದಲ್ಲಿ ಮಾಡಿದ ಇವರ ಸಂಶೋಧನೆಗಾಗಿ ಕ್ಯೂರಿ ಅವರಿಗೆ 1911ರಲ್ಲಿ ಮತ್ತೇ ನೊಬೆಲ್ ಪಾರಿತೋಷಕ ದೊರಕಿತು. ಎರಡು ಸಲ ನೋಬೆಲ್ ಬಹುಮಾನಗಳನ್ನು ಪಡೆದ ಮೊದಲ ವ್ಯಕ್ತಿಯಾದರು. ಇದರ ಜೊತೆಗೆ ಇವರು ಪ್ಯಾರಿಸ್ ವಿಶ್ವವಿದ್ಯಾನಿಲಯದ ಪ್ರಥಮ ಮಹಿಳಾ ಪ್ರಾಧ್ಯಾಪಿಕೆ ಎಂಬ ಹೆಗ್ಗಳಿಕೆ ಸಹ ಗಳಿಸಿಕೊಂಡರು.
1914ರಲ್ಲಿ ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಅವರು ಫ್ರಾನ್ಸ್ ನ ಯುದ್ಧ ಭೂಮಿ ಆಸ್ಪತ್ರೆಗಳಿಗೆ ಸಾಗಿ ಸಬಹುದಾದ ಮೊಬೈಲ್ ಎಕ್ಸರೆ ಘಟಕಗಳನ್ನು ರಚಿಸಿದರು. ಲಿಟಲ್ ಕ್ಯೂರಿಸ್ ಎಂದು ಕರೆಯಲ್ಪಡುವ ಈ ಘಟಕಗಳನ್ನು ಹೆಚ್ಚಾಗಿ ಮಹಿಳೆಯರು ನಿರ್ವಹಿಸುತ್ತಿದ್ದರು. ಅವರಿಗೆ ತರಬೇತಿ ನೀಡಲು ಕ್ಯೂರಿ ಸಹಾಯ ಮಾಡುತ್ತಿದ್ದರು. ಇದರಿಂದಾಗಿ ವೈದ್ಯರು ಗಾಯಗೊಂಡ ಸೈನಿಕರ ದೇಹದೊಳಗೆ ಮುರಿದ ಮೂಳೆಗಳು ಮತ್ತು ಗುಂಡುಗಳನ್ನು ನೋಡಬಹುದಾಗಿತ್ತು. 1918ರಲ್ಲಿ ಯುದ್ಧ ಮುಗಿದ ನಂತರ ಕ್ಯೂರಿ ತನ್ನ ಪ್ರಯೋಗಾಲಯಕ್ಕೆ ಮರಳಿದರು ಮತ್ತು ವಿಕಿರಣಶೀಲ ಅಂಶಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರೆಸಿದರು. ಆದರೆ ಅವು ಬಹಳ ದೊಡ್ಡ ಪ್ರಮಾಣದಲ್ಲಿ ಅಪಾಯಕಾರಿಯಾಗಿದ್ದವು. 1934 ರಲ್ಲಿ ವಿಕಿರಣದಿಂದ ಉಂಟಾದ ಕಾಯಿಲೆಯಿಂದ ಅವರು ನಿಧನರಾದರು. ಆದಾಗ್ಯೂ ಆ ಹೊತ್ತಿಗೆ ಮಹಿಳೆಯರು ವಿಜ್ಞಾನದಲ್ಲಿ ಪ್ರಗತಿ ಸಾಧಿಸಬಹುದು ಎಂದು ಅವರು ಸಾಬೀತುಪಡಿಸಿದ್ದರು.
ಸ್ವಯಂ ಸೇವಕರಾಗಿ ರೆಡ್ ಕ್ರಾಸ್ ಸಂಸ್ಥೆಗೆ ಸೇರಿ ದುಡಿದು, ಯುದ್ಧಕಾಲದಲ್ಲಿ ಮಾನವರ ಸೇವೆ ಮಾಡಿದರು. ಕೀರ್ತಿ ಗೌರವಗಳಿಗಾಗಿ ಆಸೆ ಪಡದೆ ಯಾವಾಗಲೂ ವಿದ್ಯಾರ್ಜನೆಯಲ್ಲಿ ಕಾಲ ಕಳೆಯುತ್ತಾ ಲೋಕಕ್ಕೆ ಮಹದುಪಕಾರ ಮಾಡಿದ ಆದರ್ಶ ಮಹಿಳೆ.ರಾಷ್ಟ್ರಸಂಘವು ಸ್ಥಾಪಿಸಿದ ಅಂತರಾಷ್ಟ್ರೀಯ ಪ್ರತಿಭಾ ಶಾಲಿಗಳ ಸಹಕಾರ ಸಮಿತಿಯಲ್ಲಿ ಸೇರಿ ಐನ್ ಸ್ಟೀನ್ ಮುಂತಾದ ಶ್ರೇಷ್ಠ ವಿಜ್ಞಾನಿಗಳೊಂದಿಗೆ ಚರ್ಚಿಸುತ್ತಿದ್ದರು. ಇವರ ಜೊತೆ ಕೆಲಸ ಮಾಡುತ್ತಿದ್ದ ಇವರ ಮಗಳು ಐರಿನ್ ಮತ್ತು ಅಳಿಯ ಜೂಲಿಯೆಟ್ ಇಬ್ಬರಿಗೂ ಕ್ಯೂರಿಯ ಮರಣದ ನಂತರ 1935 ರಲ್ಲಿ ರಸಾಯನಶಾಸ್ತ್ರದಲ್ಲಿ ಮಾಡಿದ ಸಂಶೋಧನೆಗಾಗಿ ನೋಬೆಲ್ ಪಾರಿತೋಷಕ ಸಿಕ್ಕಿತು.ಎರಡನೆಯ ಮಗಳು ಈವ್ ಶ್ರೇಷ್ಠ ಗಾಯಕಿ ಮತ್ತು ಸಾಹಿತಿಯಾಗಿದ್ದಳು.ಹೀಗೆ ಕ್ಯೂರಿಯ ಮಕ್ಕಳೂ ಸಹಿತ ಅವರಂತೆ ಪ್ರತಿಭಾನ್ವಿತರಾಗಿ ಜಗವ ಬೆಳಗಿದರು.

public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ
    In (ರಾಜ್ಯ ) ಜಿಲ್ಲೆ
  • ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ
    In (ರಾಜ್ಯ ) ಜಿಲ್ಲೆ
  • ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .
    In (ರಾಜ್ಯ ) ಜಿಲ್ಲೆ
  • ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ
    In (ರಾಜ್ಯ ) ಜಿಲ್ಲೆ
  • ಸರ್ಕಾರದಿಂದ ಮೈಸೂರು ಜಿಲ್ಲೆಗೆ 5 ಕೋಟಿ 19 ಲಕ್ಷ ಅನುದಾನ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿಯಲ್ಲಿ ಭಾವೈಕ್ಯತಾ ದಿನಾಚರಣೆ…
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಭೀಮ ಗಾಯನ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಿ
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶುಕ್ಷು ಮೇಳ
    In (ರಾಜ್ಯ ) ಜಿಲ್ಲೆ
  • ಹೋಳಿ ಹಬ್ಬ ಆಚರಣೆ: ವಿಶೇಷ ದಂಡಾಧಿಕಾರಿಗಳ ನೇಮಿಸಿ ಆದೇಶ
    In (ರಾಜ್ಯ ) ಜಿಲ್ಲೆ
  • ಬೇಡಿಕೆಗಳ ಈಡೇರಿಕೆಗೆ ಮಾ.೧೧ ರಿಂದ ೧೫ವರೆಗೆ ಮುಷ್ಕರಕ್ಕೆ ನಿರ್ಧಾರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.